Gadag: ಅನೈತಿಕ ಸಂಬಂಧ ಪ್ರಶ್ನೆ ಮಾಡಿದ ಪತ್ನಿಯನ್ನೇ ಕೊಂದ ಪಾಪಿ ಪತಿ
ಎರಡನೇ ಮದುವೆಯಾಗಿ ಸುಂದರ ಜೀವನ ನಡೆಸಬೇಕೇಂಬ ಕನಸು ಕಂಡಿದ್ದ ಪತ್ನಿಗೆ ಮೋಸ ಮಾಡಿ, ಪರಸ್ತ್ರೀ ಜೊತೆ ಹೊಂದಿದ್ದ ಅನೈತಿಕ ಸಂಬಂಧವನ್ನ ಪ್ರಶ್ನೇ ಮಾಡಿದಕ್ಕೆ ಪತ್ನಿಯನ್ನೇ ಕೊಲೆ ಮಾಡಿದ್ದಾನೆ.
ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ವಿರುಪಾಪೂರ ಗ್ರಾಮದ ಉಮೇಶ ಹಿರೇಮಠ ಅವರ ಮನೆಯಲ್ಲಿ ಪತ್ನಿ ಸುನೀತಾಳ ಅನುಮಾನಸ್ಪದ ರೀತಿಯಲ್ಲಿ ಶವ ಪತ್ತೆಯಾಗಿದೆ. ಮೃತ ಸುನೀತಾಳ ಮೈಮೇಲೆ ಗಾಯದ ಗುರುತುಗಳಿವೆ, ಅಷ್ಟೇ ಅಲ್ಲದೇ ಪತಿ ಉಮೇಶ ಸೇರಿ ಇಡೀ ಕುಟುಂಬಸ್ಥರು ಎಸ್ಕೇಪ್ ಆಗಿದ್ದಾರೆ. 2021 ಜನವರಿ 08 ರಂದು ಎರಡನೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಉಮೇಶ ಹಿರೇಮಠ ಹಾಗೂ ಸುನಿತಾ ಹಿರೇಮಠ ದಂಪತಿಗಳು ಇನ್ನು ಮುಂದೆ ಆದರೂ ಇಬ್ಬರು ಚೆನ್ನಾಗಿ ಬದುಕಬೇಕೇಂಬ ಆಸೆ ಹೊಂದಿದ್ದಳು ಸುನೀತಾ. ಆದರೆ ಉಮೇಶ ಮಾತ್ರ ತನ್ನ ಹಳೇ ಚಾಳಿ ಮುಂದುವರೆಸಿದ್ದಾನೆ. ಪರಸ್ತ್ರೀಯರ ಜೊತೆಗೆ ವ್ಯಾಮೋಹ ಹಾಗೂ ಕಳ್ಳ ಸಂಬಂಧವನ್ನು ಇಟ್ಟುಕೊಂಡಿದ್ದನಂತೆ. ಅದನ್ನ ಪ್ರಶ್ನೇ ಮಾಡಿದ್ದಕ್ಕೆ ಪತ್ನಿಯನ್ನ ಕೊಲೆ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮದುವೆಯಾಗಿ ಎರಡು ವರ್ಷವಾಗಿದ್ದು, ಮದುವೆಯಾದಗಿನಿಂದ ಸುನೀತಾಳ ಮೇಲೆ ಉಮೇಶ ಹಿರೇಮಠ ಸಂಶಯ ಮಾಡುತ್ತಿದ್ದನಂತೆ. ಅವಳನ್ನು ಮನೆಯಿಂದ ಹೊರಗಡೆ ಹೋಗದ ಹಾಗೇ, ಪಕ್ಕದ ಮನೆಯ ಮಹಿಳೆಯರ ಜೊತೆಗೆ ಮಾತನಾಡಿದರೂ ಸಂಶಯ ಪಡುತ್ತಿದ್ದನಂತೆ. ಇನ್ನು ಈ ಉಮೇಶ ಹಿರೇಮಠ ಮುಖ್ಯಾಧಿಕಾರಿಯಾಗಿ ಯಲಬುರ್ಗಾ ಹಾಗೂ ಕುಷ್ಟಗಿಯಲ್ಲಿ ಕೆಲಸ ಮಾಡುತ್ತಿದ್ದು, ಹತ್ತಕ್ಕೂ ಹೆಚ್ಚು ಮಹಿಳೆಯರ ಜೊತೆಗೆ ಅಕ್ರಮ ಸಂಬಂಧವನ್ನು ಇಟ್ಟುಕೊಂಡಿದ್ದನಂತೆ. ಹೀಗಾಗಿ ಉಮೇಶ ಹಾಗೂ ಸುನೀತಾಳ ನಡುವೆ ಆಗಾಗ ಗಲಾಟೆಯಾಗುತ್ತಿತ್ತು.
ವೀರಾಪೂರ ಗ್ರಾಮಸ್ಥರು ಹಾಗೂ ಪೊಲೀಸರ ಸಮ್ಮುಖದಲ್ಲಿ ಒಂದೆರಡು ಭಾರಿ ಈ ಕುರಿತು ಜಗಳ ಬಗೆಹರಿಸಲಾಗಿತ್ತು. ಆದರೂ ಕೂಡ ಸಂಸಾರ ಮಾತ್ರ ಚೆನ್ನಾಗಿ ಸಾಗಿಸುತ್ತಿರಲ್ಲಿಲ್ಲ. ಉಮೇಶ ಸುನೀತಾಳಿಗೆ ನಿತ್ಯ ಕಿರುಕುಳ ನೀಡುತ್ತಿದ್ದು, ಒಂದು ಭಾರಿ ಸುನೀತಾಳಿಗೆ ತಲ್ವಾರ ಹಿಡಿದುಕೊಂಡು, ಅವಳಿಗೆ ಜೀವ ಬೆದರಿಕೆ ಹಾಕಿದ್ದ, ಇವಾಗ ಮನೆಯಲ್ಲಿ ಮಲಗಿದ್ದಾಗ ಕೊಲೆ ಮಾಡಿ, ಎಸ್ಕೇಪ್ ಆಗಿದ್ದಾನೆ. ಅವನ ಮೇಲೆ ಸೂಕ್ತವಾದ ಕ್ರಮ ಕೈಗೊಳ್ಳುವಂತೆ ಕುಟುಂಬಸ್ಥರು ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ:Belagavi: ಗುಟಕಾ ತಿಂದು ಉಗಿದ ಎಂಬ ಕಾರಣಕ್ಕೆ ವ್ಯಕ್ತಿಯ ಬರ್ಬರ ಕೊಲೆ
ಮೊದಲ ಮದುವೆಯಲ್ಲಾದ ತಪ್ಪುಗಳನ್ನು ತಿದ್ದಿಕೊಂಡು ಜೀವನ ಮಾಡಬೇಕು ಎಂದು ಇಬ್ಬರು ಒಪ್ಪಿಕೊಂಡು ಎರಡನೇಯ ಮದುವೆಯಾಗಿದ್ದರು. ಆದರೆ ಉಮೇಶ ಹಿರೇಮಠ ತಪ್ಪು ದಾರಿ ಹಿಡಿದು ತನ್ನ ಪತ್ನಿಯನ್ನ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಈ ಕುರಿತು ಮುಂಡರಗಿ ಪೊಲೀಸರು ದೂರು ದಾಖಲಿಸಿಕೊಂಡು ಪತ್ನಿ ಹಂತಕನಿಗಾಗಿ ಹುಡುಕಾಟ ನಡೆಸಿದ್ದಾರೆ.
ವರದಿ: ಸಂಜೀವ ಪಾಂಡ್ರೆ ಟಿವಿ9 ಗದಗ
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ ಮಾಡಿ