ಗದಗ: ಸಿಡಿಲು ಬಡಿದು 13 ಕುರಿಗಳು ಸಾವು
Rain Updates: ಇಲ್ಲಿನ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಮಳೆ ನೀರು ಹೊರಹಾಕಲು ಜನ ಪರದಾಡುತ್ತಿದ್ದಾರೆ. ಗ್ರಾಮದ ಬಳಿಯ ಹಳ್ಳದ ನೀರು ಊರಿಗೆ ನುಗ್ಗಿ ಅವಾಂತರ ಉಂಟಾಗಿದೆ.
ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ತಾಂಡಾ ಎಂಬಲ್ಲಿ ಸಿಡಿಲು ಬಡಿದು 13 ಕುರಿಗಳು ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಶರಣಪ್ಪ ಚೌಹಾಣ್, ಸೋಮಪ್ಪ ಎಂಬುವರ ಕುರಿ ಸಾವನ್ನಪ್ಪಿದೆ. 13 ಕುರಿಗಳ ಸಾವಿನಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ರೈತರು ಒತ್ತಾಯಿಸಿದ್ದಾರೆ. ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಭಾರಿ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಅವಾಂತರ ಆದಂತಹ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಯತ್ತಿನಹಳ್ಳಿಯಲ್ಲಿ ನಡೆದಿದೆ. ಇಲ್ಲಿನ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಮಳೆ ನೀರು ಹೊರಹಾಕಲು ಜನ ಪರದಾಡುತ್ತಿದ್ದಾರೆ. ಗ್ರಾಮದ ಬಳಿಯ ಹಳ್ಳದ ನೀರು ಊರಿಗೆ ನುಗ್ಗಿ ಅವಾಂತರ ಉಂಟಾಗಿದೆ.
ಕೊಪ್ಪಳ: ಸಿಡಿಲು ಬಡಿದು ವ್ಯಕ್ತಿ ಸಾವು ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ಸಿಡಿಲು ಬಡಿದು ವ್ಯಕ್ತಿ ಸಾವನ್ನಪ್ಪಿದ ಘಟನೆ ನಡೆದಿದೆ. ಕುದುರಿಮೋತಿ ನಿವಾಸಿ ಲಾಡಿನ್ ಸಾಬ(28) ಮೃತ ರೈತರಾಗಿದ್ದಾರೆ. ಹೊಲದಲ್ಲಿ ಕೆಲಸ ಮಾಡಿ ಮನೆಗೆ ಬರುವ ವೇಳೆ ಘಟನೆ ಸಂಭವಿಸಿದೆ. ಆಸ್ಪತ್ರೆಗೆ ಗಣಿ ಸಚಿವ ಹಾಲಪ್ಪ ಆಚಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ. ಬೇವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ವಿಜಯನಗರ: ಸಿಡಿಲು ಬಡಿದು ರೈತನ ತಲೆಗೆ ಗಂಭೀರ ಗಾಯ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಗರಗ ಗ್ರಾಮದ ಬಳಿ ಸಿಡಿಲು ಬಡಿದು ರೈತನ ತಲೆಗೆ ಗಂಭೀರ ಗಾಯ ಆದ ಘಟನೆ ನಡೆದಿದೆ. ಸಿಡಿಲು ಬಡಿದು ಮೇದಾರ ನಿಂಗಪ್ಪ ಎಂಬವರ ತಲೆಗೆ ಗಂಭೀರ ಗಾಯವಾಗಿದೆ. ಗಾಯಾಳು ರೈತ ನಿಂಗಪ್ಪನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮರಿಯಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಶಿವಮೊಗ್ಗ: 25 ಭತ್ತದ ಬೆಳೆ ನೀರುಪಾಲು ಕೆರೆ ಏರಿ ಕುಸಿದು, ಕಾಲುವೆ ಒಡೆದು ಭತ್ತದ ಬೆಳೆ ನೀರುಪಾಲು ಆದ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕಡೇನಂದಿಹಳ್ಳಿ ನಡೆದಿದೆ. ಇಲ್ಲಿನ 25 ಎಕರೆ ಭತ್ತದ ಬೆಳೆ ನೀರುಪಾಲು ಆಗಿದೆ. 10 ಕ್ಕೂ ಹೆಚ್ಚು ರೈತರ 25 ಎಕರೆಯಲ್ಲಿದ್ದ ಭತ್ತದ ಬೆಳೆ ಹಾನಿ ಆಗಿದೆ. ಸ್ಥಳಕ್ಕೆ ಭೇಟಿ ನೀಡದ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Mysuru: ಭಾರಿ ಮಳೆಯಿಂದ ಕೆರೆಯಂತಾದ ಆರ್ಎಂಪಿ ಕ್ವಾರ್ಟರ್ಸ್; ಮೇಯರ್ ಪ್ರತಿನಿಧಿಸುವ ವಾರ್ಡ್ನಲ್ಲಿಯೇ ನಿವಾಸಿಗಳ ಪರದಾಟ
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಭಾರಿ ಮಳೆ; ಗುಡಿಬಂಡೆ ಪಟ್ಟಣದಲ್ಲಿ ಕೆರೆಗಳಂತಾದ ರಸ್ತೆಗಳು