ಹಾಸನ ನವವಿವಾಹಿತೆ ಕಣ್ಮರೆ ಕೇಸ್‌ಗೆ ಬಿಗ್ ಟ್ವಿಸ್ಟ್: ಪ್ರಿಯಾಂಕಾ ಬಗ್ಗೆ ಸತ್ಯ ಮುಚ್ಚಿಟ್ಟು ಮದುವೆ ಮಾಡಿದ್ರು ಎಂದು ಪತಿ ಸಂಬಂಧಿಕರ ಆರೋಪ

ಹಾಸನದ ನವವಿವಾಹಿತೆ ಪ್ರಿಯಾಂಕಾ ನಿಗೂಢ ಕಣ್ಮರೆ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದೆ. ಆಕೆಗೆ ಈಗಾಗಲೇ ಮೊದಲೇ ಒಂದು ಮದುವೆಯಾಗಿತ್ತು ಎಂದು ಪತಿ ರಾಜಶೇಖರ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಸತ್ಯ ಮುಚ್ಚಿಟ್ಟು ರಾಜಶೇಖರ ಜೊತೆ ಮದುವೆ ಮಾಡಿಸಲಾಗಿದೆ. ಹಳೆಯ ಗಂಡನ ಜೊತೆ ಓಡಿ ಹೋಗುತ್ತಾಳೆ ಎಂಬ ಭಯದಿಂದ ಪೋಷಕರು ಒತ್ತಾಯಪೂರ್ವಕವಾಗಿ ಮದುವೆ ಮಾಡಿಸಿದ್ದರು. ಪ್ರಿಯಾಂಕಾ ಬದುಕಿದ್ದಾಳೆ ಅಥವಾ ಎಲ್ಲಾದರೂ ಓಡಿಹೋಗಿರಬಹುದು ಎಂದು ಕುಟುಂಬ ಸಂಶಯ ವ್ಯಕ್ತಪಡಿಸಿದೆ.

ಹಾಸನ ನವವಿವಾಹಿತೆ ಕಣ್ಮರೆ ಕೇಸ್‌ಗೆ ಬಿಗ್ ಟ್ವಿಸ್ಟ್: ಪ್ರಿಯಾಂಕಾ ಬಗ್ಗೆ  ಸತ್ಯ ಮುಚ್ಚಿಟ್ಟು ಮದುವೆ ಮಾಡಿದ್ರು ಎಂದು ಪತಿ ಸಂಬಂಧಿಕರ ಆರೋಪ
ಪ್ರಿಯಾಂಕಾ ಪ್ರಕರಣ
Image Credit source: Tv9 kannada
Edited By:

Updated on: Sep 22, 2026 | 3:32 PM

ಹಾಸನ, ಸೆ.22: ಜಿಲ್ಲೆಯಲ್ಲಿ ಭಾರಿ ಕುತೂಹಲ ಹಾಗೂ ಅನುಮಾನಕ್ಕೆ ಕಾರಣವಾಗಿದ್ದ ನವವಿವಾಹಿತೆ ಪ್ರಿಯಾಂಕಾ ನಿಗೂಢ ಕಣ್ಮರೆ ಪ್ರಕರಣಕ್ಕೆ ಇದೀಗ ರೋಚಕ ಹಾಗೂ ಸ್ಪೋಟಕ ತಿರುವು ಸಿಕ್ಕಿದೆ. ಪತಿ ರಾಜಶೇಖರ ಅವರ ಕುಟುಂಬಸ್ಥರು ಹಾಗೂ ಸಂಬಂಧಿಕರು ಕಣ್ಮರೆಯಾಗಿರುವ ಯುವತಿ ಪ್ರಿಯಾಂಕಾ ಹಾಗೂ ಆಕೆಯ ಪೋಷಕರ ವಿರುದ್ಧವೇ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಯುವತಿ ಕೇವಲ ಕಣ್ಮರೆಯಾಗಿಲ್ಲ, ಆಕೆಗೆ ಈಗಾಗಲೇ ಮೊದಲೇ ಒಂದು ಮದುವೆಯಾಗಿತ್ತು ಎಂಬ ಕಹಿ ಸತ್ಯವನ್ನು ಮುಚ್ಚಿಟ್ಟು ಮದುವೆ ಮಾಡಿಕೊಡಲಾಗಿದೆ ಎಂದು ಆಕೆಯ ಪತಿಯ ದೊಡ್ಡಪ್ಪ ಮಂಜುನಾಥ್ ಹಾಗೂ ಸಂಬಂಧಿಕರು ಆರೋಪಿಸಿದ್ದಾರೆ.

ಪ್ರಿಯಾಂಕಾಗೆ ಮೊದಲೇ ಒಂದು ಮದುವೆಯಾಗಿತ್ತು. ರಾಜಶೇಖರ ಜೊತೆ ಮದುವೆಯಾಗುತ್ತಿದ್ದ ದಿನವೇ ಆಕೆಯ ಹಳೆಯ ಗಂಡ ಪೋಲಿಸರ ಜೊತೆ ಕಲ್ಯಾಣ ಮಂಟಪಕ್ಕೇ ಬಂದಿದ್ದ ಎಂದು ಪತಿಯ ಸಂಬಂಧಿಕರು ಬಹಿರಂಗಪಡಿಸಿದ್ದಾರೆ. ಮಗಳು ಹಳೆಯ ಗಂಡನ ಜೊತೆ ಓಡಿ ಹೋಗುತ್ತಾಳೆ ಎಂಬ ಆತುರದಲ್ಲಿ ಆಕೆಯ ಪೋಷಕರು ವಿಚಾರ ಮುಚ್ಚಿಟ್ಟು ಮದುವೆಗೆ ಮುಂದಾಗಿದ್ದರು. ಮಗಳು ಮದುವೆಗೆ ಒಪ್ಪದಿದ್ದಾಗ ತಂದೆ-ತಾಯಿ ವಿಷದ ಬಾಟಲಿ ಹಿಡಿದು ಬೆದರಿಸಿ, ಒತ್ತಾಯಪೂರ್ವಕವಾಗಿ ರಾಜಶೇಖರ ಜೊತೆ ಮದುವೆಗೆ ಒಪ್ಪಿಸಿದ್ದರು.

ಯುವತಿಯ ಹಳೆಯ ಮದುವೆ ಹಾಗೂ ಪ್ರೇಮ ಪ್ರಕರಣದ ಸತ್ಯ ಗೊತ್ತಿದ್ದ ಕಾರಣಕ್ಕೆ ಆಕೆಗೆ ಮೊಬೈಲ್ ಫೋನ್ ಕೂಡ ನೀಡುತ್ತಿರಲಿಲ್ಲ. ಮದುವೆಗೂ ಮುಂಚೆಯೇ ಮಗಳನ್ನು ತಂದು ರಾಜಶೇಖರ ಮನೆಯಲ್ಲಿ ಬಿಟ್ಟು ಹೋಗಿದ್ದರು. ಮದುವೆಯಾದ ಬಳಿಕ ಮಗಳು ಎಲ್ಲಿ ಗಂಡನನ್ನು ಬಿಟ್ಟು ಓಡಿಬಂದು ಬಿಡುತ್ತಾಳೋ ಎಂಬ ಭಯದಿಂದ ಆಕೆಯ ಪೋಷಕರು ಪದೇ ಪದೇ ರಾಜಿ ಸಂಧಾನ ಮಾಡುತ್ತಿದ್ದರು ಎಂದು ರಾಜಶೇಖರ ದೊಡ್ಡಪ್ಪ ಮಂಜುನಾಥ್ ಆರೋಪಿಸಿದ್ದಾರೆ.

ಇದನ್ನೂ ಓದಿ: “ನಿನ್ನ ಮೇಲೆ ಬಹಳ ದೂರುಗಳಿವೆ”: ವಿಧಾನಸೌಧದ ಕೆಂಗಲ್ ಗೇಟ್ ಬಳಿ ಕಾರು ತೆಗೆಸಿದ್ದಕ್ಕೆ ಡಿಸಿಪಿ ಯೋಗೇಶ್ ವಿರುದ್ಧ ಸಿದ್ಧರಾಮಯ್ಯ ಗರಂ

“ಹೆಣ್ಣಿನ ಮನೆಯವರು ಮಾಡಿದ ದೊಡ್ಡ ತಪ್ಪಿಗೆ ಹಾಗೂ ಸತ್ಯ ಮುಚ್ಚಿಟ್ಟಿದ್ದಕ್ಕೆ ಇಂದು ನಮ್ಮ ಹುಡುಗ ರಾಜಶೇಖರ ಜೀವನ ಹಾಳಾಗಿದೆ. ಆಕೆಗೆ ಚೆನ್ನಾಗಿ ಈಜು ಕೂಡ ಬರುತ್ತಿತ್ತು. ಹೀಗಾಗಿ ಆಕೆ ನಿಜವಾಗಿಯೂ ನೀರಿನಲ್ಲಿ ಬಿದ್ದು ಸತ್ತಿದ್ದಾಳೋ ಅಥವಾ ಜೀವಂತವಾಗಿದ್ದು ಎಲ್ಲಾದರೂ ಓಡಿಹೋಗಿದ್ದಾಳೋ ಎಂಬ ದೊಡ್ಡ ಅನುಮಾನ ನಮಗಿದೆ” ಎಂದು ಪತಿಯ ಸಂಬಂಧಿಕರು ಸಂಶಯ ವ್ಯಕ್ತಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಕಣ್ಮರೆಯಾಗಿರುವ ನವವಿವಾಹಿತೆಯ ಹಿನ್ನೆಲೆ ಹಾಗೂ ಈ ಸ್ಪೋಟಕ ಆರೋಪಗಳ ಕುರಿತು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:31 pm, Tue, 22 September 26

ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More
Loading...
Unable to load recommendations.
Follow Us