AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಸ್ತೆ ದುರಸ್ತಿಗೆ ಕೂಡಿ ಬಂತು ಮುಹೂರ್ತ; ನಾಲ್ಕು ದಶಕಗಳ ಸಂಕಷ್ಟಕ್ಕೆ ಕೊನೆಗೂ ಸಿಕ್ಕಿತು ಮುಕ್ತಿ

4.6 ಕೋಟಿ ರೂಪಾಯಿ ಅನುದಾನದಲ್ಲಿ ಇದೀಗ ಈ ರಸ್ತೆಯನ್ನು ದುರಸ್ತಿ ಮಾಡಲು ನಿರ್ಧರಿಸಲಾಗಿದ್ದು, ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿದ್ದ ರಸ್ತೆ ನಿರ್ಮಾಣಕ್ಕೆ ಕಲಘಟಗಿ ಕ್ಷೇತ್ರದ ಶಾಸಕ ಸಿ.ಎಂ. ನಿಂಬಣ್ಣವರ್ ಹಾಗೂ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಭೂಮಿ ಪೂಜೆ ನೆರವೇರಿಸಿದ್ದಾರೆ.

ರಸ್ತೆ ದುರಸ್ತಿಗೆ ಕೂಡಿ ಬಂತು ಮುಹೂರ್ತ; ನಾಲ್ಕು ದಶಕಗಳ ಸಂಕಷ್ಟಕ್ಕೆ ಕೊನೆಗೂ ಸಿಕ್ಕಿತು ಮುಕ್ತಿ
ಕಲಘಟಗಿ ಕ್ಷೇತ್ರದ ಶಾಸಕ ಸಿ.ಎಂ. ನಿಂಬಣ್ಣವರ್ ಹಾಗೂ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಭೂಮಿ ಪೂಜೆ ನೆರವೇರಿಸಿದ ಚಿತ್ರಣ
Follow us
preethi shettigar
| Updated By: Skanda

Updated on: Apr 04, 2021 | 7:25 AM

ಧಾರವಾಡ: ಜಿಲ್ಲೆಯಲ್ಲಿಯೇ ನತದೃಷ್ಟ ಗ್ರಾಮ ಎಂದು ಧಾರವಾಡ ತಾಲೂಕಿನ ಹುಣಸಿಕುಮರಿ ಕರೆಸಿಕೊಳ್ಳುತ್ತದೆ. ಏಕೆಂದರೆ ಧಾರವಾಡದಿಂದ ಕೆಲವೇ ಕಿಲೋಮೀಟರ್​ ದೂರದಲ್ಲಿದ್ದರೂ ಈ ಗ್ರಾಮಕ್ಕೆ ಅಭಿವೃದ್ಧಿ ಎನ್ನುವುದು ಮಾತ್ರ ಮರಿಚೀಕೆ ಆಗಿದೆ. ಅದರಲ್ಲೂ ಈ ಗ್ರಾಮ ಅರಣ್ಯ ಪ್ರದೇಶದಲ್ಲಿ ಬರುವುದರಿಂದ ಅರಣ್ಯ ಇಲಾಖೆಯ ಕಠಿಣ ನಿಯಮಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗುತ್ತಲೇ ಇದೆ. ಅದರಲ್ಲೂ ಈ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನಂತೂ ನೋಡದ ಸ್ಥಿತಿ ತಲುಪಿದೆ. ಆದರೆ ಇತ್ತೀಚೆಗೆ ಆರಂಭವಾದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಈ ಕುಗ್ರಾಮಕ್ಕೆ ರಸ್ತೆ ದುರಸ್ತಿ ಭಾಗ್ಯವನ್ನು ತಂದು ಕೊಡುವಲ್ಲಿ ಯಶಸ್ವಿಯಾಗಿದೆ.

ಕಲಕೇರಿಯಿಂದ ಹುಣಸಿಕುಮರಿ ಗ್ರಾಮ ಸಂಪರ್ಕ ರಸ್ತೆಗೆ ಭೂಮಿ ಪೂಜೆ ಇತ್ತೀಚಿಗೆ ಧಾರವಾಡದ ತಹಸೀಲ್ದಾರ್ ಡಾ. ಸಂತೋಷ ಬಿರಾದಾರ್ ಅವರು ಹುಣಸಿಕುಮರಿ ಗ್ರಾಮದ ಪಕ್ಕದಲ್ಲಿನ ಕಲಿಕೇರಿ ಗ್ರಾಮದಲ್ಲಿ ಒಂದು ದಿನ ವಾಸ್ತವ್ಯ ಮಾಡಿದ್ದರು. ಈ ಸಂದರ್ಭದಲ್ಲಿ ಹುಣಸಿಕುಮರಿ ಗ್ರಾಮಸ್ಥರು ತಹಶೀಲ್ದಾರ ಡಾ. ಸಂತೋಷ ಬಿರಾದಾರ್ ಅವರಿಗೆ ರಸ್ತೆ ಅಭಿವೃದ್ಧಿ ಮಾಡುವಂತೆ ಮನವಿ ಮಾಡಿಕೊಂಡಿದ್ದರು‌. ಆಗ ತಹಸೀಲ್ದಾರ್ ಡಾ. ಸಂತೋಷ ಬಿರಾದಾರ್ ಆ ಗ್ರಾಮಕ್ಕೆ ತೆರಳಿ ರಸ್ತೆಯ ಸಮಸ್ಯೆಯನ್ನು ಗಮನಿಸಿದ್ದರು. ಬಳಿಕ ಈ ವಿಷಯವನ್ನು ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರ ಗಮನಕ್ಕೆ ತಂದರು.

ಈ ರಸ್ತೆ ಸಮಸ್ಯೆಯಿಂದಾಗಿ ಎಷ್ಟೋ ಮಕ್ಕಳು ಮುಂದಿನ ಅಭ್ಯಾಸಕ್ಕೆ ಬೇರೆ ಊರಿಗೆ ಹೋಗಲು ಕೂಡ ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಮನವಿ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೇ ಅವರನ್ನು ಹುಣಸಿಕುಮರಿ ಗ್ರಾಮಕ್ಕೆ ಕರೆದೊಯ್ದು ಸಮಸ್ಯೆಯ ಗಂಭೀರತೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು. ಆದರೆ ಕಲಿಕೇರಿಯಿಂದ ಹುಣಸಿಕುಮರಿಗೆ ಹೋಗುವ ರಸ್ತೆಯ ಕೆಲ ಭಾಗ ಮೀಸಲು ಅರಣ್ಯ ಪ್ರದೇಶದಲ್ಲಿ ಹಾದು ಹೋಗಿರುವುದರಿಂದ ಅಲ್ಲಿ ರಸ್ತೆ ದುರಸ್ತಿ ಮಾಡಲು ಸಾಧ್ಯವೇ ಇಲ್ಲ ಎನ್ನುವಂತಾಗಿತ್ತು. ಅಲ್ಲಿ ರಸ್ತೆ ನಿರ್ಮಿಸಲು ಅರಣ್ಯ ಇಲಾಖೆ ಅನುಮತಿ ನೀಡಲು ಸಾಧ್ಯವೇ ಇರಲಿಲ್ಲ. ಹೀಗಾಗಿ ಈ ತಾಂತ್ರಿಕ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಕೊನೆಗೂ ಈ ರಸ್ತೆಯ ದುರಸ್ತಿಗೆ ಇದೀಗ ಅವಕಾಶ ಕೂಡಿ ಬಂದಿದೆ.

road repair

ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಯೋಜನೆಯಡಿ ಡಿಸಿ ನಿತೇಶ ಪಾಟೀಲ್ ಹಳ್ಳಿಗೆ ಭೇಟಿ ನೀಡಿದ ಕ್ಷಣ

4.6 ಕೋಟಿ ರೂಪಾಯಿ ಅನುದಾನದಲ್ಲಿ ಇದೀಗ ಈ ರಸ್ತೆಯನ್ನು ದುರಸ್ತಿ ಮಾಡಲು ನಿರ್ಧರಿಸಲಾಗಿದ್ದು, ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿದ್ದ ರಸ್ತೆ ನಿರ್ಮಾಣಕ್ಕೆ ಕಲಘಟಗಿ ಕ್ಷೇತ್ರದ ಶಾಸಕ ಸಿ.ಎಂ. ನಿಂಬಣ್ಣವರ್ ಹಾಗೂ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಭೂಮಿ ಪೂಜೆ ನೆರವೇರಿಸಿದ್ದಾರೆ. ಸುಮಾರು 40 ವರ್ಷಗಳಿಂದ ಅರಣ್ಯ ಇಲಾಖೆಯ ತಕರಾರಿನಿಂದ ಸಮಸ್ಯೆಯಾಗಿ ಉಳಿದಿದ್ದ ಈ ರಸ್ತೆ ಕಾಮಗಾರಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ಜರುಗಿಸಿ ಪರಿಹಾರ ಕಂಡುಕೊಂಡಿದ್ದು, ಸದ್ಯ ಈ ರಸ್ತೆ ದುರಸ್ತಿಗೆ ಮುಹೂರ್ತ ಕೂಡಿ ಬಂದಿದೆ.

ಇದು ಕಂದಾಯ ಗ್ರಾಮವೇ ಅಲ್ಲ ಪ್ರತಿಬಾರಿ ಈ ಗ್ರಾಮದ ರಸ್ತೆ ವಿಚಾರ ಮುನ್ನೆಲೆಗೆ ಬಂದ ಕೂಡಲೇ ಒಂದು ಕಡೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಕೆಲ ಭಾಗ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿದೆ ಎನ್ನುವ ತಾಂತ್ರಿಕ ತೊಂದರೆ ಎದ್ದು ಕಾಣುತ್ತಿದ್ದರೆ. ಮತ್ತೊಂದು ಕಡೆ ಇದು ಕಂದಾಯ ಗ್ರಾಮವೇ ಅಲ್ಲ ಅನ್ನೋ ವಿಷಯವೂ ಎದ್ದು ಕಾಣುತ್ತಿತ್ತು. ಈ ಎರಡು ಅಂಶಗಳಿಂದ ಗ್ರಾಮಕ್ಕೆ ಸಿಗಬೇಕಾಗಿದ್ದ ಯಾವುದೇ ಯೋಜನೆಗಳು ಮತ್ತೆ ದೂರವೇ ಉಳಿದುಬಿಡುತ್ತಿದ್ದವು. ಆದರೆ ಇದೀಗ ಎಲ್ಲ ತಾಂತ್ರಿಕ ತೊಂದರೆಗಳನ್ನು ನಿವಾರಿಸಿಕೊಳ್ಳಲಾಗಿದೆ. ಅದರಲ್ಲೂ ಅರಣ್ಯ ಇಲಾಖೆ ರಸ್ತೆ ಅಭಿವೃದ್ಧಿಗೆ ಗ್ರೀನ್ ಸಿಗ್ನಲ್ ನೀಡಿದೆ. ಇದರಿಂದಾಗಿ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.

ಹೆಣ್ಣು ಮಕ್ಕಳು ಶಾಲಾ-ಕಾಲೇಜಿಗೆ ಹೋಗೋದನ್ನೇ ಬಿಟ್ಟಿದ್ದರು ಈ ಗ್ರಾಮದಲ್ಲಿ ಪ್ರಾಥಮಿಕ ಹಂತದವರೆಗೆ ಶಾಲೆ ಇದೆ. ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ಬಳಿಕ ಗಂಡು ಮಕ್ಕಳು ಹೇಗೋ ಕಷ್ಟಪಟ್ಟು ಪಕ್ಕದೂರುಗಳಿಗೆ ಹೈಸ್ಕೂಲ್ ಶಿಕ್ಷಣಕ್ಕೆ ಹೋಗುತ್ತಾರೆ. ಆದರೆ ಇದು ಹೆಣ್ಣು ಮಕ್ಕಳಿಗೆ ಸಾಧ್ಯವಾಗದ ಮಾತಾಗಿದೆ. ಮೊದಲೇ ಕಾಡಿನ ಮಧ್ಯೆ ಇರುವ ರಸ್ತೆ. ಆಗಾಗ ಕಾಡು ಪ್ರಾಣಿಗಳು ಕಾಣಿಸಿಕೊಳ್ಳುವುದು ಇದೆ. ಅಲ್ಲದೇ ಇದು ಮಲೆನಾಡ ಸೆರಗಿನಲ್ಲಿ ಬರುವುದರಿಂದ ಮಳೆಗಾಲದಲ್ಲಿ ವಿಪರೀತ ಮಳೆ. ಇದೆಲ್ಲದರಿಂದ ಭಯಗೊಂಡ ಪೋಷಕರು ಪ್ರಾಥಮಿಕ ಶಾಲಾ ಅಭ್ಯಾಸದ ಬಳಿಕ ಮುಂದಕ್ಕೆ ಹೆಣ್ಣು ಮಕ್ಕಳನ್ನು ಕಳಿಸುತ್ತಲೇ ಇರಲಿಲ್ಲ. ಇದರಿಂದಾಗಿ ಎಷ್ಟೋ ಮಕ್ಕಳು ಹೈಸ್ಕೂಲು ಹಾಗೂ ಕಾಲೇಜು ಶಿಕ್ಷಣದಿಂದ ವಂಚಿತರಾಗಿದ್ದರು ಆದರೆ ಈಗ ಇದಕ್ಕೆ ಮುಕ್ತಿ ಸಿಕ್ಕಿದೆ.

ನಾನು ಕಲಿಕೇರಿ ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ವಾಸ್ತವ್ಯ ಮಾಡಲು ಹೋದಾಗ ಹುಣಸಿಕುಮರಿ ಗ್ರಾಮಸ್ಥರು ಬಂದು ತಮ್ಮ ಸಮಸ್ಯೆ ತೋಡಿಕೊಂಡಿದ್ದರು. ನಾನು ಈ ಬಗ್ಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಅವರಿಗೆ ಮಾಹಿತಿ ನೀಡಿದೆ. ಅವರು ಸ್ವತಃ ಅಲ್ಲಿಗೆ ಬಂದು ಎಲ್ಲವನ್ನು ಪರಿಶೀಲಿಸಿ, ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು. ಕೂಡಲೇ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸುವಂತೆ ವಿವಿಧ ಇಲಾಖೆಗಳಿಗೂ ಕೂಡ ಸೂಚನೆ ನೀಡಿದರು. ಅದರ ಪರಿಣಾಮವೇ ಇವತ್ತು ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿದೆ. ಕೆಲವೇ ದಿನಗಳಲ್ಲಿ ಈ ರಸ್ತೆ ನಿರ್ಮಾಣ ಕಾರ್ಯ ಮುಕ್ತಾಯಗೊಂಡು, ರಸ್ತೆ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ. ಹಲವಾರು ವರ್ಷಗಳ ಗ್ರಾಮಸ್ಥರ ಬೇಡಿಕೆಗೆ ನಾವೆಲ್ಲರೂ ಸ್ಪಂದಿಸಿ, ಅವರ ಸಮಸ್ಯೆಗೆ ಮುಕ್ತಿ ನೀಡುತ್ತಿರುವುದು ಖುಷಿ ತಂದಿದೆ ಎಂದು ಧಾರವಾಡದ ತಹಶೀಲ್ದಾರ್ ಡಾ. ಸಂತೋಷ ಬಿರಾದಾರ್ ಹೇಳಿದ್ದಾರೆ.

ಜಿಲ್ಲಾ ಕೇಂದ್ರದಿಂದ ಕೆಲವೇ ಕಿ.ಮೀ. ದೂರದಲ್ಲಿದ್ದರೂ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದ ಗ್ರಾಮಸ್ಥರಿಗೆ ಈ ರಸ್ತೆ ನಿರ್ಮಾಣ ಕಾರ್ಯಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಸಂತಸ ತಂದಿದೆ. ಈ ಬಗ್ಗೆ ಟಿವಿ9 ಡಿಜಿಟಲ್ ಜೊತೆ ಮಾತನಾಡಿದ ಗ್ರಾಮಸ್ಥರಾದ ಹನುಮಂತಪ್ಪ, ಇದುವರೆಗೂ ನಾವು ಬೇರೆ ಪ್ರಪಂಚದಲ್ಲಿಯೇ ಇದ್ದೆವು. ನಮ್ಮೂರಿಗೆ ಕನ್ಯೆ ಕೊಡಲು ಅಕ್ಕಪಕ್ಕದೂರಿನವರು ಹಿಂದೇಟು ಹಾಕುತ್ತಿದ್ದರು. ಇನ್ನು ಹೆಣ್ಣು ಮಕ್ಕಳ ಪಾಡಂತೂ ಹೇಳತೀರದು.

ಎಷ್ಟೇ ಪ್ರತಿಭಾವಂತರಿದ್ದರೂ ಮುಂದೆ ಓದಲಾಗದೇ ವಿದ್ಯಾಭ್ಯಾಸವನ್ನು ಮೊಟಕುಗೊಳಿಸುವ ಅನಿವಾರ್ಯತೆಯನ್ನು ನಾಲ್ಕು ದಶಕಗಳಿಂದ ನೋಡುತ್ತಾ ಬಂದಿದ್ದೇನೆ. ಸಣ್ಣದೊಂದು ಸಮಸ್ಯೆ ಇದುವರೆಗೂ ನಮ್ಮನ್ನು ನಾಗರಿಕ ಪ್ರಪಂಚದಿಂದ ದೂರವೇ ಇಟ್ಟಿತ್ತು. ಆದರೆ ಈಗಲಾದರೂ ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸಿ, ಈ ರಸ್ತೆ ನಿರ್ಮಾಣಕ್ಕೆ ಗುದ್ದಿಲಿ ಪೂಜೆ ಮಾಡಿದೆ. ಆದಷ್ಟು ಬೇಗನೇ ಈ ಕೆಲಸ ಮುಗಿದು, ಜನರು ನೆಮ್ಮದಿಯಿಂದ ಓಡಾಡುವಂತಾಗಲಿ. ಇದಾದ ಬಳಿಕ ನಮ್ಮ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಘೋಷಣೆ ಮಾಡುವ ಬಗ್ಗೆಯೂ ಸರ್ಕಾರ ಗಮನ ಹರಿಸಲಿ ಎಂದು ಹೇಳಿದ್ದಾರೆ.

(ವರದಿ: ನರಸಿಂಹಮೂರ್ತಿ ಪ್ಯಾಟಿ -99805 70809)

ಇದನ್ನೂ ಓದಿ: ಕೋಟೆನಾಡಿನಲ್ಲಿ ಮುಗಿಯದ ರಸ್ತೆ ಕಾಮಗಾರಿ: ಹೆಚ್ಚಿನ ಧೂಳಿನಿಂದ ಸೃಷ್ಟಿಯಾಯ್ತು ಕೊರೊನಾ ಆತಂಕ

(Government gives Permission to repair the road in Dharwad)

Daily Devotional: ಮಂಗಳವಾರ ಹಾಗೂ ಶುಕ್ರವಾರ ಹಣವನ್ನು ಕೊಡಬಹುದಾ?
Daily Devotional: ಮಂಗಳವಾರ ಹಾಗೂ ಶುಕ್ರವಾರ ಹಣವನ್ನು ಕೊಡಬಹುದಾ?
Daily Horoscope: ವೃಷಭ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭಫಲ
Daily Horoscope: ವೃಷಭ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭಫಲ
ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ