ಹಳ್ಳಿಗುಡಿ ಟೋಲ್‌ ನಾಕಾ ಬಳಿ ಏಕಾಏಕಿ ಹೊತ್ತಿ ಉರಿದ ಸಿಮೆಂಟ್ ಲಾರಿ

TV9 Digital Desk

| Edited By: Ayesha Banu

Updated on: Nov 24, 2021 | 8:14 AM

ಲಾರಿಯಲ್ಲಿ ಕಾಣಿಸಿಕೊಂಡ ಬೆಂಕಿ ಕೆನ್ನಾಲಗೆಗೆ ಸಿಮೆಂಟ್ ಲಾರಿ ಸುಟ್ಟು ಕರಕಲಾಗಿದೆ. ಸದ್ಯ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹಳ್ಳಿಗುಡಿ ಟೋಲ್‌ ನಾಕಾ ಬಳಿ ಏಕಾಏಕಿ ಹೊತ್ತಿ ಉರಿದ ಸಿಮೆಂಟ್ ಲಾರಿ
ಹಳ್ಳಿಗುಡಿ ಟೋಲ್‌ ನಾಕಾ ಬಳಿ ಏಕಾಏಕಿ ಹೊತ್ತಿ ಉರಿದ ಸಿಮೆಂಟ್ ಲಾರಿ

ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಹಳ್ಳಿಗುಡಿ ಟೋಲ್‌ ನಾಕಾ ಬಳಿ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಕೊಪ್ಪಳದಿಂದ ಗದಗ ನಗರಕ್ಕೆ ಆಗಮಿಸುತ್ತಿದ್ದ ಸಿಮೆಂಟ್ ಲಾರಿ ಹಿಂಭಾಗದಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ.

ಲಾರಿಯಲ್ಲಿ ಕಾಣಿಸಿಕೊಂಡ ಬೆಂಕಿ ಕೆನ್ನಾಲಗೆಗೆ ಸಿಮೆಂಟ್ ಲಾರಿ ಸುಟ್ಟು ಕರಕಲಾಗಿದೆ. ಸದ್ಯ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚೇಂಬರ್ನಲ್ಲಿ ಕಾರ್ಮಿಕ ಸಾವು ಬಿಡಬ್ಲೂಎಸ್ಎಸ್ಬಿ ವಾಲ್ ಚೇಂಬರ್ನಲ್ಲಿ ಕಾರ್ಮಿಕನೊಬ್ಬ ಸಾವನ್ನಪ್ಪಿರೋ ಘಟನೆ ಕಮರ್ಷಿಯಲ್ ಸ್ಟ್ರೀಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 18 ವರ್ಷದ ಮೋಹನ್ ಮೃತ ಕಾರ್ಮಿಕ. ಕಳೆದ 6ತಿಂಗಳಿನಿಂದ ವಾಲ್ ಮೆನ್ ಆಗಿ ಕೆಲಸ ಮಾಡ್ತಿದ್ದ ಮೋಹನ್ ನಿನ್ನೆ ರಾತ್ರಿ 9.30ರ ಸುಮಾರಿಗೆ ಚಿನ್ನಸ್ವಾಮಿ ಸ್ಟೇಡಿಯಂ ಗೇಟ್ ನಂಬರ್ 6 ಬಳಿ ಇರುವ ಚೇಂಬರ್ ಬಳಿ ನೀರಿನ ವಾಲ್ ತಿರಿಗಿಸೋಕೆ ಹೋಗಿದ್ದ ಮೋಹನ್ ಚೇಂಬರ್ ನಲ್ಲಿ ಬಿದ್ದಿದ್ದಾನೆ ಈ ವೇಳೆ ಜೊತೆಯಲ್ಲೇ ಇದ್ದ ಮತ್ತೊಬ್ಬ ಸಿಬ್ಬಂದಿ ಪುನೀತ್ ಆ್ಯಂಬುಲೆನ್ಸ್ ಗೆ ಕರೆ ಮಾಡಿದ್ದಾನೆ.

ಆದ್ರೆ ಸುಮಾರು ಇಪ್ಪತ್ತು ನಿಮಿಷ ಕಾದರೂ ಯಾವುದೇ ಆ್ಯಂಬುಲೆನ್ಸ್ ಬರದ ಕಾರಣ ಆಟೋ ಮೂಲಕ ಬೌರಿಂಗ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಆಸ್ಪತ್ರೆಗೆ ಹೋಗುವಷ್ಟರಲ್ಲಿ ಮೋಹನ್ ಕೊನೆಯುಸಿರೆಳೆದಿದ್ದಾನೆ. ಆದ್ರೆ ಈ ವರೆಗೂ ಚೆಂಬರ್ ನಲ್ಲಿ ಬಿದ್ದು ಯಾವುದೇ ಸಾವಾಗಿಲ್ಲ. ಚೇಂಬರ್ ನಾಲ್ಕೈದಡಿ ಇರುತ್ತೆ. ಕಳೆದ 25ವರ್ಷದಿಂದ ಬಿಡಬ್ಲೂಎಸ್ಎಸ್ ಬಿಯಲ್ಲಿ ಕೆಲಸ ಮಾಡ್ತಿದೀನಿ. ಈ ವರೆಗೂ ಅಂತಹ ಘಟನೆ ನಡೆದಿಲ್ಲ. ಬಿದ್ದರೆ ಸಣ್ಣ ಪುಟ್ಟ ಗಾಯಗಳಾಗುತ್ವೆ. ಮೋಹನ್ ಸಾವಿಗೆ ನಿಖರ ಕಾರಣ ಏನು ಅಂತಾ ಪೋಸ್ಟ್ ಮಾರ್ಟಮ್ ರಿಪೋರ್ಟ್ ನಂತರ ಗೊತ್ತಾಗಬೇಕಿದೆ ಅಂತಾ ಬಿಬ್ಲೂಎಸ್ಎಸ್ಬಿಯ ಸಿಬ್ಬಂದಿಯೊಬ್ರು ಹೇಳಿದ್ದಾರೆ.

ಇದನ್ನೂ ಓದಿ: ಕಲಬುರಗಿ: ಅಕ್ರಮ ಆಸ್ತಿ ಗಳಿಸಿದ ಆರೋಪ; ಪಿಡಬ್ಲೂಡಿ ಜೆಇ ಶಾಂತಗೌಡ ಬಿರಾದಾರ್‌ ಮನೆ ಮೇಲೆ ಎಸಿಬಿ ದಾಳಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada