ಅನ್ನದಾತರ ಕಾಪಾಡು ಗಣೇಶ: ಕಾಮದೇನುವಿಗೆ ಪೂಜೆ, ಎಪಿಎಂಸಿ ಗಜಾನನ ಸಮಿತಿಯಿಂದ ರೈತರ ಪರ ವಿಶೇಷ ಪ್ರಾರ್ಥನೆ

Gadag News: ಗದಗ ನಗರದ ಎಪಿಎಂಸಿ ಗಜಾನನ ಉತ್ಸವ ಸಮಿತಿ ಸಂಕಷ್ಟದಲ್ಲಿ ಇರುವ ಅನ್ನದಾತರಿಗಾಗಿ ವಿಶೇಷ ಪೂಜೆ ಆಯೋಜನೆ ಮಾಡಿತ್ತು. ಹೌದು, ಬರ ಪರಿಸ್ಥಿರಿ ನೀಗಿಸು ಅಂತಾ ವಿಘ್ನವಿನಾಶಕನಲ್ಲಿ ಮೊರೆ ಇಟ್ಟಿದ್ದಾರೆ. ಗದಗ ಗಜಾನನ ಉತ್ಸವ ಸಮೀತಿ ವಿಶೇಷವಾಗಿ ಗೋ ಪೂಜೆ ಸಲ್ಲಿಸಿದೆ. ಕಾಮದೇನುವಿಗೆ ಪೂಜೆ ಸಲ್ಲಿಸಿ ಬರ ನೀಗಿಸು ತಾಯಿ ಅಂತಾ ಬೇಡಿಕೊಂಡಿದ್ದಾರೆ.

ಅನ್ನದಾತರ ಕಾಪಾಡು ಗಣೇಶ: ಕಾಮದೇನುವಿಗೆ ಪೂಜೆ, ಎಪಿಎಂಸಿ ಗಜಾನನ ಸಮಿತಿಯಿಂದ ರೈತರ ಪರ ವಿಶೇಷ ಪ್ರಾರ್ಥನೆ
ಎಪಿಎಂಸಿ ಗಜಾನನ ಸಮಿತಿ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಗಂಗಾಧರ​ ಬ. ಸಾಬೋಜಿ

Updated on:Sep 21, 2023 | 3:49 PM

ಗದಗ, ಸೆಪ್ಟೆಂಬರ್​ 21: ಗಣೇಶ ಪ್ರತಿಷ್ಠಾಪನೆ ಅಂದರೆ ಅಲ್ಲಿ ವಿಭಿನ್ನತೆ ಇರುತ್ತೆ. ಭಕ್ತರು ವಿಭಿನ್ನ ಶೈಲಿಯ ಗಣಪನನ್ನ ಕೂರಿಸಿ ಖುಷಿ ಪಡುತ್ತಾರೆ. ಅಲ್ಲದೇ ವಿಘ್ನ ವಿನಾಶಕನಿಗೆ ವಿವಿಧ ರೀತಿಯ ಪೂಜೆ ಸಲ್ಲಿಸಿ ಸಂಭ್ರಮ ಪಡುತ್ತಾರೆ. ಆದರೆ ಅಲ್ಲಿಯ ಯುವಕ ಮಂಡಳಿಯೊಂದು ಬರಗಾಲ ನೀಗಿಸಿ ಸಮೃದ್ಧಿ ಕೊಡು ಅಂತಾ ರೈತರಿಗಾಗಿ (farmers) ಪ್ರಾರ್ಥಿಸಿದ್ದಾರೆ. ವಿನಾಯಕನ ಜೊತೆಗೆ ಗೋ ಮಾತೆಗೂ ಪೂಜೆ ಸಲ್ಲಿಸಿ ಬರದಿಂದ ರೈತರನ್ನ ಜನರನ್ನ ಕಾಪಾಡು ಅಂತಾ ವಿಘ್ನೇಶ್ವರನಿಗೆ ಮೊರೆ ಇಟ್ಟಿದ್ದಾರೆ.

ಗದಗ ನಗರದ ಎಪಿಎಂಸಿ ಗಜಾನನ ಉತ್ಸವ ಸಮಿತಿ ಸಂಕಷ್ಟದಲ್ಲಿ ಇರುವ ಅನ್ನದಾತರಿಗಾಗಿ ವಿಶೇಷ ಪೂಜೆ ಆಯೋಜನೆ ಮಾಡಿತ್ತು. ಹೌದು, ಬರ ಪರಿಸ್ಥಿರಿ ನೀಗಿಸು ಅಂತಾ ವಿಘ್ನವಿನಾಶಕನಲ್ಲಿ ಮೊರೆ ಇಟ್ಟಿದ್ದಾರೆ. ಗದಗ ಗಜಾನನ ಉತ್ಸವ ಸಮೀತಿ ವಿಶೇಷವಾಗಿ ಗೋ ಪೂಜೆ ಸಲ್ಲಿಸಿದೆ. ಕಾಮದೇನುವಿಗೆ ಪೂಜೆ ಸಲ್ಲಿಸಿ ಬರ ನೀಗಿಸು ತಾಯಿ ಅಂತಾ ಬೇಡಿಕೊಂಡಿದ್ದಾರೆ. ಅಲ್ಲದೆ ರೈತರಲ್ಲಿ ನೆಮ್ಮದಿ ನೆಲೆಸುವಂತೆ ಮಾಡು ಅಂತಾ ಕಾಪಾಡು ಗಣೇಶ ಅಂತ ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: ಗದಗ: ಗಣೇಶ ಪ್ರತಿಷ್ಠಾಪನೆಯಲ್ಲಿ ಚಂದ್ರಯಾನ-3 ಮಾದರಿ ಪ್ರದರ್ಶನ, ಭಕ್ತರಿಂದ ಚಪ್ಪಾಳೆ ಸುರಿಮಳೆ

ಈ ಬಾರಿ ನಿರೀಕ್ಷಿತ ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಹೀಗಾಗಿ ಮುಕ್ಕೋಟಿ ದೈವರ ಪ್ರತಿರೂಪದಂತಿರುವ ಗೋಮಾತೆಯನ್ನ ಪೂಜಿಸಿ ಪ್ರಾರ್ಥನೆ ಸಲ್ಲಿಸಲಾಯ್ತು. ಐವತ್ತು ಮುತ್ತೈದೆಯರು 101 ಗೋವು, ಎತ್ತುಗಳಿಗೆ ಅರಿಶಿಣ, ಕುಂಕುಮ ಹಚ್ಚಿ ಪೂಜಿಸಿದರು. ಅಲ್ಲದೇ ಅಕ್ಕಿ, ಬೆಲ್ಲ ಅರ್ಪಿಸಿ ಭಕ್ತಿಯಿಂದ ಬೇಡಿಕೊಂಡರು. ಹೀಗೆ ಮಾಡೋದ್ರಿಂದ ಗೋಮಾತೆ ಸಂತೃಪ್ತಳಾಗ್ತಾಳೆ, ಕಾಮದೇನು ಸಂತೃಪ್ತಳಾದರೆ ರೈತರು ಸಮೃದ್ಧರಾಗ್ತಾರೆ ಅನ್ನೋದು ಭಕ್ತರ ನಂಬಿಕೆ. ಹೀಗಾಗಿ ಈ ಭಾರಿ ವಿನಾಯಕನ ಜೊತೆಗೆ ಗೋವುಗಳ ಪೂಜೆಯನ್ನೂ ನೆರವೇರಿಸಲಾಗಿದೆ‌‌ ಅಂತ ಸಮಿತಿ ಸದಸ್ಯೆರು ಹೇಳಿದ್ದಾರೆ.

ಎಪಿಎಂಸಿ ವರ್ತಕರ ಸಂಘ ಕಳೆದ ಎರಡು ವರ್ಷದಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡ್ತಿದೆ. ಒಂಭತ್ತು ದಿನಗಳ ಕಾಲ ನಡೆಯೋ ಗಣೇಶ ಉತ್ಸವದಲ್ಲಿ ವಿವಿಧ ಕಾರ್ಯಕ್ರಮ ಮಾಡಲಾಗುತ್ತದೆ. ಉಡಿ ತುಂಬುವ ಕಾರ್ಯ, ಅನ್ನಸಂತರ್ಪಣೆ ಮಾಡ್ತಿದ್ದ ವರ್ತಕರು, ಈ ಬಾರಿ ಬರ ಎದುರಾಗಿರೋದ್ರಿಂದ ವಿಶೇಷ ಗೋ ಪೂಜೆ ಸಲ್ಲಿಸಲಾಗಿದೆ. ಗದಗ ಜಿಲ್ಲೆಯಲ್ಲಿ ಬರದ ಛಾಯೆ ದಟ್ಟವಾಗಿದ್ದು, ಬರಗಾಲ ದೂರವಾಗಲಿ ಮಳೆ ಸಮೃದ್ಧವಾಗಲಿ ಅಂತಾ ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: ಬರ ಪೀಡಿತ ತಾಲೂಕಿನಿಂದ ಮುಂಡರಗಿ ಕೈ ಬಿಟ್ಟಿದ್ದಕ್ಕೆ ಆಕ್ರೋಶ: ಹೋರಾಟದ ಎಚ್ಚರಿಕೆ ನೀಡಿದ ರೈತರು

ವಿಶೇಷ ಅಂದರೆ ಪರಿಸರ ಸ್ನೇಹಿ ಗಣಪನನ್ನೇ ಈ ಬಾರಿ ಪ್ರತಿಷ್ಠಾಪಿಸಿರೋ ಮಂಡಳಿ, ಪರಿಸರ ಪ್ರೇಮ ಮೆರೆದಿದ್ದಾರೆ. ರೈತರು ಸಂಮೃದ್ಧರಾದರೇ ಎಪಿಎಂಸಿ ವ್ಯಾಪಾರ ಹೀಗಾಗಿ ರೈತರ ಸಂಕಷ್ಟ ನೀಗಲಿ ಅಂತಾ ಕೇಳಿಕೊಂಡಿದ್ದೇವೆ ಅಂತ ಪೂಜೆ ಸಲ್ಲಿಸಿದ ವಿಜಯಲಕ್ಷ್ಮೀ ಹೇಳಿದ್ದಾರೆ.

ರಾಜ್ಯಕ್ಕೇ ಎದುರಾಗಿರೋ ವಿಘ್ನವನ್ನ ದೂರಮಾಡು ಅಂತಾ ಗಣೇಶನಲ್ಲಿ ಮೊರೆ ಇಟ್ಟ ವರ್ತಕರು, ರೈತರು ಸಮೃದ್ಧರಾಗಲಿ ಅಂತಾ ಬೇಡಿಕೊಂಡಿದ್ದರೆ. 33 ಕೋಟಿ ದೇವರಿಗೆ ಹರಿಕೆ ಕಟ್ಟಿಕೊಳ್ಳುವದಕ್ಕಿಂತ ಮುಕ್ಕೋಟಿ ದೇವರ ಪ್ರತಿರೂಪ ಗೋಮಾತೆಗೆ ಪೂಜೆ ಸಲ್ಲಿಸಿದ್ದಾರೆ. ರೈತರ ಅಳಲನ್ನ ದೇವಕ್ಕೆ ಪ್ರಾರ್ಥನೆ ಮೂಲಕ ಮುಟ್ಟಿಸಿದ್ದಾರೆ. ಗಜಾನನ, ಗೋಮಾತೆ ರೈತರ ಸಂಕಷ್ಟ ನೀಗಿಸಲಿ ಅನ್ನೋದು ನಮ್ಮ ಪ್ರಾರ್ಥನೆಯೂ ಆಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:48 pm, Thu, 21 September 23

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ