AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bonded Labour: ಕೂಲಿ ಅರಸಿ ಬರುವ ನಿರ್ಗತಿಕರನ್ನು ಟಾರ್ಗೆಟ್ ಮಾಡಿ ಜೀತಕ್ಕೆ ತಳ್ಳೋ ಕತರ್ನಾಕ್ ಗ್ಯಾಂಗ್ ಪತ್ತೆ!

Hassan police: ಸಂತ್ರಸ್ಥ ಜನರಿಗೆ ಪುನರ್ವಸತಿ ಕಲ್ಪಿಸೋ ಬಗ್ಗೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಇದೇ ಆರೋಪಿ ಮೂರು ವರ್ಷಗಳ ಹಿಂದೆಯೂ ಕೂಡ ಇಂತಹುದೆ ಚಟುವಟಿಕೆಯಲ್ಲಿ ಭಾಗಿಯಾಗಿದ್ದ. ಇದೊಂದು ದುರಂತ. ಇವರನ್ನು ನೋಡಿದಾಗ ತುಂಬಾ ಕಷ್ಟವಾಯಿತು ಎಂದು ಪ್ರಕರಣದ ಬಗ್ಗೆ ಹೆಚ್ಚುವರಿ ಎಸ್ಪಿ ಡಾ.ನಂದಿನಿ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

Bonded Labour: ಕೂಲಿ ಅರಸಿ ಬರುವ ನಿರ್ಗತಿಕರನ್ನು ಟಾರ್ಗೆಟ್ ಮಾಡಿ ಜೀತಕ್ಕೆ ತಳ್ಳೋ ಕತರ್ನಾಕ್ ಗ್ಯಾಂಗ್ ಪತ್ತೆ!
ಕೂಲಿ ಅರಸಿ ಬರುವ ನಿರ್ಗತಿಕರನ್ನು ಟಾರ್ಗೆಟ್ ಮಾಡಿ ಜೀತಕ್ಕೆ ತಳ್ಳೋ ಕತರ್ನಾಕ್ ಗ್ಯಾಂಗ್ ಪತ್ತೆ!
TV9 Web
| Updated By: ಸಾಧು ಶ್ರೀನಾಥ್​|

Updated on:Apr 05, 2022 | 2:16 PM

Share

ಹಾಸನ: ಕೂಲಿ ಅರಸಿ ಬರೋ ನಿರ್ಗತಿಕರನ್ನು ಟಾರ್ಗೆಟ್ ಮಾಡಿ ಜೀತಕ್ಕೆ ತಳ್ಳೋ ಕತರ್ನಾಕ್ ಗ್ಯಾಂಗ್ ಪತ್ರೆಯಾಗಿದೆ. ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನಲ್ಲಿ ಅಣ್ಣನಾಯಕನಹಳ್ಳಿಯ ಮುನೇಶ್ ಎಂಬಾತನಿಂದ ಇಂತಹ ಅಮಾನವೀಯ ಕೃತ್ಯ ನಡೆದಿದೆ. ಒಂದು ದಿನದ ಕೆಲಸವಿದೆ ಎಂದು ಆಸೆ ಹುಟ್ಟಿಸಿ, ಕರೆತಂದು ಕೂಡಿ ಹಾಕ್ತಿದ್ದ ಕಿರಾತಕ ಗುಂಪು ಈತನದ್ದಾಗಿದೆ. ಹೀಗೆ ಅರಸೀಕೆರೆ ಸುತ್ತಮುತ್ತ ಸಿಕ್ಕ 50 ಕ್ಕೂ ಹೆಚ್ಚು ನಿರ್ಗತಿಕರನ್ನು (down trodden Labourer) ಮುನೇಶ್ ಗ್ಯಾಂಗ್​ ಅಕ್ರಮ‌ ಬಂಧನದಲ್ಲಿಟ್ಟು, ಅನ್ನ ಅಹಾರ, ನೀರು, ಸ್ನಾನ ಇಲ್ಲದೆ ನರಳಾಡುವಂತೆ ಆ ಕಾರ್ಮಿಕರನ್ನು ಮಾಡುತ್ತಿದ್ದುದ್ದು ಪತ್ತೆ ಹಚ್ಚಲಾಗಿದೆ. ಊಟ, ನೀರು ಕೇಳಿದರ ಹಲ್ಲೆ, ಕೂಲಿ ಕೇಳಿದರೂ ನೀಡದೆ ಹಲ್ಲೆ ಮಾಡಿ ಒಂದು ಕೊಠಡಿಯಲ್ಲಿ ಈ 50 ಜನರನ್ನು ಬಂಧಿಸಿಡಲಾಗಿತ್ತು (bonded labour). ಗೂಡಿನ ಗಾಡಿಯಲ್ಲಿ ಕೂಡಿಹಾಕಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕರೆದೊಯ್ಯುತ್ತಿದ್ದ ಮಾಲೀಕ ಮುನೇಶ್. ಮುನೇಶ್ ಮತ್ತವನ ತಂಡದಿಂದ ಅಮಾನುಷ ವರ್ತನೆ ನಡೆದಿದ್ದು ಶೌಚಕ್ಕೂ ಹೊರಗೆ ಬಿಡದೆ ಕೂಡಿ ಹಾಕಿ ಅಮಾನವೀಯತೆ ಮೆರೆದಿದ್ದಾರೆ. ಐದಾರು ತಿಂಗಳುಗಳಿಂದ ಹೀಗೆ ಕೂಡಿ ಹಾಕಿ ಕ್ರೌರ್ಯ ಮೆರೆದಿದ್ದಾರೆ. ತಿಂಗಳಾನುಗಟ್ಟಲೆಯಿಂದ ಸ್ನಾನ ಇಲ್ಲದೆ, ಕೊಳಕು ಬಟ್ಟೆಯಲ್ಲಿ ನರಳಾಡುತ್ತಿದ್ದರು ಜೀತದ ಈ ಜನ. ಎಲ್ಲ ಅತಿರೇಕಗಳಿಗೂ ಒಂದು ಅಂತ್ಯವಿರಬೇಕು ಎಂಬಂತೆ ಕೊನೆಗೂ, ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ ಅರಸೀಕೆರೆ ಗ್ರಾಮಾಂತರ ಪೊಲೀಸರು ಹಾಸನ ಜಿಲ್ಲೆ ಅಣ್ಣೇನಹಳ್ಳಿ ಗ್ರಾಮದಲ್ಲಿ 45 ಪುರುಷರು 10 ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ (Annenahalli, Hassan).

ರಾಜ್ಯದ ಬೇರೆ ಬೇರೆ ಕಡೆಯಿಂದ ಇವರನ್ನಲ್ಲ ಕರೆತಂದು ಅಕ್ರಮವಾಗಿ ಬಂಧನದಲ್ಲಿಟ್ಟು ಕೆಲಸ ತೆಗೆಸುತ್ತಿದ್ದರು. ಶುಂಠಿ ಕೀಳುವ ಕೆಲಸಕ್ಕೆ ಕರೆತಂದು ದುಡಿಸಿಕೊಳ್ಳಲಾಗಿದೆ. ಚಿಕ್ಕಮಗಳೂರು, ಮಧುಗಿರಿ, ಪಾವಗಡ, ತಮಿಳುನಾಡು, ಮಂಡ್ಯ ಹೀಗೆ ನಾನಾ ಭಾಗಗಳಿಂದ ಜನರನ್ನು ಕರೆತಂದು ಜೀತದಾಉಗಳಂತೆ ದುಡಿಸಿಕೊಳ್ಳಲಾಗಿದೆ. ಕೆಲವರು ಎರಡು ವರ್ಷಗಳಿಂದ ಇನ್ನು ಹಲವರು ಆರು ತಿಂಗಳು, ಕೆಲವರು ವಾರಗಳಿಂದ ಬಂಧಿಯಾಗಿದ್ದಾರೆ. ಸರಿಯಾದ ಕೂಲಿಯಿಲ್ಲ, ಮೂಲಭೂತ ಸೌಲಭ್ಯವೂ ಇಲ್ಲ ಎಂಬಂತಾಗಿತ್ತು ಇವರ ಪಾಡು. ಹೆಚ್ಚುವರಿ ಎಸ್​ಪಿ ಡಾ. ನಂದಿನಿ ಅವರ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಮುನೇಶನಿಗೆ ಕುಮಾರ ಲಕ್ಷ್ಮಿ, ಮನು ಎಂಬುವವರು ಕುಮ್ಮಕ್ಕು ಕೊಟ್ಟಿದ್ದಾರೆ.

ಸಂತ್ರಸ್ಥ ಜನರಿಗೆ ಪುನರ್ವಸತಿ ಕಲ್ಪಿಸೋ ಬಗ್ಗೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಇದೇ ಆರೋಪಿ ಮೂರು ವರ್ಷಗಳ ಹಿಂದೆಯೂ ಕೂಡ ಇಂತಹುದೆ ಚಟುವಟಿಕೆಯಲ್ಲಿ ಭಾಗಿಯಾಗಿದ್ದ. ನಿರ್ಗತಿಕರನ್ನು ಟಾರ್ಗೆಟ್ ಮಾಡಿ ಕರೆತಂದು ಹೀಗೆ ಕೂಡಿ ಹಾಕಿದ್ದಾರೆ. ಈ ಘಟನೆ ನೋಡಿದರೆ ಘೋರ ಅನ್ನಿಸುತ್ತೆ, ಇದೊಂದು ದುರಂತ. ಇವರನ್ನು ನೋಡಿದಾಗ ತುಂಬಾ ಕಷ್ಟವಾಯಿತು ಎಂದು ಪ್ರಕರಣದ ಬಗ್ಗೆ ಹೆಚ್ಚುವರಿ ಎಸ್ಪಿ ಡಾ.ನಂದಿನಿ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಘಟನೆಯನ್ನ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು ತನಿಖೆ ಮಾಡುತ್ತೇವೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

Also Read: ಸುಂದರವಾದ ಹೆಣ್ಣು ಮಕ್ಕಳಿಗೆ ಅಂಗಾಂಗಳನ್ನ ಕಿತ್ತು ತಿನ್ನುತ್ತವೆ ಎಂದು ಘೋರ ಭವಿಷ್ಯ ನುಡಿದ ಕೋಡಿಮಠ ಶ್ರೀ

Also Read: Number 9: ನವ ನವೀನ ಬ್ರಹ್ಮ ಸಂಖ್ಯೆ 9, ಏನಿದರ ಮಹತ್ವ-ವಿಶೇಷತೆ

Published On - 2:13 pm, Tue, 5 April 22

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!