ಮದುವೆಯಾದ ಒಂದೇ ತಿಂಗಳಲ್ಲಿ ನವ ಜೋಡಿಗಳು ದೂರ: ಮನೆಗೆ ನುಗ್ಗಿ‌ ಮಗಳನ್ನೇ ಅಪಹರಿಸಿದ ಪೋಷಕರು, ಪತಿ ಆರೋಪ

ಯುವತಿ ಪೋಷಕರ ವಿರೋಧದ ನಡುವೆಯೂ ವಿವಾಹವಾಗಿದ್ದ ಜೋಡಿ, ಮದುವೆಯಾದ ಒಂದೇ ತಿಂಗಳಲ್ಲಿ ದೂರ ದೂರವಾಗಿದ್ದಾರೆ. ಪ್ರೀತಿಸಿ ವಿವಾಹವಾಗಿದ್ದ ನವವಿವಾಹಿತೆಯನ್ನು ಪೋಷಕರು ಅಪಹರಣ ಮಾಡಿದ್ದಾರೆ ಎಂದು ಯವಕ ಆರೋಪ ಮಾಡಿದ್ದಾನೆ.

ಮದುವೆಯಾದ ಒಂದೇ ತಿಂಗಳಲ್ಲಿ ನವ ಜೋಡಿಗಳು ದೂರ: ಮನೆಗೆ ನುಗ್ಗಿ‌ ಮಗಳನ್ನೇ ಅಪಹರಿಸಿದ ಪೋಷಕರು, ಪತಿ ಆರೋಪ
ಐಶ್ವರ್ಯಾ, ಅಭಿಷೇಕ್
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಗಂಗಾಧರ​ ಬ. ಸಾಬೋಜಿ

Updated on:Jul 12, 2023 | 9:11 PM

ಗದಗ: ಅದೊಂದು ಮದುವೆ (marriage) ಯಲ್ಲಿ ಈ ಜೋಡಿಗಳ ಪರಿಚಯವಾಗಿದೆ. ನಂತರ ಪ್ರೀತಿಗೆ ತಿರುಗಿದೆ. ಅಂದಿನಿಂದ ಅವರಿಬ್ಬರೂ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಹುಡುಗಿ ಮನೆಯವರ ವಿರೋಧದ ನಡುವೆ, ಮದುವೆ ಕೂಡಾ ಆಗಿದ್ದರು. ಇನ್ನೂ ಮುಂದೆ ಜೋಡಿ ಹಕ್ಕಿಗಳು, ಹೊಸ ಜೀವನ ನಡೆಸಬೇಕು ಅಂತಾ ನೂರಾರು ಕನಸು ಕಂಡಿದ್ದರು. ಮದುವೆಯಾಗಿ ಒಂದು ತಿಂಗಳು ಕಳಿಯುವಷ್ಟರಲ್ಲಿ, ಹುಡುಗಿಯನ್ನು ಕಿಡ್ನ್ಯಾಪ್ ಮಾಡಲಾಗಿದೆ. ಪ್ರೀತಿಸಿದ ಹುಡುಗಿ ದೂರವಾಗಿದ್ದಕ್ಕೆ ಹುಡುಗ ಕಂಗಾಲಾಗಿದ್ದಾನೆ.‌ ಮದುವೆಯಾದ ಹುಡುಗಿ ಬೇಕು ಅಂತಾ, ಪ್ರೀಯಕರ ಪೊಲೀಸರ ಮೊರೆ ಹೋಗಿದ್ದಾನೆ.

ಗದಗ ನಗರದ ಡಿಸಿ ಮೀಲ್ ನಿವಾಸಿಯಾದ ಅಭಿಷೇಕ ಹಾಗೂ ಹುಬ್ಬಳ್ಳಿ ನಿವಾಸಿಯಾದ ಐಶ್ವರ್ಯ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಎರಡು ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ಮದುವೆಯೊಂದರಲ್ಲಿ ಹುಡುಗಿ, ಹುಡುಗನಿಗೆ ಪರಿಚಯವಾಗಿದ್ದರು. ಅಂದು ಆರಂಭವಾದ ಇವರ ಸ್ನೇಹ ಪ್ರೀತಿಗೆ ತಿರುಗಿತ್ತು. ಕುಟುಂಬಸ್ಥರನ್ನು ಒಪ್ಪಿಸಿ ಮದುವೆಯಾಗಬೇಕು ಅಂತಾ ನಿರ್ಧಾರ ಮಾಡಿ, ಕುಟುಂಬಸ್ಥರಿಗೆ ಪ್ರೀತಿಯ ವಿಷಯ ತಿಳಿಸಿದ್ದರು.

ಹುಡುಗನ ಮನೆಯವರು ಮದುವೆಗೆ ಒಪ್ಪಿಕೊಂಡಿದ್ದರು. ಆದರೆ ಹುಡುಗಿ ಮನೆಯವರು ಮದುವೆ ನಿರಾಕರಣೆ ಮಾಡಿದ್ದರು. ಆದರೂ ದೇವಸ್ಥಾನದಲ್ಲಿ ಹುಡುಗಿ ಮನೆಯವರು ವಿರೋಧದ ನಡುವೆ ಮದುವೆಯಾಗಿದ್ದರು. 2023 ಜೂನ್ 23 ರಂದು ಗದಗನ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆ ನೊಂದಣಿ ಮಾಡಿಸಿದ್ದರು. ಆದಾದ ಮೇಲೆ ಹೊಸ ಜೀವನ ನಡೆಸಬೇಕು ಅಂತಾ, ಹುಡುಗ ಹಾಗೂ ಹುಡುಗಿ ಗದಗನಲ್ಲಿ ವಾಸ್ ಮಾಡುತ್ತಿದ್ದರು.

ಇದನ್ನೂ ಓದಿ: ಇಡೀ ರಾಜ್ಯದಲ್ಲಿ ಪವನ ವಿದ್ಯುತ್ ಉತ್ಪಾದನೆ ಮಾಡುವಲ್ಲಿ ಮುದ್ರಣಕಾಶಿ ಫಸ್ಟ್! ಪ್ರತಿ ತಿಂಗಳಿಗೆ ಎಷ್ಟು ವಿದ್ಯುತ್​ ಉತ್ಪಾದನೆಯಾಗುತ್ತದೆ ಗೊತ್ತಾ?

ಆದರೆ ಇಂದು ಡಿಸಿ ಮಿಲ್ ಪ್ರದೇಶದ ಹುಡಗನ ಮನೆಗೆ ಏಕಾಏಕಿ ನುಗ್ಗಿದ ಐಶ್ವರ್ಯ ಪೋಷಕರು ಸೇರಿದಂತೆ ಅವರ ಸಹಚರರು ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದಾರಂತೆ. ಹುಡುಗನಿಗೆ ಖಾರದ ಪುಡಿ ಎರಚಿ ಹಲ್ಲೆ ಮಾಡಿದರೆ, ಹುಡುಗನ ಸಹೋದರಿ ಗರ್ಭಿಣಿಯಾಗಿದ್ದು, ಅವಳ ಮೇಲೆಯೂ ಹಲ್ಲೆ ಮಾಡಿ ನವವಿವಾಹಿತೆ ಜೊತೆಗೆ ಎಸ್ಕೇಪ್ ಆಗಿದ್ದಾರೆ ಅಂತ ಪತಿ ಆರೋಪಿಸಿದ್ದಾನೆ.

ಲವ್ ಮ್ಯಾರೇಜ್ ಆಗಿದ್ದರಿಂದ ಹುಡುಗನ ಮನೆಯವರು ಇದೇ 14 ರಂದು ಅದ್ದೂರಿಯಾಗಿ ಆರಕ್ಷತೆ ಮಾಡುವ ಪ್ಲಾನ್ ಮಾಡಿಕೊಂಡಿದ್ದರು. ಆದರೆ ಐಶ್ವರ್ಯ ಅವರ ಪೋಷಕರು ಮನೆಯಲ್ಲಿ ಶುಭ ಕಾರ್ಯಕ್ರಮ ಇದೆ ಕಳುಹಿಸಿ ಕೊಡಿ ಅಂತಾ ಮನೆಗೆ ಬಂದಿದ್ದರು. ಈ ವೇಳೆ ಐಶ್ವರ್ಯ ಪೋಷಕರ ಜೊತೆಗೆ ಹೋಗಲು ಒಪ್ಪಿಲ್ಲಾ. ಆಗ ಮನೆಯಲ್ಲಿ ಗಲಾಟೆ ಮಾಡಿದ ಐಶ್ವರ್ಯ ಪೋಷಕರು, ಬಲವಂತವಾಗಿ ಐಶ್ವರ್ಯಳನ್ನು ಎತ್ತಾಕೊಂಡು ಹೋಗಿದ್ದಾರೆ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ.

ಇದನ್ನೂ ಓದಿ: ಅಮರನಾಥ ಯಾತ್ರೆ ಕೈಗೊಂಡಿದ್ದ 300 ಕನ್ನಡಿಗರು ಸೇಫ್: ಹೆಚ್​ಕೆ ಪಾಟೀಲ್

ಅಭಿಷೇಕನ ಕಣ್ಣಿಗೆ ಕಾರದ ಪುಡಿ ಎರಚಿದ್ದಾರೆ, ಮದ್ಯ ಬಂದ್ ಅಭಿಷೇಕ ಸಹೋದರಿ ಗರ್ಭಿಣಿ ಮೇಲೆಯೂ ಹಲ್ಲೆ ಮಾಡಿದ್ದಾರಂತೆ. ಎಷ್ಟೇ ಗೊಗರಿದರು ಐಶ್ವರ್ಯ ಬಾಯಿ ಮುಚ್ಚಿ ಅವಳನ್ನು ಕಾರಿನಲ್ಲಿ ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದಾರಂತೆ. ಹೀಗಾಗಿ ಅಭಿಷೇಕ ಪೋಷಕರು ಗದಗ ಮಹಿಳಾ ಪೊಲೀಸ ಠಾಣೆಯಲ್ಲಿ ನನ್ನ ಪತ್ನಿಯನ್ನು ಕಿಡ್ನ್ಯಾಪ್ ಮಾಡಲಾಗಿದೆ ಎಂದು ದೂರು ದಾಖಲು ಮಾಡಿದ್ದಾನೆ. ನಮ್ಮ ಸೊಸೆಯನ್ನು ಅಪಹರಣ ಮಾಡಿದ್ದಾರೆ ಎಂದು ಕೂಡಲೇ ಪತ್ತೆ ಮಾಡಿಕೊಡಬೇಕು ಎಂದು ಅಭಿಷೇಕನ ತಾಯಿ ಒತ್ತಾಯ ಮಾಡಿದ್ದಾರೆ.

ಪ್ರೀತಿಸಿ ಮದುವೆಯಾದ ಜೋಡಿಗಳು ದೂರ ದೂರವಾಗಿವೆ. ಪ್ರೀತಿಸಿ ಮದುವೆಯಾದ ಯುವಕ ನನಗೆ ನನ್ನ ಪತ್ನಿ ಬೇಕು ಅಂತಾ ಪಟ್ಟು ಹಿಡಿದಿದ್ದಾನೆ. ಸದ್ಯ ಗದಗ ಮಹಿಳಾ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಈ ಲವ್ ಮ್ಯಾರೇಜ್ ಮುಂದೆ ಯಾವ ತಿರುವು ಪಡೆದುಕೊಳ್ಳತ್ತೇ ಕಾದು ನೋಡಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:11 pm, Wed, 12 July 23

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?