ದಿಢೀರನೆ ಕಾಣಿಸಿಕೊಂಡಿದೆ ಭಯಾನಕ ಕೀಟ! ಇದನ್ನ ಸ್ಪರ್ಶಿಸಿದರೆ ಸಾಕು ಮೈ ಎಲ್ಲಾ ಉರಿ ಉರಿ, ವಾಂತಿ: ರೈತರು ಕಂಗಾಲು
ಹಲವಾರು ವರ್ಷಗಳಿಂದ ಕೃಷಿ ಮಾಡಿಕೊಂಡು ಬಂದಿರೋ ರೈತರು ಕೂಡಾ ಇಂತಹ ಡೇಂಜರ್ ಕೀಟವನ್ನು ಎಂದೂ ನೋಡಿಲ್ಲವಂತೆ! ಈವಾಗ ಈ ಕೀಟ ನೋಡಿ ರೈತ ವರ್ಗ ಬೆಚ್ಚಿಬಿದ್ದಿದೆ. ರೈತರು ಹಾಗೂ ರೈತ ಮಹಿಳೆಯರು ಕೃಷಿ ಕೆಲಸ ಮಾಡಲು ಹಿಂದೇಟು ಹಾಕ್ತಾಯಿದ್ದಾರೆ.
ಗದಗ: ಆ ರೈತರು ಮೊದಲೇ ಪ್ರವಾಹದಿಂದ ತತ್ತರಿಸಿದ್ದಾರೆ. ಈವಾಗ ಆ ರೈತರಿಗೆ ಮತ್ತೊಂದು ಟೇನ್ಶನ್ ಆರಂಭವಾಗಿದೆ. ಹೌದು ಡೇಂಜರ್ ಕೀಟವೊಂದು ಪತ್ತೆಯಾಗಿದೆ. ಈ ಕೀಟಕ್ಕೆ ರೈತ ವರ್ಗ ಅಕ್ಷರಶಃ ಕಂಗಾಲಾಗಿದ್ದಾರೆ. ಆ ಕೀಟವು ಜಸ್ಟ್ ಟಚ್ ಮಾಡಿದ್ರೆ ಸಾಕು ಮೈ ಎಲ್ಲಾ ಉರಿ ಉರಿ. ವಾಂತಿ, ಪ್ರಜ್ಞೆ ತಪ್ಪಿ ಬಿಳೋದು ಹೀಗೆಲ್ಲಾ ಆಗುತ್ತಂತೆ. ಆ ಡೇಂಜರ್ ಕೀಟಕ್ಕೆ ಹೆದರಿ, ಜಮೀನುಗಳಲ್ಲಿ ಕೆಲಸ ಮಾಡಲು ಅನ್ನದಾತರು ಹಿಂದೇಟು ಹಾಕ್ತಾಯಿದ್ದಾರೆ. ದಿಢೀರನೆ ಇಂತಹ ಕೀಟವೊಂದು ಪತ್ತೆಯಾಗಿರುವುದು ರೈತರನ್ನು ಸಾಕಷ್ಟು ಆತಂಕಕ್ಕೆ ದೂಡಿದೆ.
ಸಾಕಷ್ಟು ಮಳೆಯಾಗಿದೆ. ಹೀಗಾಗಿ ಜಮೀನುಗಳು ಈಗ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ಅಷ್ಟೇ ಪ್ರಮಾಣದಲ್ಲಿ ಕಸಕಡ್ಡಿಯೂ ಬೆಳೆದು ನಿಂತಿದೆ. ಹೀಗಾಗಿ ಅಳಿದುಳಿದ ಬೆಳೆ ಕಾಪಾಡಿಕೊಳ್ಳಲು ರೈತರು ಜಮೀನುಗಳಿಗೆ ಹೋಗ್ತಾಯಿದ್ದಾರೆ. ಆದ್ರೆ, ಆ ಅಪಾಯಕಾರಿ ಕೀಟ್ ರೈತರನ್ನು ಜಮೀನುಗಳಿ ಬರದಂತೆ ಮಾಡ್ತಾಯಿದೆ. ಆ ಡೇಂಜರ್ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದೆ. ಅದು ನೂರು ಪರಿಸೆಂಟ್ ಸತ್ಯ. ಅಂದ್ಹೊಂದು ಡೇಂಜರ್ ಕೀಟ್ ಪತ್ತೆಯಾಗಿದ್ದು, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ. ರೈತರು ನಿರಂತರವಾಗಿ ಸುರಿದ ಮಳೆಯಿಂದ ಸಂಕಷ್ಟಕ್ಕೆ ಈಡಾಗಿದ್ದಾರೆ. ಇದರ ನಡುವೆ ಈವಾಗ ಕೀಟ್ ದ ಆತಂಕ ಎದುರಾಗಿದೆ. ಹೌದು ಇದು ಅಂತಿಂಥ ಕೀಟ್ ಅಲ್ಲಾ, ಬಹಳ ಡೇಂಜರ್ ಕೀಟ್. ಸ್ವಲ್ಪ ಟಚ್ ಆದ್ರೆ ಸಾಕು ಮನುಷ್ಯ ದೇಹದಲ್ಲಿ ಉರಿ ಉರಿ ಕಂಡು, ವಾಂತಿ ಬಳಿಕ ಮೂರ್ಛೆ ಹೋಗ್ತಾರಂತೆ. (ವಿಶೇಷ ವರದಿ: ಸಂಜೀವ ಪಾಂಡ್ರೆ, ಟಿವಿ9, ಗದಗ)
ಅಂದಹಾಗೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ಈ ಡೇಂಜರ್ ಕೀಟ ಪತ್ತೆಯಾಗಿದೆ. ಡೋಣಿ ಗ್ರಾಮದ ರೈತ ಸಿದ್ದಪ್ಪ ಕುರ್ತಕೋಟಿ ಎನ್ನುವ ರೈತ, ಎತ್ತುಗಳ ಸಮೇತವಾಗಿ ಜಮೀನಿಗೆ ಹೋಗಿದ್ದಾನೆ. ಈ ವೇಳೆಯಲ್ಲಿ ಭಯಾನಕ ಕೀಟ ಈತನ ಶರ್ಟ್ ಮೇಲೆ ಬಿದ್ದಿದೆ. ಸ್ವಲ್ಪ ಸಮಯದಲ್ಲಿ ಇಡೀ ದೇಹದಲ್ಲಿ ಊರಿ ಉರಿ ಉಂಟಾಗಿ, ಮೂರ್ಛೆ ಹೋಗಿದ್ದಾನೆ. ಹಾಗೂ ಹೀಗೂ ಸುಧಾರಿಸಿಕೊಂಡು, ಊರಿಗೆ ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದೇನೆ ಅಂತ ಸಿದ್ದಪ್ಪ ಕುರ್ತಕೋಟಿ ಹೇಳಿದ್ದಾರೆ. ಈ ಸುದ್ದಿ ಗ್ರಾಮದ ರೈತರಿಗೆ ಗೊತ್ತಾದ ಮೇಲೆ ರೈತರು ಆ ಭಯಾನಕ ಕೀಟವನ್ನು ಪತ್ತೆ ಹಚ್ಚಿದ್ದಾರೆ. ಅದನ್ನು ಹಿಡಿದುಕೊಂಡು ಬಂದು ಗದಗ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಿಗೆ ತೋರಿಸಿದ್ದಾರೆ. ಈ ಕೀಟದಿಂದ ಡೋಣಿ ಸೇರಿದಂತೆ ಇತರೆ ಗ್ರಾಮದ ರೈತರು ಭಯ ಭೀತಿಯಲ್ಲಿದ್ದಾರೆ ಅಂತ ಶಂಕರಗೌಡ ಜಾಯನಗೌಡರ ಹೇಳಿದ್ದಾರೆ.
ಇನ್ನು ಈ ಭಯಾನಕ ಕೀಟವನ್ನು ಕೃಷಿ ಇಲಾಖೆ ಅಧಿಕಾರಿಗಳಿಗೆ ನೀಡಿದ್ದಾರೆ. ಈ ಕೀಟಕ್ಕೆ ಸ್ಪೈನಿ ಓಕ್ ಸ್ಲಗ್ ಅಂತಾ ಕರೆಯುತ್ತಾರೆ. ಇದೊಂದು ಬಹುಭಕ್ಷಕ ಕೀಟವಾಗಿದೆ. ನೋಡಲು ಭಯಾನಕವಾಗಿ ಕಾಣುತ್ತದೆ. ಈ ಕೀಟ ಈವಾಗ ಡೋಣಿ ಗ್ರಾಮದಲ್ಲಿ ಕಂಡು ಬಂದಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಇದ್ರಿಂದ ರೈತರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈ ಭಯಾನಕ ಕೀಟ ದೇಹಕ್ಕೆ ಸ್ಪರ್ಶ ಮಾಡಿದ್ರೆ, ವಾಂತಿ ಬರುತ್ತದೆ. ಹಾಗೇ ಮೂರ್ಛೆ ಹೋಗ್ತಾರಂತೆ. ರೈತರು ಗದಗ ಜಿಲ್ಲಾ ಜಂಟಿ ನಿರ್ದೇಶಕರಾದ ಜಿಯಾವುಲ್ಲಾ ಅವರಿಗೆ ಈ ಭಯಾನಕ ಕೀಟವನ್ನು ಕೊಟ್ಟಿದ್ದಾರೆ. ಇದನ್ನು ಧಾರವಾಡದ ಕೃಷಿ ವಿಜ್ಞಾನ ಕೇಂದ್ರಕ್ಕೆ ಕಳುಹಿಸಿ ಕೊಡುತ್ತಾರಂತೆ. ಈ ಕೀಟದ ಕುರಿತು ಸಂಶೋಧನೆ ಮಾಡಬೇಕಾಗಿದೆ. ಹಾಗಾಗಿ ಮತ್ತೊಮ್ಮೆ ಜಮೀನಿಗೆ ಹೋಗಿ ಇನ್ನೂ ಹೆಚ್ಚಿನ ಕೀಟಗಳನ್ನು ಸಂಗ್ರಹಣೆ ಮಾಡಿ, ಹೆಚ್ಚಿನ ಸಂಶೋಧನೆ ಮಾಡಬೇಕಾಗಿದೆ. ರೈತರು ಕೂಡಾ ಎಚ್ಚರಿಕೆಯಿಂದ ಇರಬೇಕು ಅಂತ ಗದಗ ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಜಿಯಾವುಲ್ಲಾ ಎಚ್ಚರಿಕೆ ನೀಡಿದ್ದಾರೆ.
ಹಲವಾರು ವರ್ಷಗಳಿಂದ ಕೃಷಿ ಮಾಡಿಕೊಂಡು ಬಂದಿರೋ ರೈತರು ಕೂಡಾ ಇಂತಹ ಡೇಂಜರ್ ಕೀಟವನ್ನು ಎಂದೂ ನೋಡಿಲ್ಲವಂತೆ! ಈವಾಗ ಈ ಕೀಟ ನೋಡಿ ರೈತ ವರ್ಗ ಬೆಚ್ಚಿಬಿದ್ದಿದೆ. ರೈತರು ಹಾಗೂ ರೈತ ಮಹಿಳೆಯರು ಕೃಷಿ ಕೆಲಸ ಮಾಡಲು ಹಿಂದೇಟು ಹಾಕ್ತಾಯಿದ್ದಾರೆ. ಕೂಡಲೇ ಈ ಭಯಾನಕ ಕೀಟ ರಹಸ್ಯ ಬಯಲು ಮಾಡಿ, ರೈತರು ನೆಮ್ಮದಿಯಿಂದ ಕೆಲಸ ಮಾಡಲು ಅನುವು ಮಾಡಿಕೊಡಬೇಕಾಗಿದೆ ಎಂದು ರೈತಾಪಿ ವರ್ಗ ಮೊರೆಯಿಟ್ಟಿದೆ.