ಪಾಕಿಸ್ತಾನ ಪರ ಘೋಷಣೆ ಕಾಲ್ಪನಿಕ ಎಂದಿದ್ದ ಪ್ರಿಯಾಂಕ್ ಖರ್ಗೆ ಯೂಟರ್ನ್
ರಾಜ್ಯಸಭಾ ಚುನಾವಣೆಯ ಫಲಿತಾಂಶದಿಂದ ಹುಚ್ಚೆದ್ದು ಕುಣಿಯುತ್ತಿದ್ದ ನಸೀರ್ ಹುಸೇನ್ ಬೆಂಬಲಿಗರು ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎನ್ನಲಾಗಿದೆ. ಈ ಘಟನೆ ಸಂಬಂಧ ಸಚಿವ ಪ್ರಿಯಾಂಕ್ ಖರ್ಗೆ ನೀಡಿದ್ದ ಹೇಳಿಕೆಗೆ ಈಗ ಅವರು ಯೂಟರ್ನ್ ತೆಗೆದುಕೊಂಡಿದ್ದಾರೆ. ಪಾಕಿಸ್ತಾನ ಪರ ಘೋಷಣೆ ಕೂಗಿರಬಹುದು, ಅವರ ಮೇಲೆ ಕ್ರಮ ಜರುಗುತ್ತೆ ಎಂದಿದ್ದಾರೆ.
ಗದಗ, ಮಾರ್ಚ್.06: ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ವಿಚಾರಕ್ಕೆ ಸಂಬಂಧಿಸಿ ನೀಡಿದ್ದ ತಮ್ಮ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಯೂಟರ್ನ್ ಹೊಡೆದಿದ್ದಾರೆ. ಪಾಕಿಸ್ತಾನ ಪರ ಘೋಷಣೆ ಕಾಲ್ಪನಿಕ ಎಂದು ಈ ಹಿಂದೆ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದರು. ಆದರೆ ಈಗ ನಾನು FSL ವರದಿ ನೋಡಿಲ್ಲ, ಗೃಹ ಸಚಿವರು ನೋಡಿದ್ದಾರೆ. FSL ವರದಿ ಬಂದಿದೆ, ಘೋಷಣೆ ಕೂಗಿರಬಹುದು ಅಂದಿದ್ದಾರೆ ಎಂದು ಹೇಳುವ ಮೂಲಕ ಗದಗದಲ್ಲಿ ತಮ್ಮ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಯೂಟರ್ನ್ ಹೊಡೆದಿದ್ದಾರೆ.
ನನ್ನ ಬಳಿ ಬಂದಿದ್ದ ವಿಡಿಯೋ ನೋಡಿ ಪರೀಕ್ಷೆ ಮಾಡಿಸಿದ್ವಿ. ಆ ವಿಡಿಯೋವನ್ನ ಖಾಸಗಿಯಾಗಿ ಪರೀಕ್ಷೆ ಮಾಡಿಸಲಾಗಿತ್ತು. ಅದರಲ್ಲಿ ಬಂದಿಲ್ಲ ಅಂತಾ ಈ ಹಿಂದೆ ಹೇಳಿದ್ದೆ. ಸರ್ಕಾರದ ವರದಿ ಫೈನಲ್ ಅಂತನೂ ಹೇಳಿದ್ದೆ. ಬಿಜೆಪಿ ಖಾಸಗಿ ವರದಿಯನ್ನ ಸರ್ಕಾರಿ ವರದಿಯಾಗಿ ಬಿಂಬಿಸುವುದು ತಪ್ಪು ಅಂತಾ ಹೇಳಿದ್ದೆ. ಅಥವಾ ನನ್ನ ವರದಿ ಸರಿ ಅಂತಾ ಹೇಳುವುದೂ ತಪ್ಪು ಅಂತಾನೇ ಹೇಳಿದ್ದು ನಾನು ಎಫ್ಎಸ್ಎಲ್ ವರದಿ ನೋಡಿಲ್ಲ. ಗೃಹ ಸಚಿವರು ವರದಿ ನೋಡಿ ಹೇಳಿದ್ದಾರೆ. ಎಫ್ಎಸ್ಎಲ್ ರಿಪೋರ್ಟ್ ಬಂದಿದೆ. ಘೋಷಣೆ ಕೂಗಿರಬಹುದು ಅಂತಾ ಹೇಳಿದ್ದಾರೆ. ಮೂವರನ್ನ ಕರೆದುಕೊಂಡು ಹೋಗಿದಾರೆ. ಧ್ವನಿ ಮ್ಯಾಚ್ ಆಗ್ಬೇಕು. ಆ ಸಂದರ್ಭದಲ್ಲಿ ಅವರಿದ್ರಾ ಅಂತಾ ದೃಢಪಡಿಸಿಕೊಳ್ಳಬೇಕು ಎಂದು ಗದಗದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದವರ ಹಿನ್ನೆಲೆ: ಪಾಕಿಸ್ತಾನಕ್ಕೆ ಹೋಗಿ ಬಂದಿದ್ನಾ ಪ್ರಮುಖ ಆರೋಪಿ?
ಬಿಜೆಪಿಯವರಂತೆ ಮಂಡ್ಯದಲ್ಲಿ ಕೂಗಿದ್ದನ್ನ ಮುಚ್ಚಿಹಾಕಿದ್ದೀವಾ? ಇನ್ನೂ ತನಿಖೆ ನಡೀತಿದೆ. ಧ್ವನಿಯ ಸ್ಯಾಂಪಲ್ ಅವ್ರದ್ದು ಇವ್ರದ್ದು ಅಂತಾ ಎಲ್ಲೂ ಹೇಳಿಲ್ಲ. ಮಾನ್ಯ ಗೃಹ ಸಚಿವರ ಹೇಳಿಕೆ ನೀವೇ ಕೇಳಿದ್ದೀರಾ. ಒಂದ್ರಲ್ಲಿ ಕೇಳಿದಂಗಿದೆ. ಹೈಪ್ರಾಬೆಬಲಿಟಿ ಇದೆ ಅಂತಾ ಹೇಳಿದ್ದಾರೆ. ಕರೆಸಿದ್ದೇವೆ, ವಿಚಾರಣೆ ಮಾಡ್ತಿದ್ದೀವಿ. ವೈಸ್ ಸ್ಯಾಂಪಲ್ ಮ್ಯಾಚ್ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತೆ. ಸರ್ಕಾರಿ ವರದಿ ಫೈನಲ್, ಆರ್ಎಸ್ಎಸ್ ವರದಿ ಒಪ್ಪಲ್ಲ ಅಂತಾನೇ ಹೇಳಿದ್ದು ಸರ್ಕಾರಿ ವರದಿ ಫೈನಲ್ ಅಂತಾ ಹೇಳಿದ್ವಿ. ಆ ವರದಿಗೆ ಅಪಸ್ವರ ಎತ್ತಿದ್ದೀವಾ? ಇಲ್ಲ ಎಂದರು.
ಇನ್ನು ಇದೇ ವೇಳೆ ಪ್ರಿಯಾಂಕ್ ಖರ್ಗೆ ವಿರುದ್ಧ ಗುಲಾಮ್ ಗ್ಯಾಂಗ್ ಅಭಿಯಾನ ಸಂಬಂಧ ಪ್ರತಿಕ್ರಿಯೆ ನೀಡಿದ ಸಚಿವರು, ಬಿಜೆಪಿಯವರಿಗೆ ನಾನು ಮನೆ ದೇವರು ಇದ್ದಂಗೆ. ಅವ್ರ ಮನೆ ಬಾಗಿಲು ತೆಗೆಯಲ್ಲ. ಊಟ ಜೀರ್ಣವಾಗಲ್ಲ. ಕರ್ನಾಟಕದಲ್ಲಿ ಬಿಜೆಪಿ ಶಾಶ್ವತವಾಗಿ ವಿರೋಧ ಪಕ್ಷದಲ್ಲಿ ಇರ್ತಾರೆ ಎಂದರು.
ಬಿಜೆಪಿ ವಿರುದ್ಧ ವಾಗ್ದಾಳಿ
ಬಿಜೆಪಿಯವರಿಗೆ ನಿಜವಾಗಲೂ ನೈತಿಕತೆ ಇದೆಯಾ? ರಾಮೇಶ್ವರಂ ಕೆಫೆ ಬ್ಲಾಸ್ಟ್ ಬಗ್ಗೆ ಇಷ್ಟು ಮಾತಾಡ್ತಿದ್ದಾರೆ. ಮಂಗಳೂರು ಕುಕ್ಕರ್ ಬ್ಲಾಸ್ಟ್ ಯಾರ ಅವಧಿಯಲ್ಲಾಯ್ತು? ಕುಕ್ಕರ್ ಬ್ಲಾಸ್ಟ್ ಆರೋಪಿ ತರಬೇತಿ ಪಡೆದಿದ್ದು ಎಲ್ಲಿ? ಅಂದಿನ ಗೃಹ ಸಚಿವರ ಕ್ಷೇತ್ರ ತೀರ್ಥಹಳ್ಳಿಯಲ್ಲಿ ಕುಕ್ಕರ್ ಬ್ಲಾಸ್ಟ್ ಆರೋಪಿಗೆ ತರಬೇತಿ. RSS ಪ್ರಯೋಗಾಲಯ ಮಂಗಳೂರಿನಲ್ಲಿ ಸ್ಫೋಟಿಸಿದ್ದ. ಆಗ ಇವರು ರಾಜೀನಾಮೆ ಕೊಟ್ಟಿದ್ರಾ? ಬಿಜೆಪಿಯವರು ಉಸಿರಾದ್ರೂ ಬಿಟ್ಟಿದ್ದರಾ ಎಂದು ಪ್ರಿಯಾಂಕ್ ಖರ್ಗೆ ಗರಂ ಆದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:45 am, Wed, 6 March 24