ಕಿತ್ತೋದ ರಸ್ತೆಗಳ ಮೇಲೆಯೇ ಅಧಿಕಾರಿಗಳನ್ನ ಮೈಲುಗಟ್ಟಲೆ ಓಡಾಡಿಸಿದ ಗದಗ ಜನತೆ!

ಗದಗ: ಯುಜಿಡಿ ಕಾಮಗಾರಿಗೆ ರೋಸಿಹೋದ ಗದಗ ನಗರದ ಜನ್ರು ಇಂದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ರಸ್ತೆ ಕಾಮಗಾರಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹದಗೆಟ್ಟ ಗದಗ ನಗರದ ಕಾಂಕ್ರೀಟ್ ರಸ್ತೆಗಳ ವಿರುದ್ಧ ರೊಚ್ಚಿಗೆದ್ದ ಸಾರ್ವಜನಿಕರು ಹಾತಲಗೇರಿ ನಾಕಾದಲ್ಲಿ ಸುಡುಬಿಸಿಲನ್ನೂ ಲೆಕ್ಕಿಸದೆ ರಸ್ತೆಯ ಮೇಲೆಯೇ ಮಲಗಿ ಪ್ರತಿಭಟನೆ ನಡೆಸಿದ್ದಾರೆ. ರಸ್ತೆ ಮಧ್ಯೆ ಟೈಯರ್​ಗೆ ಬೆಂಕಿ ಹಚ್ಚಿ ಬಾಯಿ ಬಾಯಿ ಬಡಿದುಕೊಂಡು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಬಂದ ನಗರಸಭೆ ಆಯುಕ್ತ ಮನ್ಸೂರ್ ಅಲಿ, ಎಇಇ ಎಲ್ ಜಿ ಪತ್ತಾರ, ಎಇ ಬಂಡಿವಡ್ಡರ […]

ಕಿತ್ತೋದ ರಸ್ತೆಗಳ ಮೇಲೆಯೇ ಅಧಿಕಾರಿಗಳನ್ನ ಮೈಲುಗಟ್ಟಲೆ ಓಡಾಡಿಸಿದ ಗದಗ ಜನತೆ!
sadhu srinath

|

Nov 05, 2019 | 5:25 PM

ಗದಗ: ಯುಜಿಡಿ ಕಾಮಗಾರಿಗೆ ರೋಸಿಹೋದ ಗದಗ ನಗರದ ಜನ್ರು ಇಂದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ರಸ್ತೆ ಕಾಮಗಾರಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಹದಗೆಟ್ಟ ಗದಗ ನಗರದ ಕಾಂಕ್ರೀಟ್ ರಸ್ತೆಗಳ ವಿರುದ್ಧ ರೊಚ್ಚಿಗೆದ್ದ ಸಾರ್ವಜನಿಕರು ಹಾತಲಗೇರಿ ನಾಕಾದಲ್ಲಿ ಸುಡುಬಿಸಿಲನ್ನೂ ಲೆಕ್ಕಿಸದೆ ರಸ್ತೆಯ ಮೇಲೆಯೇ ಮಲಗಿ ಪ್ರತಿಭಟನೆ ನಡೆಸಿದ್ದಾರೆ. ರಸ್ತೆ ಮಧ್ಯೆ ಟೈಯರ್​ಗೆ ಬೆಂಕಿ ಹಚ್ಚಿ ಬಾಯಿ ಬಾಯಿ ಬಡಿದುಕೊಂಡು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಬಂದ ನಗರಸಭೆ ಆಯುಕ್ತ ಮನ್ಸೂರ್ ಅಲಿ, ಎಇಇ ಎಲ್ ಜಿ ಪತ್ತಾರ, ಎಇ ಬಂಡಿವಡ್ಡರ ಸೇರಿದಂತೆ ಅಧಿಕಾರಿಗಳನ್ನು ನಡು ರಸ್ತೆಯಲ್ಲೇ ತರಾಟೆಗೆ ತೆಗೆದುಕೊಂಡು ಬೆವರಿಳಿಸಿದ್ದಾರೆ. ಜನರ ಆಕ್ರೋಶಕ್ಕೆ ಆಯುಕ್ತರು, ಇಂಜಿನಿಯರ್ ದಂಗಾಗಿದ್ದಾರೆ.

ಅಷ್ಟೇ ಅಲ್ಲದೆ ಹದಗೆಟ್ಟ ರಸ್ತೆಯ ಮೇಲೆಯೇ ನಗರಸಭೆ ಆಯುಕ್ತ ಹಾಗೂ ಇಂಜಿನಿಯರ್ ರನ್ನು ಕಿಲೋಮೀಟರ್ ಗಟ್ಟಲೆ ಕಾಲ್ನಡಿಗೆಯಲ್ಲಿ ನಡೆಸಿ ತಾವು ಪಡುತ್ತಿರುವ ಕಷ್ಟವನ್ನು ಅನುಭವಿಸುವಂತೆ ಮಾಡಿದ್ದಾರೆ. ಜೀವ ಕೈಯಲ್ಲಿ ಹಿಡಿದು ಅಡ್ಡಾಡುವ ಸ್ಥಿತಿಯನ್ನು ವಿವರಿಸಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada