ಪ್ರಜ್ವಲ್ ಅಶ್ಲೀಲ ವಿಡಿಯೋ ಪೆನ್​ಡ್ರೈವ್ ಹಂಚಿಕೆ ಪ್ರಕರಣ: ಇಬ್ಬರು ಆರೋಪಿಗಳು ಬಿಡುಗಡೆ

ಇತ್ತ ಪ್ರಜ್ವಲ್​ ರೇವಣ್ಣ(Prajwal Revanna) ಇಂದು(ಮೇ.30) ಮಧ್ಯರಾತ್ರಿ ಬೆಂಗಳೂರಿಗೆ ಆಗಮಿಸುತ್ತಿದ್ದು, ಇದರ ಬೆನ್ನಲ್ಲೇ ಇದೀಗ ಪೆನ್​ಡ್ರೈವ್ ಹಂಚಿಕೆ(Pen drive Case) ಪ್ರಕರಣದ ಇಬ್ಬರು ಆರೋಪಿಗಳನ್ನು ಹಾಸನ ಜೈಲಿನಿಂದ ಬಿಡುಗಡೆ ಮಾಡಿ ಹಾಸನದ 3 ನೇ ಅದಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ. ಬಂಧಿತರಾಗಿದ್ದ ಲಿಖಿತ್ ಗೌಡ ಹಾಗೂ ಚೇತನ್​ ಅವರಿಗೆ ಷರತ್ತುಬದ್ಧ ಜಾಮೀನು ವಿಧಿಸಿ ಬಿಡುಗಡೆಗೊಳಿಸಲಾಗಿದೆ.

ಪ್ರಜ್ವಲ್ ಅಶ್ಲೀಲ ವಿಡಿಯೋ ಪೆನ್​ಡ್ರೈವ್ ಹಂಚಿಕೆ ಪ್ರಕರಣ: ಇಬ್ಬರು ಆರೋಪಿಗಳು ಬಿಡುಗಡೆ
ಬಿಡುಗಡೆಗೊಂಡ ಲಿಖಿತ್​ಗೌಡ, ಚೇತನ್​
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:May 30, 2024 | 7:57 PM

ಹಾಸನ, ಮೇ.30: ಸಂಸದ ಪ್ರಜ್ವಲ್​ ರೇವಣ್ಣ(Prajwal Revanna) ಅವರದು ಎನ್ನಲಾದ ಅಶ್ಲೀಲ ವೀಡಿಯೋ ಪೆನ್​ಡ್ರೈವ್ ಹಂಚಿಕೆ(Pen drive Case) ಪ್ರಕರಣದ ಇಬ್ಬರು ಆರೋಪಿಗಳನ್ನು ಹಾಸನ ಜೈಲಿನಿಂದ ಬಿಡುಗಡೆ ಮಾಡಿ ಹಾಸನದ 3 ನೇ ಅದಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ. ಮಾಜಿ ಶಾಸಕ ಪ್ರೀತಂಗೌಡ ಆಪ್ತ ಲಿಖಿತ್ ಗೌಡ ಹಾಗೂ ಪ್ರೀತಂಗೌಡ ಕಛೇರಿ ಸಹಾಯಕ ಯಲಗುಂದ ಚೇತನ್ ಅವರಿಗೆ ‘ದೇಶ ಬಿಟ್ಟು ಹೋಗಬಾರದು, ವಾರಕ್ಕೆ ಒಮ್ಮೆ ತನಿಖಾಧಿಕಾರಿ ಎದುರು ಹಾಜರಾಗಬೇಕು ಎಂಬ ಷರತ್ತುಬದ್ಧ ಜಾಮೀನು ವಿಧಿಸಿ ಬಿಡುಗಡೆಗೊಳಿಸಲಾಗಿದೆ.

ಇದೇ ಮೇ.12 ರಂದುಎಸ್ ಐಟಿ ಪೊಲೀಸರು ಇಬ್ಬರನ್ನು ಬಂದಿಸಿದ್ದರು. ಇದೀಗ 18 ದಿನಗಳ ಬಳಿಕ ಕೇಸ್​ನ ಆರು ಮತ್ತು ಏಳನೇ ಆರೋಪಿಗಳು ಬಿಡುಗಡೆಯಾಗಿದ್ದಾರೆ. ಈ ಕುರಿತು ಮಾತನಾಡಿದ ಆರೋಪಿಗಳ ಪರ ವಕೀಲ ಮೋಹನ್, ‘ನಮ್ಮ ಕಕ್ಷೀದಾರರು ಯಾವುದೇ ತಪ್ಪು ಮಾಡಿಲ್ಲ ಎಂದು ವಾದ ಮಂಡಿಸಿದ್ದೆವು. ನಮ್ಮ ವಾದ ಆಲಿಸಿ ನ್ಯಾಯಾಲಯ ಜಾಮೀನು ನೀಡಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಶ್ಲೀಲ ವಿಡಿಯೋ ಪ್ರಕರಣ: ಮ್ಯೂನಿಕ್​​ನಿಂದ ಬೆಂಗಳೂರಿನತ್ತ ಹೊರಟ ಹಾಸನ ಸಂಸದ ಪ್ರಜ್ವಲ್​ ರೇವಣ್ಣ

ಇದೇ ಮೇ.14 ರಂದು ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳಾದ ಲಿಖಿತ್​, ಚೇತನ್​​​​ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹಾಸನದ 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯ ವಜಾ ಮಾಡಿ ಆದೇಶ ಹೊರಡಿಸಿತ್ತು. ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪೆನ್​ಡ್ರೈವ್​ ಹಂಚಿಕೆ ಪ್ರಕರಣ ಸಂಬಂಧ ಮಾಜಿ ಬಿಜೆಪಿ ಶಾಸಕ ಪ್ರೀತಂಗೌಡ ಅವರ ಆಪ್ತರು ಎನ್ನಲಾದ ಲಿಖಿತ್​ ಗೌಡ, ಚೇತನ್ ಅವರನ್ನು ಎಸ್​ಐಟಿ ಅಧಿಕಾರಿಗಳು ಮೇ 12ರಂದು ಬಂಧಿಸಿದ್ದರು. ಬಳಿಕ ಆರೋಪಿಗಳನ್ನು ಕೋರ್ಟ್​ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಇದೀಗ ಇಬ್ಬರು ಆರೋಪಿಗಳಿಗೂ ಷರತ್ತುಬದ್ಧ ಜಾಮೀನು ನೀಡಿ ನ್ಯಾಯಾಲಯ ಆದೇಶಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:52 pm, Thu, 30 May 24

ತಾಜಾ ಸುದ್ದಿ