ಮಗಳ ಮೇಲೆ ಲೈಂಗಿಕ ದಾಹ ತೀರಿಸಿಕೊಂಡ ಪಾಪಿ ಅಪ್ಪ: ಗರ್ಭಿಣಿಯಾದ 16 ವರ್ಷದ ಬಾಲಕಿ

ತಂದೆ ಮಗಳ ಸಂಬಂಧ ಎನ್ನುವಂತಹದ್ದು ಒಂದು ಪವಿತ್ರವಾದ ಬಂಧ. ಆದ್ರೆ ಇಲ್ಲೊಬ್ಬ ತಂದೆ ಮಗಳ ಮೇಲೆಯೇ ಅತ್ಯಾಚಾರ ಸಗಿ ನೀಚ ಕೃತ್ಯ ಎಸಗಿದ್ದಾನೆ. ಹೌದು...ಯುವತಿ ತನ್ನ ತಂದೆಯೇ ಮಗಳ ಮೇಲೆ ತನ್ನ ಕಾಮದ ತೀಟೆ ತೀರಿಸಿಕೊಂಡು ಅಪ್ಪನ ಎನ್ನುವ ಪದಕ್ಕೆ ಕಳಂಕ ತರುವಂತಹ ಕೆಲಸ ಮಾಡಿದ್ದಾನೆ. ಅಪ್ಪನ ವಿಕೃತ ಕಾಮಕ್ಕೆ ಇದೀಗ ಮಗಳು ಗರ್ಭಿಣಿಯಾಗಿದ್ದಾಳೆ.

ಮಗಳ ಮೇಲೆ ಲೈಂಗಿಕ ದಾಹ ತೀರಿಸಿಕೊಂಡ ಪಾಪಿ ಅಪ್ಪ: ಗರ್ಭಿಣಿಯಾದ 16 ವರ್ಷದ ಬಾಲಕಿ
ಪ್ರಾತಿನಿಧಿಕ ಚಿತ್ರ
Updated By: ರಮೇಶ್ ಬಿ. ಜವಳಗೇರಾ

Updated on: Apr 09, 2025 | 9:24 PM

ಗದಗ, (ಏಪ್ರಿಲ್ 09): ಮಗಳು (daughter) ಕಣ್ಣಾದರೆ ಅಪ್ಪ (Father) ರೆಪ್ಪೆಯಂತೆ ಆಕೆಯನ್ನ ಸದಾ ರಕ್ಷಣೆಯಾಗಿರುತ್ತಾನೆ. ಆದ್ರೆ, ಇಲ್ಲೋರ್ವ ಅಪ್ಪ ಮಗಳ ರಕ್ಷಣೆ ಮಾಡುವ ಬದಲು ಇಡೀ ಸಮಾಜ ತಲೆತೆಗ್ಗಿಸುವಂತ ಪೈಶಾಚಿಕ ಕೃತ್ಯ ಎಸಗಿದ್ದಾನೆ. ಅಪ್ಪ ಬೇಡ ಬೇಡ ಎಂದು ಮಗಳು ಗೋಗೆರೆದರೂ ಸಹ ರಾಕ್ಷಸಿಪ್ರವೃತ್ತಿ ಮೆರೆದಿದ್ದಾನೆ. ಹೌದು…ತಂದೆಯೇ ತನ್ನ ಪುತ್ರಿಯ ಮೇಲೆ ಅತ್ಯಾಚಾರವೆಸಗಿ ತಿಂಗಳ ಗರ್ಭಿಣಿ ಮಾಡಿರುವ ಪ್ರಕರಣ ಗದಗ (Gadag) ಜಿಲ್ಲೆಯಲ್ಲಿ ನಡೆದಿದೆ. 55 ವರ್ಷದ ತಂದೆ 16 ವರ್ಷದ ಮಗಳ ಮೇಲೆಯೇ ನಿರಂತರವಾಗಿ ತನ್ನ ಕಾಮದ ತೀಟೆ ತೀರಿಸಿಕೊಂಡಿದ್ದಾನೆ. ಪರಿಣಾಮ ಮಗಳ ಇದೀಗ ಗರ್ಭಿಣಿಯಾಗಿದ್ದಾಳೆ. ಈ ಪ್ರಕರಣ ಬಯಲಿಗೆ ಬರುತ್ತಿದ್ದಂತೆಯೇ ಪೊಲೀಸರು, ಕಾಮುಕ ತಂದೆ ಮೇಲೆ‌ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸಮಾಜದಲ್ಲಿ ಎಂತೆಂಥ ಕೆಟ್ಟ ಹುಳಗುಳು ಇರುತ್ತವೆ ನೋಡಿ… ಅಪ್ಪಂದಿರಾಗಿರೋ ಪ್ರತಿಯೊಬ್ಬನು ಮಗಳ ಭವಿಷ್ಯದ ಬಗ್ಗೆ ಹಗಲು ರಾತ್ರಿ ಕನಸು ಕಾಣುತ್ತಿರುತ್ತಾನೆ. ಆಕೆ ಉಜ್ವಲ ಭವಿಷ್ಯದ ಬಗ್ಗೆ ಸದಾ ಚಿಂತೆ ಮಾಡುತ್ತಿರುತ್ತಾನೆ. ಆದರೆ ಇಲ್ಲೊಬ್ಬ ಅಪ್ಪ ಇದಕ್ಕೆಲ್ಲ ಅಪವಾದ. ಯಾರೂ ಕ್ಷಮಿಸದಂತ ದುಷ್ಟಕೃತ್ಯ ಎಸಗಿದ್ದಾನೆ. ಮಗಳನ್ನೇ ದುಷ್ಟರಿಂದ ರಕ್ಷಣೆ ಮಾಡಬೇಕಿದ್ದ ಅಪ್ಪನೇ ರಾಕ್ಷಸನಾಗಿದ್ದಾನೆ. ಅಪ್ಪ ಬೇಡ ನನ್ನ ಬಾಳು ಹಾಳು ಮಾಡಬೇಡ ಎಂದು ಕೈ ಕಾಲು ಬಿದ್ದು ಬೇಡಿಕೊಂಡರು ಸಹ ನಿರಂತರವಾಗಿ ಅತ್ಯಾಚಾರ ಎಸಗಿ ಇಡೀ ಸಮಾಜವೇ ತಲೆತೆಗ್ಗಿಸುವಂತ ಕೆಲಸ ಮಾಡಿದ್ದಾನೆ. ಅಂದಹಾಗೆ ಗದಗ ಜಿಲ್ಲೆಯ ಮುಳಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ದಾರುಣ ಘಟನೆ ಇದೀಗ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಹೊಸಕೋಟೆ: ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ, ಅಪ್ಪನ ಕೀಚಕ ಕೃತ್ಯದಿಂದ ಬೇಸತ್ತು ಮನೆಬಿಟ್ಟಿದ್ದ ಯುವತಿ

ತನ್ನದೇ ಮಗಳ ಮೇಲೆ ಕಾಮುಕ ತಂದೆ ಮಾಡಿದ ನಿರಂತರ ಅತ್ಯಾಚಾರದ ಆರೋಪದ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 55 ವರ್ಷದ ತಂದೆ, ತನ್ನ 16 ವರ್ಷದ ಅಪ್ರಾಪ್ತ ಮಗಳ ಮೇಲೆ ಕಳೆದ ಒಂದು ವರ್ಷದಿಂದ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದ. ಅಮ್ಮ ಕೆಲಸಕ್ಕೆ ಹೋದರೆ ಇತ್ತ ಅಪ್ಪ ಮನೆಯಲ್ಲಿ ಉಳಿದುಕೊಂಡು ನಿರಂತರವಾಗಿ ಒಂದು ವರ್ಷದಿಂದ ತನ್ನ ನೀಚ ಕೃತ್ಯ ಎಸಗಿದ್ದು, ಸದ್ಯ ಬಾಲಕಿ ಗರ್ಭಿಣಿಯಾಗಿದ್ದಾಳೆ. ವೈದ್ಯಕೀಯ ಪರೀಕ್ಷೆಯ ನಂತರ ಬಾಲಕಿ ಗರ್ಭಿಣಿಯಾಗಿರುವುದು ದೃಢಪಟ್ಟಿದೆ. ಈ ಸಂಬಂಧ ತಾಯಿಯ ದೂರು ನೀಡಿದ ನಂತರ ಈ ಘಟನೆ ಬಯಲಾಗಿದೆ.

ಇದನ್ನೂ ಓದಿ
13 ವರ್ಷದ ಕ್ಯಾನ್ಸರ್​​ ರೋಗಿ ಮೇಲೆ ಅತ್ಯಾಚಾರ; ಗರ್ಭಿಣಿಯಾದಾಗ ವಿಷಯ ಬಯಲು
9 ವರ್ಷದ ಮಗಳ ಮೇಲೆ ತಂದೆಯಿಂದ ಅತ್ಯಾಚಾರ; ದಾರುಣ ಕತೆ ಬಿಚ್ಚಿಟ್ಟ ತಾಯಿ
2ನೇ ಕ್ಲಾಸ್ ಬಾಲಕಿಗೆ ಗುಪ್ತಾಂಗ ತೋರಿಸಿ, ಅತ್ಯಾಚಾರಕ್ಕೆ ಯತ್ನಿಸಿದ ಯುವಕ
ಅಪ್ಪನ ರೋಗ ಗುಣಪಡಿಸುತ್ತೇನೆಂದು ಕರೆಸಿ ಸ್ಮಶಾನದಲ್ಲೇ ಬಾಲಕಿ ಮೇಲೆ ಅತ್ಯಾಚಾರ

ತಾಯಿಯ ದೂರಿನಂತೆ ಪೊಲೀಸರು, ಪೋಕ್ಸೊ (POCSO) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆಕ್ರೋಶ ಹುಟ್ಟುಹಾಕಿದ್ದು, ತಾನೇ ರಕ್ಷಕನಾಗಬೇಕಾದ ತಂದೆಯಿಂದ ಬಾಳಿಗೆ ಬೆಂಕಿಹಚ್ಚಿದ ಘಟನೆ ನಡೆದು ಮಾನವೀಯತೆಯ ಘನತೆ ಕೆಡಿಸಿದೆ ಎಂಬ ಮಾತು ಕೇಳಿ ಬರುತ್ತಿದೆ.

ಮಗಳ ಬಾಳು ಬೆಳಗಿಸಿ ಆಕೆಯ ಬದುಕು ಕಟ್ಟಿಕೊಡಬೇಕಿದ್ದ ತಂದೆಯೇ ಇಂತಹ ನೀಚತನಕ್ಕೆ ಇಳಿದಿದ್ದು ನಿಜಕ್ಕೂ ವಿಪರ್ಯಾಸ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.