ಪ್ರಜ್ವಲ್​ ರೇವಣ್ಣಗೆ ಬಿಗ್ ಶಾಕ್: ಎಸ್‌ಐಟಿ ಕಸ್ಟಡಿ ಅವಧಿ ವಿಸ್ತರಿಸಿದ ಕೋರ್ಟ್, ಎಷ್ಟು ದಿನ?​

| Updated By: ರಮೇಶ್ ಬಿ. ಜವಳಗೇರಾ

Updated on: Jun 06, 2024 | 4:42 PM

ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಮತ್ತೆ ಕೋರ್ಟ್ ಶಾಕ್ ಕೊಟ್ಟಿದೆ. ಪ್ರಜ್ವಲ್ ರೇವಣ್ಣ ಅವರ ಎಸ್​ಐಟಿ ಕಸ್ಟಡಿ ಅವಧಿಯನ್ನು ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್​, ಮತ್ತಷ್ಟು ದಿನ ವಿಸ್ತರಣೆ ಮಾಡಿದೆ.

ಪ್ರಜ್ವಲ್​ ರೇವಣ್ಣಗೆ ಬಿಗ್ ಶಾಕ್: ಎಸ್‌ಐಟಿ ಕಸ್ಟಡಿ ಅವಧಿ ವಿಸ್ತರಿಸಿದ ಕೋರ್ಟ್, ಎಷ್ಟು ದಿನ?​
ಪ್ರಜ್ವಲ್ ರೇವಣ್ಣ
Follow us on

ಬೆಂಗಳೂರು, (ಜೂನ್ 06): ಹಾಸನ ಅಶ್ಲೀಲ ವಿಡಿಯೋ ಪೆನ್​ಡ್ರೈವ್​ ಪ್ರಕರಣಕ್ಕೆ (Hassan Pen drive Video Case:) ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್​ ರೇವಣ್ಣನ (Prajwal revanna) ಎಸ್‌ಐಟಿ ಕಸ್ಟಡಿ ಅವಧಿ ವಿಸ್ತರಣೆಯಾಗಿದೆ. ಇಂದಿಗೆ ಐಎಸ್​ಟಿ ಕಸ್ಟಡಿ ಮುಗಿದಿದ್ದರಿಂದ ಪ್ರಜ್ವಲ್​ ಅವರನ್ನು ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ಪ್ರಜ್ವಲ್ ರೇವಣ್ಣ ಅವರನ್ನು ಇನ್ನಷ್ಟು ವಿಚಾರಣೆ ನಡೆಸಬೇಕಿದೆ, ಹೀಗಾಗಿ ಅವರನ್ನು ಇನ್ನಷ್ಟು ದಿನಗಳ ಕಾಲ ಎಸ್​ಐಟಿ ವಶಕ್ಕೆ ನೀಡಬೇಕೆಂದು ಎಸ್​ಐಟಿ ಪರ ವಕೀಲರು ಮನವಿ ಮಾಡಿದರು. ಇದನ್ನು ಪರಿಗಣಿಸಿದ ಕೋರ್ಟ್​, ಪ್ರಜ್ವಲ್​ ರೇವಣ್ಣ ಎಸ್‌ಐಟಿ ಕಸ್ಟಡಿ ಅವಧಿಯನ್ನು ಜೂನ್ 10ರ ವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.

ಎಸ್​ಐಟಿ ಪರ ಅಶೋಕ್ ನಾಯಕ್ ವಾದ ಹೇಗಿತ್ತು?

ಪ್ರಕರಣದಲ್ಲಿ ತನಿಖೆ ಇನ್ನೂ ಮುಗಿದಿಲ್ಲ. ತನಿಖೆಗೆ ಸಿಕ್ಕ ಸಮಯ ಸಾಕಾಗಿಲ್ಲ. ಬಂಧನದ ನಂತರ ರೆಸ್ಟ್ ತೆಗೆದುಕೊಂಡರು. ವಿದೇಶದಲ್ಲಿದ್ದ ವೇಳೆ ಹಣ ಹೇಗೆ ಸಂದಾಯವಾಯಿತು ತಿಳಿದಿಲ್ಲ. ಈ ಬಗ್ಗೆಯೂ ಇನ್ನೂ ತನಿಖೆ ಆಗಬೇಕಿದೆ. ಮೊಬೈಲ್ ಬಗ್ಗೆಯೂ ಇನ್ನೂ ತನಿಖೆ ಆಗಬೇಕಿದೆ. ಕೆಲವು ಸಂತ್ರಸ್ತೆ,‌ಸಾಕ್ಚಿಗಳೊಂದಿಗೆ ಪ್ರಜ್ವಲ್ ನನ್ನು ಮುಖಾಮುಖಿ ಮಾಡಿಸಬೇಕಿದೆ, ನಾನು ಏನೂ ಮಾಡಿಲ್ಲ ಎಂದು ಪ್ರಜ್ವಲ್ ಹೇಳುತ್ತಿದ್ದಾರೆ. ಹೀಗಾಗಿ ತನಿಖರ ನಡೆಸಲು ಸಾಕಷ್ಟು ಸಮಯ ಸಿಗಲಿಲ್ಲ ಎಂದು ಸುಪ್ರೀಂ ಕೋರ್ಟ್​ನ ಒಂದು ತೀರ್ಪು ಉಲ್ಲೇಖಿಸಿ ಕಸ್ಟಡಿ ಅವಧಿ ವಿಸ್ತರಿಸಬೇಕೆಂದು ಎಸ್ಐಟಿ ಪರ ಎಸ್ ಪಿಪಿ ಅಶೋಕ್ ನಾಯಕ್ ಅವರು ವಾದ ಮಾಡಿದರು.

ಪ್ರಜ್ವಲ್ ಪರ ವಕೀಲ ಟಾಮಿ ಸೆಬಾಸ್ಟಿಯನ್ ವಾದ

ಬಳಿಕ ಪ್ರಜ್ವಲ್ ರೇವಣ್ಣ ಪರ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್ ವಾದ ಶುರು ಮಾಡಿದ್ದು, ಪ್ರಜ್ವಲ್ ವಿದೇಶಕ್ಕೆ ತೆರಳಿರುವುದು, ಹಣ ಹೇಗೆ ಸಂದಾಯವಾಯಿತು ಎಂಬುದು ತನಿಖೆಯ ವ್ಯಾಪ್ತಿಯಲ್ಲ. ಇದಕ್ಕೆ ಕಸ್ಟಡಿ ಪಡೆದು ತನಿಖೆಗೆ ಒಳಪಡಿಸುವ ಅಗತ್ಯವಿಲ್ಲ ಎಂದರು.

ಜಡ್ಜ್: 6 ದಿನದ ತನಿಖೆ ನಂತರವೂ ಕಸ್ಟಡಿ ಏಕೆ ಬೇಕು ಎಂದು ನ್ಯಾಯಾಧೀಶರು ಪ್ರಶ್ನಿಸಿದರು.

ಎಸ್ ಪಿಪಿ ಅಶೋಕ್ ನಾಯಕ್: ಮೊಬೈಲ್ ನಾಶಪಡಿಸಿರುವ ಬಗ್ಗೆ ತನಿಖೆ ನಡೆಸಬೇಕು. ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳ ಬಗ್ಗೆಯೂ ತನಿಖೆ ನಡೆಸಬೇಕಿದೆ. ಸಾಕ್ಷಿಗಳು ನೀಡಿರುವ ಮಾಹಿತಿ ಬಗ್ಗೆಯೂ ತನಿಖೆ ನಡೆಸಬೇಕಿದೆ. ಒಂದು ಮೊಬೈಲ್ ನಾಶಪಡಿಸಿದ್ದಾರೆಂಬ ಮಾಹಿತಿ ಇದೆ. ಬಳಕೆಯಾದ ಬೇರೆ ಮೊಬೈಲ್ ಬಗ್ಗೆಯೂ ತನಿಖೆ ನಡೆಸಬೇಕಿದೆ. ವಿದೇಶದಲ್ಲಿ ಇದ್ದಾಗ ಖರ್ಚಿಗೆ ಹಣ ಹೇಗೆ ತಲುಪಿತು ಎಂಬ ಬಗ್ಗೆ ತನಿಖೆ ಅಗತ್ಯವಿದೆ. ನನ್ನ ಮೊಬೈಲ್ ಇಲ್ಲ, ನನ್ನ ಪಿಎ ಮೊಬೈಲ್ ಉಪಯೋಗಿಸುತ್ತಿದ್ದೆ ಎಂದಿದ್ದಾರೆ. ಈ ಬಗ್ಗೆಯೂ ತನಿಖೆ ನಡೆಸಬೇಕಿದೆ. ಹೀಗಾಗಿ ಜೂನ್ 10 ರವರೆಗೆ ಎಸ್ಐಟಿ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು.

ಜಡ್ಜ್: ಕಸ್ಟಡಿ ಅವಧಿಯಲ್ಲಿ ಏನಾದರೂ ಸಮಸ್ಯೆ ಆಗಿದೆಯೇ ಎಂದು ಪ್ರಜ್ವಲ್​ ರೇವಣ್ಣಗೆ ಕೇಳಿದರು.
ಪ್ರಜ್ವಲ್ ರೇವಣ್ಣ: ಯಾವುದೇ ಸಮಸ್ಯೆ ಆಗಿಲ್ಲ ಎಂದು ಉತ್ತರಿಸಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 4:18 pm, Thu, 6 June 24