ಗದಗ: ಜಿಲ್ಲೆಯಲ್ಲಿ ನಡೆದ ಮತಾಂತರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮುಸ್ಲಿಂ ಯುವಕನೊಂದಿಗೆ ನಾಪತ್ತೆಯಾಗಿದ್ದ ನಾಲ್ಕು ಮಕ್ಕಳ ತಾಯಿ ಹೇಮಾವತಿಯನ್ನು ಗದಗ ಶಹರಾ ಪೊಲೀಸರು ಗೋವಾದಲ್ಲಿ ಪತ್ತೆಹೆಚ್ಚಿದ್ದಾರೆ. ಆಕೆಯನ್ನು ರಕ್ಷಣೆ ಮಾಡಿ ಜಿಲ್ಲೆಗೆ ಕರೆತಂದ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಈ ವೇಳೆ ತಾನು ಮತಾಂತರವಾಗಿಲ್ಲ. ಪತಿ ಪ್ರಕಾಶ್ ಕಿರುಕುಳದಿಂದ ಗೋವಾದಲ್ಲಿ ಒಬ್ಬಳೇ ವಾಸವಾಗಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಮನವೋಲಿಕೆಯ ನಡುವೆಯೂ ಪತಿ ಜೊತೆ ಹೋಗಲ್ಲವೆಂದು ಮಹಿಳೆ ಪಟ್ಟುಹಿಡಿದಿದ್ದು, ಮಕ್ಕಳು ಬಂದರೆ ಕರೆದೊಯ್ಯುವೆ ಎಂದು ಹೇಳಿದ್ದಾಳೆ.
ಗದಗ ನಗರದ ನಿವಾಸಿಯಾಗಿರುವ ಪ್ರಕಾಶ್ ಎನ್ನುವರು ಹೇಮಾವತಿ ಎಂಬಾಕೆಯನ್ನ ಮದುವೆಯಾಗಿದ್ದರು. ಇವರ ಸುಖ ಸಂಸಾರಕ್ಕೆ ನಾಲ್ಕು ಮಂದಿ ಮಕ್ಕಳಿದ್ದರು. ದಶಕಗಳಿಂದಲೂ ಚೆನ್ನಾಗಿದ್ದ ಇವರ ಸಂಸಾರಕ್ಕೆ ಹಾವೇರಿ ಜಿಲ್ಲೆ ಸವಣೂರ ಗ್ರಾಮದ ಮುಸ್ಲಿಂ ಯುವಕ ಮುಕ್ಬೂಲ್ ಹುಳಿ ಹಿಂಡಿದ್ದನು. 6 ತಿಂಗಳ ಹಿಂದೆ ಹೇಮಾವತಿ ಇದ್ದಕ್ಕಿದ್ದಂತೆ ತನ್ನ ಚಿಕ್ಕ ಮಗಳ ಜತೆ ನಾಪತ್ತೆಯಾಗಿದ್ದು, ನಾಪತ್ತೆ ಕೇಸ್ ದಾಖಲಿಸಿದ್ದರು. ಬಳಿಕ ಮುಸ್ಲಿಂ ಯುವಕನೊಂದಿಗೆ ಪರಾರಿಯಾಗಿರುವ ವಿಚಾರ ಪ್ರಕಾಶ್ಗೆ ತಿಳಿದುಬಂದಿತ್ತು.
ಇದನ್ನೂ ಓದಿ: ನಾಲ್ಕು ಮಕ್ಕಳ ತಾಯಿ ಮುಸ್ಲಿಂ ಯುವಕನ ಜತೆ ಪರಾರಿ: ಲವ್ ಜಿಹಾದ್ ಆರೋಪ
ಪತ್ನಿ ನಾಪತ್ತೆ ಬಗ್ಗೆ ಠಾಣೆಗೆ ದೂರು ನೀಡಿದಾಗಲೇ ಗೊತ್ತಾಗಿದ್ದು ಮನೆ ಬಾಡಿಗೆ ಕೊಡಿಸಿದ್ದ ಮುಸ್ಲಿಂ ಯುವಕನ ಜೊತೆ ಹೆಂಡತಿ ಪರಾರಿಯಾಗಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದಾಳೆ ಎಂಬ ಕಟುಸತ್ಯ. ಕಳೆದ ಲಾಕ್ ಡೌನ್ನಲ್ಲಿ ಗೋವಾಕ್ಕೆ ತೆರಳಿದ್ದಾಗ ಬಾಡಿಗೆ ಮನೆ ಕೊಡಿಸುವುದಾಗಿ ಹೇಳಿ ಪರಿಚಯವಾದ ಮುಸ್ಲಿಂ ಯುವಕ ಮುಕ್ಬೂಲ್ ಬಾಯಬಡಕಿ, ಹೇಮಾವತಿಯನ್ನು ಪುಸಲಾಯಿಸಿ ಆಕೆಯನ್ನ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿಸಿ ಆಕೆಯನ್ನೇ ಮದುವೆಯಾಗಿದ್ದಾನೆ ಎಂದು ಪತಿ ಪ್ರಕಾಶ್ ಗುಜರಾತಿ ಆರೋಪಿಸಿದ್ದರು.
ಸದ್ಯ ಹೇಮಾವತಿಯನ್ನು ಪೊಲೀಸರು ಗೋವಾದಲ್ಲಿ ರಕ್ಷಿಸಿದ್ದಾರೆ. ವಿಚಾರಣೆ ವೇಳೆ ತಾನು ಮತಾಂತರವಾಗಿಲ್ಲ, ನಾನು ಹಿಂದೂ ಧರ್ಮ ಬಿಟ್ಟು ಹೋಗಲ್ಲ, ಪತಿ ಸುಳ್ಳು ಹೇಳಿದ್ದಾನೆ. ಪತಿಯ ಕಿರುಕುಳದಿಂದ ಬೇಸತ್ತು ಗೋವಾದಲ್ಲಿ ಒಬ್ಬಳೇ ನೆಲೆಸಿದ್ದೇನೆ. ತಾನು ಪತಿಯೊಂದಿಗೆ ಹೋಗಲ್ಲ, ಮಕ್ಕಳು ತನ್ನೊಂದಿಗೆ ಬರುವುದಾದರೆ ಬರಲಿ ಎಂದು ಟಿವಿ9ಗೆ ಮಾಹಿತಿ ಹಂಚಿಕೊಂಡಿದ್ದಾಳೆ.
ಹೇಮಾವತಿ ಗುಜರಾತಿ ಆಗೊಂದು ಈಗೊಂದು ನೀಡಿದ ಹೇಳಕೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಮುಸ್ಲಿಂ ಯುವಕ ಮುಕ್ಬೂಲ್ ಬಾಯಬಡಕಿ ಜೊತೆಗೆ ನಾಲ್ಕೈದು ದಿನ ಅಜ್ಮೀರಕ್ಕೆ ಹೋಗಿದ್ದೆ. ನಾಲ್ಕೈದು ತಿಂಗಳು ನನ್ನ ಹಾಗೂ ಮುಕ್ಬೂಲ್ ನಡುವೆ ಸಂಬಂಧ ಇತ್ತು ಅಂತಾಳೆ. ನಂತರ ಸಂಬಂಧ ಇಲ್ಲಾ, ನಾವು ಸ್ನೇಹಿತರಾಗಿಯೇ ಇದ್ದೇವೆ ಅಂತನೂ ಹೇಳುತ್ತಾಳೆ. ಇನ್ನೊಂದೆಡೆ ಕಾಲುಂಗರ ಹಾಗೂ ಮಾಂಗಲ್ಯ ಸರವನ್ನು ತೆಗೆದಿದ್ದಾಳೆ. ಮುಸ್ಲಿಂ ಸಂಪ್ರದಾಯದಂತೆ ಮೂಗುತಿ ಹಾಕಿಕೊಂಡಿದ್ದಾಳೆ. ಬೂರ್ಕಾ ಹಾಕಿ ಮಕ್ಬುಲ್ ಜೊತೆ ತೆಗೆಸಿಕೊಂಡ ಪೋಟೋ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಇದನ್ನೂ ಓದಿ: ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದ ಒಂದೇ ಕುಟುಂಬದ 7 ಜನರು ಹಿಂದು ಧರ್ಮಕ್ಕೆ ಘರ್ ವಾಪಸ್ಸಿ
ಪತಿ ಕಿರುಕುಳಕ್ಕೆ ಮನೆ ಬಿಟ್ಟು ಗೋವಾಕ್ಕೆ ಹೋಗಿದ್ದೆ ಎಂದು ಹೇಮಾವತಿ ಆರೋಪಿಸಿದ್ದಾಳೆ. ಇದಕ್ಕೆ ಪ್ರತಿಕ್ರಿಯಿಸಿದ ಪ್ರಕಾಶ್, ನಾನು ಟಾರ್ಚರ್ ನೀಡಿಲ್ಲ. ಒಂದು ವೇಳೆ ಟಾರ್ಚರ್ ನೀಡಿದಿದ್ದರೆ ಹಿರಿಯರು ಇದ್ದರು ಅವರ ಜೊತೆ ಹೇಳಬಹುದಿತ್ತು. ನಾನು ಆ್ಯಸಿಡ್ ಹಾಕಿದ್ದರೆ ಇಷ್ಟೊತ್ತಿಗೆ ಸತ್ತು ಹೋಗುತ್ತಿದ್ದಳು. ಆದರೆ ಮಕ್ಬುಲ್ ಮನೆಗೆ ಯಾಕೇ ಹೋದಳು? ಎಂದು ಪ್ರಶ್ನಿಸಿ ಮಕ್ಬುಲ್ ಉಳಿಸಲು ಸುಳ್ಳು ಹೇಳುತ್ತಿದ್ದಾಳೆ. ಅಜ್ಮೀರಕ್ಕೆ ಕರೆದುಕೊಂಡು ಹೋಗಿ ಮತಾಂತರ ಮಾಡಿದ್ದಾನೆ ಎಂದು ಹೇಳುತ್ತಿದ್ದಾರೆ.
ನನಗೆ ಹೆಂಡತಿ ಆಗದಿದ್ದರೂ ಪರವಾಗಿಲ್ಲ. ಮಕ್ಕಳಿಗಾದ್ರೂ ತಾಯಿಯಾಗಿ ಇರಲಿ ಎಂದು ಹೇಳಿತ್ತಿರುವ ಪ್ರಕಾಶ್, ಬೇಕಾದರೆ ನಾನೇ ಮನೆ ಬಿಟ್ಟು ಹೋಗುತ್ತೇನೆ ಮಕ್ಕಳನ್ನು ನೋಡಿಕೊಳ್ಳಲಿ. ನಾನು ಹಾರ್ಟ್ ಪೇಷಂಟ್ ನನಗೆ ಯಾವಾಗ ಏನಾಗುತ್ತೋ ಗೋತ್ತಿಲ್ಲ. ಕೈ ಮುಗಿಯುತ್ತೇನೆ ನಾನು ನನ್ನ ಹೆಂಡತಿ ಒಂದಾಗೋ ಹಾಗೇ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ