ಗದಗ: ನಕಲಿ ಠರಾವು ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ಲೂಟಿಗೆ ಪ್ಲಾನ್​; ಆರೋಪ ಹೊತ್ತ ನಗರಸಭೆ ಪೌರಾಯುಕ್ತರು, ಅಧ್ಯಕ್ಷರ ಮೇಲೆ ತನಿಖೆ

ನಕಲಿ ಠರಾವು ಸೃಷ್ಟಿಸಿ ಪೌರಾಯುಕ್ತರು, ಅಧ್ಯಕ್ಷರು ಸರ್ಕಾರದ ಹಣ ಲೂಟಿಗೆ ಸಖತ್ ಪ್ಲಾನ್ ಮಾಡಿದ್ದಾರೆ, ಎನ್ನುವ ಗಂಭೀರ ಆರೋಪ ಕೇಳಿ ಬಂದಿತ್ತು. ಬಿಜೆಪಿ ಆಡಳಿತದ ನಗರಸಭೆಯಲ್ಲಿ ಬಿಜೆಪಿ ಸದಸ್ಯರೇ ಈ ಹಗರಣವನ್ನು ಬಯಲು ಮಾಡಿದ್ದಾರೆ. ಈ ಕುರಿತು ಟಿವಿ9ನಲ್ಲಿ ವಿಸ್ತೃತ ವರದಿ ಪ್ರಸಾರವಾಗಿತ್ತು.

ಗದಗ: ನಕಲಿ ಠರಾವು ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ಲೂಟಿಗೆ ಪ್ಲಾನ್​; ಆರೋಪ ಹೊತ್ತ ನಗರಸಭೆ ಪೌರಾಯುಕ್ತರು, ಅಧ್ಯಕ್ಷರ ಮೇಲೆ ತನಿಖೆ
ಗದಗ-ಬೆಟಗೇರಿ
TV9kannada Web Team

| Edited By: Kiran Hanumant Madar

Nov 22, 2022 | 5:23 PM

ಗದಗ: ನಕಲಿ ಠರಾವು ಸೃಷ್ಠಿಸಿ ಕೋಟ್ಯಾಂತರ ರೂಪಾಯಿ ಲೂಟಿಗೆ ಗದಗ-ಬೇಟಗೇರಿ (Gadag-Betageri) ನಗರಸಭೆಯ ಪೌರಾಯುಕ್ತ ರಮೇಶ ಸುಣಗಾರ ಹಾಗೂ ಅಧ್ಯಕ್ಷೆ ಉಷಾ ದಾಸರ ಅವರು ಪ್ಲಾನ್ ಮಾಡಿದ್ದಾರೆ ಎನ್ನಲಾಗಿದ್ದು, ಇದು ಅವಳಿ ನಗರದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕಾನೂನು ಬಾಹಿರ ಕೆಲಸಗಳಿಗೆ ಬ್ರೇಕ್ ಹಾಕಬೇಕಿದ್ದ ಪೌರಾಯುಕ್ತರು, ಅಧ್ಯಕ್ಷರೇ ಇಲ್ಲಿ ದೊಡ್ಡ ಯಡವಟ್ಟು ಮಾಡಿದ್ದಾರೆ. ಇದಕ್ಕೆ ಸ್ವಪಕ್ಷೀಯ ಬಿಜೆಪಿ ಸದಸ್ಯರೇ ಸಿಡಿದೆದ್ದಿದ್ದು, ಸಾಮಾನ್ಯ ಸಭೆಯಲ್ಲಿ ಯಾವುದೇ ಚರ್ಚೆಯಾಗದೇ, ಠರಾವು ಆಗದೇ ಇದ್ದರೂ ನಕಲಿ ಠರಾವು ಸೃಷ್ಠಿ ಮಾಡಿದ್ದಾರೆ ಎಂದು ಬಿಜೆಪಿ, ಕಾಂಗ್ರೆಸ್ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದರು. ಈ ಹಗರಣದ ಬಗ್ಗೆ ಟಿವಿ9 ವಿಸ್ತೃತ ವರದಿ ಮಾಡಿತ್ತು. ಹೀಗಾಗಿ ಗದಗ ಜಿಲ್ಲೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಆಗ ಅಲರ್ಟ್ ಆದ ಜಿಲ್ಲಾಧಿಕಾರಿ ವೈಶ್ಯಾಲಿ ಮೇಡಂ ಅವರು ಈ ಠರಾವು ರದ್ದು ಮಾಡಿ ಎಂದು ಆದೇಶ ಮಾಡಿದ್ದಾರೆ. ಆದರೆ ಠರಾವು ರದ್ದು ಮಾತ್ರವಲ್ಲ, ಕಾನೂನು ಬಾಹಿರ ಠರಾವು ಸೃಷ್ಠಿಸಿ ಸರ್ಕಾರದ ಹಣ ಲೂಟಿಗೆ ಪ್ಲಾನ್ ಮಾಡಿದ್ದು, ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್​ ಪಕ್ಷದ ಸದಸ್ಯ ಬರ್ಕತ್ ಅಲಿ ಒತ್ತಾಯಿಸಿದ್ದಾರೆ.

ಇನ್ನು ಈ ನಕಲಿ ಠರಾವನ್ನು ಗದಗ-ಬೆಟಗೇರಿ ಅವಳಿ ನಗರದ ಒಳಚರಂಡಿ ಕಾಮಗಾರಿ ನಿರ್ವಹಣೆ ಗುತ್ತಿಗೆ ನೀಡುವ ವಿಚಾರದಲ್ಲಿ ನಗರಸಭೆ ಪೌರಾಯುಕ್ತ ರಮೇಶ್​ ಸುಣಗಾರ, ಅಧ್ಯಕ್ಷೆ ಉಷಾ ದಾಸರ ನಕಲಿ ಠರಾವು ಸೃಷ್ಟಿಸಿ ಅನುದಾನ ಲೂಟಿಗೆ ಪ್ಲಾನ್ ಮಾಡಿದ್ದರು ಎಂದು ಬಿಜೆಪಿ ಸದಸ್ಯರು ಲಿಖಿತ ದೂರು ನೀಡುವ ಮೂಲಕ ಗಂಭೀರ ಆರೋಪ ಮಾಡಿದ್ದರು. ಕಾಮಗಾರಿ ಹಸ್ತಾಂತರ ಆಗದಿದ್ದರು ಅಹ್ಮದಾಬಾದ್ ಮೂಲದ M/S C M Infra Project pvt, Ltd ಕಂಪನಿಗೆ 3.84 ಕೋಟಿ ಮೊತ್ತದ ಯುಜಿಡಿ ಕಾಮಗಾರಿ ನಿರ್ವಹಣೆ ಗುತ್ತಿಗೆ ನೀಡಲು ನಕಲಿ ಠರಾವು ಮಾಡಿದ್ದರು. ಆಯುಕ್ತರು ಹಾಗೂ ಅಧ್ಯಕ್ಷರ ಮಸಲತ್ತು ಗೊತ್ತಾಗುತ್ತಿದ್ದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ಅಲರ್ಟ್ ಆಗಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಟಿವಿ9 ಕೂಡ ಬೆಳಕು ಚೆಲ್ಲಿತ್ತು. ಠರಾವು ಅಸಲಿಯತ್ತು ಬಗ್ಗೆ ತನಿಖೆ ಆಗಬೇಕು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತ ಕಾಂಗ್ರೆಸ್ ಒತ್ತಾಯಿಸಿದೆ.

ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಕೇಳಿದರೆ ತಕ್ಷಣ ನಿರ್ವಹಣೆ ಗುತ್ತಿಗೆಯನ್ನು ರದ್ದು ಮಾಡುವಂತೆ ಹಾಗೂ ಠರಾವು ಬಗ್ಗೆ ವಿವರಣೆ ನೀಡಲು ಆಯುಕ್ತರಿಗೆ ಸೂಚನೆ ನೀಡಿದ್ದೇನೆ. ಜೊತೆಗೆ ವರದಿ ಬಂದ ಬಳಿಕ ಸೂಕ್ತ ಕಾನೂನು ಕ್ರಮ ಕೈಗೊಳ್ಳವುದಾಗಿ ಜಿಲ್ಲಾಧಿಕಾರಿ ವೈಶಾಲಿ ಅವರು ಟಿವಿ9ಗೆ ಹೇಳಿದ್ದಾರೆ.

ಇದನ್ನೂ ಓದಿ:ಗದಗ: ಕ್ಯಾನ್ಸರ್ ರೋಗಿಗೆ ಕೂದಲು ದಾನ ಮಾಡಿ ಹೊಸ ರೀತಿಯಲ್ಲಿ ಜನ್ಮದಿನ ಆಚರಿಸಿಕೊಂಡ ಯುವತಿ

158.70 ಕೋಟಿ ಮೊತ್ತದ ಯುಜಿಡಿ ಕಾಮಗಾರಿ ಇದಾಗಿದ್ದು. ಈ ಹಗರಣ ಗದಗ-ಬೆಟಗೇರಿ ಅವಳಿ ನಗರದಲ್ಲಿ ಭಾರಿ ಸದ್ದು ಮಾಡುತ್ತಿದ್ದಂತೆ ಜಿಲ್ಲಾಧಿಕಾರಿ ವೈಶಾಲಿ ಮೇಡಂ ನಗರಸಭೆ ಅಧಿಕಾರಿಗಳ ಸಭೆ ಮಾಡಿ ಬೆಂಡೆತ್ತಿದ್ದಾರೆ. ನಗರಸಭೆಯಲ್ಲಿ ಸಾಕಷ್ಟು ಸಮಸ್ಯೆಗಳಿಂದ ಜನರು ಪರದಾಡುತ್ತಿದ್ದಾರೆ. ಈ ಬಗ್ಗೆ ಗಮನ ಹರಿಸುವಂತೆ ಎಚ್ಚರಿಕೆ ನೀಡಿದ್ದಾರೆ. ನಗರಸಭೆ ಮಾಸ್ಟರ್ ಪ್ಲಾನ್ ಬಿಜೆಪಿ ಸದಸ್ಯರೇ ಫ್ಲಾಫ್ ಮಾಡಿದ್ದಾರೆ. ಹಣ ಲೂಟಿ ಮಾಡಲು ಪ್ರಯತ್ನಿಸಿದವರ ಬಣ್ಣ ಬಯಲು ಮಾಡಿದ್ದಾರೆ. ಆದರೆ ಈಗ ಡಿಸಿ ಮೇಡಂ ತನಿಖೆ ಮಾಡುವುದಾಗಿ ಹೇಳಿದ್ದು ಅಧಿಕಾರಿಗಳು, ಜನಪ್ರತಿನಿಧಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ.

ವರದಿ: ಸಂಜೀವ ಪಾಂಡ್ರೆ ಟಿವಿ9 ಗದಗ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada