ಅರ್ಜುನನ ಸಮಾಧಿ ಸ್ಥಳದಲ್ಲಿ ಸ್ಮಾರಕ ನಿರ್ಮಾಣ; ಶಂಕುಸ್ಥಾಪನೆ ನೆರವೇರಿಸಿದ ಈಶ್ವರ ಖಂಡ್ರೆ

ಕಳೆದ 2023 ಡಿಸೆಂಬರ್​ 4 ರಂದು ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಅರ್ಜುನ ಸಾವನ್ನಪ್ಪಿದ್ದ. ಜೊತೆಗೆ ಅರ್ಜುನನ ಸಮಾಧಿ ಬಳಿ ಸ್ಮಾರಕ ನಿರ್ಮಾಣ ಮಾಡುವಂತೆ ಆತನ ಅಭಿಮಾನಿಗಳು ಒತ್ತಾಯಿಸಿದ್ದರು. ಇದೀಗ ಲಕ್ಷಾಂತರ ಅರ್ಜುನನ ಅಭಿಮಾನಿಗಳ ಆಸೆ ಈಡೇರಿದ್ದು, ಇಂದು ಸಚಿವ ಈಶ್ವರ್ ಖಂಡ್ರೆ ಅವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಅರ್ಜುನನ ಸಮಾಧಿ ಸ್ಥಳದಲ್ಲಿ ಸ್ಮಾರಕ ನಿರ್ಮಾಣ; ಶಂಕುಸ್ಥಾಪನೆ ನೆರವೇರಿಸಿದ ಈಶ್ವರ ಖಂಡ್ರೆ
ಅರ್ಜುನನ ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಈಶ್ವರ ಖಂಡ್ರೆ
Follow us
ಮಂಜುನಾಥ ಕೆಬಿ
| Updated By: ಕಿರಣ್ ಹನುಮಂತ್​ ಮಾದಾರ್

Updated on:Jul 06, 2024 | 3:51 PM

ಹಾಸನ, ಜು.06: ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ವೀರಮರಣವನ್ನಪ್ಪಿದ್ದ ಕ್ಯಾಪ್ಟನ್ ಅರ್ಜುನನ್ನು ಸಕಲೇಶಪುರ (Sakleshpura) ತಾಲೂಕಿನ ಯಸಳೂರು ಅರಣ್ಯದ ದಬ್ಬಳ್ಳಿಕಟ್ಟೆಯ ನೆಡುತೋಪಿನಲ್ಲಿ ಸಮಾಧಿ ಮಾಡಲಾಗಿತ್ತು. ಅದರಂತೆ ಅಂಬಾರಿ ಆನೆ ಅರ್ಜುನನ(arjuna elephant)  ಸಮಾಧಿ ಸ್ಥಳದಲ್ಲೇ ಇದೀಗ ಸ್ಮಾರಕ ನಿರ್ಮಾಣಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ  ಇಂದು (ಶನಿವಾರ) ಶಂಕುಸ್ಥಾಪನೆ ನೆರವೇರಿಸಿದರು.

ಹೌದು, ಕಳೆದ 2023 ಡಿಸೆಂಬರ್​ 4 ರಂದು ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಅರ್ಜುನ ಸಾವನ್ನಪ್ಪಿದ್ದ. ಜೊತೆಗೆ ಅರ್ಜುನನ ಸಮಾಧಿ ಬಳಿ ಸ್ಮಾರಕ ನಿರ್ಮಾಣ ಮಾಡುವಂತೆ ಆತನ ಅಭಿಮಾನಿಗಳು ಒತ್ತಾಯಿಸಿದ್ದರು. ಇದೀಗ ಲಕ್ಷಾಂತರ ಅರ್ಜುನನ ಅಭಿಮಾನಿಗಳ ಆಸೆ ಈಡೇರಿದ್ದು, ಸಮರ್ಪಕವಾಗಿ ರಸ್ತೆ ಇಲ್ಲದ ಕಾರಣ ಕೆಸರಿಗದ್ದೆಯಂತಾದ ರಸ್ತೆಯಲ್ಲಿಯೇ ಆಗಮಿಸಿ ಸಚಿವ ಈಶ್ವರ್ ಖಂಡ್ರೆ ಅವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ವೇಳೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ರಾಜಣ್ಣ, ಶಾಸಕ ಸಿಮೆಂಟ್ ಮಂಜು, ಸಿಇಒ ಪೂರ್ಣಿಮಾ, ಸಿಸಿಎಫ್​​​ ರವಿಶಂಕರ್ ಉಪಸ್ಥಿತರಿದ್ದರು.

ಇದನ್ನೂ ಓದಿ:ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಅಂಬಾರಿ ಅರ್ಜುನ ಆನೆ ಹುತಾತ್ಮ ಪ್ರಕರಣ; ತನಿಖೆ ಆರಂಭಿಸಿದ ತನಿಖಾ ತಂಡ

1968 ರಲ್ಲಿ ಕರ್ನಾಟಕದ ಪಶ್ಚಿಮ ಘಟ್ಟಗಳ ಕಾಕನಕೋಟೆಯ ಕಾಡುಗಳಿಂದ ಖೆಡ್ಡಾ ಕಾರ್ಯಾಚರಣೆಯಲ್ಲಿ ಅರ್ಜುನನನ್ನು ಸೆರೆಹಿಡಿಯಲಾಯಿತು. ಅಲ್ಲಿ ಪಳಗಿದ ನಂತರ, 1990 ರ ದಶಕದಲ್ಲಿ ಮೈಸೂರಿನ ದಸರಾ ಉತ್ಸವದ ಸಮಯದಲ್ಲಿ ಮೆರವಣಿಗೆಗಳನ್ನು ಒಳಗೊಂಡ ಶಿಬಿರಗಳಲ್ಲಿ ಆತನನ್ನು ಬಳಸಿಕೊಳ್ಳಲಾಯಿತು. ದಸರಾ ಆನೆ ಅನಾರೋಗ್ಯಕ್ಕೆ ಒಳಗಾದ ನಂತರ, ಅರ್ಜುನನು ಹಿಂದೂ ದೇವತೆ ಚಾಮುಂಡೇಶ್ವರಿಯ ವಿಗ್ರಹವನ್ನು ಹೊಂದಿರುವ 750 ಕೆ.ಜಿ ಅಂಬಾರಿಯನ್ನು ಹೊರಲು ಆರಂಭಿಸಿದ್ದ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:46 pm, Sat, 6 July 24