Gadag: ಕಡಿಮೆ ಅಂತರದಲ್ಲಿ ಹಾರಾಡಿ ಆತಂಕ ಸೃಷ್ಟಿಸಿದ ವಿಮಾನ: ಕಂಗಾಲಾದ ಹಳ್ಳಿ ಜನರು
ಕಳೆದ ನಾಲ್ಕೈದು ದಿನಗಳಿಂದ ಬಹಳ ಕಡಿಮೆ ಅಂತರದಲ್ಲಿ ವಿಮಾನ ಒಂದು ಹಾರಾಟ ಮಾಡುತ್ತಿದೆ. ಯಾಕೆ ಇಷ್ಟೊಂದು ಸಮೀಪ ವಿಮಾನ ಹಾರಾಟ ಮಾಡುತ್ತಿದೆ ಎಂದು ಯಾರಿಗೆ ತಿಳಿಯುತ್ತಿಲ್ಲ. ಹಾಗಾಗಿ ಈ ಭಾಗದ ಜನರು ಹಾಗೂ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಗದಗ: ಕಳೆದ ನಾಲ್ಕೈದು ದಿನಗಳಿಂದ ಬಹಳ ಕಡಿಮೆ ಅಂತರದಲ್ಲಿ ವಿಮಾನ (Plane) ಒಂದು ಹಾರಾಟ ಮಾಡುತ್ತಿದೆ. ಯಾಕೆ ಇಷ್ಟೊಂದು ಸಮೀಪ ವಿಮಾನ ಹಾರಾಟ ಮಾಡುತ್ತಿದೆ ಎಂದು ಯಾರಿಗೆ ತಿಳಿಯುತ್ತಿಲ್ಲ. ಹಾಗಾಗಿ ಈ ಭಾಗದ ಜನರು ಹಾಗೂ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಯಾವ ಕ್ಷಣದಲ್ಲಿ ಏನಾಗುತ್ತದೆ ಎನ್ನುವ ಆತಂಕ ಮನೆ ಮಾಡಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಶೀರನಹಳ್ಳಿ, ಗುಮ್ಮಗೋಳ, ಸಿಂಗಟಾಲೂರ ಸೇರಿದಂತೆ ತುಂಗಭದ್ರಾ ನದಿ ಪಾತ್ರದಲ್ಲಿ ಕಳೆದ ನಾಲ್ಕೈದು ದಿನಗಳಿಂದ ವಿಮಾನ ಹಾರಾಟ ಮಾಡುತ್ತಿದೆ. ನದಿ ಪಾತ್ರದಲ್ಲಿ ಕಡಿಮೆ ಅಂತರದಲ್ಲಿ ಹಾರಾಟ ಮಾಡುತ್ತಿರುವುದರಿಂದ ಇದು ಗ್ರಾಮಸ್ಥರ ಹಾಗೂ ರೈತರ ಆತಂಕಕ್ಕೆ ಕಾರಣವಾಗಿದೆ.
ಸಮೀಪದಲ್ಲಿ ವಿಮಾನ ಯಾಕೆ ಹಾರಾಟ ಮಾಡುತ್ತಿದೆ ಎನ್ನುವದು ಗೊತ್ತಾಗುತ್ತಿಲ್ಲಾ ಎಂದು ಗ್ರಾಮಸ್ಥರು ಆಳಲು ತೊಡಿಕೊಂಡಿದ್ದಾರೆ. ಇನ್ನೂ ನದಿ ಪಾತ್ರಕ್ಕೆ ಕಪ್ಪತ್ತಗುಡ್ಡ ಹೊಂದಿಕೊಂಡಿದೆ. ಕಪ್ಪತ್ತಗುಡ್ಡ ಪ್ರದೇಶದಲ್ಲಿ ಪಂಚಖನಿಜಗಳು ಇವೆ. ಹೀಗಾಗಿ ಮತ್ತೆ ಕಪ್ಪಗುಡ್ಡ ಸೆರಗಿನಲ್ಲಿ ವಿಮಾನ ಹಾರಾಡುತ್ತಿರೋದು ನೋಡಿದರೆ ಖನಿಜ ಸಂಪತ್ತು ಬಗ್ಗೆ ಸರ್ವೆ ನಡೆದಿದೆಯಾ ಅನ್ನೋ ಬಗ್ಗೆ ಅನುಮಾನ ಮೂಡಿದೆ. ಆದರೂ ಜಿಲ್ಲಾಡಳಿತ ಹಾಗೂ ಪೊಲೀಸ ಇಲಾಖೆ, ವಿಮಾನ ಹಾರಾಟ ಬಗ್ಗೆ ಮಾಹಿತಿ ನೀಡಬೇಕೆಂದು ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ: ಐತಿಹಾಸಿಕ ಹಂಪಿ ಸ್ಮಾರಕದ ನೈಜ ಸ್ವರೂಪಕ್ಕೆ ಧಕ್ಕೆ ಆರೋಪ: ನಿಯಮ ಉಲ್ಲಂಘಿಸಿ ಬಡವಿಲಿಂಗಕ್ಕೆ ಬೇಲಿ!
ತುಂಗಭದ್ರಾ ನದಿ ಪಾತ್ರದಲ್ಲಿ 10 ಕ್ಕೂ ಹೆಚ್ಚು ಗ್ರಾಮಗಳಿವೆ. ನದಿ ಪಕ್ಕದಲ್ಲಿ ಸಾವಿರ ಎಕರೆ ಪ್ರದೇಶದಲ್ಲಿ ಕೃಷಿ ಮಾಡುತ್ತಾರೆ. ನಿತ್ಯ ಕೂಲಿ ಕಾರ್ಮಿಕರು, ರೈತರು ಕೆಲಸದಲ್ಲಿ ಮಗ್ನರಾದ ಸಮಯದಲ್ಲಿ ಏಕಾಏಕಿ ದೊಡ್ಡ ಸದ್ದು ಮಾಡ್ತಾ, ವಿಮಾನ ಹಾರಾಟ ಮಾಡುತ್ತಿದೆ. ಇದರಿಂದ ಗ್ರಾಮ ಹಾಗೂ ಜಮೀನಿನಲ್ಲಿ ಕೆಲಸ ಮಾಡುವ ಕಾರ್ಮಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಈ ಬಗ್ಗೆ ಟಿವಿ9 ಗೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎನ್ ಮಾತನಾಡಿದ್ದು, ಭಾರತ ಸರ್ಕಾರದಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆ ವತಿಯಿಂದ, ಖನಿಜ ಸಂಪತ್ತು ಗುರುತಿಸುವ ನಿಟ್ಟಿನಲ್ಲಿ ಸರ್ವೆ ಮಾಡಲಾಗುತ್ತಿದೆ. ಇದೇ ತಿಂಗಳು 18 ರವರಿಗೆ ಸರ್ವೆ ಕಾರ್ಯ ನಡೆಯಲಿದೆ. ಜಿಲ್ಲಾಡಳಿತ ಪರವಾನಗಿ ಕೂಡ ಪಡೆದುಕೊಂಡಿದ್ದಾರೆ ಎಂದರು. ಇನ್ನೂ ಗ್ರಾಮದಲ್ಲಿ ಆತಂಕ ನಿರ್ಮಾಣವಾಗಿದ್ದರಿಂದ ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ಸಾಮಾನ್ಯ ಕೋಚ್ನ ಜನರಿಂದ ತುಂಬಿ ತುಳುಕಿದ ಸ್ಲೀಪರ್ ಕೋಚ್: ನೆಲದ ಮೇಲೆ ಮಲಗಿದ ಪ್ರಯಾಣಿಕರು, ಫೋಟೋ ವೈರಲ್
ಗದಗ ಜಿಲ್ಲೆಯಲ್ಲಿ ಮಾತ್ರವಲ್ಲ ಬಳ್ಳಾರಿ, ದಾವಣಗೇರೆ, ಹಾಸನ, ಗುಲಬರ್ಗಾ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸರ್ವೆ ನಡೆದಿದೆ. ತುಂಗಭದ್ರಾ ನದಿ ಪಾತ್ರದಲ್ಲಿ ಕಡಿಮೆ ಅಂತರದಲ್ಲಿ ಹಾರಾಟ ಮಾಡ್ತಾಯಿದ್ದ ವಿಮಾನ ಸರ್ವೆ ಕಾರ್ಯಕ್ಕೆ ಬಂದಿದೆ. ಆತಂಕಕ್ಕೆ ಒಳಗಾದ ಗ್ರಾಮಸ್ಥರು ಹಾಗೂ ರೈತರಿಗೆ ಈ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಆಗ ಮಾತ್ರ ಅವರ ಆತಂಕ ದೂರುವಾಗಲು ಸಾಧ್ಯ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಬೇಕಾಗಿದೆ.
ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:00 pm, Thu, 18 May 23
