ಪೈಲ್ವಾನರ ಮಾಸಾಶನ ಹೆಚ್ಚಿಸಿದ್ದು ನಮ್ಮ ಸರ್ಕಾರ ಎಂಬ ಸಿ.ಸಿ.ಪಾಟೀಲ್ ಹೇಳಿಕೆಗೆ ‘ಮಾಸಾಶನ ಬಂದೇ ಇಲ್ಲ’ ಎಂದ ಪೈಲ್ವಾನರು

ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪೈಲ್ವಾನರ ಬಗ್ಗೆ ಸಿ.ಸಿ. ಪಾಟೀಲ್ ಗರಂ ಆಗಿದ್ದಾರೆ. ನಿಮ್ಮನ್ನು ಕೇಳೋದು ಬೇಡ ಅಂದ್ರೆ ನಾವು ಯಾರಿಗೆ ಕೇಳಬೇಕು ಎಂದು ಪೈಲ್ವಾನರು ಕೂಡ ವಾಗ್ವಾದ ನಡೆಸಿದ್ದಾರೆ. ನಿಮ್ಮ ಸರ್ಕಾರ ನಿಮಗೇ ಕೇಳಬೇಕು ಎಂದು ಪೈಲ್ವಾನರು ಕಿಡಿಯಾಗಿದ್ದಾರೆ.

  • TV9 Web Team
  • Published On - 20:00 PM, 5 Apr 2021
ಪೈಲ್ವಾನರ ಮಾಸಾಶನ ಹೆಚ್ಚಿಸಿದ್ದು ನಮ್ಮ ಸರ್ಕಾರ ಎಂಬ ಸಿ.ಸಿ.ಪಾಟೀಲ್ ಹೇಳಿಕೆಗೆ ‘ಮಾಸಾಶನ ಬಂದೇ ಇಲ್ಲ’ ಎಂದ ಪೈಲ್ವಾನರು
ಸಚಿವ ಸಿ.ಸಿ ಪಾಟೀಲ್

ಗದಗ: ನಮ್ಮ ಸರ್ಕಾರ ಪೈಲ್ವಾನರಿಗೆ ಮಾಸಾಶನ ಹೆಚ್ಚಳ ಮಾಡಿದೆ ಎಂಬ ಸಚಿವ ಸಿ.ಸಿ. ಪಾಟೀಲ್ ಹೇಳಿಕೆಗೆ ಪೈಲ್ವಾನರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರದ ಪ್ರವಾಸಿ ಮಂದಿರದಲ್ಲಿ ಇಂದು (ಏಪ್ರಿಲ್ 5) ಘಟಿಸಿದೆ. ಗದಗ ನಗರದಲ್ಲಿ ಮಾಸಾಶನ ನೀಡುವಂತೆ ಪೈಲ್ವಾನರು ಮನವಿ ಸಲ್ಲಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಿ.ಸಿ.ಪಾಟೀಲ್ ಪೈಲ್ವಾನರ ಮನವಿ ಸ್ವೀಕರಿಸಿದ್ದರು. ಆ ಬಳಿಕ ಮಾತನಾಡಿದ, ಸಿ.ಸಿ.ಪಾಟೀಲ್ ನಮ್ಮ ಸರ್ಕಾರ ಪೈಲ್ವಾನರ ಮಾಸಾಶನ ಹೆಚ್ಚಳ ಮಾಡಿದೆ ಎಂದಿದ್ದಾರೆ. ಇದಕ್ಕೆ ಪೈಲ್ವಾನರ ಪ್ರತಿರೋಧ ವ್ಯಕ್ತವಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ ಪೈಲ್ವಾನರು, ನಿಮ್ಮ ಸರ್ಕಾರ ಮಾಸಾಶನ ಬಿಡುಗಡೆ ಮಾಡಿಲ್ಲ ಎಂದು ತಿಳಿಸಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪೈಲ್ವಾನರು ಆಕ್ರೋಶ ಹೊರಹಾಕಿದ್ದಾರೆ. ಸಚಿವ ಸಿ.ಸಿ.ಪಾಟೀಲ್​ ಜತೆ ವಾಗ್ವಾದ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ಪ್ರವಾಸಿ ಮಂದಿರದಲ್ಲೇ ಧರಣಿ ಕುಳಿತು ವಿರೋಧಿಸಿದ್ದಾರೆ.

ಈ ಮಧ್ಯೆ, ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪೈಲ್ವಾನರ ಬಗ್ಗೆ ಸಿ.ಸಿ. ಪಾಟೀಲ್ ಗರಂ ಆಗಿದ್ದಾರೆ. ನಿಮ್ಮನ್ನು ಕೇಳೋದು ಬೇಡ ಅಂದ್ರೆ ನಾವು ಯಾರಿಗೆ ಕೇಳಬೇಕು ಎಂದು ಪೈಲ್ವಾನರು ಕೂಡ ವಾಗ್ವಾದ ನಡೆಸಿದ್ದಾರೆ. ನಿಮ್ಮ ಸರ್ಕಾರ ನಿಮಗೇ ಕೇಳಬೇಕು ಎಂದು ಪೈಲ್ವಾನರು ಕಿಡಿಯಾಗಿದ್ದಾರೆ. ಬಳಿಕ ಆಕ್ರೋಶಗೊಂಡ ಪೈಲ್ವಾನರನ್ನು ಸಂಸದ ಶಿವಕುಮಾರ ಉದಾಸಿ ಸಮಾಧಾನಪಡಿಸಿದ್ದಾರೆ. ಕೊರೊನಾ ಕಾರಣದಿಂದ ಎಲ್ಲಾ ಕಡೆಯೂ ಈ ಪ್ರಕ್ರಿಯೆ ತಡವಾಗಿದೆ, ನಿಧಾನವಾಗಿದೆ. ಡಿಸಿ ಹಾಗೂ ಉಸ್ತುವಾರಿ ಸಚಿವರ ಜೊತೆಗೆ ಮಾತನಾಡಿ ಮಾಸಾಶನ ಕೊಡಿಸುವುದಾಗಿ ಶಿವಕುಮಾರ ಉದಾಸಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಪಿಂಚಣಿ ಹಣ ಡ್ರಾ ಮಾಡದಿದ್ದರೆ ಬ್ಯಾಂಕ್ ಖಾತೆ ಸ್ಥಗಿತ: ಆರ್.ಅಶೋಕ ಹೇಳಿಕೆಗೆ ವ್ಯಾಪಕ ಖಂಡನೆ

ಇದನ್ನೂ ಓದಿ: ಸಿದ್ದರಾಮಯ್ಯ ಹೇಳಿದ ತಕ್ಷಣ ಅದು ವೇದಾಂತವಲ್ಲ: ಬಿ.ಸಿ.ಪಾಟೀಲ್