ಗದಗದಲ್ಲಿ ನೀರಿನ ಸಮಸ್ಯೆಗೆ ಜನರ ಪರದಾಟ; ಸಮಸ್ಯೆ ಬಗೆಹರಿಸಬೇಕಿದ್ದ ಅಧ್ಯಕ್ಷೆ ಖಾಸಗಿ ಸೈಟ್ ಕ್ಲೀನಿಂಗ್ನಲ್ಲಿ ಬಿಜಿ, ಜನರ ಆಕ್ರೋಶ

35ನೇ ವಾರ್ಡ್ ನ ಬಾಲಾಜಿ ನಗರದಲ್ಲಿ ನಾಲ್ಕೈದು ಖಾಸಗಿ ಸೈಟ್ ಗಳು ಸರ್ಕಾರ ಜೆಸಿಬಿ, ವಾಹನಗಳು ಬಳಿಸಿಯೇ ಸ್ವಚ್ಛ ಮಾಡಲಾಗಿದೆ. ಇನ್ನೂ ನಿಜವಾಗ್ಲೂ ಸಮಸ್ಯೆ ಇದ್ದ ಪ್ರದೇಶಗಳ ಜನ್ರು ನಿತ್ಯ ಗೋಳಾಡುತ್ತಿದ್ರೂ ನಗರಸಭೆ ಆಡಳಿತ ಡೋಂಟ್ ಕೇರ್ ಅಂತಿದೆ. ಇನ್ನೂ ಅವಳಿ ನಗರದ ಬಹುತೇಕ ವಾರ್ಡ್ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ.

ಗದಗದಲ್ಲಿ ನೀರಿನ ಸಮಸ್ಯೆಗೆ ಜನರ ಪರದಾಟ; ಸಮಸ್ಯೆ ಬಗೆಹರಿಸಬೇಕಿದ್ದ ಅಧ್ಯಕ್ಷೆ ಖಾಸಗಿ ಸೈಟ್ ಕ್ಲೀನಿಂಗ್ನಲ್ಲಿ ಬಿಜಿ, ಜನರ ಆಕ್ರೋಶ
ಗದಗದಲ್ಲಿ ನೀರಿನ ಸಮಸ್ಯೆಗೆ ಜನರ ಪರದಾಟ; ಸಮಸ್ಯೆ ಬಗೆಹರಿಸಬೇಕಿದ್ದ ಅಧ್ಯಕ್ಷೆ ಖಾಸಗಿ ಸೈಟ್ ಕ್ಲೀನಿಂಗ್ನಲ್ಲಿ ಬಿಜಿ, ಜನರ ಆಕ್ರೋಶ
Follow us
TV9 Web
| Updated By: ಆಯೇಷಾ ಬಾನು

Updated on:May 04, 2022 | 3:20 PM

ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಕುಡಿಯುವ ನೀರು ಸೇರಿ ಹಲವು ಸಮಸ್ಯೆಗಳಿಂದ ಜನ್ರು ವಿಲವಿಲ ಅಂತ ಒದ್ದಾಡುತ್ತಿದ್ದಾರೆ. ಈ ಸಮಸ್ಯೆಗಳು ನಿವಾರಣೆ ಮಾಡಿ ಜನ್ರ ನೀರಿನ ಬವಣೆ ನೀಗಿಸಬೇಕಾದ ಅಧ್ಯಕ್ಷೆ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಂಧಾ ದರ್ಬಾರ್ ನಡೆಸಿದ್ದಾರೆ. ನಗರಸಭೆ ಜೆಸಿಬಿ, ವಾಹನಗಳು ಬಳಿಸಿಕೊಂಡು ತಮಗೆ ಬೇಕಾದವ್ರ ಖಾಸಗಿ ಸೈಟ್ ಗಳು ಕ್ಲೀನ್ ಮಾಡೋದ್ರಲ್ಲಿ ಕಾಲಹರಣ ಮಾಡ್ತಾಯಿದ್ದಾರೆ. ಅಧ್ಯಕ್ಷೆ ಅಂಧಾದರ್ಬಾರಿಗೆ ಗದಗ-ಬೆಟಗೇರಿ ಅವಳಿ ನಗರದ ಜನ್ರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗದಗ-ಬೆಟಗೇರಿ ಅವಳಿ ನಗರದಲ್ಲಿ ಜನ್ರು ಹನಿ ನೀರಿಗಾಗಿ ಹಾಹಾಕಾರ ಪಡ್ತಾಯಿದ್ದಾರೆ. ಅಷ್ಟೇ ಅಲ್ಲ ಕೆಲ ವಾರ್ಡ್ ಗಳಲ್ಲಿ ಲೈಟ್ ಗಳು ಇಲ್ಲದೇ ಜನ್ರು ಕತ್ತಲಲ್ಲಿ ಒದ್ದಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಕೊಟ್ಟ ಆಶ್ವಾಸನೆಗಳು ಬಿಜೆಪಿ ಅಧಿಕಾರದ ಗದ್ದುಗೆ ಏರಿದ ಬಳಿಕ ಮರೆತಂತೆ ಕಾಣ್ತಾಯಿದೆ. ಹೌದು ಇಷ್ಟೇಲ್ಲಾ ಸಮಸ್ಯೆಗಳು ಕಣ್ಮುಂದೆ ಇದ್ರೂ ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ, ಆಯುಕ್ತರ ಕಣ್ಣಿಗೆ ಕಾಣ್ತಾಯಿಲ್ಲ. ಆದ್ರೆ, ಜನ್ರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಅಧ್ಯಕ್ಷೆ ಉಷಾ ದಾಸರ ಗದಗ ನಗರದಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಖಾಸಗಿ ಸೈಟ್ ಗಳು ಕ್ಲೀನ್ ಮಾಡಿಸುತ್ತಿದ್ದಾರೆ ಅಂತ ಜನ್ರು ಕಿಡಿಕಾರಿದ್ದಾರೆ. ಅಧ್ಯಕ್ಷೆ ಉಷಾ ದಾಸರ ಆಯ್ಕೆಯಾದ ವಾರ್ಡ್ ನಂಬರ್ 35ರ ಬಾಲಾಜಿ ನಗರದಲ್ಲಿ ಪ್ರಭಾವಿಗಳ ಮನೆಗಳ ಅಕ್ಕಪಕ್ಕದ ಸೈಟ್ ಗಳು ನಗರಸಭೆಗೆ ಸೇರಿದ ಜೆಸಿಬಿ, ಟ್ರ್ಯಾಕ್ಟರ್ ಬಳಿಸಿಕೊಂಡು ಸ್ವಚ್ಛತೆ ಮಾಡಿಸುತ್ತಿದ್ದಾರೆ. ಪ್ರಭಾವಿಗಳಿಗೆ ಸೊಳ್ಳೆಗಳ ಕಾಟ ಆಗಬಾರ್ದು ಸ್ವಚ್ಚತೆ ಮಾಡಿಸಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಅದು ಸ್ವತಃ ಅಧ್ಯಕ್ಷೆ ಉಷಾ ದಾಸರ ಮುಂದೆ ನಿಂತು ಖಾಸಗಿ ಮಾಲೀಕತ್ವದ ಜಾಗಗಳ ಕ್ಲೀನ್ ಮಾಡಿಸಿದ್ದಾರೆ, ಅಧ್ಯಕ್ಷೆಯ ಅಂಧಾ ದರ್ಬಾರ್ ಗೆ ಗದಗ-ಬೆಟಗೇರಿ ಅವಳಿ ನಗರದ ಜನ್ರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಡ ಜನ್ರು ಅವ್ಯವಸ್ಥೆಯಿಂದ ಒದ್ದಾಡ್ತಾಯಿದ್ರೂ ನಿರ್ಲಕ್ಷ್ಯ ತೋರಿದ್ದಾರೆ. ಸರ್ಕಾರದ ವಾಹನಗಳ ಬಳಕೆ ಮಾಡಿ ಖಾಸಗಿ ವ್ಯಕ್ತಿಗಳಿಗೆ ಲಾಭ ಯಾಕೇ ಅಂತ 35ನೇ ವಾರ್ಡ್ ಮತದಾರ ಸಂಗಮೇಶ್ ಕವಳಿಕಾಯಿ ಪ್ರಶ್ನೆ ಮಾಡಿದ್ದಾರೆ.

ಗದಗದ ಇತರೆ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

35ನೇ ವಾರ್ಡ್ ನ ಬಾಲಾಜಿ ನಗರದಲ್ಲಿ ನಾಲ್ಕೈದು ಖಾಸಗಿ ಸೈಟ್ ಗಳು ಸರ್ಕಾರ ಜೆಸಿಬಿ, ವಾಹನಗಳು ಬಳಿಸಿಯೇ ಸ್ವಚ್ಛ ಮಾಡಲಾಗಿದೆ. ಇನ್ನೂ ನಿಜವಾಗ್ಲೂ ಸಮಸ್ಯೆ ಇದ್ದ ಪ್ರದೇಶಗಳ ಜನ್ರು ನಿತ್ಯ ಗೋಳಾಡುತ್ತಿದ್ರೂ ನಗರಸಭೆ ಆಡಳಿತ ಡೋಂಟ್ ಕೇರ್ ಅಂತಿದೆ. ಇನ್ನೂ ಅವಳಿ ನಗರದ ಬಹುತೇಕ ವಾರ್ಡ್ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಜನ್ರು ನಗರಸಭೆಗೆ ಮುತ್ತಿಗೆ ಹಾಕಿ ಅಧ್ಯಕ್ಷೆ, ಆಯುಕ್ತರ ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನವಾಗಿಲ್ಲ. ಜನ್ರ ಸಮಸ್ಯೆಯತ್ತ ಗಮನಹರಿಸಬೇಕಾದ ಅಧ್ಯಕ್ಷೆ ಅಧಿಕಾರ ದುರ್ಬಳಿಕೆ ಮಾಡಿಕೊಂಡ್ರು ಖಾಸಗಿ ಮಾಲೀಕರ ನೆರವಿಗೆ ನಿಂತಿದ್ದಾರೆ ಅಂತ ಜನ ಕಿಡಿಕಾರಿದ್ದಾರೆ. ಅಧ್ಯಕ್ಷೆಯ ಅಧಿಕಾರ ದುರ್ಬಳಕೆಗೆ ಬಿಜೆಪಿ ವಲಯದಲ್ಲೂ ತೀವ್ರ ಅಸಮಾಧಾನ ಉಂಟುಮಾಡಿದೆ. ಇನ್ನೂ ಈ ಬಗ್ಗೆ ನಗರಸಭೆ ಅಧ್ಯಕ್ಷೆ ಉಷಾ ದಾಸರ ಅವ್ರನ್ನು ಕೇಳಿದ್ರೆ ಎಲ್ಲಿ ಅಂತ ಹೇಳಿದ್ರೆ ನಾ ಹೇಳ್ತೀನಿ. ಪ್ರೈವೇಟ್ ಜಾಗದಲ್ಲಿ ಸ್ವಚ್ಚ ಮಾಡಿಸಿಲ್ಲ ಅಂತ ಮೊಂಡು ವಾದ ಮಾಡ್ತಾರೆ ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ.

ಅವಳಿ ನಗರದಲ್ಲಿ ಪ್ರಮುಖ ಪ್ರದೇಶ ಹಾಗೂ ಸ್ಲಂ ಪ್ರದೇಶಗಳಲ್ಲಿ ರಸ್ತೆ, ಚರಂಡಿ ಸೇರಿದಂತೆ ಸಾಕಷ್ಟು ಸಮಸ್ಯೆಗಳಿವೆ. ಇಂಥ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಅಧಿಕಾರಿಗಳು, ಅಧ್ಯಕ್ಷರು ಪ್ರಭಾವಿಗಳ ಅನಕೂಲಕ್ಕಾಗಿ ಖಾಸಗಿ ಸರ್ಕಾರದ ಖರ್ಚಿನಲ್ಲಿ ಸೈಟ್ ಗಳ ಸ್ವಚ್ಛತೆಗೆ ಮುಂದಾಗಿದ್ದು ಮಾತ್ರ ಸಾರ್ವಜನಿಕರ ಕೋಪಕ್ಕೆ ಕಾರಣವಾಗಿದೆ.

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ

ಇದನ್ನೂ ಓದಿ: ಬಿಸಿಲಿನ ಬೇಗೆಯ ನಡುವೆಯೇ ಗದಗ ಜನರಿಗೆ ನೀರಿನ ಸಮಸ್ಯೆ; ಒಂದು ತಿಂಗಳಿಂದ ಹನಿ ನೀರಿಗಾಗಿ ಗಣೇಶ್ ನಗರ ಜನರ ಪರದಾಟ 

Published On - 3:20 pm, Wed, 4 May 22

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು