ಹೊಸಕೋಟೆ: ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ, ಅಪ್ಪನ ಕೀಚಕ ಕೃತ್ಯದಿಂದ ಬೇಸತ್ತು ಮನೆಬಿಟ್ಟಿದ್ದ ಯುವತಿ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಕಾಮುಕ ತಂದೆಯೇ ಮಗಳ ಮೇಲೆ ಅತ್ಯಾಚಾರ ಎಸಗಿ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸದ್ಯ ಆರೋಪಿಯನ್ನು ಬಂಧಿಸಿರುವ ಮಹಿಳಾ ಪೊಲಿಸರು ತನಿಖೆ ನಡೆಸುತ್ತಿದ್ದಾರೆ. ಸಂತ್ರಸ್ತ ಯುವತಿ ತಂದೆಯ ಭಯಕ್ಕೆ ಮನೆಬಿಟ್ಟು ಪಿಜಿ ಸೇರಿದ್ದಳು ಎಂಬ ವಿಚಾರ ಗೊತ್ತಾಗಿದೆ.

ದೇವನಳ್ಳಿ, ಮಾರ್ಚ್ 18: ಕಾಮುಕರಿಂದ, ದುಷ್ಟರಿಂದ ರಕ್ಷಣೆ ಕೊಡಬೇಕಾದ ತಂದೆಯೇ ಮಗಳ ಮೇಲೆ ಕಾಮುಕನಂತೆ ಅತ್ಯಾಚಾರ ಎಸಗಿದ ನೀಚ ಕೃತ್ಯ ಹೊಸಕೋಟೆ (Hosakote) ನಗರದಲ್ಲಿ ವರದಿಯಾಗಿದೆ. ತಂದೆಯಿಂದ ಅತ್ಯಾಚಾರಕ್ಕೊಳಗಾಗಿ ಮತ್ತು ಬೆದರಿಕೆ ಹಾಕಲ್ಪಟ್ಟ ಯುವತಿಯೊಬ್ಬಳು ಮನೆ ಬಿಟ್ಟು ಪಿಜಿಯಲ್ಲಿ ಆಶ್ರಯ ಪಡೆದ ಪ್ರಕರಣ ಇದೀಗ ಕೊನೆಗೂ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ತಂದೆಯೇ ಮಗಳ ಮೇಲೆ ಅತ್ಯಾಚಾರ ಎಸಗಿ, ನಾಗರೀಕ ಸಮಾಜವೇ ತಲೆ ತಗ್ಗಿಸುವಂತಹ ಕೃತ್ಯ ಎಸಗಿದ್ದಾನೆ. 19 ವರ್ಷ ವಯಸ್ಸಿನ ಮಗಳ ಮೇಲೆ ಅತ್ಯಾಚಾರ ಮಾಡಿದ್ದರ ಜತೆಗೆ ಆಕೆಗೆ ಬೆದರಿಕೆಯನ್ನೂ ಹಾಕಿದ್ದಾನೆ. ಸದ್ಯ ಹೊಸಕೋಟೆ ಮಹಿಳಾ ಠಾಣೆ ಪೊಲೀಸರು (Hosakote Women Police) ಆರೋಪಿ ಮಂಜುನಾಥ್ನನ್ನು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಿದ್ದಾರೆ.
ಕಾರು ಚಾಲಕನಾಗಿರುವ ಮಂಜುನಾಥ್ಗೆ ಮೂರು ಜನ ಮಕ್ಕಳು. ಇಬ್ಬರು ಹೆಣ್ಣು, ಒಂದು ಗಂಡು ಮಗು. ಹಿರಿಯ ಮಗಳ ಮೇಲೆ ಅತ್ಯಾಚಾರ ಮಾಡಿರುವ ಆರೋಪ ಹಾಗೂ ದೂರು ದಾಖಲಾಗಿದೆ. ತಂದೆಯ ಕಾಟ ತಾಳಲಾರದೆ ಯುವತಿ ಪಿಜಿಯಲ್ಲಿ ವಾಸ ಮಾಡುತ್ತಿದ್ದಳು ಎನ್ನಲಾಗಿದೆ. ವಿಷಯ ತಿಳಿಸಿದರೆ ಕೊಲೆ ಮಾಡುವ ಬೆದರಿಕೆಯನ್ನೂ ಹಾಕಲಾಗಿತ್ತು.
ಹೀಗಾಗಿ ಜೀವ ಭಯದಿಂದ ಯುವತಿ ಮನೆಯಿಂದ ದೂರ ಉಳಿದಿದ್ದಳು. ತಂದೆಯಿಂದಾದ ಅನಾಚರಕ್ಕೆ ನ್ಯಾಯ ಒದಗಿಸುವಂತೆ ಯುವತಿ ಆಗ್ರಹಿಸಿದ್ದು, ಸದ್ಯ ಪೊಲೀಸರಿಂದ ತನಿಖೆ ನಡೆಯುತ್ತಿದೆ.
ಕೆಐಎಡಿಬಿ ಭೂ ಸ್ವಾಧಿನ ವಿರೋಧಿಸಿ ಮುಂದುವರೆದ ರೈತರ ಧರಣಿ
ಕೆಐಎಡಿಬಿ ಭೂ ಸ್ವಾಧಿನ ವಿರೋಧಿಸಿ ರೈತರ ಧರಣಿ ಮುಂದುವರಿದಿದೆ. ಕೆಐಎಡಿಬಿಗೆ ಭೂಸ್ವಾಧೀನ ವಿರೋಧಿಸಿ ಸೋಮವಾರವಷ್ಟೇ ರೈತರಿಂದ ಪ್ರತಿಭಟನಾ ರ್ಯಾಲಿ ನಡೆದಿತ್ತು. ರೈತರ ಪ್ರತಿಭಟನಾ ಟ್ರಾಕ್ಟರ್ ರ್ಯಾಲಿ ಚನ್ನರಾಯಪಟ್ಟಣದಿಂದ ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಬಳಿಯ ಜಿಲ್ಲಾಡಳಿತ ಭವನಕ್ಕೆ ಆಗಮಿಸಿತ್ತು. ಟ್ರಾಕ್ಟರ್ ಕಾರುಗಳ ಮೂಲಕ ಅಕ್ಕಿ, ರಾಗಿ, ಧವಸ ಧಾನ್ಯದ ಜೊತೆಗೆ ಸೌದೆಯನ್ನೂ ರೈತರು ತಂದಿದ್ದರು. 13 ಗ್ರಾಮಗಳ ರೈತರು ದಶಕಗಳಿಂದ ನಿರಂತರ ಹೋರಾಟ ನಡೆಸುತ್ತಲೇ ಇದ್ದಾರೆ. ಫಲವತ್ತಾದ ಕೃಷಿ ಭೂಮಿ ಸ್ವಾಧಿನ ಕೈಬಿಡುವಂತೆ ರೈತರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಸ್ನೇಹಿತನ ತಂಗಿಗೆ ಕರೆ ಮಾಡಿ ಅಸಭ್ಯ ಮಾತು: ರೊಚ್ಚಿಗೆದ್ದ ಅಣ್ಣ ಮತ್ತು ಗ್ಯಾಂಗ್ನಿಂದ ತ್ರಿವಳಿ ಕೊಲೆ
ನ್ಯಾಯ ಸಿಗುವವರೆಗೂ ಡಿಸಿ ಕಚೇರಿಯಿಂದ ತೆರಳಲ್ಲ ಎಂದು ಮಹಿಳೆಯರು ಮಕ್ಕಳ ಸಮೇತ ಆಗಮಿಸಿರುವ ರೈತರು ಪಟ್ಟುಹಿಡಿದಿದ್ದಾರೆ. ಜಿಲ್ಲಾಡಳಿತ ಭವನದ ಮುಂದೆಯೇ ಚಾಪೆ ದಿಂಬು ಹಾಕಿಕೊಂಡು ಮಲಗಿರಾತ್ರಿ ಕಳೆದಿದ್ದಾರೆ. ಅಲ್ಲಿಯೇ ಅಡುಗೆ ಮಾಡಿಕೊಂಡು ಊಟ ಮಾಡಿದ್ದಾರೆ. ಸರ್ಕಾರ ಸಮಸ್ಯೆಯನ್ನು ಬಗೆಹರಿಸುವ ವರೆಗೂ ಡಿಸಿ ಕಚೇರಿ ಧರಣಿ ಕೈಬಿಡುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.