CM BS Yediyurappa: ಯಡಿಯೂರಪ್ಪಗೆ ಜೆಡಿಎಸ್ ಪರೋಕ್ಷ ಆಹ್ವಾನ; ಪ್ರಾದೇಶಿಕ ಪಕ್ಷ ಕಟ್ಟಲು ಶಾಸಕ ಲಿಂಗೇಶ್ ಸಲಹೆ

ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಬಾರದು. ಬದಲಾವಣೆ ಮಾಡಿದರೆ ದೇವೇಗೌಡರು, ಯಡಿಯೂರಪ್ಪ ಸೇರಿ ಪ್ರಾದೇಶಿಕ ಪಕ್ಷ ಕಟ್ಟಬೇಕು. ಪಕ್ಷಗಳಿಂದ ಹೊರಬರುವ ಎಲ್ಲಾ ಶಾಸಕರನ್ನು ಪ್ರಾದೇಶಿಕ ಪಕ್ಷಕ್ಕೆ ಸೇರಿಸಿಕೊಳ್ಳಬೇಕು. ಪಕ್ಷ ಅಧಿಕಾರಿಗಳ ತಂದು ಉತ್ತಮ ಆಡಳಿತ ನೀಡಬೇಕು ಎಂದು ಹೇಳಿರುವ ಜೆಡಿಎಸ್ ಶಾಸಕ ಲಿಂಗೇಶ್ ಸಿಎಂ ಯಡಿಯೂರಪ್ಪರನ್ನ ಪರೋಕ್ಷವಾಗಿ ಜೆಡಿಎಸ್ ಪಕ್ಷಕ್ಕೆ ಆಹ್ವಾನಿಸಿದ್ದಾರೆ.

CM BS Yediyurappa: ಯಡಿಯೂರಪ್ಪಗೆ ಜೆಡಿಎಸ್ ಪರೋಕ್ಷ ಆಹ್ವಾನ; ಪ್ರಾದೇಶಿಕ ಪಕ್ಷ ಕಟ್ಟಲು ಶಾಸಕ ಲಿಂಗೇಶ್ ಸಲಹೆ
ಬಿ.ಎಸ್​. ಯಡಿಯೂರಪ್ಪ ಮತ್ತು ಎಚ್​. ಡಿ.ದೇವೇಗೌಡ
Follow us
TV9 Web
| Updated By: guruganesh bhat

Updated on:Jul 22, 2021 | 4:07 PM

ಹಾಸನ: ಅವಧಿ ಮುಗಿಯುವವರೆಗೂ ಬಿ.ಎಸ್.ಯಡಿಯೂರಪ್ಪ (CM BS Yediyurappa) ಮುಖ್ಯಮಂತ್ರಿಯಾಗಿ ಮುಂದುವರೆಯಲಿ. ಸಿಎಂ ಯಡಿಯೂರಪ್ಪ ಅವರನ್ನ ಬದಲಾವಣೆ ಮಾಡಬಾರದು. ಬದಲಾವಣೆ ಮಾಡಿದರೆ ಬಿ.ಎಸ್.ಯಡಿಯೂರಪ್ಪ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡ (HD Devegowda) ಅವರ ಜತೆ ಸೇರಿ ಪ್ರಬಲ ಪ್ರಾದೇಶಿಕ ಪಕ್ಷ ಕಟ್ಟಲಿ (Karnataka Politics)  ಎಂದು ಬೇಲೂರಿನಲ್ಲಿ ಜೆಡಿಎಸ್ ಶಾಸಕ ಲಿಂಗೇಶ್ ಸಲಹೆ ನೀಡಿದ್ದಾರೆ.

ಇತ್ತೀಚಿನ ರಾಜಕೀಯ ಬೆಳವಣಿಗೆ ಬೇಸರ ತರುತ್ತಿದೆ. ಎರಡು ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳನ್ನು ಮುಗಿಸುತ್ತಿವೆ. ಸಂಪೂರ್ಣ ಅಧಿಕಾರವಿದ್ದರೆ ಯಾರಾದರೂ ಸಾಧನೆ ಮಾಡಬಹುದು. ಕೇಂದ್ರ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ನಾಯಕತ್ವ ಬದಲಾವಣೆ ತಂದು ರಾಜಕೀಯ ದೊಂಬರಾಟ ಸೃಷ್ಟಿಸಿದ್ದಾರೆ. ಸೈದ್ಧಾಂತಿಕವಾಗಿ ನಾವು ಬಿಜೆಪಿಯನ್ನು ವಿರೋಧಿಸುತ್ತೇವೆ. ಆದರೆ ವೈಯುಕ್ತಿಕವಾಗಿ ಅಧಿಕಾರ ಮುಗಿಯುವವರೆಗೂ ಯಡಿಯೂರಪ್ಪ ಅವರನ್ನು ಮುಂದುವರಿಸಬೇಕು. ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಬಾರದು. ಬದಲಾವಣೆ ಮಾಡಿದರೆ ದೇವೇಗೌಡರು, ಯಡಿಯೂರಪ್ಪ ಸೇರಿ ಪ್ರಾದೇಶಿಕ ಪಕ್ಷ ಕಟ್ಟಬೇಕು. ಪಕ್ಷಗಳಿಂದ ಹೊರಬರುವ ಎಲ್ಲಾ ಶಾಸಕರನ್ನು ಪ್ರಾದೇಶಿಕ ಪಕ್ಷಕ್ಕೆ ಸೇರಿಸಿಕೊಳ್ಳಬೇಕು. ಪಕ್ಷ ಅಧಿಕಾರಿಗಳ ತಂದು ಉತ್ತಮ ಆಡಳಿತ ನೀಡಬೇಕು ಎಂದು ಹೇಳಿರುವ ಜೆಡಿಎಸ್ ಶಾಸಕ ಲಿಂಗೇಶ್ ಸಿಎಂ ಯಡಿಯೂರಪ್ಪರನ್ನ ಪರೋಕ್ಷವಾಗಿ ಜೆಡಿಎಸ್ ಪಕ್ಷಕ್ಕೆ ಆಹ್ವಾನಿಸಿದ್ದಾರೆ.

ಇದನ್ನೂ ಓದಿ: 

BS Yediyurappa: ಕರ್ನಾಟಕದಲ್ಲಿ ಯಡಿಯೂರಪ್ಪ ನಂತರ ಬಿಜೆಪಿ ನಾಯಕ ಇವರೇನಾ? ಇಷ್ಟಕ್ಕೂ ಬಿಎಸ್​ವೈ ರಾಜೀನಾಮೆಗೆ ಕಾರಣವೇನು?

ಸಿಎಂ ಯಡಿಯೂರಪ್ಪ ಕೈಗೊಂಡ ನಿರ್ಧಾರ ಮತ್ತು ಹೇಳಿಕೆ ನನಗೆ ಸಮಾಧಾನ, ಖುಷಿ ತಂದಿದೆ: ಸಚಿವ ಈಶ್ವರಪ್ಪ

(CM Yediyurappa invited to JDS party to build a regional party by JDS MLA Lingesh in Hassan)

Published On - 4:02 pm, Thu, 22 July 21