ಸೂರಜ್ ರೇವಣ್ಣ ಮೇಲ್ಮನೆ ಪ್ರವೇಶಿಸಲಿ ಎಂದು ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಅಭಿಮಾನಿ ಬೇಡಿಕೆ
ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಗೆಲ್ಲಲಿ ಎಂದು ಅವರ ಅಭಿಮಾನಿಯೊಬ್ಬ ಶಬರಿಮಲೆಗೆ ಹರಕೆ ಹೊತ್ತು ವೃತಾಚರಣೆ ಮಾಡಿ ಪೂಜೆ ಸಲ್ಲಿಸಿದ್ದಾರೆ. ಹೊಳೆನರಸೀಪುರದ ಎಂ.ಪಿ.ನವೀನ್ ಕುಮಾರ್ ಇರುಮುಡಿ ಹೊತ್ತು ಶಬರಿಮಲೆ ಯಾತ್ರೆ ಮಾಡಿ ತಮ್ಮ ನಾಯಕನ ಗೆಲುವಿಗೆ ಪ್ರಾರ್ಥಸಿದ್ದಾರೆ.
ಹಾಸನ: ಹಾಸನ ವಿಧಾನಪರಿಷತ್ ಚುನಾವಣಾ ಕಣ ರಂಗೇರುತ್ತಿದೆ. ಹಾಸನ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಗೆ 4 ಕಲಿಗಳು ನಾಮಪತ್ರ ಸಲ್ಲಿಸಿದ್ದಾರೆ. ಸದ್ಯ ಜೆಡಿಎಸ್ನ ಆರ್.ಸೂರಜ್ ರೇವಣ್ಣ ವಿಧಾನಪರಿಷತ್ ಸದಸ್ಯರಾಗಲಿ ಎಂದು ಅಭಿಮಾನಿಯೊಬ್ಬರು ಮಾಲೆ ಧರಿಸಿ ಶಬರಿಮಲೆ ಸ್ವಾಮಿ ಅಯ್ಯಪ್ಪ ಸನ್ನಿಧಾನದಲ್ಲಿ ಪ್ರಾರ್ಥಿಸಿದ್ದಾರೆ.
ಗೌಡರ ಕುಟುಂಬದ ಕುಡಿ ಡಾ.ಸೂರಜ್ ರೇವಣ್ಣ ಸ್ಪರ್ದೆಯಿಂದ ಕುತೂಹಲ ಮೂಡಿಸಿರೋ ಕ್ಷೇತ್ರ ಪ್ರತಿಷ್ಠೆಯ ಕಣವಾಗಿದೆ, ಗೆಲುವಿಗಾಗಿ ಮೂರೂ ಪಕ್ಷದ ಅಭ್ಯರ್ಥಿಗಳು ನಾಯಕರು ಹಗಲಿರುಳು ಶ್ರಮಿಸುತ್ತಿದ್ದಾರೆ. ಇತ್ತ ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಗೆಲ್ಲಲಿ ಎಂದು ಅವರ ಅಭಿಮಾನಿಯೊಬ್ಬ ಶಬರಿಮಲೆಗೆ ಹರಕೆ ಹೊತ್ತು ವೃತಾಚರಣೆ ಮಾಡಿ ಪೂಜೆ ಸಲ್ಲಿಸಿದ್ದಾರೆ. ಹೊಳೆನರಸೀಪುರದ ಎಂ.ಪಿ.ನವೀನ್ ಕುಮಾರ್ ಇರುಮುಡಿ ಹೊತ್ತು ಶಬರಿಮಲೆ ಯಾತ್ರೆ ಮಾಡಿ ತಮ್ಮ ನಾಯಕನ ಗೆಲುವಿಗೆ ಪ್ರಾರ್ಥಸಿದ್ದಾರೆ. ತಮ್ಮ ಕೋರಿಕೆಯನ್ನು ಬಾಳೆ ಹಣ್ಣಿನ ಮೇಲೆ ಬರೆದು ದೇವರಿಗೆ ಸಮರ್ಪಣೆ ಮಾಡಿದ್ದಾರೆ. ಸೂರಜ್ ರೇವಣ್ಣ ರವರು ವಿಧಾನ ಪರಿಷತ್ ಸದಸ್ಯರಾಗಲಿ ಎಂದು ಶಬರಿಮಲೆ ಸ್ವಾಮಿ ಅಯ್ಯಪ್ಪ ಸನ್ನಿಧಾನದಲ್ಲಿ ನವೀನ್ ಕುಮಾರ್ ಎಂ.ಪಿ. ಪ್ರಾರ್ಥನೆ ಸಲ್ಲಿಸಿದ್ದು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ಹಾಸನ ವಿಧಾನ ಪರಿಷತ್ ಅಖಾಡದಲ್ಲಿ ಕಾಂಗ್ರೆಸ್ನ ಎಂ.ಶಂಕರ್, ಬಿಜೆಪಿಯ ಹೆಚ್.ಎಂ.ವಿಶ್ವನಾಥ್, ಜೆಡಿಎಸ್ನ ಆರ್.ಸೂರಜ್ ಹಾಗೂ ಪಕ್ಷೇತರ ಅಭ್ಯರ್ಥಿ ಎಚ್.ಡಿ.ರೇವಣ್ಣ ಇದ್ದಾರೆ. ಇದೇ ಡಿಸೆಂಬರ್ 10ರಂದು ಚುನಾವಣೆ ನಡೆಯಲಿದೆ.
ಇದನ್ನೂ ಓದಿ: ಧಾರವಾಡ ವಿಧಾನ ಪರಿಷತ್ ಚುನಾವಣೆ; ಸಿಎಂ ಬೊಮ್ಮಾಯಿಗೆ ರಾಜಕೀಯ ನೆಲೆ ಕಲ್ಪಿಸಿದ ಕ್ಷೇತ್ರ ಈ ಬಾರಿ ಯಾರ ಕೈ ಹಿಡಿಯುತ್ತೆ?