AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಳಾ ಈ ಗೃಹಿಣಿ? ಈ ಮಧ್ಯೆ ಮಗು ಎಲ್ಲಿ ಹೋಯ್ತು? ಗಂಡ ಹೇಳುವ ಕಥೆಯೇನು?

ಘಟನೆ ಬಳಿಕ ಪತಿ ಹಾಗೂ ಕುಟುಂಬಸ್ಥರು ಈ ಮನೆಯಲ್ಲಿ ಇಲ್ಲ. ಮಗಳ ಶವ ಆಸ್ಪತ್ರೆಯ ಶವಾಗಾರದಲ್ಲಿದೆ. ಮಗು ಬಾವಿಯಲ್ಲಿದೆಯೋ ಅಥವಾ ಎಲ್ಲಿ ಎಸ್ಕೇಪ್ ಮಾಡಿದ್ದಾರೋ ಗೊತ್ತಿಲ್ಲ. ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಅಂತ ಕುಟುಂಬ ಒತ್ತಾಯಿಸುತ್ತಿದೆ.

ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಳಾ ಈ ಗೃಹಿಣಿ? ಈ ಮಧ್ಯೆ ಮಗು ಎಲ್ಲಿ ಹೋಯ್ತು? ಗಂಡ ಹೇಳುವ ಕಥೆಯೇನು?
ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಳಾ ಈ ಗೃಹಿಣಿ? ಈ ಮಧ್ಯೆ ಮಗು ಎಲ್ಲಿ ಹೋಯ್ತು?
TV9 Web
| Updated By: ಸಾಧು ಶ್ರೀನಾಥ್​|

Updated on: Feb 10, 2023 | 3:18 PM

Share

ಗದಗ: ಒಬ್ಬಳೆ ಮಗಳು. ಹಾಗಾಗಿ ಮುದ್ದಾಗಿ ಸಾಕಿದ್ದರು. ನಾಲ್ಕು ವರ್ಷದ ಹಿಂದೆ ಒಳ್ಳೆಯ ಹುಡುಗ ಸಿಕ್ಕಿದಾನೆ ಅಂತಾ ಮದುವೆ ಮಾಡಿದರು. ಬಡತನದಲ್ಲೂ ಒಂದು ವರ್ಷ ನಗುನಗುತಾ ಸಂಸಾರ ಮಾಡಿದರು. ಒಂದು ಮುದ್ದಾದ ಮಗು ಕೂಡ ಇದೆ. ಆದ್ರೆ, ಆ ಗೃಹಿಣಿ (wife) ಈಗ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಪತಿ (husband) ಮನೆಯವ್ರೇ ಕತ್ತು ಹಿಸುಕಿ ಸಾಯಿಸಿಬಿಟ್ಟು, ಆಕೆಯ ದೇಹದ ಮೇಲೆ ನೀರು ಹಾಕಿ, ಬಾವಿಗೆ ಹಾರಿ ಆತ್ಮಹತ್ಯೆ (suicide) ಮಾಡಿಕೊಂಡಿದ್ದಾಳೆ ಅಂತಾ ಕಥೆ ಕಟ್ಟಿದ್ದಾರೆ ಎಂದು ಆ ಹುಡುಗಿಯ ಕುಟಂಬಸ್ಥರು ಕಿಡಿಕಾರಿದ್ದಾರೆ. ಇದೇ ವೇಳೆ ಮೂರು ವರ್ಷದ ಮಗು ನಾಪತ್ತೆಯಾಗಿದ್ದು, ಶೋಧ ನಡೆಸಲು ಪೊಲೀಸ್ರು ನಿರ್ಲಕ್ಷ್ಯ ತೋರುತ್ತಿದ್ದಾರೆ ಅಂತ ಕಿಡಿಕಾರಿದ್ದಾರೆ. ಅಷ್ಟಕ್ಕೂ ಆಗಿದ್ದಾದ್ರೂ ಏನೂ ಅಂತೀರಾ ಈ ಸ್ಟೋರಿ ನೋಡಿ… ಮುದ್ದಿನ ಮಗಳ ಕಳೆದುಕೊಂಡು ತಾಯಿ ಕಣ್ಣೀರು. ಸಂಬಂಧಿಕರಲ್ಲಿ ಮಡುಗಟ್ಟಿದ ದುಖಃ, ಆಕ್ರೋಶ. ಪತಿ ಹಾಗೂ ಅವರ ಕುಟುಂಬಸ್ಥರೇ ಕೊಂದು ಆತ್ಮಹತ್ಯೆ ಕಥೆ ಕಟ್ಟಿದ್ದಾರೆ ಅಂತ ತಾಯಿ ಆಕ್ರೋಶ ಹೊರಹಾಕಿದ್ದಾರೆ. ಮಗಳ ನಿಗೂಢ ಸಾವು ಒಂದು ಕಡೆ. ಮೂರು ವರ್ಷದ ಮಗು ನಾಪತ್ತೆ ಮತ್ತೊಂದು ಕಡೆ. ಠಾಣೆ ಎದುರು ನ್ಯಾಯಕ್ಕಾಗಿ ಕುಟುಂಬಸ್ಥರ ಗೋಳಾಟ, ಗೃಹಿಣಿ ಸಾವಿನ ಸುತ್ತ ಅನುಮಾನದ ಹುತ್ತ.. ಎಸ್ ಈ ದೃಶ್ಯಗಳ ಕಂಡಿದ್ದು, ಗದಗ (gadag) ಗ್ರಾಮೀಣ ಪೊಲೀಸ್ ಠಾಣೆ ಎದುರು. ಗದಗ ನಗರದ ಮುಳಗುಂದ ರಸ್ತೆಯ ತಾಜ್ ನಗರದಲ್ಲಿ ಗೃಹಿಣಿ ಅನುಮಾನಾಸ್ಪದ ಸಾವು ಈ ಎಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ.

ಮೇಲಿನ ಫೋಟೋದಲ್ಲಿರುವ ಮಹಿಳೆಯ ಹೆಸರು ರುಬಿನಾ ಕಣವಿ ಹುಬ್ಬಳ್ಳಿ ತಾಲೂಕಿನ ಭದ್ರಾಪೂರ ಗ್ರಾಮದವರು. ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದ ದಾವಲಸಾಬ್ ಜೊತೆ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದಾಳೆ. ಆರಂಭದಲ್ಲಿ ಸುಂದರ ಸಂಸಾರ ನಡೆಸಿದ್ದಾರೆ. ಇದಕ್ಕೆ ಮುದ್ದಾದ ಮೂರು ವರ್ಷದ ಮಗು ಕೂಡ ಇದೆ. ಆದ್ರೆ, ರುಬಿನಾ ಈಗ ನಿಗೂಢ ಸಾವನ್ನಪ್ಪಿದ್ದಾಳೆ. ಬಾವಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತಾ ಪತಿರಾಯ ತನ್ನ ಪತ್ನಿ ರುಬಿನಾಳ ಮೃತ ದೇಹವನ್ನು ಗದಗ ಜಿಮ್ಸ್ ಆಸ್ಪತ್ರೆಗೆ ತಗೆದುಕೊಂಡು ಹೋಗಿದ್ದಾನೆ.

ಆಗ ವೈದ್ಯರು ಆಕೆ ಮೃತಪಟ್ಟಿದ್ದಾಳೆ ಅಂತ ಹೇಳಿದ್ದಾರೆ. ಆದ್ರೆ, ರುಬಿನಾ ಕುಟುಂಬಸ್ಥರು ಮಾತ್ರ ಇದು ಆತ್ಮಹತ್ಯೆ ಅಲ್ಲ. ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿ ಅಲ್ಲ, ಇದು ಕೊಲೆ ಅಂತಿದ್ದಾರೆ. ಪತಿ ಹಾಗೂ ಆತನ ಕುಟುಂಬಸ್ಥರು ನಮ್ಮ ಮಗಳ ಕತ್ತು ಹಿಸುಕಿ ಕೊಂದಿದ್ದಾರೆ. ಬಳಿಕ ದೇಹದ ಮೇಲೆ ನೀರು ಹಾಕಿ ಬಾವಿಗೆ ಹಾರಿದ್ದಾಳೆ ಅಂತ ಕಥೆ ಕಟ್ಟಿದ್ದಾರೆ ಅಂತ ಮೃತ ರುಬಿನಾ ತಾಯಿ ಆರೋಪಿಸಿದ್ದಾರೆ. ಪತಿ ದಾವಲಸಾಬ್ ಹಾಗೂ ಕುಟುಂಬಸ್ಥರು ಮಗಳು ರುಬಿನಾಗೆ ಸದಾ ಕಿರುಕುಳ ನೀಡ್ತಾಯಿದ್ದರು. ಸಾಕಷ್ಟು ಬಾರಿ ನಮಗೆ ಹೇಳಿದ್ದಾಳೆ, ಮೊನ್ನೆ ಕೂಡ ಫೋನ್ ನಲ್ಲಿ ಮಾತಾಡಿದ್ದಾಳೆ. ಆದ್ರೆ, ಬೆಳಗ್ಗೆ ನೋಡುಷ್ಟರಲ್ಲಿ ಮಗಳು ಹೆಣವಾಗಿದ್ದಾಳೆ ಅಂತ ಕಣ್ಣೀರು ಹಾಕಿದ್ದಾರೆ.

ರುಬಿನಾಳ ನಿಗೂಢ ಸಾವು ಸಾಕಷ್ಟು ಅನುಮಾನಗಳು ಹುಟ್ಟಿಸುತ್ತಿವೆ. ಘಟನೆ ಬಳಿಕ ಪತಿ ಹಾಗೂ ಕುಟುಂಬಸ್ಥರು ನಾಪತ್ತೆಯಾಗಿದ್ದಾರೆ. ಯಾಕಂದ್ರೆ, ದಾಬಲಸಾಬ್ ಮೂಲತಃ ಮಲ್ಲಸಮುದ್ರ ಗ್ರಾಮದವ. ಗದಗ ನಗರದ ತಾಜ್ ನಗರದ ಬಳಿ ಇರೋ ಸಾಸ್ವಿಹಳ್ಳಿ ಫಾರ್ಮ್ ನಲ್ಲಿ 10 ವರ್ವಗಳಿಂದ ಈ ಕುಟುಂಬ ಕೆಲಸ ಮಾಡ್ತಾಯಿದ್ದನಂತೆ. ಮಂಗಳವಾರ ರುಬಿನಾ ತೋಟಕ್ಕೆ ಬಂದಾಗ ಸಂಜೆ ಚಹಾ ನೀಡಿದ್ದಾಳಂತೆ. ಆದ್ರೆ, ಬುಧವಾರ ಬೆಳಗ್ಗೆ ರುಬಿನಾ ಹೆಣವಾಗಿದ್ದಾಳೆ. ಇದು ಎಲ್ಲರಿಗೂ ಆಶ್ಚರ್ಯವಾಗಿದೆ.

ಇದು ಆತ್ಮಹತ್ಯೆಯೋ ಕೊಲೆಯೋ ಅನ್ನೋ ಅನುಮಾನ ಕಾಡುತ್ತಿದೆ. ಇನ್ನೂ ಮೂರು ವರ್ಷದ ಮಗ ಜಾವೇದ್ ಎಲ್ಲಿ? ಅನ್ನೋ ಪ್ರಶ್ನೆ ಕಾಡುತ್ತಿದೆ. ಮಗು ಜೊತೆ ರುಬಿನಾ ಬಾವಿಗೆ ಹಾರಿದ್ದಾಳೆ ಅಂತ ಪತಿ ಕುಟುಂಬಸ್ಥರು ಹೇಳಿದ್ದಾರಂತೆ. ಆದ್ರೆ, ಎರಡು ದಿನಗಳಾದ್ರೂ ಬಾವಿಯಲ್ಲಿ ಮಗುವಿನ ಶವ ಪತ್ತೆಯಾಗಿಲ್ಲ. ಆದ್ರೆ, ಇವತ್ತು ಬೆಳಗ್ಗೆ ಬಾವಿಯಲ್ಲಿ ನೀರು ಜಾಸ್ತಿ ಇದೆ ಅಂತ ಪೊಲೀಸ್ರು, ಅಗ್ನಿ ಶಾಮಕದಳ ಸಿಬ್ಬಂದಿ ಶೋಧ ಕಾರ್ಯ ನಿಲ್ಲಿಸಿದ್ದಾರೆ. ಇದೂ ಕುಟುಂಬಸ್ಥ ಆಕ್ರೋಶಕ್ಕೆ ಕಾರಣವಾಗಿದೆ.

ರುಬಿನಾಳ ಕುಟುಂಬಸ್ಥರ ಪ್ರಕಾರ ಮಗುವನ್ನು ಪತಿ ಕುಟುಂಬಸ್ಥರು ಎಲ್ಲಿಯೋ ಕರೆದೊಯ್ದು, ಬಚ್ಚಿಟ್ಟಿದ್ದಾರೆ. ಬಾವಿಯಲ್ಲಿ ಮಗು ಇಲ್ಲ. ಎಲ್ಲರೂ ಕೂಡಿ ನಾಟಕ ಮಾಡ್ತಾಯಿದ್ದಾರೆ ಅಂತಿದ್ದಾರೆ. ಹೀಗಾಗಿ ಗದಗ ಗ್ರಾಮೀಣ ಪೊಲೀಸ್ ಠಾಣೆ ಎದುರು ಜಮಾಯಿಸಿದ ಕುಟುಂಬಸ್ಥರು ಬಾವಿಯಲ್ಲಿ ಮಗು ಶವ ಇದ್ರೆ ಶೋಧ ಮಾಡಲಿ ಅಂತಿದ್ದಾರೆ. ದೂರು ಕೊಟ್ರೆ ಮಗು ಸಿಕ್ಕ ಬಳಕವೇ ದೂರು ದಾಖಲಿಸಿಕೊಳ್ತೀವಿ ಅಂತ ಗ್ರಾಮೀಣ ಪೊಲೀಸ್ರು ಹೇಳ್ತಿದ್ದಾರೆ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ.

ಘಟನೆ ಬಳಿಕ ಪತಿ ಹಾಗೂ ಕುಟುಂಬಸ್ಥರು ಈ ಮನೆಯಲ್ಲಿ ಇಲ್ಲ. ಮಗಳ ಶವ ಆಸ್ಪತ್ರೆಯ ಶವಾಗಾರದಲ್ಲಿದೆ. ಮಗು ಬಾವಿಯಲ್ಲಿದೆಯೋ ಅಥವಾ ಎಲ್ಲಿ ಎಸ್ಕೇಪ್ ಮಾಡಿದ್ದಾರೋ ಗೊತ್ತಿಲ್ಲ. ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಅಂತ ಕುಟುಂಬ ಒತ್ತಾಯಿಸುತ್ತಿದೆ. ಈ ಮಹಿಳೆ ಸಾವು ಆತ್ಮಹತ್ಯೆಯೋ ಅಥವಾ ಕೊಲೆಯೋ ಅನ್ನೋದು ಪೊಲೀಸ್ ತನಿಖೆಯಿಂದಲೇ ಗೊತ್ತಾಗಬೇಕಿದೆ.

ವರದಿ: ಸಂಜೀವ ಪಾಂಡ್ರೆ, ಟಿವಿ9, ಗದಗ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ