AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಹಾ ಪ್ರಿಯರಿಗೆ ಬಿಗ್ ಶಾಕ್: ಕೃತಕ ಬಣ್ಣ, ರಾಸಾಯನಿಕವಿರುವ ಟೀ ಪುಡಿ ಬಳಕೆ ಶೀಘ್ರವೇ ಬ್ಯಾನ್‌

ಬಣ್ಣದ ಕಾಟನ್‌ ಕ್ಯಾಂಡಿ, ಕಬಾಬ್‌ ಮತ್ತು ಪಾನಿಪುರಿ ಅಪಾಯಕಾರಿ ತಿನಿಸು, ಆಹಾರ ಪದಾರ್ಥಗಳು ಬ್ಯಾನ್ ಮಾಡಲಾಗಿತ್ತು. ಇವುಗಳ ಸಾಲಿಗೆ ಸದ್ಯ ಟೀ ಪುಡಿ ಕೂಡ ಸೇರ್ಪಡೆ ಆಗುವ ಸಾಧ್ಯತೆಯಿದೆ. ಕೃತಕ ಬಣ್ಣ, ರಾಸಾಯನಿಕ ಇರುವ ಟೀ ಪುಡಿ ಬ್ಯಾನ್‌ಗೆ ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ತೀರ್ಮಾನ ಮಾಡಲಾಗಿದೆ.

ಚಹಾ ಪ್ರಿಯರಿಗೆ ಬಿಗ್ ಶಾಕ್: ಕೃತಕ ಬಣ್ಣ, ರಾಸಾಯನಿಕವಿರುವ ಟೀ ಪುಡಿ ಬಳಕೆ ಶೀಘ್ರವೇ ಬ್ಯಾನ್‌
ಚಹಾ ಪ್ರಿಯರಿಗೆ ಬಿಗ್ ಶಾಕ್: ಕೃತಕ ಬಣ್ಣ, ರಾಸಾಯನಿಕವಿರುವ ಟೀ ಪುಡಿ ಬಳಕೆ ಶೀಘ್ರವೇ ಬ್ಯಾನ್‌
Vinay Kashappanavar
| Updated By: ಗಂಗಾಧರ​ ಬ. ಸಾಬೋಜಿ|

Updated on:Jul 06, 2024 | 6:08 PM

Share

ಬೆಂಗಳೂರು, ಜುಲೈ 06: ಟೀ ಪುಡಿಯಲ್ಲಿ (tea powder) ಕೃತಕ ಬಣ್ಣ, ರುಚಿ ಹೆಚ್ಚಿಸುವ ರಾಸಾಯನಿಕ ಬಳಕೆ ಹಿನ್ನೆಲೆ ಕೃತಕ ಬಣ್ಣ, ರಾಸಾಯನಿಕ ಇರುವ ಟೀ ಪುಡಿ ಬ್ಯಾನ್‌ಗೆ ಸರ್ಕಾರ (Government) ನಿರ್ಧರಿಸಿದೆ. ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ತೀರ್ಮಾನ ಮಾಡಲಾಗಿದ್ದು, ಶೀಘ್ರವೇ ಬ್ಯಾನ್ ಮಾಡಿ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಸಾಧ್ಯತೆ ಇದೆ. ಇತ್ತೀಚೆಗೆ ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ ಸೇರಿದಂತೆ ನಾನ್ ವೆಜ್ ಪ್ರಿಯರ ಕಬಾಬ್ ಮತ್ತು ಹೆಣ್ಣುಮಕ್ಕಳ ಹಾಟ್ ಫೆವರೇಟ್ ಪಾನಿಪುರಿ ಬ್ಯಾನ್​ ವಿಚಾರ ಸದ್ದು ಮಾಡಿತ್ತು, ಇದೀಗ ಟೀ ಗೆ ಕುತ್ತು ಬಂದಿದ್ದು, ಚಹಾ ಪ್ರಿಯರಿಗೆ ಶಾಕ್​ ಆಗಿದೆ.

ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಟೀ ಪುಡಿ ಮಾದರಿ ಸಂಗ್ರಹಿಸಲಾಗಿತ್ತು. ಬೆಂಗಳೂರಿನಲ್ಲಿ ಸಂಗ್ರಹಿಸಿದ್ದ 49 ಟೀ ಪುಡಿ ಸ್ಯಾಂಪಲ್ಸ್‌ ಪೈಕಿ 45 ಟೀ ಪುಡಿ ಸ್ಯಾಂಪಲ್ಸ್ ಅಸುರಕ್ಷಿತವಾಗಿರುವುದು ಕಂಡು ಬಂದಿದೆ. ಪರಿಶೀಲನೆ ವೇಳೆ ಟೀ ಪೌಡರ್​ ತಯಾರಿಕೆಗೆ ಬಳಸುವ ಪದಾರ್ಥಗಳಲ್ಲಿ ಪ್ರಮುಖವಾಗಿ ಚಹಾದ ಪೌಡರ್ ಕಲರ್ ಹೆಚ್ಚಿಸಲು ಟೀ ಬಣ್ಣ ಬರಲು ಕೆಮಿಕಲ್ ಬಣ್ಣಗಳ ಬಳಕೆ ಮಾಡಲಾಗಿತ್ತಿದೆ ಎಂಬ ಭಯಾನಕ ಅಂಶ ಪತ್ತೆ ಆಗಿದೆ.

ಇದನ್ನೂ ಓದಿ: ರಾಜ್ಯಾದ್ಯಂತ ಕಬಾಬ್‌, ಫಿಶ್‌, ಚಿಕನ್‌ಗೆ ಕೃತಕ ಬಣ್ಣ ಬಳಕೆಗೆ ನಿರ್ಬಂಧಿಸಿದ ಸರ್ಕಾರ

ರಸ್ತೆ ಬದಿಯ ಕೆಲವು ಚಹಾದ ಅಂಗಡಿಗಳಲ್ಲಿ ತೂಕ ಹೆಚ್ಚಿಸಲು ಟೀ ಪುಡಿಯಲ್ಲಿ ಕೆಲವು ಮರದ ಪುಡಿ ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಇದು ಕೂಡ ಕ್ಯಾನ್ಸರ್ ಕಾರಕ ಅಂಶ ಇರುವುದು ಪತ್ತೆಯಾಗಿದೆ. ಹೀಗಾಗಿ ಶೀಘ್ರದಲ್ಲೇ ಟೀ ಪುಡಿಗೆ ಬಳಸುವ ಕ್ಯಾನ್ಸರ್ ಕಾರಕ ಅಂಶಗಳು ಬ್ಯಾನ್ ಮಾಡಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಿರ್ಧರ ಮಾಡಿದೆ.

ಮಸಾಲೆಗೆ ಕೆಮಿಕಲ್‌ ಬಳಕೆ: ಹೆಚ್ಚು ತಿಂದ್ರೆ ಕ್ಯಾನ್ಸರ್‌!

ಬಣ್ಣದ ಕಾಟನ್‌ ಕ್ಯಾಂಡಿಯಿಂದ ಹಿಡಿದು ಬಣ್ಣದ ಕಬಾಬ್‌ವರೆಗೂ ರಾಜ್ಯದಲ್ಲಿ ಒಂದೊಂದೇ ಅಪಾಯಕಾರಿ ತಿನಿಸು, ಆಹಾರ ಪದಾರ್ಥಗಳು ಬ್ಯಾನ್ ಆಗಿದ್ದವು. ಇವುಗಳ ಸಾಲಿಗೆ ಪಾನಿಪುರಿ ಕೂಡ ಸೇರ್ಪಡೆ ಆಗೋ ಸಾಧ್ಯತೆ ಇದೆ. ರಾಜ್ಯದಲ್ಲಿ ಪಾನಿಪುರಿ ಬಗ್ಗೆ ಕೂಡ ಅಧ್ಯಯನ ನಡೆದಿದ್ದು, ಪಾನಿಪುರಿ ಆರೋಗ್ಯಕ್ಕೆ ಕಂಟಕ ಅನ್ನೋ ರಿಪೋರ್ಟ್‌ ಬಂದಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:41 pm, Sat, 6 July 24