Prajwal Revanna: ಅಶ್ಲೀಲ ವಿಡಿಯೋ ಪ್ರಕರಣ: ಮ್ಯೂನಿಕ್​​ನಿಂದ ಬೆಂಗಳೂರಿನತ್ತ ಹೊರಟ ಹಾಸನ ಸಂಸದ ಪ್ರಜ್ವಲ್​ ರೇವಣ್ಣ

ಒಂದು ಕಡೆ ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ಪ್ರತಿಭಟನೆಗಳು ತೀವ್ರಗೊಂಡಿವೆ. ಮತ್ತೊಂದು ಕಡೆ ಮೇ 31ಕ್ಕೆ ಬರುತ್ತೇನೆ, ಬೆಳಗ್ಗೆ 10 ಗಂಟೆಗೆ ಎಸ್‌ಐಟಿಗೆ ಮುಂದೆ ಹಾಜರಾಗುತ್ತೇನೆ ಎಂದು ವಿಡಿಯೋ ಮೂಲಕ ಪ್ರತ್ಯಕ್ಷವಾಗಿ ಹೇಳಿಕೆ ನೀಡಿದ್ದರು. ಅದರಂತೆಯೇ ಇಂದು ಮ್ಯೂನಿಕ್​ನಿಂದ ಬೆಂಗಳೂರಿಗೆ ಹೊರಟ್ಟಿದ್ದಾರೆ. ಬೆಂಗಳೂರಿಗೆ ಬಂದಿಳಿಯುತ್ತಿದ್ದಂತೆ ಲುಕ್‌ಔಟ್ ನೋಟಿಸ್ ಆಧಾರದಲ್ಲಿ ಇಮಿಗ್ರೇಷನ್‌ನಲ್ಲಿ ವಶಕ್ಕೆ ಪಡೆಯಲಾಗುತ್ತೆ. ನಂತರ ಎಸ್ಐಟಿಯವರು ಪ್ರಜ್ವಲ್‌ನನ್ನ ಬಂಧಿಸಲಿದ್ದಾರೆ.

Prajwal Revanna: ಅಶ್ಲೀಲ ವಿಡಿಯೋ ಪ್ರಕರಣ: ಮ್ಯೂನಿಕ್​​ನಿಂದ ಬೆಂಗಳೂರಿನತ್ತ ಹೊರಟ ಹಾಸನ ಸಂಸದ ಪ್ರಜ್ವಲ್​ ರೇವಣ್ಣ
ಸಂಸದ ಪ್ರಜ್ವಲ್​ ರೇವಣ್ಣ
Follow us
ಗಂಗಾಧರ​ ಬ. ಸಾಬೋಜಿ
|

Updated on:May 30, 2024 | 4:22 PM

ಬೆಂಗಳೂರು, ಮೇ 30: ಲೈಂಗಿಕ ದೌರ್ಜನ್ಯ ಹಗರಣ ಪ್ರಕಣದಲ್ಲಿ ಇಷ್ಟು ದಿನ ತಲೆಮರೆಸಿಕೊಂಡಿದ್ದ ಹಾಸನ ಸಂಸದ ಪ್ರಜ್ವಲ್​ ರೇವಣ್ಣ (Prajwal Revanna) ಕೊನೆಗೂ ಬೆಂಗಳೂರಿನತ್ತ (Bangaluru) ಹೊರಟಿದ್ದಾರೆ. ಪ್ರಜ್ವಲ್ ಆಗಮಿಸುತ್ತಿರುವ LH764 ವಿಮಾನ ಮ್ಯೂನಿಕ್‌ ಏರ್‌ಪೋರ್ಟ್‌ನಿಂದ ಟೇಕಾಫ್ ಆಗಿದೆ. ಈಗಾಗಲೇ ಲಗೇಜ್ ಚೆಕ್ ಇನ್ ಮಾಡಿಸಿರುವ ಪ್ರಜ್ವಲ್​, ಬ್ಯುಸಿನೆಸ್​​ ಕ್ಲಾಸ್​​ ಪ್ರಯಾಣಿಕರ ಜೊತೆ ಕುಳಿತುಕೊಂಡಿದ್ದಾರೆ. ಪ್ರಜ್ವಲ್‌ ರೇವಣ್ಣ 4 ಬ್ಯಾಗ್ ತಂದಿರುವ ಮಾಹಿತಿ ಇದೆ. ಕೆಂಪೇಗೌಡ ಏರ್‌ಪೋರ್ಟ್‌ಗೆ ಮಧ್ಯರಾತ್ರಿ ಆಗಮಿಸಲಿದ್ದಾರೆ.

ದೇಶ ಬಿಟ್ಟುಹೋಗಿ ಬರೋಬ್ಬರಿ 31 ದಿನಗಳ ಬಳಿಕ ವಿಡಿಯೋ ಮಾಡಿ ಮೇ 31 ರಂದು ನಾನು ಎಸ್​ಐಟಿ ಮುಂದೆ ಹಾಜರಾಗುತ್ತೇನೆ ಎಂದು ಹೇಳಿದ್ದರು. ಆ ಮೂಲಕ ಮ್ಯೂನಿಕ್​ನಿಂದ ಬೆಂಗಳೂರಿಗೆ ಬರಲು ಟಿಕೆಟ್​ ಕೂಡ ಬುಕ್​ ಮಾಡಲಾಗಿತ್ತು. ಪ್ರಜ್ವಲ್​ ಬುಕ್ ಮಾಡಿರುವ ಟಿಕೆಟ್​ನ ಸಂಪೂರ್ಣ ಮಾಹಿತಿ ಟಿವಿ9ಗೆ ಲಭ್ಯವಾಗಿತ್ತು. ಲುಫ್ತಾನ್ಸಾ ಏರ್​​ಲೈನ್ಸ್ ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಬುಕ್ ಆಗಿತ್ತು. ಇದೀಗ ಬೆಂಗಳೂರಿನತ್ತ ಹೊರಟಿದ್ದಾರೆ.

ಇತ್ತೀಚೆಗೆ ಬೆಂಗಳೂರಿಗೆ ಬರುವುದಾಗಿ ಪ್ರಜ್ವಲ್​ ವಿಡಿಯೋ ಬಿಡುಗಡೆ ಮಾಡಿದ್ದರು. ಆದರೆ ಆತ ಎಲ್ಲಿಂದ ವಿಡಿಯೋ ಮಾಡಿದ್ದ ಎನ್ನುವುದು ಗೊತ್ತಾಗಿರಲಿಲ್ಲ. ಬಳಿಕ ಎಸ್​ಐಟಿ ಯೂರೋಪ್​​ನ ಹಂಗೇರಿಯ ಬುಡಾಪೆಸ್ಟ್​​ನಿಂದ ವಿಡಿಯೋ ಮಾಡಿದ್ದಾಗಿ ಪತ್ತೆ ಹಚ್ಚಿತ್ತು. ಮೊಬೈಲ್ ಐಪಿ ಅಡ್ರೆಸ್ ಟ್ರೇಸ್ ಮಾಡಿದಾಗ ಆತ 2 ದಿನ ಮೊದಲೇ ವಿಡಿಯೋ ರೆಕಾರ್ಡ್​ ಮಾಡಿಟ್ಟುಕೊಂಡು ಬಳಿಕ ರಿಲೀಸ್ ಮಾಡಿರುವುದು ಗೊತ್ತಾಗಿತ್ತು.

ಇದನ್ನೂ ಓದಿ: ಇಂದು ಮಧ್ಯರಾತ್ರಿ ಬೆಂಗಳೂರಿಗೆ ಪ್ರಜ್ವಲ್? ಬರುತ್ತಿದ್ದಂತೆ ಬಂಧನ, ನಾಳೆ ಜಾಮೀನು ಅರ್ಜಿ ವಿಚಾರಣೆ

ಇನ್ನು ಪ್ರಜ್ವಲ್​ ರೇವಣ್ಣಗೆ ಬಂಧನ ಭೀತಿ ಕಾಡುತ್ತಿರುವ ಮಧ್ಯೆ ವಿದೇಶದಲ್ಲಿದ್ದುಕೊಂಡೇ ನಿರೀಕ್ಷಣಾ ಜಾಮೀನು ಅರ್ಜಿ ಕೂಡ ಸಲ್ಲಿಸಿದ್ದಾರೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದ್ದು, ಸಿಐಡಿ ಠಾಣೆ ಕ್ರೈಮ್ ನಂ 20/2024 ಪ್ರಕರಣ, ಸೈಬರ್ ಕ್ರೈಮ್ ಠಾಣೆ ಕ್ರೈಮ್ ನಂ 2/2024, ಹೊಳೆನರಸೀಪುರ ಠಾಣೆ ಕ್ರೈಮ್ ನಂ 107/2024 ಈ 3 ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ನೀಡುವಂತೆ ಮನವಿ ಮಾಡಿದ್ದರು. ಆದರೆ ಎಸ್ಐಟಿಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಾಲಯ. ಅರ್ಜಿ ವಿಚಾರಣೆಯನ್ನ ಮೇ 31ಕ್ಕೆ ಮುಂದೂಡಿ ಆದೇಶ ಹೊರಡಿಸಿತ್ತು. ಆ ಮೂಲಕ ಪ್ರಜ್ವಲ್ ಬಂಧನ ಫಿಕ್ಸ್​ ಆಗಿದ್ದು, SIT ತಂಡ ಈಗಾಗಲೇ ಏರ್​ಪೋರ್ಟ್​ನಲ್ಲೇ ಬೀಡುಬಿಟ್ಟಿದೆ.

ಇದನ್ನೂ ಓದಿ: ಕೊನೆಗೂ ಬೆಂಗಳೂರಿಗೆ ಬರಲು ವಿಮಾನ ಟಿಕೆಟ್​ ಬುಕ್ ಮಾಡಿದ ಪ್ರಜ್ವಲ್, ಯಾವಾಗ ಬರ್ತಾರೆ ಗೊತ್ತಾ?

ಕೂಡಲೇ ಪ್ರಜ್ವಲ್‌ನನ್ನ ಬಂಧಿಸಬೇಕು ಅಂತಾ ಹಾಸನದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿದೆ. 113ಕ್ಕೂ ಹೆಚ್ಚು ಸಂಘಟನೆಗಳ 10 ಸಾವಿರರಕ್ಕೂ ಹೆಚ್ಚು ಜನರು ಹೋರಾಟಕ್ಕಿಳಿದಿದ್ದರು. ಡಿಸಿ ಕಚೇರಿಯ ಎದುರು ಬಹಿರಂಗ ಸಭೆ ನಡೆಸಿ ಪ್ರಜ್ವಲ್ ಬಂಧನಕ್ಕೆ ಒತ್ತಾಯಿಸಿದ್ದರು. ಇದಕ್ಕೂ ಮುನ್ನ ಹಾಸನದ ಹೇಮಾವತಿ ಪ್ರತಿಮೆಯಿಂದ ಡಿಸಿ ಕಚೇರಿವರೆಗೆ ಬೃಹತ್ ಮೆರವಣಿಗೆ ನಡೆಸಿದ ಪ್ರಜ್ವಲ್ ಬಂಧನಕ್ಕೆ ಆಗ್ರಹಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:14 pm, Thu, 30 May 24