AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದು ಮಧ್ಯರಾತ್ರಿ ಪ್ರಜ್ವಲ್ ಬೆಂಗಳೂರಿಗೆ; ಏ.21ರಿಂದ ಈವರೆಗೆ ಏನೇನಾಯ್ತು? ಕೇಸ್​ನ ಸಂಪೂರ್ಣ ಡಿಟೇಲ್ಸ್​ ಇಲ್ಲಿದೆ

Prajwal Video Case Timeline: ದೇಶಾದ್ಯಂತ ಸುದ್ದಿಯಾಗಿದ್ದ ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಅವರದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ದೇಶ ಬಿಟ್ಟು ಹೋಗಿದ್ದ ಅವರು, ಮೇ.27 ರಂದು ವಿಡಿಯೋ ಮೂಲಕ ಪ್ರತ್ಯಕ್ಷವಾಗಿ ಮೇ.31 ರಂದು ಎಸ್​ಐಟಿ ಮುಂದೆ ಹಾಜರಾಗುವುದಾಗಿ ಹೇಳಿದ್ದರು. ಅದರಂತೆ ಇಂದು(ಮೇ.30) ಮಧ್ಯರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಇಂದು ಮಧ್ಯರಾತ್ರಿ ಪ್ರಜ್ವಲ್ ಬೆಂಗಳೂರಿಗೆ; ಏ.21ರಿಂದ ಈವರೆಗೆ ಏನೇನಾಯ್ತು? ಕೇಸ್​ನ ಸಂಪೂರ್ಣ ಡಿಟೇಲ್ಸ್​ ಇಲ್ಲಿದೆ
ಬೆಂಗಳೂರಿಗೆ ಪ್ರಜ್ವಲ್​​ ರೇವಣ್ಣ
ಕಿರಣ್ ಹನುಮಂತ್​ ಮಾದಾರ್
ಕಿರಣ್ ಹನುಮಂತ್​ ಮಾದಾರ್|

Updated on: May 30, 2024 | 4:19 PM

Share

ಬೆಂಗಳೂರು\ಹಾಸನ, ಮೇ.30: ಹಾಸನ(Hassan) ಸಂಸದ ಪ್ರಜ್ವಲ್​​ ರೇವಣ್ಣ ಅವರದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ (Prajwal Revanna) ವಿದೇಶಕ್ಕೆ ಹೋಗಿ ತಲೆಮರೆಸಿಕೊಂಡಿದ್ದರು. ಇದಾದ ಒಂದು ತಿಂಗಳ ಬಳಿಕ ಅಂದರೆ ಮೇ.27 ರಂದು ವೀಡಿಯೋ ಹೇಳಿಕೆ ಮೂಲಕ ಪ್ರತ್ಯಕ್ಷವಾಗಿ, ತಮ್ಮ ಮೇಲಿನ ಆರೋಪವನ್ನು ಸಂಪೂರ್ಣವಾಗಿ ಅಲ್ಲಗಳೆದಿದ್ದರು.

ಇದರ ಜೊತೆಗೆ ಮೇ 31ರ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಎಸ್ ಐಟಿ ಎದುರು ಹಾಜರಾಗುತ್ತೇನೆ. ಜೊತೆಗೆ ಈ ಪ್ರಕರಣವನ್ನು ಕಾನೂನಿನ ಮೂಲಕವೇ ಆರೋಪಗಳನ್ನ ಎದುರಿಸುತ್ತೇನೆ ಎಂದು ಸಮಜಾಯಿಷಿ ನೀಡಿದ್ದರು. ಮೊದಲು ಹಾಸನದಲ್ಲಿ ಪೆನ್​ಡ್ರೈವ್​ ಹರಿದಾಡಿದ್ದರಿಂದ ಹಿಡಿದು ಇಲ್ಲಿಯವರೆಗೆ ಏನೆಲ್ಲಾ ಬೆಳವಣಿಗೆಗಳು ನಡೆದವು ಎನ್ನುವ ಕಂಪ್ಲೀಟ್ ಟೈಮ್​ಲೈನ್​ ಇಲ್ಲಿದೆ.

ಇದನ್ನೂ ಓದಿ:ಇಂದು ಮಧ್ಯರಾತ್ರಿ ಬೆಂಗಳೂರಿಗೆ ಪ್ರಜ್ವಲ್? ಬರುತ್ತಿದ್ದಂತೆ ಬಂಧನ, ನಾಳೆ ಜಾಮೀನು ಅರ್ಜಿ ವಿಚಾರಣೆ

ಪ್ರಜ್ವಲ್​ ರೇವಣ್ಣ ಕೇಸ್​ನ ಟೈಮ್​ಲೈನ್​ ಇಲ್ಲಿದೆ

  • ಎಪ್ರಿಲ್ 21 ಸಂಜೆ ಹಾಸನದಲ್ಲಿ ಹರಿದಾಡಿದ ಪೆನ್ ಡ್ರೈವ್ ಸುದ್ದಿ.
  • ಎಪ್ರಿಲ್ 22ರಂದು ಆಯ್ದ ಕೆಲ ವಿಡಿಯೋಗಳು ಮೊಬೈಲ್ ಮತ್ತು ವಾಟ್ಸಪ್​ನಲ್ಲಿ ವೈರಲ್.
  • ಎಪ್ರಿಲ್ 23 ಮತ್ತಷ್ಟು ವಿಡಿಯೋಗಳು ಮೊಬೈಲ್ ಹಾಗೂ ವಾಟ್ಸಪ್ ಮೂಲಕ ಶೇರ್ ಮಾಡಲಾಗಿತ್ತು.
  • ಎಪ್ರಿಲ್ 23ರ ಸಂಜೆ ಹಾಸನದ ಸಿಇಎನ್ ಪೊಲೀಸ್ ಠಾಣೆಯಲ್ಲಿ ನವೀನ್ ಗೌಡ ಸೇರಿ ಹಲವರ ವಿರುದ್ದ ವಿಡಿಯೋ ಹಂಚಿಕೆ ವಿಚಾರವಾಗಿ ಜೆಡಿಎಸ್​ನಿಂದ ದೂರು.
  • ಏಪ್ರಿಲ್ 26ರ ಬೆಳಿಗ್ಗೆ 8 ಗಂಟೆಗೆ ಹೊಳೆನರಸೀಪುರದ ಹರದನಹಳ್ಳಿಯಲ್ಲಿ ಮನೆ ದೇವರು ಏವೇಶ್ವರನಿಗೆ ಪೂಜೆ ಸಲ್ಲಿಸಿದ್ದ ಪ್ರಜ್ವಲ್ 9-30ಕ್ಕೆ ಪಡುವಲಹಿಪ್ಪೆಯಲ್ಲಿ ಏಕಾಂಗಿಯಾಗಿ ಮತಚಲಾವಣೆ ಮಾಡಿದ್ದರು.
  • ಎಪ್ರಿಲ್ 26ರ ಸಂಜೆ ಕೆ ಆರ್ ನಗರದಲ್ಲಿ ಹತ್ತಿರದ ಸಂಬಂಧಿ ಸಾವಿಗೆ ಹೋಗಿ ಅಲ್ಲಿಂದ ವಾಪಸ್​.
  • ಏಪ್ರಿಲ್ 26ರ ಮದ್ಯರಾತ್ರಿ ಹೊಳೆನರಸೀಪುರಿಂದ ಬೆಂಗಳೂರಿಗೆ ಪಯಣ
  • ಎಪ್ರಿಲ್ 27ರ ಬಳಗಿನ ಜಾವ ಬೆಂಗಳೂರು ಅಂತಾರಾಷ್ಟ್ರಿಯ ವಿಮಾನ ನಿಲ್ದಾಣದಿಂದ ಜರ್ಮನಿಗೆ ಪ್ರಯಾಣ.
  • ವಿಡಿಯೋ ವೈರಲ್ ಸಂಬಂಧ ರಾಜ್ಯ ಮಹಿಳಾ ಆಯೋಗದಿಂದ ತನಿಖೆ ನಡೆಸುವ ಸಂಬಂಧ ರಾಜ್ಯ ಸರ್ಕಾರಕ್ಕೆ ಪತ್ರ.
  • ಎಪ್ರಿಲ್ 27ರ ಸಂಜೆ ಸಿಎಂ ಸಿದ್ದರಾಮಯ್ಯ ಅವರು ಪ್ರಜ್ವಲ್ ವಿಚಾರವಾಗಿ ಮತ್ತು ವಿಡಿಯೋ ಹಂಚಿಕೆ ವಿಚಾರವಾಗಿ ಎಡಿಜಿಪಿ ಬಿಕೆ ಸಿಂಗ್ , ಎಸ್ ಪಿ ಗಳಾದ ಸೀಮಾ ಲಾಟ್ಕರ್ ಮತ್ತು ಸುಮನಾ ಡಿ ಪೆನ್ನೆಕರ್ ನೇತೃತ್ವದಲ್ಲಿ ಎಸ್ ಐ ಟಿ ರಚನೆ.
  • ಏಪ್ರಿಲ್ 28ಕ್ಕೆ ಪ್ರಜ್ವಲ್ ರೇವಣ್ಣ ವಿರುದ್ದ ಹೊಳೆನರಸೀಪುರ ನಗರ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಪ್ರಕರಣ ದಾಖಲು.
  • ಏಪ್ರಿಲ್ 28ರಂದು  ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆ ಯಲ್ಲಿ ಪ್ರಜ್ವಲ್ ರೇವಣ್ಣ, ಮತ್ತು ರೇವಣ್ಣ ವಿರುದ್ದ ಮಹಿಳೆ ಒರ್ವಳಿಂದ ತನಗೆ ಲೈಂಗಿಕ ದೌರ್ಜನ್ಯ ಆಗಿದೆ ಎಂದು ದೂರು. ದೂರಿನ ಅನ್ವಯ ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆ ಯಲ್ಲಿ ಇಬ್ಬರ ವಿರುದ್ದ ಕೇಸ್ ದಾಖಲು.
  • ಏಪ್ರಿಲ್ 28ಕ್ಕೆ ಪ್ರಕರಣದ ಸಂಬಂಧ ತನಿಖೆಗಗಾಗಿ ಎಸ್ ಐಟಿ ರಚನೆ ಮಾಡಿ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ.
  • ಏಪ್ರಿಲ್ 29ಕ್ಕೆ ವಿಚಾರಣೆಗೆ ಹಾಜರಾಗುವಂತೆ ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್​ ರೇವಣ್ಣಗೆ ಎಸ್ ಐಟಿ ನೊಟೀಸ್. ಸಂತ್ರಸ್ತರ ಹೇಳಿಕೆ ಆಧಾರದ ಮೇಲೆ ಮೇ 1ಕ್ಕೆ ಪ್ರಜ್ವಲ್ ರೇವಣ್ಣ ವಿರುದ್ದ ಅತ್ಯಾಚಾರ ಕೇಸ್ ದಾಖಲು.
  • ಮೇ 1ರಂದು ತಮ್ಮ ವಕೀಲರ ಮೂಲಕ ವಿಚಾರಣೆಗೆ ಹಾಜರಾಗಲು ಏಳುದಿನ ಸಮಯಾವಕಾಶ ಕೇಳಿದ್ದ ಪ್ರಜ್ವಲ್.
  • ಮೇ 1ರಂದು ಪ್ರಜ್ವಲ್ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದು ಮಾಡಲು ಸಿಎಂ ಸಿದ್ದರಾಮಯ್ಯರಿಂದ ಪ್ರಧಾನಿ ನರೇಂದ್ರ ಮೋದಿಗೆ ಪತ್ರ.
  • ಮೇ 7ಕ್ಕೆ ಇಂಟರ್ ಪೋಲ್ ನಿಂದ ಪ್ರಜ್ವಲ್ ವಿರುದ್ದ ಬ್ಲೂ ಕಾರ್ನರ್ ನೊಟೀಸ್ ಜಾರಿ.
  • ಮೇ 15ಕ್ಕೆ ಜರ್ಮನಿಯ ಮುನಿಚ್ ನಿಂದ ವಿಮಾನ ಟಿಕೆಟ್​ ಬುಕ್ ಮಾಡಿದ್ದ ಪ್ರಜ್ವಲ್, ಟಿಕೆಟ್​ ರದ್ದೂ ಮಾಡದೆ ಭಾರತಕ್ಕೂ ಮರಳದೆ ನಿಗೂಡವಾಗೇ ಉಳಿದ್ದರು.
  • ಮೇ 10ರಂದೇ ದುಬೈಗೆ ತೆರಳಿ ಅಪಾರ್ಟ್ ಮೆಂಟ್ ನಲ್ಲಿ ನೆಲೆಸಿರೋ ವದಂತಿ.
  • ಮೇ18ಕ್ಕೆ ಟ್ರೈನ್ ಮೂಲಕ ಇಂಗ್ಲೆಂಡ್ ಗೆ ತೆರಳಿರೋ ಬಗ್ಗೆ ಸುದ್ದಿ ಹರಿದಾಡಿತ್ತು.
  • ಮೇ 22ಕ್ಕೆ ಪ್ರಜ್ವಲ್ ರೇವಣ್ಣ ಪಾಸ್​ಪಾರ್ಟ್​ ರದ್ದತಿಗೆ ಬಗ್ಗೆ ಸಿಎಂ ಸಿದ್ದರಾಮಯ್ಯ ಎರಡನೇ ಬಾರಿಗೆ ಕೇಂದ್ರಕ್ಕೆ ಪತ್ರ.
  • ಮೇ 23ರಂದು ವಿದೇಶಾಂಗ ಸಚಿವಾಲಯದಿಂದ ಪ್ರಜ್ವಲ್​ ಪ್ರಜ್ವಲ್ ಶೋಕಾಸ್ ನೊಟೀಸ್ ಜಾರಿ.
  • ಮೇ 27 ರಂದು ಒಂದು ತಿಂಗಳ ಬಳಿಕ ವಿದೇಶದಲ್ಲಿದ್ದುಕೊಂಡೇ ವೀಡಿಯೋ ಹೇಳಿಕೆ ಮೂಲಕ ಪ್ರಜ್ವಲ್ ಪ್ರತ್ಯಕ್ಷ.
  • ಇಂದು (ಮೇ.30) ಮಧ್ಯರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಇನ್ನು ಬೃಹತ್ ಲೈಂಗಿಕ ಹಗರಣದ ಆರೋಪಕ್ಕೆ ಗುರಿಯಾಗಿದ್ದ ಪ್ರಜ್ವಲ್ ರೇವಣ್ಣ ಅವರು ಇಂದು(ಮೇ.30) ಮಧ್ಯರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದು, ಎಸ್​ಐಟಿ ಮುಂದೆ ಹಾಜರಾಗಲಿದ್ದಾರೆ. ಈಗಾಗಲೇ ಒಮ್ಮೆ ಏಳು ದಿನ ಸಮಯ ಕೇಳಿ ಮಾತು ತಪ್ಪಿರುವ ಪ್ರಜ್ವಲ್, ಇಂದು ಎಸ್​ಐಟಿ ಮುಂದೆ ಶರಣಾಗಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us
ಕಿರಣ್ ಹನುಮಂತ್​ ಮಾದಾರ್
ಕಿರಣ್ ಹನುಮಂತ್​ ಮಾದಾರ್

ಹುಟ್ಟೂರು- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಿನಕಟ್ಟ, ಶಿರಸಿಯಲ್ಲಿ ಬಿ.ಎ ಪತ್ರಿಕೋಧ್ಯಮ ಮುಗಿಸಿ, ವಾರ್ತಾ ಇಲಾಖೆಯಲ್ಲಿ ಒಂದು ವರ್ಷದ ತರಭೇತಿ ಪಡೆದು, ಟಿವಿ9 ಡಿಜಿಟಲ್​ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ.

ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್
ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್