ಪೆನ್​ಡ್ರೈವ್​ ಹಂಚಿಕೆ ಕೇಸ್​; ಆರೋಪಿಗಳಾದ ನವೀನ್ ಗೌಡ , ಚೇತನ್​ಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 01, 2024 | 4:42 PM

ಪ್ರಜ್ವಲ್ ರೇವಣ್ಣ ಅವರದು ಎನ್ನಲಾದ​ ಅಶ್ಲೀಲ ವಿಡಿಯೋ ಪೆನ್​ಡ್ರೈವ್​ ಹಂಚಿಕೆ(Pen drive Case) ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನವೀನ್ ಗೌಡ ಹಾಗೂ ಚೇತನ್​ಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಹಾಸನದ‌ 2ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್​ಸಿ ಕೋರ್ಟ್(JMFC Court)​​ ಆದೇಶಿಸಿದೆ.

ಪೆನ್​ಡ್ರೈವ್​ ಹಂಚಿಕೆ ಕೇಸ್​; ಆರೋಪಿಗಳಾದ ನವೀನ್ ಗೌಡ , ಚೇತನ್​ಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ
ನವೀನ್ ಗೌಡ , ಚೇತನ್​ಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ
Follow us on

ಹಾಸನ, ಜೂ.01: ಪ್ರಜ್ವಲ್ ರೇವಣ್ಣ ಅವರದು ಎನ್ನಲಾದ​ ಅಶ್ಲೀಲ ವಿಡಿಯೋ ಪೆನ್​ಡ್ರೈವ್​ ಹಂಚಿಕೆ(Pen drive Case) ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನವೀನ್ ಗೌಡ ಹಾಗೂ ಚೇತನ್​ಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಹಾಸನದ‌ 2ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್​ಸಿ ಕೋರ್ಟ್(JMFC Court)​​ ಆದೇಶಿಸಿದೆ. ಇಂದು(ಜೂ.01) ಕಸ್ಟಡಿ ಅವಧಿ ಮುಕ್ತಾಯ ಹಿನ್ನೆಲೆ ಎಸ್​ಐಟಿ ಅಧಿಕಾರಿಗಳು ಕೋರ್ಟ್​ಗೆ ಹಾಜರುಪಡಿಸಿದ್ದರು.

ಇದೇ ಮೇ.30 ರಂದು ಪೆನ್​ಡ್ರೈವ್ ಹಂಚಿಕೆ ಪ್ರಕರಣದ ಇಬ್ಬರು ಆರೋಪಿಗಳಾದ ಮಾಜಿ ಶಾಸಕ ಪ್ರೀತಂಗೌಡ ಆಪ್ತ ಲಿಖಿತ್ ಗೌಡ ಹಾಗೂ ಪ್ರೀತಂಗೌಡ ಕಛೇರಿ ಸಹಾಯಕ ಯಲಗುಂದ ಚೇತನ್ ಅವರಿಗೆ ‘ದೇಶ ಬಿಟ್ಟು ಹೋಗಬಾರದು, ವಾರಕ್ಕೆ ಒಮ್ಮೆ ತನಿಖಾಧಿಕಾರಿ ಎದುರು ಹಾಜರಾಗಬೇಕು ಎಂಬ ಷರತ್ತು ವಿಧಿಸಿ ಹಾಸನ ಜೈಲಿನಿಂದ ಬಿಡುಗಡೆ ಮಾಡಿ ಹಾಸನದ 3 ನೇ ಅದಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿತ್ತು.

ಇದನ್ನೂ ಓದಿ:ಪೆನ್​ಡ್ರೈವ್​ ಹಂಚಿಕೆ ಆರೋಪ ಕೇಸ್​, ತಪ್ಪದ ಬಂಧನ ಭೀತಿ: ಹೈಕೋರ್ಟ್ ಮೊರೆಹೋದ ಆರೋಪಿಗಳು

ಇದೇ ಮೇ.12 ರಂದು ಎಸ್​ಐಟಿ ಪೊಲೀಸರು ಇಬ್ಬರನ್ನು ಬಂದಿಸಿದ್ದರು. ಇದೀಗ 18 ದಿನಗಳ ಬಳಿಕ ಕೇಸ್​ನ ಆರು ಮತ್ತು ಏಳನೇ ಆರೋಪಿಗಳು ಬಿಡುಗಡೆಯಾಗಿದ್ದಾರೆ. ಈ ಕುರಿತು ಮಾತನಾಡಿದ ಆರೋಪಿಗಳ ಪರ ವಕೀಲ ಮೋಹನ್, ‘ನಮ್ಮ ಕಕ್ಷೀದಾರರು ಯಾವುದೇ ತಪ್ಪು ಮಾಡಿಲ್ಲ ಎಂದು ವಾದ ಮಂಡಿಸಿದ್ದೆವು. ನಮ್ಮ ವಾದ ಆಲಿಸಿ ನ್ಯಾಯಾಲಯ ಜಾಮೀನು ನೀಡಿದೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟುಉ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:34 pm, Sat, 1 June 24