AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರವಣಬೆಳಗೊಳ ದಿಗಂಬರ ಜೈನ ಮಠಕ್ಕೆ ನೂತನ ಭಟ್ಟಾರಕರಾಗಿ ಚಾರೂಕೀರ್ತಿ ಆಗಮಕೀರ್ತಿ ಶ್ರೀ ನೇಮಕ

ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಜೈನಕಾಶಿ ಎಂದೇ ಕರೆಯಲ್ಪಡುವ ಹಾಸನ ಜಿಲ್ಲೆಯ ಶ್ರವಣಬೆಳಗೊಳದ ದಿಗಂಬರ ಜೈನ ಮಠದ ನೂತನ ಭಟ್ಟಾರಕರಾಗಿ ಶ್ರೀ ಚಾರೂಕೀರ್ತಿ ಆಗಮಕೀರ್ತಿ ಭಟ್ಟಾಕರ ಸ್ವಾಮೀಜಿ ನೇಮಕಗೊಂಡಿದ್ದಾರೆ.

ಶ್ರವಣಬೆಳಗೊಳ ದಿಗಂಬರ ಜೈನ ಮಠಕ್ಕೆ ನೂತನ ಭಟ್ಟಾರಕರಾಗಿ ಚಾರೂಕೀರ್ತಿ ಆಗಮಕೀರ್ತಿ ಶ್ರೀ  ನೇಮಕ
ಶ್ರೀ ಚಾರೂಕೀರ್ತಿ ಆಗಮಕೀರ್ತಿ ಭಟ್ಟಾಕರ ಸ್ವಾಮೀಜಿ
ವಿವೇಕ ಬಿರಾದಾರ
|

Updated on:Mar 27, 2023 | 7:23 PM

Share

ಶ್ರವಣಬೆಳಗೊಳ: ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಜೈನಕಾಶಿ (Jain Kashi) ಎಂದೇ ಕರೆಯಲ್ಪಡುವ ಹಾಸನ (Hassan) ಜಿಲ್ಲೆಯ ಶ್ರವಣಬೆಳಗೊಳದ (Shravanabelagola) ದಿಗಂಬರ ಜೈನ ಮಠದ ನೂತನ ಭಟ್ಟಾರಕರಾಗಿ ಶ್ರೀ ಚಾರೂಕೀರ್ತಿ ಆಗಮಕೀರ್ತಿ ಭಟ್ಟಾಕರ ಸ್ವಾಮೀಜಿ (Charukeerthi Agam Kirti Swamiji) ನೇಮಕಗೊಂಡಿದ್ದಾರೆ. ಜೈನ ಮಠದ 20 ನೇ ಭಟ್ಟಾರಕರಾಗಿ, ಇಂದು (ಮಾ.27) ರಾಜ್ಯದ ಜೈನ ಮಠಗಳ ಭಟ್ಟಾರಕರ ಸಮ್ಮುಖದಲ್ಲಿ ಶ್ರೀ ಚಾರೂಕೀರ್ತಿ ಆಗಮಕೀರ್ತಿ ಭಟ್ಟಾಕರ ಪಟ್ಟಾಭಿಷೇಕ ನೆರವೇರಿತು.

4 ತಿಂಗಳ ಹಿಂದೆ ಕ್ಷುಲ್ಲಕ ದೀಕ್ಷೆ

ನಾಲ್ಕು ತಿಂಗಳ ಹಿಂದೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಆಗಮ ಇಂದ್ರ ಇವರಿಗೆ ಕ್ಷುಲ್ಲಕ ದೀಕ್ಷೆ ನೀಡುವ ಮೂಲಕ ಆಗಮಕೀರ್ತಿ ಎಂದು ನಾಮಕರಣ ಮಾಡಿದ್ದರು. ತಮ್ಮ ಮಠದಲ್ಲಿಯೇ ಅವರಿಗೆ ಆಶ್ರಯ ನೀಡಿ ಮಠದ ಪರಂಪರೆ, ಸಂಸ್ಕಾರ, ಕ್ಷೇತ್ರದ ಪರಿಚಯ ಮಾಡಿಸಿದ್ದರು. ಉತ್ತರಾಧಿಕಾರಿ ನೇಮಕ ಮಾಡಿದ ಮೂರು ತಿಂಗಳಲ್ಲಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಕಾಲಿಕವಾಗಿ ಜಿನೈಕ್ಯರಾದರು. ಶ್ರೀಮಠದ ಭಟ್ಟಾರಕ ಪರಂಪರೆ ಕ್ರಿ.ಶ.904 ರಿಂದಲೂ ಬೆಳೆದು ಬಂದಿದೆ.

ಆಗಮ ಶ್ರೀಗಳ ಪರಿಚಯ

ಇವರು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಅಶೋಕ್ ಕುಮಾರ್ ಇಂದಿರಾ ಮತ್ತು ಅನಿತಾ ಅಶೋಕ್ ಕುಮಾರ್ ದಂಪತಿಗಳ ಪುತ್ರ. 2001ರ ಫೆಬ್ರವರಿ 26ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಸಾಗರ ಪಟ್ಟಣದ ರೋಟರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ಎಂಜೆಎನ್ ಪೈ ಪ್ರೌಢಶಾಲೆಯಲ್ಲಿ ಮತ್ತು ಪದವಿಪೂರ್ವ ಶಿಕ್ಷಣವನ್ನು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿದರು. ಪದವಿ ಶಿಕ್ಷಣವನ್ನು ಎಲ್​ಬಿ ಮತ್ತು ಎಸ್ ಬಿ ಎಸ್ ಕಾಲೇಜು ಸಾಗರದಲ್ಲಿ ಪಡೆದಿದ್ದಾರೆ. ಗಣಕಯಂತ್ರ ತರಬೇತಿಯನ್ನು ಪಡೆದಿರುವ ಇವರು ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಯನ್ನು ಸುಲಲಿತವಾಗಿ ಮಾತನಾಡುತ್ತಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:23 pm, Mon, 27 March 23

ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ
ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ
Siddaramaiah Press Conference: ಸಿದ್ದರಾಮಯ್ಯ ಸುದ್ದಿಗೋಷ್ಠಿ ಲೈವ್​
Siddaramaiah Press Conference: ಸಿದ್ದರಾಮಯ್ಯ ಸುದ್ದಿಗೋಷ್ಠಿ ಲೈವ್​