ಬೆಂಗಳೂರು, ಆಗಸ್ಟ್ 11: ಕರ್ನಾಟಕದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನ (Guarantee Schemes) ಅನುಷ್ಠಾನ ಮಾಡಿರುವ ಕಾಂಗ್ರೆಸ್ ಸರ್ಕಾರ ಈಗ ಮತ್ತೊಂದು ಭಾಗ್ಯ ನೀಡಲು ಮುಂದಾಗಿದೆ. ನಿರುದ್ಯೋಗ ಯುವಕರಿಗೆ ಕೌಶಲ್ಯ ಹಾಗೂ ಉದ್ಯೋಗ ನೀಡುವ ನಿಟ್ಟಿನಲ್ಲಿ ಪಂಚ ಯೋಜನೆಗಳ ಪೈಕಿ ಯುವನಿಧಿ ಪ್ಲಸ್ (Yuvanidhi Plus) ಯೋಜನೆಯೊಂದನ್ನು ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಆ ಮೂಲಕ ನಿರುದ್ಯೋಗಳಿಗೆ ಭತ್ಯೆ ಜೊತೆ ಉದ್ಯೋಗ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.
ಕಾಂಗ್ರೆಸ್ ಸರ್ಕಾರದ ಮಹತ್ವಾಕ್ಷಾಂಕಿ ಯೋಜನೆಗಳಲ್ಲೊಂದಾದ ಯುವನಿಧಿ ಯೋಜನೆಯಲ್ಲಿ ನಿರುದ್ಯೋಗಿಗಳಿಗೆ ಪ್ರತಿ ತಿಂಗಳೂ 1500 ರೂ. ಹಾಗೂ ಪದವೀಧರರಿಗೆ 3000 ರೂ. ನೀಡುತ್ತಿದೆ. ಡಿಪ್ಲೊಮಾ ಇಲ್ಲವೇ ಪದವಿಯನ್ನು ಪೂರೈಸಿದ್ದು, ಇನ್ನೂ ಯಾವುದೇ ಉದ್ಯೋಗ ಸಿಗದವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿತ್ತು ಡಿಪ್ಲೋಮಾ ಹೋಲ್ಡರ್‌ಗಳಿಗೆ ಮುಂದಿನ ಎರಡು ವರ್ಷಗಳ ಕಾಲ ತಿಂಗಳಿಗೆ 1500 ರೂ. ಹಾಗೂ ಪದವೀಧರರಿಗೆ 3000 ರೂ. ನೀಡುವ ನಿರುದ್ಯೋಗ ಭತ್ಯೆ ನೀಡುವ ಯೋಜನೆ ಇದಾಗಿದೆ ಆದರೆ ಈಗ ಸರ್ಕಾರ ನಿರುದ್ಯೋಗಳಿಗೆ ಭತ್ಯಯ ಜೊತೆ ಉದ್ಯೋಗ ನೀಡುವ ಬಗ್ಗೆ ಚಿಂತನೆ ಮಾಡಿದ್ದು ಯುವನಿಧಿ ಪ್ಲಸ್ ಜಾರಿಗೆ ಮುಂದಾಗಿದೆ.
ಇದನ್ನೂ ಓದಿ: ಯುವ ನಿಧಿ ಯೋಜನೆಗೆ ಚಾಲನೆ ಸಿಕ್ಕಿ ತಿಂಗಳಾದರೂ ಖಾತೆಗೆ ಬಿದ್ದಿಲ್ಲ ಹಣ; ಸರ್ಕಾರದ ವಿರುದ್ಧ ಪದವೀಧರರ ಆಕ್ರೋಶ
ಯುವನಿಧಿ ಯೋಜನೆಯನ್ನ ಪರಿಷ್ಕರಣೆ ಮಾಡಿ ಯುವನಿಧಿ ಪ್ಲಸ್ ಮಾಡಲು ಸರ್ಕಾರ ಮುಂದಾಗಿದೆ. ನಿರುದ್ಯೋಗ ಯುವಕರಿಗೆ ಕೈಗಾರಿಕಾ ಕಂಪನಿ, ಐಟಿಬಿಟಿ , ಕಾರ್ಪೋರೇಟ್ ಕಂಪನಿಗಳ ಸಹಭಾಗಿತ್ವದಲ್ಲಿ ನಿರದ್ಯೋಗ ಯುವಕರಿಗೆ ತರಬೇತಿ ನೀಡಿ ಉದ್ಯೋಗ ದೊರಕುವಂತೆ ಮಾಡಲು ಸರ್ಕಾರ ಯುವನಿಧಿ ಪ್ಲಸ್ ಯೋಜನೆ ಜಾರಿಗೆ ಮುಂದಾಗಿದೆ. ಸರ್ಕಾರದಿಂದ ಯುವನಿಧಿ ಯೋಜನೆಯ ಮುಂದುವರೆದ ಭಾಗವಾಗಿ ಯುವನಿಧಿ ಪಸ್ಲ್ ಜಾರಿ ಮಾಡಲಾಗಿದ್ದು, ಈಗಾಗಲೇ ಯುವನಿಧಿ ಯೋಜನೆಯಡಿ ಪದವೀಧರರಿಗೆ ಮಾಸಿಕ 3 ಸಾವಿರ ರೂ. ಮತ್ತು ಡಿಪ್ಲೊಮಾ ಪದವೀಧರರಿಗೆ 1500 ರೂ. ನೀಡಲಾಗುತ್ತಿದೆ. ಇದರ ಮುಂದುವರೆದ ಭಾಗವಾಗಿ ಯುವನಿಧಿ ಪ್ಲಸ್ ಜಾರಿ ಮಾಡಲಾಗುತ್ತಿದೆ.
ಈ ಯೋಜನೆಯಲ್ಲಿ ನಿರದ್ಯೋಗ ಯುವಕರಿಗೆ ಉದ್ಯೋಗ ನೀಡುವ ಹಾಗೂ ಕೌಶಲ್ಯ ತರಬೇತಿ ನೀಡಲು ಜೀವನೋಪಾಯ, ಕೌಶಲ್ಯಾಭಿವೃದ್ಧಿ ಇಲಾಖೆ ಮುಂದಾಗಿದೆ. ಯುವನಿಧಿಯಿಂದ ಹಣ ಮಾತ್ರ ನೀಡಲಾಗುತ್ತಿತ್ತು. ಕೆಲಸ ಸಿಗುತ್ತಿರಲಿಲ್ಲ ಹೀಗಾಗಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ‘ಯುವನಿಧಿ’ ಯೋಜನೆ ಜಾರಿಗೆ ಮುಹೂರ್ತ ಫಿಕ್ಸ್
ಯುವನಿಧಿ ಯೋಜನೆಯಡಿ ಯಾರೆಲ್ಲ ಹಣ ಪಡೆಯುತ್ತಿದ್ದಾರೋ ಫಲಾನುಭವಿಗಳಿಗೆ ಉದ್ಯೋಗ ನೀಡುವ ಯೋಜನೆಯಾಗಿದೆ. ಯುವನಿಧಿ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ ಕೆಲಸ ನೀಡುವತ್ತ ಸರ್ಕಾರ ಚಿಂತನೆ ಮಾಡುತ್ತಿದೆ. ಈಗಾಗಲೇ ಕೆಲವು ಕೈಗಾರಿಕೆ, ಕಾರ್ಪೋರೇಟ್ ಕಂಪನಿಗಳು ಐಟಿಬಿಟಿ ಕಂಪನಿಗಳ ಜೊತೆ ಮಾತುಕಥೆಗೆ ಮುಂದಾಗಿದ್ದು ಸರ್ಕಾರದ ಸಹಾಭಾಗಿತ್ವದಲ್ಲಿ ತರಬೇತಿ ಜೊತೆಗೆ ಉದ್ಯೋಗ ನೀಡಲು ಸಹಕಾರಿಯಾಗಲಿದೆ.
ಇನ್ನು ಸರ್ಕಾರ ಯುವನಿಧಿ ಪ್ಲಸ್ ಮೂಲಕ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ ಕೆಲಸ ನೀಡುವತ್ತ ಚಿಂತನೆ ಮಾಡುತ್ತಿದ್ದು, ಪದವಿದರ ವಿದ್ಯಾರ್ಥಿಗಳಿಗೆ ಹೊಸ ಭರವಸೆ ಮೂಡಿಸಿದೆ. ಸರ್ಕಾರ ಈಗಾಗಲೇ ರಾಜ್ಯದಲ್ಲಿ ಪಂಚ ಗ್ಯಾರಂಟಿ ಜಾರಿ ಮಾಡಿದೆ ಅದರಲ್ಲಿಯೂ ಯುವನಿಧಿ ನಿರೂದ್ಯೋಗ ವಿದ್ಯಾರ್ಥಿಗಳಿಗೆ ತುಂಬಾ ಸಹಾಯಕಾರಿಯಾಗಿದ್ದು ಈಗ ಯುವನಿಧಿ ಪ್ಲಸ್ ಮೂಲಕ ಕೌಶಲ್ಯದ ಜೊತೆ ಉದ್ಯೋಗ ನೀಡುವತ್ತ ಚಿಂತನೆ ಮಾಡುತ್ತಿರುವುದು ಸಂತೋಷದ ವಿಚಾರವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:51 pm, Sun, 11 August 24