ಬೆಳಗಾವಿ, ಜುಲೈ 06: ಕರ್ನಾಟಕ, ಗೋವಾ, ಮಹಾರಾಷ್ಟ್ರ ಮಧ್ಯೆ ಇರುವ ಜಲ ವಿವಾದ ಇದೀಗ ಮತ್ತೆ ಶುರುವಾಗಿದೆ. ಮಹದಾಯಿ ಯೋಜನೆಗೆ (Mahadayi project) ಗೋವಾ ಸರ್ಕಾರದಿಂದ ಮತ್ತೆ ಕ್ಯಾತೆ ಶುರು ಮಾಡಿದೆ. ಹೀಗಾಗಿ ಯೋಜನೆ ಸಂಬಂಧ ಕೇಂದ್ರದ ಮೇಲೆ ಗೋವಾ ಸಿಎಂ ಒತ್ತಡ ಹಾಕಿದ್ದಾರೆ. ಈ ಸಂಬಂಧ ಗೋವಾ ಸರ್ಕಾರದ ಒತ್ತಡದಿಂದ ಮಹದಾಯಿ ಪ್ರವಾಹ ತಂಡ ಕಣಕುಂಬಿಗೆ ಭೇಟಿ ಕೊಡುತ್ತಿದೆ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ (Pramod Sawant) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಣಕುಂಬಿಯ ಮಹದಾಯಿ ಜಲಾನಯನ ಪ್ರದೇಶಕ್ಕೆ ಕೇಂದ್ರದ ಅಧಿಕಾರಿಗಳ ತಂಡ ನಾಳೆ ಭೇಟಿ ನೀಡಲಿದೆ. ಸದ್ಯದ ವಸ್ತು ಸ್ಥಿತಿ, ನೀರು ಹರಿದು ಎಲ್ಲಿಗೆ ಹೋಗುತ್ತಿದೆ ಅಂತಾ ಪರಿಶೀಲನೆ ಮಾಡಲಿದ್ದಾರೆ. ಮಹದಾಯಿ ಯೋಜನೆ ಅನುಷ್ಠಾನಕ್ಕಾಗಿ ಸಿಎಂ ಸಿದ್ದರಾಮಯ್ಯ, ಸಚಿವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿದ್ದರು. ಆದಷ್ಟು ಬೇಗ ಪರಿಸರ ಇಲಾಖೆಯಿಂದ ಅನುಮತಿ ಕೊಡಿಸುವಂತೆ ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಕೇಂದ್ರದಿಂದ ಮಹದಾಯಿ ಪ್ರವಾಹ ತಂಡ ಭೇಟಿ ಕೊಡುತ್ತಿದ್ದು, ನಾಳೆ 9 ಗಂಟೆಗೆ ಕಳಸಾ ಮತ್ತು ಬಂಡೂರಿ ನಾಲೆಗೆ ತಂಡ ಭೇಟಿ ನೀಡಲಿದೆ.
The MAHADAYI PRAWAH members will conduct a detailed site inspection of the Mhadei Basin which will familiarise them with the on ground facts about the extent of work undertaken by the Karnataka Govt.
The inspection is crucial for Goa as it will uncover the truth before the… pic.twitter.com/qKFk6XDJrO
— Dr. Pramod Sawant (@DrPramodPSawant) July 4, 2024
ನಾಡಿದ್ದು ಬೆಂಗಳೂರಿನಲ್ಲಿ ಕೆಎನ್ಎಲ್ಎಲ್ ಅಧಿಕಾರಿಗಳ ಜೊತೆಗೆ ಸಭೆ ನಡೆಸಲಿದೆ. ಆ ಬಳಿಕ ತನ್ನದೇಯಾದ ವರದಿಯನ್ನ ಕೇಂದ್ರ ಸರ್ಕಾರಕ್ಕೆ ತಂಡ ಸಲ್ಲಿಕೆ ಮಾಡಲಿದೆ. ಆ ಮೂಲಕ ಕರ್ನಾಟಕಕ್ಕೆ ಪರಿಸರ ಇಲಾಖೆ ಅನುಮತಿ ಸಿಗದಂತೆ ತಡೆಯಲು ಗೋವಾ ಹುನ್ನಾರ ನಡೆಸಿದೆ ಎನ್ನಲಾಗುತ್ತಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಹಿನ್ನೆಲೆ ಕಳಸಾ, ಬಂಡೂರಿ ನಾಲೆ ತುಂಬಿ ಹರಿಯುತ್ತಿದೆ.
ಇದನ್ನೂ ಓದಿ: ಮಹದಾಯಿ ಯೋಜನೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಬದ್ಧ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ
2018 ರಲ್ಲಿಯೇ ಮಹದಾಯಿ ನ್ಯಾಯಾಧೀಕರಣದಿಂದ ತೀರ್ಪು ನೀಡಲಾಗಿದೆ. ಕರ್ನಾಟಕ ರಾಜ್ಯಕ್ಕೆ 13 ಟಿಎಂಸಿ ನೀರು ಹಂಚಿಕೆ ಮಾಡಲಾಗಿದ್ದು, ಇದರಲ್ಲಿ ಕಳಸಾದಿಂದ 1.72 ಟಿಎಂಸಿ, ಬಂಡೂರಿಯಿಂದ 2.18 ಟಿಎಂಸಿ ನೀರು ಹಂಚಿಕೆ ಮಾಡಲಾಗಿತ್ತು.
ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿಯಾದ ಸಿದ್ದರಾಮಯ್ಯ: ಮಹದಾಯಿ, ಬೆಂಗಳೂರು ಅಭಿವೃದ್ಧಿ ಸೇರಿ ಹಲವು ಯೋಜನೆಗಳ ಪ್ರಸ್ತಾವನೆ ಸಲ್ಲಿಕೆ
ಮಹದಾಯಿ ತೀರ್ಪು ಬಂದು 6 ವರ್ಷ ಕಳೆದರೂ ಒಂದೇ ಒಂದು ಹನಿ ನೀರು ಕರ್ನಾಟಕಕ್ಕೆ ಸಿಕ್ಕಿಲ್ಲ. ನಾಲ್ಕು ಜಿಲ್ಲೆಯ 13 ತಾಲೂಕಿನ ಜನತೆಗೆ ಕುಡಿಯುವ ನೀರು ಪೂರೈಸುವ ಯೋಜನೆ ಇದಾಗಿದೆ. ಪರಿಸರ ಇಲಾಖೆ ಅನುಮತಿ ಕರ್ನಾಟಕಕ್ಕೆ ಸಿಗದಂತೆ ತಡೆಯಲು ಗೋವಾ ಸರ್ಕಾರದ ಹುನ್ನಾರ ಮಾಡಿತ್ತು. ಇದೇ ಕಾರಣಕ್ಕೆ ಮಹದಾಯಿ ತೀರ್ಪು ಬಂದ್ರು ಪ್ರವಾಹ ತಂಡದ ನೆಪದಲ್ಲಿ ಯೋಜನೆಗೆ ಮತ್ತೆ ಅಡ್ಡಗಾಲು ಹಾಕಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:50 pm, Sat, 6 July 24