ಚಲವಾದಿ ಸಮಾಜದಿಂದ ಹಕ್ಕೊತ್ತಾಯ: ಸಮಾಜದ ಅಭಿವೃದ್ಧಿಗೆ ಅನುದಾನ, 5 ಎಕರೆ ಜಮೀನಿಗಾಗಿ ಬೇಡಿಕೆ
ಚಲವಾದಿ ಸಮಾಜ ಸುಮಾರು 25 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಹೀಗಾಗಿ ಸರಕಾರ ನಮ್ಮ ಸಮಾಜದ ಸಹಾಯಕ್ಕೆ ಬರಬೇಕು. ಜಿಲ್ಲೆಯಲ್ಲಿ ಸಮಾಜದ ಅಭಿವೃದ್ಧಿಗಾಗಿ ಐದು ಕೋಟಿ ರೂ. ಅನುದಾನ ಹಾಗೂ ಐದು ಎಕರೆ ಜಮೀನು ಮಂಜೂರು ಮಾಡಬೇಕು ಎಂದು ಚಲವಾದಿ ಸಮಾಜದಿಂದ ಸಚಿವರಿಗೆ ಹಕ್ಕೊತ್ತಾಯ ಮಾಡಲಾಗಿದೆ.
ಗದಗ, ಸೆಪ್ಟೆಂಬರ್ 3: ಜಿಲ್ಲೆಯಲ್ಲಿ ಚಲವಾದಿ ಸಮಾಜ (Chalavadi Samaja) ಸುಮಾರು 25 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಶಿಕ್ಷಣದಲ್ಲಿ ಸರಕಾರಿ ನೌಕರಿಯಲ್ಲಿ ಹಾಗೂ ಆರ್ಥಿಕವಾಗಿ ಬಹಳ ಹಿಂದುಳಿದಿದ್ದೇವೆ. ಹೀಗಾಗಿ ಸರಕಾರ ನಮ್ಮ ಸಮಾಜದ ಸಹಾಯಕ್ಕೆ ಬರಬೇಕು. ಜಿಲ್ಲೆಯಲ್ಲಿ ಸಮಾಜದ ಅಭಿವೃದ್ಧಿಗಾಗಿ ಐದು ಕೋಟಿ ರೂ. ಅನುದಾನ ಹಾಗೂ ಐದು ಎಕರೆ ಜಮೀನು ಮಂಜೂರು ಮಾಡಬೇಕು ಎಂದು ಚಲವಾದಿ ಸಮಾಜದಿಂದ ಸಚಿವರಿಗೆ ಹಕ್ಕೊತ್ತಾಯ ಮಾಡಲಾಗಿದೆ. ನಗರದ ಹೊರವಲಯದಲ್ಲಿನ ಪಂಡಿತ ಭೀಮಸೇನ ಜೋಷಿ ರಂಗಮಂದಿರದಲ್ಲಿ ಗದಗ ಜಿಲ್ಲಾ ಚಲವಾದಿ ಸಮಾಜದ ಚಿಂತನಾ ಸಮಾವೇಶ ನಡೆಸಲಾಯಿತು.
ಗದಗ ನಗರದಲ್ಲಿಯೇ ಚಲವಾದಿ ಸಮುದಾಯಕ್ಕೆ ಐನೂರು ಮನೆಗಳನ್ನ ಮಂಜೂರು ಮಾಡಬೇಕು ಅಂತ ಒತ್ತಾಯ ಮಾಡಲಾಗಿದೆ.
ಇದನ್ನೂ ಓದಿ: ಗದಗ: ಹಳ್ಳಿಗುಡಿಯಲ್ಲಿ ಪ್ಯಾಸೆಂಜರ್ ವಿಶೇಷ ರೈಲು ನಿಲುಗಡೆ ಸೌಲಭ್ಯಕ್ಕೆ ಚಾಲನೆ
ಈ ವೇಳೆ ಭಾಷಣ ಮಾಡಿದ ಮೈಸೂರಿನ ಜ್ಞಾನ ಪ್ರಕಾಶ್ ಸ್ವಾಮೀಜಿ, ಸಂವಿಧಾನ ಉಳಿದರೆ ಶೋಷಿತರು, ದಮಣಿತರಿಗೆ ಉಳಿಗಾಲವಿದೆ. ಶಾಸನ ಮಾಡುವ ಜಾಗದಲ್ಲಿ ಶೋಷಿತರು ಹೋಗಬೇಕು ಅಂತ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಬಯಸಿದ್ದರು. ಈಗ ಆ ಜಾಗದಲ್ಲಿ ಹೆಚ್.ಸಿ.ಮಹಾದೇವಪ್ಪನಂತರು ಹೋಗಿ ಕೂತಿದ್ದಾರೆ. ಹೀಗಾಗಿ ಸಂವಿಧಾನ ಆಶಯದಂತೆ ಶಾಸನ ಮಾಡುವ ಜಾಗದಲ್ಲಿ ಭಾರತದ ಪ್ರಜಾಪ್ರಭುತ್ವವನ್ನು, ಸಾರ್ವಭೌಮತ್ವನ್ನ ಬಹುತ್ವವನ್ನ ಅಖಂಡತೆಯನ್ನ ಎತ್ತಿಹಿಡಿಯುವಂತ ಗೌರವಿಸುವಂತರು ಹೋಗಬೇಕು ಎಂದು ಹೇಳಿದರು.
ಇದನ್ನೂ ಓದಿ: ಗದಗ-ಬೇಟಗೇರಿ ನಗರ ಸಭೆಯಲ್ಲಿ ಗೋಲ್ಮಾಲ್; ಕಾನೂನ ಬಾಹಿರ ಕಾಮಗಾರಿ ಟೆಂಡರ್ ಮಾಡಿ ಕೋಟ್ಯಾಂತರ ಹಣ ಲೂಟಿಗೆ ಪ್ಲಾನ್
ಇವತ್ತು ದೇಶದಲ್ಲಿ ಒಂದು ಚುನಾವಣೆ, ಒಂದು ದೇಶ, ಒಂದೇ ಧರ್ಮ, ಒಂದೇ ಸಂಸ್ಕೃತಿ ಎಂಬಂತಹ ಸಂವಿಧಾನ ಬಾಹಿರದ ಕೆಲಸಗಳನ್ನ ಜನ ಅರ್ಥ ಮಾಡಿಕೊಳ್ಳಬೇಕು ಅಂತ ಕೇಂದ್ರ ಸರಕಾರದ ಕಾರ್ಯಕ್ರಮಗಳ ವಿರುದ್ಧ ಹರಿಹಾಯ್ದರು.
ಕಾರ್ಯಕ್ರಮದಲ್ಲಿ ಸಚಿವರಾದ ಹೆಚ್.ಸಿ.ಮಹದೇವಪ್ಪ, ಹೆಚ್.ಕೆ.ಪಾಟೀಲ್ ಹಾಗೂ ಶಾಸಕರಾದ ಅಬ್ಬಯ್ಯ ಪ್ರಸಾದ್, ಜಿಎಸ್ ಪಾಟೀಲ್, ಮೈಸೂರಿನ ಜ್ಞಾನ ಪ್ರಕಾಶ ಸ್ವಾಮೀಜಿ ಹಾಗೂ ಎಂಎಲ್.ಸಿ ಸಲೀಂ ಅಹ್ಮದ್ ಅವರು ಭಾಗಿಯಾಗಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.