40 ವರ್ಷಗಳಿಂದ ನಾನು ರಾಜಕಾರಣ ‌ಮಾಡುತ್ತಿದ್ದೇನೆ: ಬ್ಲಾಕ್​ಮೇಲ್​ಗೆ​ ಹೆದರಲ್ಲ: ಮಾಜಿ ಸಚಿವ ಹೆಚ್​​ಡಿ ರೇವಣ್ಣ

ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಕಳೆದ 40 ವರ್ಷಗಳಿಂದ ನಾನು ರಾಜಕಾರಣ ‌ಮಾಡುತ್ತಿದ್ದೇನೆ. ಬ್ಲಾಕ್​ಮೇಲ್​ಗೆ ನಾನು ಹೆದರುವುದಿಲ್ಲ ಎಂದು ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡಗೆ ತಿರುಗೇಟು ನೀಡಿದ್ದಾರೆ. ಬೇರೆಯವರ ಬಳಿ ಬ್ಲಾಕ್​ಮೇಲ್​ ಮಾಡಿ‌ ಯಶಸ್ವಿ ಆಗಿರಬಹುದು. ಅಂಥದೆಲ್ಲಾ ನನ್ನ ಬಳಿ ಆಗಲ್ಲ ಎಂದಿದ್ದಾರೆ.

40 ವರ್ಷಗಳಿಂದ ನಾನು ರಾಜಕಾರಣ ‌ಮಾಡುತ್ತಿದ್ದೇನೆ: ಬ್ಲಾಕ್​ಮೇಲ್​ಗೆ​ ಹೆದರಲ್ಲ: ಮಾಜಿ ಸಚಿವ ಹೆಚ್​​ಡಿ ರೇವಣ್ಣ
ಮಾಜಿ ಸಚಿವ ಹೆಚ್.ಡಿ.ರೇವಣ್ಣ
Follow us
ಮಂಜುನಾಥ ಕೆಬಿ
| Updated By: ಗಂಗಾಧರ​ ಬ. ಸಾಬೋಜಿ

Updated on: Jan 13, 2024 | 7:41 PM

ಹಾಸನ, ಜನವರಿ 13: ಕಳೆದ 40 ವರ್ಷಗಳಿಂದ ನಾನು ರಾಜಕಾರಣ ‌ಮಾಡುತ್ತಿದ್ದೇನೆ. ಬ್ಲಾಕ್​ಮೇಲ್​ಗೆ ನಾನು ಹೆದರುವುದಿಲ್ಲ ಎಂದು ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡಗೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ (HD Revanna) ತಿರುಗೇಟು ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲವರು ರಾಜಕೀಯವಾಗಿ ನನ್ನನ್ನು ಮುಗಿಸಲು ಸಂಚು ಮಾಡಿದ್ದಾರೆ. ಬೇರೆಯವರಿಗೆ ಏನು ಬೇಕಾದರೂ ಬ್ಲಾಕ್​ಮೇಲ್ ಮಾಡಿಕೊಳ್ಳಲಿ. ಕೆಲವರ ಮಾತಿಗೆ ನಾನು ಉತ್ತರ ಕೊಡಲ್ಲ, ಬ್ಲಾಕ್​ಮೇಲ್​ಗೆ ಹೆದರಲ್ಲ. ಆರೋಪ ಹಾಗೂ ಅಪಪ್ರಚಾರಕ್ಕೆ ಕಾನೂನು ರೀತಿ‌ ಉತ್ತರ ಕೊಡುವೆ. ಬೇರೆಯವರ ಬಳಿ ಬ್ಲಾಕ್​ಮೇಲ್​ ಮಾಡಿ‌ ಯಶಸ್ವಿ ಆಗಿರಬಹುದು. ಅಂಥದೆಲ್ಲಾ ನನ್ನ ಬಳಿ ಆಗಲ್ಲ ಎಂದು ದೇವರಾಜೇಗೌಡ ವಿರುದ್ಧ ಕಿಡಿಕಾರಿದ್ದಾರೆ.

ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ

ಅವರು 3 ಬಿಟ್ಟಿರುವವರು, ಅಂಥವರನ್ನು ಮನೆ ಬಾಗಿಲಿಗೂ ಸೇರಿಸಲ್ಲ. ದೇವೇಗೌಡರನ್ನು ಎದುರಿಸಲಾಗದವರು ಇಂತವರನ್ನು ಬಿಡುತ್ತಾರೆ ಎಂದು ಪರೋಕ್ಷವಾಗಿ ‌ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ನಾನು ಈ ಸಲ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ

ನನ್ನ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ತನಿಖೆಗೆ ಸಿದ್ಧನಿದ್ದೇನೆ. ನಾವು ಭ್ರಷ್ಟಾಚಾರ ಮಾಡಿದ್ದರೆ‌ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಿ. ಅದೇನೋ ತೋರಿಸುವೆ ಅಂದಿದ್ದಾರಲ್ಲ ಅದನ್ನು ಅವರು ತೋರಿಸಲಿ. ಆಮೇಲೆ‌ ನಾನೇನು ಎಂದು ತೋರಿಸುವೆ ಎಂದು ವಾರ್ನಿಂಗ್​ ಮಾಡಿದ್ದಾರೆ.

ನಾನು‌ ರಾಜಿಗೆ ಯಾರನ್ನೂ ಕಳಿಸಿಲ್ಲ

ಇಂಥವರನ್ನು ಬಿಜೆಪಿಯವರು ಇಟ್ಟುಕೊಂಡಿದ್ದಾರೆ. ಬಿಜೆಪಿಗೆ ಇಂಥ ಪರಿಸ್ಥಿತಿ ಬರಬಾರದಿತ್ತು, ಇಂಥವರನ್ನು‌ ಇಟ್ಟುಕೋಬೇಕು ಅಂದರೆ ನಾನೇನು ಮಾಡಲು ಆಗಲ್ಲ. ಕೆಲ ಶಕ್ತಿಗಳು‌ ಬ್ಲಾಕ್‌ ಮೇಲ್ ಮಾಡುವವರ ಜೊತೆ ಸೇರಿದ್ದಾರೆ. ಜನ, ದೇವರು ನಮ್ಮ ಮುಗಿಸಬೇಕು ಬೇರೆಯವರು ಏನೂ ಮಾಡಲಾಗಲ್ಲ. ನಾನು‌ ರಾಜಿಗೆ ಯಾರನ್ನೂ ಕಳಿಸಿಲ್ಲ ಅದರ ಅಗತ್ಯ ಇಲ್ಲ‌ ಎಂದಿದ್ದಾರೆ.

ಅಂಥವರನ್ನು ನಾನು ಹತ್ತಿರ ಸೇರಿಸಲ್ಲ, ಸೂರಜ್ ವಿರುದ್ಧ ಕೇಸ್ ಹಾಕಿದ್ದರೂ ಏನಾಯ್ತು. ನನ್ನ ವಿರುದ್ಧವೂ ಹಾಕಿದ್ದರೂ ಏನೂ ಮಾಡಲು ಆಗಲ್ಲ. ನಾನು ಅನ್ಯಾಯ ಮಾಡಿದ್ದರೆ ಮಾಧ್ಯಮದವರು ತೋರಿಸಲಿ. ಸಮಾಜದಲ್ಲಿ ಮಹತ್ವ ಇಲ್ಲದವರಿಗೆ ಬೆಲೆ ಕೊಡಬೇಡಿ. 9 ತಿಂಗಳಿಂದ ಎಲ್ಲಿಗೆ ಹೋಗಿದ್ದರು ಚುನಾವಣೆ ಹೊತ್ತಲ್ಲಿ ಏಕೆ‌ ಎಂದು ಪ್ರಶ್ನಿಸಿದ್ದಾರೆ. ಎಲ್ಲದಕ್ಕೂ ಕಾನೂನು ‌ರೀತಿ ಉತ್ತರ ಕೊಡುವೆ. ದೇಶಕ್ಕೆ ಮೋದಿ ಬೇಕು ಎಂದು‌ ಬೆಂಬಲ, ದೇವೇಗೌಡರು, ಕುಮಾರಸ್ವಾಮಿ ಹೇಳಿದ್ದಕ್ಕೆ ಬದ್ದ ಎಂದು ಹೇಳಿದ್ದಾರೆ.

ಎಂಟು ಜಿಲ್ಲೆಯ ಕೊಬ್ಬರಿ ಬೆಳೆಗಾರರು ಸಂಕಷ್ಟ

ಎಂಟು ಜಿಲ್ಲೆಯ ಕೊಬ್ಬರಿ ಬೆಳೆಗಾರರು ಸಂಕಷ್ಟದಲ್ಲಿದ್ದರು. ಈಗಿನ ರಾಜ್ಯ ಸರ್ಕಾರ ನಾವು ಅಧಿಕಾರಕ್ಕೆ ಬಂದರೆ 15 ಸಾವಿರ ರೂ. ಕೊಡುತ್ತೇವೆ ಎಂದಿದ್ದರು. ನಾವು ವಿಧಾನಸಭೆಯಲ್ಲಿ ಹೋರಾಟ ಮಾಡಿದ್ದೇವು. ಕಾಂಗ್ರೆಸ್ ‌ಮುಖಂಡರು ಮಾಡಲಿಲ್ಲ. ಚುನಾವಣೆ ಗೆಲ್ಲಲು ಆಶ್ವಾಸನೆ ನೀಡಿದರು, ಈಗ ಮಾತೇ ಇಲ್ಲ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ವಿಜಯೇಂದ್ರ ಮಾತು ಮುಖ್ಯವಲ್ಲ ಅಂತ ಪರೋಕ್ಷವಾಗಿ ಹೇಳಿದ ಸಿಟಿ ರವಿ!

ರಾಜ್ಯ ಸರ್ಕಾರಕ್ಕೆ ನೈತಿಕತೆ ಇದ್ದರೆ 12 ಸಾವಿರ ರೂ. ಜೊತೆಗೆ 3 ಸಾವಿರ ರೂ. ನೀಡಲಿ. ಇಲ್ಲ‌ಅಂದರೆ ನಾವು ವಚನ ಭ್ರಷ್ಟರು, ಮೊದಲು ಹೇಳಿದ್ದು ಸುಳ್ಳು‌ ಎಂದು ರೈತರ ಬಳಿ ಕ್ಷಮೆ ಕೇಳಲಿ ಎಂದು ಆಗ್ರಹಿಸಿದ್ದಾರೆ. ಒಂದೂವರೆ ಸಾವಿರ ಬದಲು 3 ಸಾವಿರ ರೂ. ಬೆಂಬಲ ಬೆಲೆ ನೀಡಲಿ. ತೆಂಗು ಬೆಳೆ‌ನಾಶಕ್ಕೆ ಕುಮಾರಸ್ವಾಮಿ ‌ 250 ಕೋಟಿ ರೂ. ಕೊಟ್ಟರು. ಈ ಸರ್ಕಾರ ರೈತರಿಗೆ ಟೋಪಿ ಹಾಕುತ್ತಿದೆ. ಡಿಸಿ ಬಳಿ 18 ಕೋಟಿ‌ ರೂ. ಇದೆ ಯಾವುದಕ್ಕೂ ನೀಡುತ್ತಿಲ್ಲ ಎಂದು ಹರಿಹಾಯ್ದಿದ್ದಾರೆ.

ಈ‌ ಸರ್ಕಾರದಲ್ಲಿ ಕುಡಿಯುವ ನೀರಿಗೆ ಕೊಡಲು ಹಣ ಇಲ್ಲ. ಇಲ್ಲಿ ಹೇಳುವವರು, ಕೇಳುವವರು ಇಲ್ಲ. ಕಾಂಗ್ರೆಸ್​ನವರಿಗೆ ಚುನಾವಣೆ ಗೆಲುವು ಮುಖ್ಯವಾಗಿದೆ. ಬೆಳೆ ಪರಿಹಾರ ಕೂಡಲೇ ಕೊಡಬೇಕು ಎಷ್ಟು ಕೊಡುತ್ತೀರಾ ಕೊಡಿ. ನೀವೇ ಹೇಳಿದಂತೆ ಕನಿಷ್ಟ 15 ಸಾವಿರ ರೂ. ಕೊಡಿ ಇಲ್ಲ ರೈತರ ಬಳಿ ಕ್ಷಮೆ ಕೇಳಿ. ರಾಗಿ ಮಧ್ಯವರ್ತಿಗಳ ಪಾಲಾಗುತ್ತಿದೆ, ರೈತರ ರಾಗಿಯನ್ನೇ ಖರೀದಿ ಮಾಡಬೇಕು. ಕೊಬ್ಬರಿ ಖರೀದಿ ಕನಿಷ್ಠ ಆರು ತಿಂಗಳು ಮುಂದುವರಿಸಬೇಕು. ಕೊಬ್ಬರಿಗೆ ಬೆಂಬಲ ಬೆಲೆ ದೇವೇಗೌಡರ ಪ್ರಯತ್ನದಿಂದ ಆಗಿದೆ. ಕಾವೇರಿ ಬಗ್ಗೆ ನಿನ್ನೆಯೂ 59 ನಿಮಿಷ ಮಾತಾಡಿದ್ದಾರೆ, ರಾಜ್ಯದ ಹಿತ ಕಾಯಲು ಸದಾ ಚಿಂತಿಸುತ್ತಿದ್ದಾರೆ. ನಮ್ಮಲ್ಲಿ ಕೆಲವರಿಗೆ ಮಾಡಲು‌ ಕೆಲಸ ಇಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ