ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ನೇರವಾಗಿ ಭಾಗಿಯಾಗಿದ್ದಾರೆ: ರಾಜೀನಾಮೆ ಕೊಡಲಿ ಎಂದ ಸಂಸದ ಜಗದೀಶ್ ಶೆಟ್ಟರ್

ಮುಡಾ ಹಗರಣ ಸಿದ್ದರಾಮಯ್ಯಗೆ ಕಗ್ಗಂಟಾಗಿ ಪರಿಣಮಿಸಿದೆ. ಇದನ್ನೆ ಅಸ್ತ್ರ ಮಾಡಿಕೊಂಡಿರುವ ಬಿಜೆಪಿ ವಾಗ್ದಾಳಿ ಮಾಡಿದ್ದಾರೆ. ಇದೀಗ ಬೆಳಗಾವಿಯಲ್ಲಿ ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಈ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ನೇರವಾಗಿ ಭಾಗಿಯಾಗಿದ್ದಾರೆ. ಹೀಗಾಗಿ ಅವರು ರಾಜೀನಾಮೆ ನೀಡಲಿ ಎಂದು ಕಿಡಿಕಾರಿದ್ದಾರೆ. ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದಿದ್ದಾರೆ.

ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ನೇರವಾಗಿ ಭಾಗಿಯಾಗಿದ್ದಾರೆ: ರಾಜೀನಾಮೆ ಕೊಡಲಿ ಎಂದ ಸಂಸದ ಜಗದೀಶ್ ಶೆಟ್ಟರ್
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ನೇರವಾಗಿ ಭಾಗಿಯಾಗಿದ್ದಾರೆ: ರಾಜೀನಾಮೆ ಕೊಡಲಿ ಎಂದ ಸಂಸದ ಜಗದೀಶ್ ಶೆಟ್ಟರ್
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Jul 06, 2024 | 3:05 PM

ಬೆಳಗಾವಿ, ಜುಲೈ 06: ವಾಲ್ಮೀಕಿ ನಿಗಮದ 187 ಕೋಟಿ ರೂ. ಹಗರಣದ ಬಳಿಕ ಮುಡಾ ಸ್ಕ್ಯಾಮ್ ಸರ್ಕಾರಕ್ಕೆ ಬಿಸಿ ತುಪ್ಪವಾಗಿದೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ (Siddaramaiah) ಪತ್ನಿ ಪಾರ್ವತಿ ಅವರಿಗೆ 50:50 ಅನುಪಾತದಲ್ಲಿ ಮುಡಾದಿಂದ ಬದಲಿ ನಿವೇಶನ ಹಂಚಿಕೆಯಾಗಿರುವುದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ. ಸದ್ಯ ಈ ವಿಚಾರವಾಗಿ ಮಾತನಾಡಿರುವ ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ (Jagadish Shettar)​, ಮುಡಾ ಹಗರಣದಲ್ಲಿ ಸಿಎಂ ನೇರವಾಗಿ ಭಾಗಿಯಾಗಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಎಂದು ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಅತೀ ಹೆಚ್ಚು ದುರುಪಯೋಗ ಮುಡಾದಲ್ಲಿ ಆಗಿದೆ. ಸಿಬಿಐಗೆ ಕೊಟ್ಟರೆ ಸಾವಿರಾರು ‌ಕೋಟಿ ರೂ. ಹಗರಣ ಹೊರಬೀಳುತ್ತೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮುಡಾ ಹಗರಣ: ಸಿದ್ದರಾಮಯ್ಯ ಪತ್ನಿಯ ಜಮೀನೇ ಇಲ್ಲ, ನಕಲಿ‌ ದಾಖಲೆ‌ ಸೃಷ್ಟಿ ಎಂದ ಆರ್​​ಟಿಐ ಕಾರ್ಯಕರ್ತ

ಒಮ್ಮೆ ನೋಟಿಫೈ ಮಾಡಿ ನಂತರ ಡಿನೋಟಿಫೈ ಮಾಡಿದ್ದಾರೆ. ಲೇಔಟ್ ಆದ ನಂತರ 50:50 ಕೊಡಿ ಎಂದು ಕೇಳಿದ್ದಾರೆ. ಆ ರೂಲ್ಸ್ ಎಲ್ಲಿಯೂ ಇಲ್ಲ. ಲೇಔಟ್ ಮಾಡುವಾಗ ಏಕೆ ಅಧಿಕಾರಿಗಳು ಬಿಟ್ಟು ಕೊಟ್ಟರು. ಆವಾಗಲೇ ತಡಿ ಹಿಡಿಯಬಹುದಿತ್ತು ಆದರೆ ಅಧಿಕಾರಿಗಳು ಸುಮ್ಮನೆ‌ ಕುಳಿತರು ಎಂದು ಕಿಡಿಕಾರಿದ್ದಾರೆ.

ನಾಳೆ ಮಹದಾಯಿ ಜಲಾನಯನ ಪ್ರದೇಶಕ್ಕೆ ಕೇಂದ್ರ ಪ್ರವಾಹ್ ತಂಡ ಭೇಟಿ ನೀಡುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಅವರ ಕೆಲಸ ಅವರು ಮಾಡಲಿ ಬಂದು ನೋಡಿಕೊಂಡು ಹೋಗಲಿ. ಈಗಾಗಲೇ ನಾವು ಕಾನೂನು‌ ರೀತಿ ಮೇಲುಗೈ ಸಾಧಿಸಿದ್ದೆವೆ. ವನ್ಯಜೀವಿ ಟೈಗರ್ ಕಾರಿಡಾರ್​ನಿಂದ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮುಡಾ ಅಕ್ರಮ: ಸಿದ್ದರಾಮಯ್ಯ ಪತ್ನಿಗೆ ನೀಡಿದ್ದೆನ್ನಲಾದ ಜಮೀನಿನ ವಿವರ, ಪ್ರಕರಣದ ಸಂಪೂರ್ಣ ಟೈಮ್​ಲೈನ್ ಇಲ್ಲಿದೆ

ಆದೇಶ ಆದ ಮೇಲೂ ಅಧಿಕಾರಿಗಳ ತಂಡ‌‌‌ ವಿಚಾರವಾಗಿ ಮಾತನಾಡಿದ ಅವರು, ವಾದ ವಿವಾದ ಎಲ್ಲವೂ ಆಗಿ ಈಗಾಗಲೇ ಅವಾರ್ಡ್ ಆಗಿದೆ ಆದರೂ ಬರ್ತಿದ್ದಾರೆ ಬಂದು ಹೋಗಲಿ. ಗೋವಾ ನೆಪವೊಡ್ಡಿ ಯೋಜನೆ ತಡೆ ಹಿಡಿಯುವ ಕೆಲಸ ಮಾಡುತ್ತಿದೆ. ಅದಕ್ಕೆ‌ಉತ್ತರ ಕೊಡಲು ಕರ್ನಾಟಕ ಸರ್ಕಾರ‌ ಸಿದ್ದವಾಗಬೇಕು. ಮಹದಾಯಿ ‌ನದಿಗೆ ಒಂದು ಹನಿ ನೀರಿನ ಹಕ್ಕಿಲ್ಲ ಅಂತ ಗೋವಾ ಹೇಳುತ್ತಿತ್ತು. ಆದರೆ ಈಗ ಆದೇಶ ಹೊರಬಿದ್ದು 13 ಟಿಎಂಸಿ ನೀರು ನಮ್ಮ ಪಾಲಿಗೆ ಬಂತು. ಗೋವಾ ಜನರನ್ನು ಮೆಚ್ಚಿಸಲು ಸಿಎಂ ಸಿದ್ದರಾಮಯ್ಯ ಹಾಗೆ ಮಾತಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.