ಮಂಗಳೂರು, ಮೇ 05: ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧದ ಲೈಂಗಿಕ ಆರೋಪ ಪ್ರಕರಣದ ತನಿಖೆ ಚುರುಕುಗೊಂಡಿದೆ. ಹೆಚ್ಡಿ ರೇವಣ್ಣ (HD Revanna) ಬಂಧನ ಬೆನ್ನಲ್ಲೇ ಪ್ರಜ್ವಲ್ ಬೇಟೆ ಕೂಡ ಜೋರಾಗಿದೆ. ದೇಶದಿಂದ ದೇಶಕ್ಕೆ ಹಾರುತ್ತಿರುವ ಪ್ರಜ್ವಲ್ ರೇವಣ್ಣ ಹೆಡೆಮುರಿ ಕಟ್ಟಲು ಎಸ್ಐಟಿ ಬಲೆ ಸಿದ್ಧವಾಗಿದೆ. ಇಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಜ್ವಲ್ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಪ್ರಜ್ವಲ್ ಬಂಧನಕ್ಕೆ ಸದ್ಯ ಲುಕ್ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಹೀಗಾಗಿ ಏರ್ಪೋರ್ಟ್ ಇಮಿಗ್ರೇಶನ್ ಬಳಿಯೇ ಬಂಧನ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಮಂಗಳೂರು, ಕೊಚ್ಚಿ, ಗೋವಾ, ಬೆಂಗಳೂರಿನ ಯಾವುದೇ ಏರ್ಪೋರ್ಟ್ಗೆ ಬಂದರೂ ಅಲ್ಲೇ ಬಂಧನ ಪ್ರಕ್ರಿಯೆ ನಡೆಯಲಿದೆ. ಬಳಿಕ ಸ್ಥಳೀಯ ಠಾಣೆಗೆ ಕರೆದೊಯ್ಯುವ ಪೊಲೀಸರು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಂತರ ಪ್ರಜ್ವಲ್ರನ್ನು SIT ಅಧಿಕಾರಿಗಳು ಬೆಂಗಳೂರಿಗೆ ಕರೆತರಲಿದ್ದಾರೆ.
ಇದನ್ನೂ ಓದಿ: ಜೆಡಿಎಸ್ ಶಾಸಕ ಹೆಚ್ಡಿ ರೇವಣ್ಣ ಬಂಧನವಾಗಿದ್ದು ಯಾವ ಕೇಸ್ನಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ
ಸದ್ಯ ಇಂದು ಮಂಗಳೂರು ಏರ್ಪೋರ್ಟ್ಗೆ ಒಟ್ಟು 4 ವಿಮಾನ ಆಗಮಿಸಿವೆ. ಅಬುದಾಬಿಯಿಂದ ಈಗಷ್ಟೇ ಒಂದು ವಿಮಾನ ಲ್ಯಾಂಡ್ ಆಗಿದೆ. ಬೆಳಗ್ಗೆ 7.55ಕ್ಕೆ ದುಬೈನಿಂದ ಎರಡನೇ ವಿಮಾನ, ಸಂಜೆ 4.35ಕ್ಕೆ ದುಬೈನಿಂದ ಮಂಗಳೂರಿಗೆ 3ನೇ ವಿಮಾನ ಮತ್ತು ಸಂಜೆ 6.15ಕ್ಕೆ ಮಂಗಳೂರಿಗೆ ನಾಲ್ಕನೇ ವಿಮಾನ ಆಗಮಿಸಲಿವೆ.
ಇನ್ನು ಇದೆಲ್ಲದರ ನಡುವೆ ಹಾಸನದ ಆರ್.ಸಿ.ನಗರದಲ್ಲಿರುವ ಪ್ರಜ್ವಲ್ ರೇವಣ್ಣನ ಸರ್ಕಾರಿ ನಿವಾಸದಲ್ಲಿ ಎಸ್ಐಟಿ ಅಧಿಕಾರಿಗಳು ನಿನ್ನೆ ಸತತ 5 ಗಂಟೆಗಳ ಕಾಲ ಮಹಜರು ನಡೆಸಿದರು. ಪ್ರಕರಣ ದಾಖಲಾಗುತ್ತಿದ್ದಂತೆ ಪ್ರಜ್ವಲ್ ಪಿ.ಎ ಬಳಿಯಿದ್ದ ನಿವಾಸದ ಕೀ ವಶಕ್ಕೆ ಪಡೆದಿದ್ದ ಪೊಲೀಸರು ಇಬ್ಬರು ಸಂತ್ರಸ್ತೆಯರನ್ನ ಕರೆತಂದು ಅವರ ಸಮ್ಮುಖದಲ್ಲಿ ಮಹಜರು ನಡೆಸಿ ಮಹತ್ವದ ಮಾಹಿತಿಗಳನ್ನ ಕಲೆಹಾಕಿ ಬೆಂಗಳೂರಿಗೆ ಕರೆತಂದ್ದರು.
ಇದನ್ನೂ ಓದಿ: HD Revanna Arrest: ಕೊನೆಗೂ ಹೆಚ್ಡಿ ರೇವಣ್ಣ ಬಂಧನ; ಲೈಂಗಿಕ ದೌರ್ಜನ್ಯ, ಅಪಹರಣ ಪ್ರಕರಣದಲ್ಲಿ ಅರೆಸ್ಟ್
ಸದ್ಯ ದೇಶದಿಂದ ದೇಶಕ್ಕೆ ಹಾರುತ್ತಾ ತನಿಖೆಗೆ ಹಾಜರಾಗದೇ ಉಳಿದಿರುವ ಪ್ರಜ್ವಲ್ ಮೇಲೆ ಎಲ್ಲರ ಚಿತ್ತ ನೆಟ್ಟಿದ್ದು, ಅವರೂ ನೇರವಾಗಿ ಬಂದು ಸರೆಂಡರ್ ಆಗ್ತಾರಾ? ಅಥವಾ ಪೊಲೀಸರೇ ಪ್ರಜ್ವಲ್ರನ್ನ ಕರೆತರಲು ಏನಾದ್ರೂ ಕಾನೂನು ದಾರಿ ಹುಡುಕುತ್ತಾರಾ ಕಾದು ನೋಡ್ಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.