ಸಿಎಂ ಸಿದ್ದರಾಮಯ್ಯಗೆ ಮುಡಾದವರೇ 62 ಕೋಟಿ ರೂ. ಹಣ ಕೊಡಬೇಕಂತೆ: ಹೆಚ್ಡಿ ಕುಮಾರಸ್ವಾಮಿ
ಸದ್ಯ ರಾಜ್ಯ ರಾಜಕೀಯದಲ್ಲಿ ಮುಡಾದಲ್ಲಿ ಹಗರಣವೇ ಸಾಕಷ್ಟು ಸದ್ದು ಮಾಡುತ್ತಿದೆ. ಈ ವಿಚಾರವಾಗಿ ಇಂದು ಬೆಂಗಳೂರಿನ ಜೆಡಿಎಸ್ ಕಛೇರಿಯಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ, ಹಗರಣ ನಡೆದಿಲ್ಲ ಅಂದ್ರೆ ಯಾಕೆ ತನಿಖೆ ನಡೆಸುತ್ತಿದ್ದಾರೆ ಎಂದು ಭೈರತಿ ಸುರೇಶ್ಗೆ ಪ್ರಶ್ನೆ ಮಾಡಿದ್ದಾರೆ. ದೊಡ್ಡ ಬ್ರಹ್ಮಾಂಡ ಭ್ರಷ್ಟಾಚಾರವೇ ಇದೆ ಎಂದಿದ್ದಾರೆ.
ಬೆಂಗಳೂರು, ಜುಲೈ 06: ಸಿಎಂ ಸಿದ್ದರಾಮಯ್ಯಗೆ (Siddaramaiah) ಮುಡಾದವರೇ 62 ಕೋಟಿ ರೂ. ಹಣ ಕೊಡಬೇಕಂತೆ. ಹಾಗಾಗಿ ರೆಡ್ ಕಾರ್ಪೆಟ್ ಹಾಕಿ 14 ಸೈಟ್ ನೀಡಿದ್ದು, ತಪ್ಪೇ ಮಾಡಿಲ್ವಂತೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ವಾಗ್ದಾಳಿ ಮಾಡಿದ್ದಾರೆ. ನಗರದ ಜೆಡಿಎಸ್ ಕಛೇರಿಯಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಮುಡಾದಲ್ಲಿ ಹಗರಣವೇ ನಡೆದಿಲ್ಲ ಎಂದು ಭೈರತಿ ಸುರೇಶ್ ಹೇಳಿದ್ದಾರೆ. ಹಗರಣ ನಡೆದಿಲ್ಲ ಅಂದರೆ ಅಧಿಕಾರಿಗಳನ್ನ ಇಟ್ಟು ಯಾಕೆ ತನಿಖೆ ನಡೆಸುತ್ತಿದ್ದಾರೆ ಎಂದು ಹೆಲಿಕಾಪ್ಟರ್ನಲ್ಲಿ ಹೋಗಿ ಯಾವ ದಾಖಲೆ ತುಂಬಿಕೊಂಡು ಬಂದ್ರಿ. ರೀಡು ಹಗರಣ ಎಲ್ಲಿಗೆ ತಂದಿದ್ದೀರಿ, ಅದರ ಕಥೆ ಏನಾಯ್ತು. ಎಂದು ವಾಗ್ದಾಳಿ ಮಾಡಿದ್ದಾರೆ.
ಮೂಡಾದಲ್ಲೂ ದೊಡ್ಡ ಕರ್ಮಕಾಂಡ ಇದೆ
ಇದರ ಬಗ್ಗೆ ದೊಡ್ಡ ಬ್ರಹ್ಮಾಂಡ ಭ್ರಷ್ಟಾಚಾರವೇ ಇದೆ. ಇದರ ಬಗ್ಗೆ ನಾನೇನು ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಅವರ ಸರ್ಕರದಲ್ಲಿರುವ ಸಚಿವರೇ ಮಾಡುತ್ತಾರೆ. ಈ ಹಗರಣ ನನ್ನ ಮುಂದೆ ಕಳೆದ ವರ್ಷವೇ ಬಂದಿತ್ತು. ಅಧಿಕಾರಿಯನ್ನ ವರ್ಗಾವಣೆ ಮಾಡಿದ್ದಾರೆ. ಈ ಅಧಿಕಾರಿ ಎಷ್ಟು ಭಾರಿ ಕಡತಗಳನ್ನು ನಗರಾಭಿವೃದ್ಧಿ ಇಲಾಖೆಗೆ ಕಳಿಸಿದ್ದಾರೆ, ಆ ಖಡತಗಳನ್ನು ಎಲ್ಲಿಗೆ ತೆಗೆದುಕೊಂಡು ಹೋಗಿ ಇಟ್ಟಿದ್ದೀರಿ. ಮೂಡಾದಲ್ಲೂ ದೊಡ್ಡ ಕರ್ಮಕಾಂಡ ಇದೆ ಎಂದಿದ್ದಾರೆ.
ಇದನ್ನೂ ಓದಿ: ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ನೇರವಾಗಿ ಭಾಗಿಯಾಗಿದ್ದಾರೆ: ರಾಜೀನಾಮೆ ಕೊಡಲಿ ಎಂದ ಸಂಸದ ಜಗದೀಶ್ ಶೆಟ್ಟರ್
ಪರೋಕ್ಷವಾಗಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಕಿಡಿಕಾರಿರುವವ ಕುಮಾರಸ್ವಾಮಿ ನನ್ನ ನೆನೆಸಿಕೊಳ್ಳದಿದ್ರೆ ನಿದ್ದೆ ಬರಲ್ಲ. ನನ್ನ ಆರೋಗ್ಯದ ಬಗ್ಗೆ ಕಾಳಜಿ ಬೇಡ ನಿಮಗೆ. ನಾನು ಚಿಕಿತ್ಸೆ ಪಡೆದೇ ಬಂದಿರುವುದು. ನನ್ನ ಏನೋ ಒಬ್ಬರು ಹುಚ್ಚರು ಅಂದಿದ್ದೀರಲ್ಲ ನಾನು ಯಾವುದೋ ಆಸ್ಪತ್ರೆ ಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಬರುವ ಅವಶ್ಯಕತೆ ಇಲ್ಲ. ನಾನು ಈಗಾಗಲೇ ಹೃದಯ ಚಿಕಿತ್ಸೆ ಪಡೆದು ಬಂದಿದ್ದೇನೆ ನಾನು ಚೆನ್ನಾಗಿಯೇ ಇದ್ದೇನೆ ಎಂದು ತಿರುಗೇಟು ನೀಡಿದ್ದಾರೆ.
ನೀವು 1 ವರ್ಷದಲ್ಲಿ ಮಾಡಿರುವ ಕರ್ಮಕಾಂಡಗಳೇನು? ನೀರಾವರಿ ಸರಬರಾಜು ನಿಗಮ ಆಯ್ದ ಕಾಂಟ್ರಾಕ್ಟರ್ಗಳಿಗೆ ಹಣ ಕೊಟ್ಟು ಲೂಟಿ ಆಗ್ತದೆ ಅಂತ ನಿಮ್ಮ ಪಕ್ಷದ ಶಾಸಕರೇ ಹೇಳಿದ್ದಾರೆ. ಅದಕ್ಕೆ ಸಿಎಂರಿಂದ ಉತ್ತರ ಬಂದಿದೆಯಾ? ಮತ್ತೆ ಹುಬ್ಬಳ್ಳಿಯಲ್ಲಿ ಅಹಿಂದಾ ಸಮಾವೇಶ ಬೇರೆ ನಡಿಯುತ್ತದಂತೆ ಎಂದು ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ಮುಡಾ ಹಗರಣ: ಸಿದ್ದರಾಮಯ್ಯ ಪತ್ನಿಯ ಜಮೀನೇ ಇಲ್ಲ, ನಕಲಿ ದಾಖಲೆ ಸೃಷ್ಟಿ ಎಂದ ಆರ್ಟಿಐ ಕಾರ್ಯಕರ್ತ
ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ. ಹಗರಣ ಏನಿದೆ ಬ್ಯಾಂಕ್ನಲ್ಲಿ ಇಡಿ ಎಂಬ ಆದೇಶ ಮಾಡಿದ್ದೀರಿ. ಈಗ ವೈನ್ ಶಾಪ್, ಸೈಕಲ್ ಶಾಪ್ನಲ್ಲಿ ಸಿಕ್ಕ ಸಿಕ್ಕ ಕಡೆ ಹಣ ವಸೂಲಿ ಮಾಡ್ತಿದ್ದೀರಿ. ಈಗ ನನ್ನ ಸರ್ಕಾರ ಭ್ರಷ್ಟರಹಿತ ಸರ್ಕಾರ ಅಂತ ಹೇಳಿದ್ರಲ್ಲಾ, ನಿಮಗೆ ನೈತಿಕತೆ ಇದೆಯಾ ಎಂದು ಪ್ರಶ್ನಿಸಿದ್ದಾರೆ. ಬೆಳಿಗ್ಗೆ ಎದ್ರೆ ಭ್ರಷ್ಟಾಚಾರ. ಇದಕ್ಕೆ ಜಿಟಿ ದೇವೇಗೌಡರನ್ನ ಕೇಳಿ ಅಂತ ರೆಫರ್ ಮಾಡಿತ್ತಾರೆ. ಬೀದಿ ಬೀದಿಗಳಲ್ಲಿ ಮೂಡಾ ದಾಖಲೆ ರವಾನೆಯಾಗುತ್ತಿವೆ. ಪ್ರಕರಣವನ್ನು ಲಘುವಾಗಿ ತಗೊಂಡಿದ್ದಾರೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:14 pm, Sat, 6 July 24