ಗದಗ-ಬೆಟಗೇರಿಯ ಹಲವೆಡೆ ಗ್ಯಾಸ್ ರೀ ಫಿಲ್ಲಿಂಗ್​ ದಂಧೆ; ಟಿವಿ9 ರಿಯಾಲಿಟಿ ಚೆಕ್​ ವೇಳೆ ಬಯಲಾಯ್ತು ಆಕ್ರಮ

ಗದಗ-ಬೆಟಗೇರಿ ಅವಳಿ ನಗರದಲ್ಲಿ ಜನರ ಮಧ್ಯೆಯೇ ಅಕ್ರಮ ಗ್ಯಾಸ್ ರೀಫಿಲಿಂಗ್ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ಅವಳಿ ನಗರದ ಗಲ್ಲಿಗಲ್ಲಿಯಲ್ಲೂ, ಸಂದಿಗೊಂದಿಯಲ್ಲಿ ಶೆಡ್ ಹಾಕಿ ಗ್ಯಾಸ್ ರೀಫಿಲಿಂಗ್ ಮಾಡಲಾಗ್ತಾಯಿದೆ. ಟಿವಿ9 ರಹಸ್ಯ ಕಾರ್ಯಚರಣೆಯಲ್ಲಿ ಡೇಂಜರ್ಸ್ ದಂಧೆಯ ದೃಶ್ಯಗಳು ಸೆರೆಯಾಗಿವೆ.

ಗದಗ-ಬೆಟಗೇರಿಯ ಹಲವೆಡೆ ಗ್ಯಾಸ್ ರೀ ಫಿಲ್ಲಿಂಗ್​ ದಂಧೆ; ಟಿವಿ9 ರಿಯಾಲಿಟಿ ಚೆಕ್​ ವೇಳೆ ಬಯಲಾಯ್ತು ಆಕ್ರಮ
ಗ್ಯಾಸ್ ರೀ ಫಿಲ್ಲಿಂಗ್​ ದಂಧೆ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಆಯೇಷಾ ಬಾನು

Updated on: Aug 26, 2024 | 10:10 AM

ಗದಗ, ಆಗಸ್ಟ್​.26: ಗದಗ-ಬೆಟಗೇರಿ (Gadag Betageri) ಅವಳಿ ನಗರದಲ್ಲಿ ಭಯಾನಕ ಗ್ಯಾಸ್ ರೀಫಿಲಿಂಗ್ ಮಾಫಿಯಾ (Gas Re-Filling) ಎಗ್ಗಿಲ್ಲದೇ ನಡೆದಿದೆ. ಪ್ರತಿ ಕ್ಷಣವೂ ಜನ್ರು ಭಯದಲ್ಲೇ ಬದುಕುವಂತಾಗಿದೆ. ಯಾವಾಗ ಬ್ಲಾಸ್ಟ್ ಆಗುತ್ತೋ, ದುರಂತ ಸಂಭವಿಸುತ್ತೋ ಅನ್ನೋ ಆತಂಕದಲ್ಲೇ ಜೀವನ ಮಾಡ್ತಾಯಿದ್ದಾರೆ. ಅಕ್ರಮ ಗ್ಯಾಸ್ ರೀಫಿಲಿಂಗ್ ದಂಧೆ ಅವಳಿ ನಗರದ ಜನ್ರನ್ನು ಬೆಚ್ಚಿಬಿಳಿಸಿದೆ. ಜಿಲ್ಲಾ ಕೇಂದ್ರದಲ್ಲೇ ರಾಜಾರೋಷವಾಗಿ ಈ ದಂಧೆ ನಡೆಯುತ್ತಿದ್ರೂ ಆಡಳಿತ ಕುಂಭಕರ್ಣ ನಿದ್ದೆ ಮಾಡ್ತಿದೆ. ಟಿವಿ9 ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಭಯಾನಕ, ಕರಾಳ ದಂಧೆಯ ಅಸಲಿಯತ್ತು ಬಯಲಾಗಿದೆ.

ಎರಡು ದಿನಗಳ ಹಿಂದೆಯೇ ಬೆಂಗಳೂರಿನ ಬೇಕರಿ ಅಂಗಡಿ ಸಿಲಿಂಡರ್​ಗಳು ಬ್ಲಾಸ್ಟ್ ಆಗಿ ಇಡೀ ಅಗಂಡಿ ಸುಟ್ಟು ಕರಕಲಾಗಿತ್ತು. ಈ ಘಟನೆ ಇನ್ನೂ ಕಣ್ಮುಂದೆ ಇರುವಾಗಲೇ ಅಕ್ರಮ ಗ್ಯಾಸ್ ರೀಫಿಲಿಂಗ್ ಡೇಂಜರ್ಸ್ ದಂಧೆ ಟಿವಿ9 ಬಯಲು ಮಾಡಿದೆ. ಈ ಭಯಾನಕ, ಡೇಂಜರ್ಸ್ ಅಕ್ರಮ ಗ್ಯಾಸ್ ರೀಫಿಲಿಂಗ್ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಗದಗ-ಬೆಟಗೇರಿ ಅವಳಿ ನಗರದಲ್ಲಿ ಜನರ ಮಧ್ಯೆಯೇ ಅಕ್ರಮ ಗ್ಯಾಸ್ ರೀಫಿಲಿಂಗ್ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ಅವಳಿ ನಗರದ ಗಲ್ಲಿಗಲ್ಲಿಯಲ್ಲೂ, ಸಂದಿಗೊಂದಿಯಲ್ಲಿ ಶೆಡ್ ಹಾಕಿ ಗ್ಯಾಸ್ ರೀಫಿಲಿಂಗ್ ಮಾಡಲಾಗ್ತಾಯಿದೆ. ಟಿವಿ9 ರಹಸ್ಯ ಕಾರ್ಯಚರಣೆಯಲ್ಲಿ ಡೇಂಜರ್ಸ್ ದಂಧೆಯ ದೃಶ್ಯಗಳು ಸೆರೆಯಾಗಿವೆ.

ಟಿವಿ9 ರಿಯಾಲಿಟಿ ಚೆಕ್​ ವೇಳೆ ಆಕ್ರಮ ಬಯಲು

ಗ್ರಾಹಕರ ಮನೆಗಳಿಗೆ ಹೋಗಬೇಕಿರೋ ಗ್ಯಾಸ್ ಸಿಲಿಂಡರ್ ಗಳು ಈ ಅಕ್ರಮ ಅಡ್ಡಾದಲ್ಲಿ ಸಂಗ್ರಹ ಮಾಡಲಾಗಿದೆ. ಮಷಿನ್ ಮೂಲಕ ಅಕ್ರಮವಾಗಿ ಗ್ಯಾಸ್ ಆಟೋಗಳಿಗೆ ರೀಫಿಲಿಂಗ್ ಮಾಡಲಾಗ್ತಾಯಿದೆ. ಸ್ವಲ್ಪ ಹೆಚ್ಚು ಕಮ್ಮಿಯಾದ್ರೂ ಮುಗಿತು. ದೊಡ್ಡ ದುರಂತವೇ ನಡೆದು ಹೋಗುತ್ತೆ. ಈ ಭಯಾನಕ ದಂಧೆ ಕದ್ದು ಮುಚ್ಚಿ ಏನೂ ನಡೆಯಲ್ಲ. ಆಹಾರ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಗೊತ್ತಿದೆ. ಆದ್ರೆ, ಯಾರೂ ಕೂಡ ಕ್ರಮ ಕೈಗೊಳ್ಳುವ ಗೋಜಿಗೆ ಹೋಗ್ತಾಯಿಲ್ಲ. ಈ ಇಲಾಖೆಗಳು ಯಾಕೇ ಗಪ್ ಚುಪ್ ಆಗಿವೆ ಅನ್ನೋದು ಗೊತ್ತೇ ಆಗುತ್ತಿಲ್ಲ. ಸ್ಥಳೀಯರು ಹೇಳೋ ಪ್ರಕಾರ ಈ ಅಕ್ರಮ ಗ್ಯಾಸ್ ರೀಫಿಲಿಂಗ್ ಅಡ್ಡಾಗಳಿಂದ ಈ ಎರಡು ಇಲಾಖೆ ಅಧಿಕಾರಿಗಳಿಗೆ ಮಾಮುಲಿ ಹೋಗುತ್ತಂತೆ. ಹೀಗಾಗಿ ಡೇಂಜರ್ಸ್ ಅಂತ ಗೋತ್ತಿದ್ರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಅನ್ನೋ ಆರೋಪ ಅವಳಿ ನಗರದಲ್ಲಿ ಕೇಳಿ ಬರ್ತಾಯಿದೆ. ಟಿವಿ9 ಕಳೆದ 15 ದಿನಗಳಿಂದ ಅವಳಿ ನಗರದ ಗಲ್ಲಿ ಗಲ್ಲಿಯಲ್ಲಿ ಸುತ್ತಾಡಿ ಈ ಅಕ್ರಮ ಗ್ಯಾಸ್ ರೀಫಿಲಿಂಗ್ ಅಡ್ಡಾಗಳನ್ನು ಪತ್ತೆ ಹಚ್ಚಿದೆ.

ಇದನ್ನೂ ಓದಿ: TRAI, ಮುಂಬೈ ಪೊಲೀಸರೆಂದು ಕರೆ ಮಾಡಿ ಹಿರಿಯ ವೈದ್ಯನಿಗೆ 1.27 ಕೋಟಿ ವಂಚನೆ ಮಾಡಿದ ಸೈಬರ್ ಖದೀಮರು

ಯಾವುದೇ ಭಯ, ಅಂಜಿಕೆ ಇಲ್ಲದೇ ಅಕ್ರಮ ದಂಧೆ ಸಾಗಿದೆ. ಮನೆಗಳಿಗೆ ಉಪಯೋಗಿಸುವ ಸಿಲಿಂಡರ್ ಗಳ ಶೆಡ್ ಗಳಲ್ಲಿ ಆಕ್ರಮ ದಾಸ್ತಾನು ಮಾಡಲಾಗಿದೆ. ಅಕ್ರಮ ಸಿಲಿಂಡರ್ ಗಳು ಮಷಿನ್ ಮೂಲಕ ಆಟೋಗಳಿಗೆ ರೀಫಿಲಿಂಗ್ ಮಾಡುವ ಮಾಫಿಯಾ ಗದಗ-ಬೆಟಗೇರಿ ಅವಳಿ ನಗರದ ಗಲ್ಲಿ ಗಲ್ಲಿಯಲ್ಲಿ ರಾಜಾರೋಷವಾಗಿ ನಡೆದಿದೆ. ಈ ಅಪಾಯಕಾರಿ ದಂಧೆಯಿಂದ ಅಕ್ಕಪಕ್ಕದ ಜನ್ರು ನಿತ್ಯವೂ ಭಯದಲ್ಲೇ ಬದುಕುತ್ತಿದ್ದಾರೆ. ರೀಫಿಲಿಂಗ್ ಮಾಡುವ ವೇಳೆ ಸ್ವಲ್ಪ ಹೆಚ್ಚು ಕಮ್ಮಿಯಾದ್ರೂ ದೊಡ್ಡ ದುರಂತ ಗ್ಯಾರಂಟಿ.

ಗದಗ ಶಹರ, ಬೆಟಗೇರಿ ಪೊಲೀಸ್ ಠಾಣೆ ಹಾಗೂ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಗ್ಗಿಲ್ಲದೇ ಅಕ್ರಮ ದಂಧೆ ಸಾಗಿದೆ. ಮುಳಗುಂದ ರಸ್ತೆಯ ಧೋಬಿ ಘಾಟ್ ಬಳಿಯ ರಿಂಗ್ ರೋಡ್ ಬಳಿ ಎರಡು ಅಕ್ರಮ ಗ್ಯಾಸ್ ರೀಫಿಲಿಂಗ್ ಅಡ್ಡಾಗಳಿವೆ. ಬೆಟಗೇರಿಯ ಮಂಜುನಾಥ್ ನಗರದಲ್ಲಿ ರೀಫಿಲಿಂಗ್ ದಂಧೆ ಸದ್ದಿಲ್ಲದೇ ನಡೆಯುತ್ತಿದೆ. ಕುರಟ್ಟಿಪೇಟೆ, ಕಳಸಾಪೂರ ರಸ್ತೆಯಲ್ಲೂ ಭರ್ಜರಿ ರೀಫಿಲಿಂಗ್ ಮಾಫಿಯಾ ನಡೆಯುತ್ತಿದೆ. ಇನ್ನೂ ಅನೇಕ ಕಡೆಗಳಲ್ಲಿ ಪೊಲೀಸ್, ಆಹಾರ ಇಲಾಖೆ ಅಧಿಕಾರಿಗಳ ಅಂಜಿಕೆ ಇಲ್ಲದೇ ಭರ್ಜರಿ ನಡೆದಿದೆ. ಆಹಾರ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ಇದ್ರೂ ಗಪ್ ಚುಪ್ ಆಗಿದ್ದಾರಂತೆ. ಆಹಾರ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ವಿರುದ್ಧ ಅವಳಿ ನಗರದ ಜನ್ರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಹಸ್ಯ ಕಾರ್ಯಾಚರಣೆ ಮೂಲಕ ಟಿವಿ9 ಅಕ್ರಮ ಗ್ಯಾಸ್ ರೀಫಿಲಿಂಗ್ ದಂಧೆಯ ಕರಾಳ ಮುಖವಾಡ ಬಯಲು ಮಾಡಿದೆ. ಆಟೋಗಳಿಗೆ ರಾಜಾರೋಷವಾಗಿ ಗ್ಯಾಸ್ ರೀಫಿಲಿಂಗ್ ಮಾಡಲಾಗುತ್ತಿದೆ. 1ಕೆಜಿ ಗ್ಯಾಸ್ ಹಾಕಲು 110 ರೂಪಾಯಿ ಪಡೆಯಲಾಗುತ್ತದೆ. ಇನ್ನೂ ಕಾರ್ ಗಳಿಗೂ ರೀಫಿಲಿಂಗ್ ಮಾಡಲಾಗುತ್ತಿದೆ. ದೊಡ್ಡ ದುರಂತ ನಡೆಯುವ ಮುನ್ನವೇ ಜಿಲ್ಲಾಡಳಿ, ಪೊಲೀಸ್ ಎಚ್ಚೆತ್ತುಕೊಂಡು ಅಕ್ರಮ ಗ್ಯಾಸ್ ರೀಫಿಲಿಂಗ್ ದಂಧೆಗೆ ಬ್ರೇಕ್ ಹಾಕಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್