AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರ್ಜುನ ಆನೆ ಹೆಸರಿನಲ್ಲಿ ಲಕ್ಷಾಂತರ ಹಣ ಸಂಗ್ರಹಿಸಿದ ಖದೀಮ: ನಟ ದರ್ಶನಗೂ ಮೋಸ?

ಕಳೆದ ವರ್ಷ ಡಿಸೆಂಬರ್​ನಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದ ಆನೆ ಕಾರ್ಯಾಚರಣೆಯಲ್ಲಿ ದಸರಾ ಅಂಬಾರಿ ಹೊರುತ್ತಿದ್ದ ಕ್ಯಾಪ್ಟನ್​ ಅರ್ಜುನ ಮೃತಪಟ್ಟಿದ್ದಾನೆ. ಈತನ ಸ್ಮಾರಕ ನಿರ್ಮಾಣ ಮಾಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಇನ್ನೂವರೆಗು ಸ್ಮಾರಕ ನಿರ್ಮಾಣವಾಗಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಮೈಸೂರಿನ ಓರ್ವ ವ್ಯಕ್ತಿ ಲಕ್ಷಾಂತರ ಹಣ ಸಂಗ್ರಹಿಸಿದ್ದಾನೆ.

ಅರ್ಜುನ ಆನೆ ಹೆಸರಿನಲ್ಲಿ ಲಕ್ಷಾಂತರ ಹಣ ಸಂಗ್ರಹಿಸಿದ ಖದೀಮ: ನಟ ದರ್ಶನಗೂ ಮೋಸ?
ನಟ ದರ್ಶಶ, ಹಣ ಸಂಗ್ರಹ
ಮಂಜುನಾಥ ಕೆಬಿ
| Updated By: ವಿವೇಕ ಬಿರಾದಾರ|

Updated on:May 27, 2024 | 10:22 AM

Share

ಹಾಸನ, ಮೇ 27: ದಸರಾ ಆನೆ ಅರ್ಜುನ (Dasara Elephant Arjun) ಸ್ಮಾರಕ ನಿರ್ಮಾಣ ವಿಚಾರ ಸದ್ಯ ಸಾಕಷ್ಟು ಚರ್ಚೆಯಲ್ಲಿದೆ. ಅರ್ಜುನ ಆನೆ ಮೃತಪಟ್ಟು ಐದು ತಿಂಗಳು ಕಳೆದರೂ ಸರ್ಕಾರ (Karnatka Government) ಮಾತ್ರ ಸ್ಮಾರಕ ನಿರ್ಮಾಣಕ್ಕೆ ಮುಂದಾಗಿಲ್ಲ. ಆದರೆ ಅರ್ಜುನ ಆನೆ ಸ್ಮಾರಕ ನಿರ್ಮಾಣ ಮಾಡುವ ವಿಚಾರವನ್ನು ಬಂಡವಾಳ ಮಾಡಿಕೊಂಡಿರುವ ಓರ್ವ ವ್ಯಕ್ತಿ ಅಕ್ರಮವಾಗಿ ಹಣ ಸಂಗ್ರಹಿಸುತ್ತಿರುವ ಆರೋಪ ಕೇಳಿಬಂದಿದೆ.

ಮೈಸೂರು ಜಿಲ್ಲೆಯ ನವೀನ್ ಹೆಚ್​.ಎನ್ ಎಂಬುವನು ಅರ್ಜುನ ಪಡೆ ಎಂಬ ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಿ, ಅರ್ಜುನ ಸ್ಮಾರಕ ಹೋರಾಟಕ್ಕೆ ನಿಮ್ಮ ಬೆಂಬಲ ಬೇಕು ಅಂತ ಹಣಕ್ಕಾಗಿ ಸಹಾಯ ಕೇಳುತ್ತಿದ್ದಾನೆ. ಇದನ್ನು ನಂಬಿದ ಹಲವರು ಹಣ ಸಹಾಯ ಮಾಡಿದ್ದಾರೆ. ಇದರಿಂದ ನವೀನ್​ ಹೆಚ್​​​ಎನ್​​ ಖಾತೆಗೆ ಲಕ್ಷಾಂತರ ಹಣ ಜಮೆ ಆಗಿದೆ ಎಂದು ಮಲೆನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಆರೋಪ ಮಾಡಿದ್ದಾರೆ. ಈತ ಹಣ ಸಂಗ್ರಹಿಸಿದ ಬಗ್ಗೆ ದೂರು ದಾಖಲಾಗಿದೆ.

ನಟ ದರ್ಶನಗೂ ಮೋಸ

ಅರ್ಜುನ ಆನೆ ಸ್ಮಾರಕ ನಿರ್ಮಾಣಕ್ಕೆ ಸಹಾಯ ಮಾಡುವಂತೆ ನವೀನ್​ ನಟ ದರ್ಶನ್ ಅವರ ಪಿಎಯನ್ನೂ ಸಂಪರ್ಕ ಮಾಡಿದ್ದಾನೆ. ಅವರಿಂದ ಕಲ್ಲನ್ನು ತೆರೆಸಿಕೊಂಡಿದ್ದಾನೆ. ಈ ಕಲ್ಲನ್ನು ಅರಣ್ಯ ಇಲಾಖೆಯವರಿಗೆ 30 ಸಾವಿರ ರೂ.ಗೆ ಮಾರಿದ್ದಾನೆ ಅಂತ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಅರ್ಜುನ ಆನೆಯ ಸ್ಮಾರಕ ನಿರ್ಮಾಣಕ್ಕೆ ನೆರವಾದ ದರ್ಶನ್

ಅರ್ಜುನನ ಹೆಸರಿನಲ್ಲಿ ಹಣ ಸಂಗ್ರಹಕ್ಕೆ ಜನರ ಆಕ್ರೋಶ

ಸಾರ್ವಜನಿಕರಿಂದ ಹಣ ಪಡೆರಯುವುದಕ್ಕೆ ಈತನಿಗೆ ಅನುಮತಿ ಕೊಟ್ಟವರು ಯಾರು? ಈತನ ವೈಯಕ್ತಿಕ ಖಾತೆಗೆ ಯಾರೂ ಹಣ ಹಾಕಬೇಡಿ. ಅಲ್ಲದೆ ಈತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ. ಈತನ ಖಾತೆಗೆ ನೂರಾರು ಜನರು ಹಣ ಸಂದಾಯ ಮಾಡಿರುವ ಫೊಟೋಗಳು ವೈರಲ್ ಆಗಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:14 am, Mon, 27 May 24