Next CM: ದೇಶಕ್ಕೆ ಮೋದಿ; ರಾಜ್ಯಕ್ಕೆ ಸವದಿ! ಡಿಸಿಎಂ ಲಕ್ಷ್ಮಣ ಸವದಿ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ವೈರಲ್
Karnataka Politics: ಮುಂದಿನ ಸಿಎಂ ಲಕ್ಷ್ಮಣ ಸವದಿ ಎಂಬ ಅವರ ಅಭಿಮಾನಿಗಳ ಪೋಸ್ಟ್ ಸದ್ಯ ವೈರಲ್ ಆಗುತ್ತಿದೆ. ದೇಶಕ್ಕೆ ಮೋದಿ, ರಾಜ್ಯಕ್ಕೆ ಸವದಿ ಎಂದು ಬರೆದಿರುವ ಚಿತ್ರಗಳನ್ನು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಬೆಂಬಲಿಗರು ಹರಿಬಿಡುತ್ತಿದ್ದಾರೆ.
ಬೆಳಗಾವಿ: ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ (CM BS Yediyurappa) ಬದಲಾವಣೆಯ ಚರ್ಚೆ ಹಿಂದೆಂದಿಗಿಂತಲೂ ಕಾವು ಪಡೆದುಕೊಂಡಿರುವ ಬೆನ್ನಲ್ಲೇ ಸದ್ಯ ಉಪ ಮುಖ್ಯಮಂತ್ರಿಯಾಗಿರುವ ಲಕ್ಷ್ಮಣ ಸವದಿ (Laxman Savadi) ಮುಂದಿನ ಮುಖ್ಯಮಂತ್ರಿ ಎಂಬ ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಮುಂದಿನ ಸಿಎಂ ಲಕ್ಷ್ಮಣ ಸವದಿ ಎಂಬ ಅವರ ಅಭಿಮಾನಿಗಳ ಪೋಸ್ಟ್ ಸದ್ಯ ವೈರಲ್ ಆಗುತ್ತಿದೆ. ದೇಶಕ್ಕೆ ಮೋದಿ, ರಾಜ್ಯಕ್ಕೆ ಸವದಿ (Karnataka Politics) ಎಂದು ಬರೆದಿರುವ ಚಿತ್ರಗಳನ್ನು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಬೆಂಬಲಿಗರು ಹರಿಬಿಡುತ್ತಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬೆನ್ನಲ್ಲೇ ಮುಂದಿನ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಎಂಬ ಪೋಸ್ಟ್ಗಳನ್ನು ವೈರಲ್ ಮಾಡಲಾಗುತ್ತಿದ್ದು, ಕಾರ್ಯಕರ್ತರು ಮತ್ತು ರಾಜ್ಯದ ಜನರಲ್ಲಿ ಈ ಭಾವನೆ ಮೂಡಿಸಲು ಪ್ರಯತ್ನಿಸಲಾಗುತ್ತಿದೆ.
ಸಿಎಂ ಯಡಿಯೂರಪ್ಪ ಕೈಗೊಂಡ ನಿರ್ಧಾರ ಮತ್ತು ಹೇಳಿಕೆ ನನಗೆ ಸಮಾಧಾನ, ಖುಷಿ ತಂದಿದೆ: ಸಚಿವ ಈಶ್ವರಪ್ಪ ಸಿಎಂ ಯಡಿಯೂರಪ್ಪ (CM BS Yediyurappa) ಕೈಗೊಂಡ ನಿರ್ಧಾರ, ಹೇಳಿಕೆ ನನಗೆ ಸಮಾಧಾನ ಮತ್ತು ಖುಷಿ ತಂದಿದೆ. ಅವರು ರಾಜೀನಾಮೆ ಕೊಡ್ತಾರೆ ಎಂದು ಯಾರೂ ಹೇಳಿಲ್ಲ. ಅದು ಯಡಿಯೂರಪ್ಪ, ಹೈಕಮಾಂಡ್ ನಡುವಿನ ವಿಚಾರ. ಅದನ್ನು ಅವರಿಬ್ಬರೇ ತೀರ್ಮಾನ ಮಾಡ್ತಾರೆ. ಅವರು ಇರ್ತಾರೋ ಬಿಡ್ತಾರೋ ಅದೆಲ್ಲ ಮುಂದಿನ ವಿಚಾರ. ಆ ಬಗ್ಗೆ ಮಾತಾಡೋಕೆ ಮಧ್ಯದಲ್ಲಿ ನಾವೂ ನೀವು ಯಾರು? ಆದರೆ ಸಿಎಂ ಬಿ. ಎಸ್. ಯಡಿಯೂರಪ್ಪ ಹೇಳಿದ ಮಾತು ಸರಿಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ (KS Eshwarappa) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಸ್ವಾಮೀಜಿಗಳ ವಿರುದ್ಧವೂ ಸಚಿವ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಯಡಿಯೂರಪ್ಪ ನಾಲ್ಕು ಮಂದಿ ಶಾಸಕರಿದ್ದಾಗಿನಿಂದ ಪಕ್ಷ ಕಟ್ಟಿ ಬೆಳೆಸಿದವರು. ರೈತ ರೈತ ರೈತ ಅಂತ ಜಪ ಮಾಡಿದವರು ದೇವೇಗೌಡರನ್ನು ಬಿಟ್ಟರೆ ಯಡಿಯೂರಪ್ಪ ಮಾತ್ರ. ಸಿಎಂ ವಿರುದ್ಧ ಮೊದಲು ಮಾತಾಡಿದ್ದೇ ಲಿಂಗಾಯತ ಶಾಸಕರು. ಆಗ ಯಾಕೆ ಸ್ವಾಮೀಜಿಗಳು ಅಂಥ ಶಾಸಕರಿಗೆ ಬುದ್ಧಿ ಹೇಳಲಿಲ್ಲ? ಈಗ ಶ್ರೀಗಳು ಬಂದು ಪಕ್ಷ ಸರ್ವನಾಶ ಆಗುತ್ತೆ ಅಂತಿದ್ದಾರೆ. ಲಿಂಗಾಯತ ಶಾಸಕರೇ ಬಿಎಸ್‌ವೈ ವಿರುದ್ಧ ಹೇಳಿಕೆ ನೀಡಿದ್ದರು. ಆಗ ಏಕೆ ಕರೆದು ಸ್ವಾಮೀಜಿಗಳು ಬುದ್ಧಿ ಹೇಳಲಿಲ್ಲ ಎಂದು ಸ್ವಾಮೀಜಿಗಳ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಕಿಡಿಕಾರಿದ್ದಾರೆ.
ಯಡಿಯೂರಪ್ಪ ಏನೇ ಹೇಳಲಿ ಸೂಕ್ತವಾಗಿಯೇ ಹೇಳಿದ್ದಾರೆ. ಅವರೂ ಸಿದ್ದರಾಮಯ್ಯ ತರಹ ಹೇಳಬಹುದಿತ್ತು ನಾನು ಸಿಎಂ ಆಗಲಿ ಅಂತ ನಾನು ಹೇಳಿಲ್ಲ ಬೇರೆಯವರು ಹೇಳಿದ್ದಾರೆ ಅಂತ. ಆದರೆ ಯಡಿಯೂರಪ್ಪ ಹಾಗೆ ಮಾಡಲಿಲ್ಲ. ಯಡಿಯೂರಪ್ಪ ಪಕ್ಷ ಮಾತೃ ಸಮಾನ ಅಂದಿದ್ದಾರೆ ಯಡಿಯೂರಪ್ಪ ಮುಂದುವರೆಯೋಕೆ ಬಿಡಲ್ಲ ಅಂತ ಯಾರು ಹೇಳಿದ್ದು? ಕೆಜೆಪಿ ಕಟ್ಟುವಾಗ ಯಡಿಯೂರಪ್ಪ ಸುತ್ತಲಿದ್ದವರೇ ಅವರನ್ನು ಹಾಳು ಮಾಡಿದ್ದರು. ಅವರಿಗೇ ಏನೇನೋ ಹೇಳಿ ಉಡಾವ್ ಚಡಾವ್ ಮಾಡಿ ತಲೆ ಕೆಡಿಸಿದ್ದರು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಈಶ್ವರಪ್ಪ ಹೇಳಿದ್ದಾರೆ.
ಇದನ್ನೂ ಓದಿ:
B.S.Yediyurappa: ಬಿಎಸ್‌ವೈ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದರೂ ಹೊಸ ಪಕ್ಷ ಕಟ್ಟುವ ಯೋಚನೆ ಮಾಡಲ್ಲ-ಏಕೆ?
(DCM Laxman Savadi fans viral posts Modi to the country Savadi to the state)