ಕುಮಾರಸ್ವಾಮಿಗೆ ವಿಶ್ವನಾಥ್ ತಿರುಗೇಟು.. HDK ಬಿಜೆಪಿಗೆ ರಗ್ಗನ್ನೇ ಹಾಸಿದ್ದಾರೆ ಎಂದರು!

ಇನ್ನೊಂದು ಬೇರೆ ಪಕ್ಷ ಇದ್ದರೆ ಅದಕ್ಕೂ ಹೆಚ್.ವಿಶ್ವನಾಥ್ ಟವೆಲ್ ಹಾಕುತ್ತಿದ್ದರು ಎಂಬ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಎಂಎಲ್‌ಸಿ ಹೆಚ್.ವಿಶ್ವನಾಥ್ ತಿರುಗೇಟು ಕೊಟ್ಟಿದ್ದಾರೆ. HDK ಬಿಜೆಪಿಗೆ ರಗ್ಗನ್ನೇ ಹಾಸಿದ್ದಾರೆ ಎಂದು ಮೈಸೂರಿನ ಕೆ.ಆರ್.ನಗರದಲ್ಲಿ ವಿಶ್ವನಾಥ್ ತಿರುಗೇಟು ನೀಡಿದ್ದಾರೆ.

ಕುಮಾರಸ್ವಾಮಿಗೆ ವಿಶ್ವನಾಥ್ ತಿರುಗೇಟು.. HDK ಬಿಜೆಪಿಗೆ ರಗ್ಗನ್ನೇ ಹಾಸಿದ್ದಾರೆ ಎಂದರು!
ಎಂಎಲ್‌ಸಿ ಹೆಚ್.ವಿಶ್ವನಾಥ್
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on: Feb 01, 2021 | 2:50 PM

ಮೈಸೂರು: ಇನ್ನೊಂದು ಬೇರೆ ಪಕ್ಷ ಇದ್ದಿದ್ದರೆ ಅದಕ್ಕೂ ಹೆಚ್.ವಿಶ್ವನಾಥ್ ಟವೆಲ್ ಹಾಕುತ್ತಿದ್ದರು ಎಂಬ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಎಂಎಲ್‌ಸಿ ಹೆಚ್.ವಿಶ್ವನಾಥ್ ತಿರುಗೇಟು ಕೊಟ್ಟಿದ್ದಾರೆ. HDK ಬಿಜೆಪಿಗೆ ರಗ್ಗನ್ನೇ ಹಾಸಿದ್ದಾರೆ ಎಂದು ಮೈಸೂರಿನ ಕೆ.ಆರ್.ನಗರದಲ್ಲಿ ವಿಶ್ವನಾಥ್ ತಿರುಗೇಟು ನೀಡಿದ್ದಾರೆ.

ಮುಂದುವರಿದು ಮಾತನಾಡಿದ ಹೆಚ್.ವಿಶ್ವನಾಥ್.. ನಿನ್ನೆ ಸಿದ್ದರಾಮಯ್ಯ ಕೂಡಾ ಜೆಡಿಎಸ್ ಪಕ್ಷ, ಪಕ್ಷವೇ ಅಲ್ಲ ಎಂದು ಹೇಳಿದ್ದಾರೆ. ಇದಕ್ಕಿಂತ ಬೇರೇನಿದೆ? ಅಖಿಲ ನಾಮಧಾರಿಗೌಡ ಜನಾಂಗವನ್ನು ಪ್ರವರ್ಗ 2ಎ ಯಿಂದ 94 ರಲ್ಲಿ ತೆಗೆಸಿದ್ದು ನಾನೇ ಎಂದು ಕೆ.ಆರ್. ನಗರ ತಾಲ್ಲೂಕಿನ ಎಲ್ಲಾ ನಾಮಧಾರಿ‌ಗೌಡ ಸಭೆಗಳಲ್ಲಿ ಆರೋಪ ಮಾಡುತ್ತಿದ್ದಾರೆ.

ಕಳೆದ 26 ವರ್ಷದ‌ ಹಿಂದೆ ನಿಮ್ಮ ದೇವೇಗೌಡರೇ ಪ್ರಧಾನಿಯಾಗಿದ್ದರು. ನಿಮ್ಮ ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆದವರು. ಏಕೆ‌ 2ಎ ಮಾಡಲಿಲ್ಲ ವೋಟ್ ಬ್ಯಾಂಕ್ ಗೋಸ್ಕರ ಏನು ಬೇಕಾದರೂ ಹೇಳಬಹುದು. ಸತ್ಯ ಎಲ್ಲರಿಗೂ ತಿಳಿದಿದೆ. ಅಖಿಲ ನಾಮಧಾರಿಗೌಡ ಜನಾಂಗವನ್ನು ಪ್ರವರ್ಗ 2 ಎ ಗೆ ಸೇರಿಸಲು ಕಾನೂನಿನ ತೊಡಕಿದೆ. ಈಗಲೂ ಹೇಳುತ್ತೇನೆ ಅರ್ಜಿ ಹಾಕಿ ಹೋರಾಟ ಮಾಡಿ‌ ಎಂದು ಹೆಚ್.ವಿಶ್ವನಾಥ್ ಸಲಹೆ ನೀಡಿದ್ದಾರೆ.

ಮೈತ್ರಿ ಸರ್ಕಾರದಲ್ಲಿ ನಾನು ಕ್ಲರ್ಕ್‌ನಂತೆ ಇದ್ದೆ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ