ಸಿಎಂ ಯಡಿಯೂರಪ್ಪ ಕೈಗೊಂಡ ನಿರ್ಧಾರ ಮತ್ತು ಹೇಳಿಕೆ ನನಗೆ ಸಮಾಧಾನ, ಖುಷಿ ತಂದಿದೆ: ಸಚಿವ ಈಶ್ವರಪ್ಪ

ಯಡಿಯೂರಪ್ಪ ನಾಲ್ಕು ಮಂದಿ ಶಾಸಕರಿದ್ದಾಗಿನಿಂದ ಪಕ್ಷ ಕಟ್ಟಿ ಬೆಳೆಸಿದವರು. ರೈತ ರೈತ ರೈತ ಅಂತ ಜಪ ಮಾಡಿದವರು ದೇವೇಗೌಡರನ್ನು ಬಿಟ್ಟರೆ ಯಡಿಯೂರಪ್ಪ ಮಾತ್ರ. ಸಿಎಂ ವಿರುದ್ಧ ಮೊದಲು ಮಾತಾಡಿದ್ದೇ ಲಿಂಗಾಯತ ಶಾಸಕರು. ಆಗ ಯಾಕೆ ಸ್ವಾಮೀಜಿಗಳು ಅಂಥ ಶಾಸಕರಿಗೆ ಬುದ್ಧಿ ಹೇಳಲಿಲ್ಲ?: ಸಚಿವ ಕೆ ಎಸ್ ಈಶ್ವರಪ್ಪ

ಸಿಎಂ ಯಡಿಯೂರಪ್ಪ ಕೈಗೊಂಡ ನಿರ್ಧಾರ ಮತ್ತು ಹೇಳಿಕೆ ನನಗೆ ಸಮಾಧಾನ, ಖುಷಿ ತಂದಿದೆ: ಸಚಿವ ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ ಮತ್ತು ಬಿ ಎಸ್ ಯಡಿಯೂರಪ್ಪ

ಬೆಂಗಳೂರು: ಸಿಎಂ ಯಡಿಯೂರಪ್ಪ (CM BS Yediyurappa)  ಕೈಗೊಂಡ ನಿರ್ಧಾರ, ಹೇಳಿಕೆ ನನಗೆ ಸಮಾಧಾನ ಮತ್ತು ಖುಷಿ ತಂದಿದೆ. ಅವರು ರಾಜೀನಾಮೆ ಕೊಡ್ತಾರೆ ಎಂದು ಯಾರೂ ಹೇಳಿಲ್ಲ. ಅದು ಯಡಿಯೂರಪ್ಪ, ಹೈಕಮಾಂಡ್ ನಡುವಿನ ವಿಚಾರ. ಅದನ್ನು ಅವರಿಬ್ಬರೇ ತೀರ್ಮಾನ ಮಾಡ್ತಾರೆ. ಅವರು ಇರ್ತಾರೋ ಬಿಡ್ತಾರೋ ಅದೆಲ್ಲ ಮುಂದಿನ ವಿಚಾರ. ಆ ಬಗ್ಗೆ ಮಾತಾಡೋಕೆ ಮಧ್ಯದಲ್ಲಿ ನಾವೂ ನೀವು ಯಾರು? ಆದರೆ ಸಿಎಂ ಬಿ. ಎಸ್. ಯಡಿಯೂರಪ್ಪ ಹೇಳಿದ ಮಾತು ಸರಿಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ (KS Eshwarappa) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಸ್ವಾಮೀಜಿಗಳ ವಿರುದ್ಧವೂ ಸಚಿವ ಕೆ.ಎಸ್‌.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಯಡಿಯೂರಪ್ಪ ನಾಲ್ಕು ಮಂದಿ ಶಾಸಕರಿದ್ದಾಗಿನಿಂದ ಪಕ್ಷ ಕಟ್ಟಿ ಬೆಳೆಸಿದವರು. ರೈತ ರೈತ ರೈತ ಅಂತ ಜಪ ಮಾಡಿದವರು ದೇವೇಗೌಡರನ್ನು ಬಿಟ್ಟರೆ ಯಡಿಯೂರಪ್ಪ ಮಾತ್ರ. ಸಿಎಂ ವಿರುದ್ಧ ಮೊದಲು ಮಾತಾಡಿದ್ದೇ ಲಿಂಗಾಯತ ಶಾಸಕರು. ಆಗ ಯಾಕೆ ಸ್ವಾಮೀಜಿಗಳು ಅಂಥ ಶಾಸಕರಿಗೆ ಬುದ್ಧಿ ಹೇಳಲಿಲ್ಲ? ಈಗ ಶ್ರೀಗಳು ಬಂದು ಪಕ್ಷ ಸರ್ವನಾಶ ಆಗುತ್ತೆ ಅಂತಿದ್ದಾರೆ. ಲಿಂಗಾಯತ ಶಾಸಕರೇ ಬಿಎಸ್‌ವೈ ವಿರುದ್ಧ ಹೇಳಿಕೆ ನೀಡಿದ್ದರು. ಆಗ ಏಕೆ ಕರೆದು ಸ್ವಾಮೀಜಿಗಳು ಬುದ್ಧಿ ಹೇಳಲಿಲ್ಲ ಎಂದು ಸ್ವಾಮೀಜಿಗಳ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಕಿಡಿಕಾರಿದ್ದಾರೆ.

ಯಡಿಯೂರಪ್ಪ ಏನೇ ಹೇಳಲಿ ಸೂಕ್ತವಾಗಿಯೇ ಹೇಳಿದ್ದಾರೆ. ಅವರೂ ಸಿದ್ದರಾಮಯ್ಯ ತರಹ ಹೇಳಬಹುದಿತ್ತು ನಾನು ಸಿಎಂ ಆಗಲಿ ಅಂತ ನಾನು ಹೇಳಿಲ್ಲ ಬೇರೆಯವರು ಹೇಳಿದ್ದಾರೆ ಅಂತ. ಆದರೆ ಯಡಿಯೂರಪ್ಪ ಹಾಗೆ ಮಾಡಲಿಲ್ಲ. ಯಡಿಯೂರಪ್ಪ ಪಕ್ಷ ಮಾತೃ ಸಮಾನ ಅಂದಿದ್ದಾರೆ ಯಡಿಯೂರಪ್ಪ ಮುಂದುವರೆಯೋಕೆ ಬಿಡಲ್ಲ ಅಂತ ಯಾರು ಹೇಳಿದ್ದು? ಕೆಜೆಪಿ ಕಟ್ಟುವಾಗ ಯಡಿಯೂರಪ್ಪ ಸುತ್ತಲಿದ್ದವರೇ ಅವರನ್ನು ಹಾಳು ಮಾಡಿದ್ದರು. ಅವರಿಗೇ ಏನೇನೋ ಹೇಳಿ ಉಡಾವ್ ಚಡಾವ್ ಮಾಡಿ ತಲೆ ಕೆಡಿಸಿದ್ದರು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಈಶ್ವರಪ್ಪ ಹೇಳಿದ್ದಾರೆ.

ಇದನ್ನೂ ಓದಿ: 

ಬಿಎಸ್​ವೈ ಬಿಜೆಪಿ ತೊರೆದಾಗ ಪಕ್ಷ ಉಳಿಸಿದ ಈಶ್ವರಪ್ಪಗೆ ಸಿಎಂ ಹುದ್ದೆ ಕೊಡಿ: ಹಾಲುಮತ ಮಹಾಸಭಾದಿಂದ ಬಿಜೆಪಿಗೆ ಎಚ್ಚರಿಕೆ

ನಾಳಿದ್ದು ರಾಜಿನಾಮೆ ನೀಡ್ತಾರಂತೆ ಆದ್ರೆ ಸಿಎಂ ಯಡಿಯೂರಪ್ಪ ತರಾತುರಿಯಲ್ಲಿ ಸಾವಿರಾರು ಕೋಟಿ ಯೋಜನೆಗೆ ಅನುಮತಿ ನೀಡ್ತಿದ್ದಾರೆ: ಹೆಚ್​ಡಿ ಕುಮಾರಸ್ವಾಮಿ ಆತಂಕ

(CM BS Yediyurappas decision and statement made me very happy says Minister KS Eshwarappa )