Prajwal Revanna Back in Bengaluru: ಬೆಂಗಳೂರಿಗೆ ಬಂದಿಳಿದ ಹಾಸನ ಸಂಸದ ಪ್ರಜ್ವಲ್​ ರೇವಣ್ಣ

ಅತ್ಯಾಚಾರ, ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಏಪ್ರಿಲ್‌ 26 ರಿಂದ ತಲೆ ಮರೆಸಿಕೊಂಡಿದ್ದರು. ವಿದೇಶದಲ್ಲೇ ಅಜ್ಞಾತವಾಗಿದ್ದ ಪ್ರಜ್ವಲ್‌ ಕೊನೆಗೂ ಭಾರತಕ್ಕೆ ವಾಪಸ್ ಆಗಿದ್ದಾರೆ. ಇದೀಗ ಬೆಂಗಳೂರಿಗೆ ಬಂದಿಳಿದಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಿಐಡಿ ಕಚೇರಿ ಬಳಿ ಪೊಲೀಸ್ ಬಂದೋಬಸ್ತ್‌ ಒದಗಿಸಲಾಗಿದೆ.

Prajwal Revanna Back in Bengaluru: ಬೆಂಗಳೂರಿಗೆ ಬಂದಿಳಿದ ಹಾಸನ ಸಂಸದ ಪ್ರಜ್ವಲ್​ ರೇವಣ್ಣ
ಸಂಸದ ಪ್ರಜ್ವಲ್​ ರೇವಣ್ಣ
Follow us
| Updated By: Digi Tech Desk

Updated on:May 31, 2024 | 9:18 AM

ಬೆಂಗಳೂರು, ಮೇ 30: ಅತ್ಯಾಚಾರ, ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಏಪ್ರಿಲ್‌ 26 ರಿಂದ ತಲೆ ಮರೆಸಿಕೊಂಡಿದ್ದರು. ವಿದೇಶದಲ್ಲೇ ಅಜ್ಞಾತವಾಗಿದ್ದ ಪ್ರಜ್ವಲ್‌ ಕೊನೆಗೂ ಭಾರತಕ್ಕೆ ವಾಪಸ್ ಆಗಿದ್ದಾರೆ. ಇದೀಗ ಬೆಂಗಳೂರಿಗೆ (Bangaluru) ಬಂದಿಳಿದಿದ್ದಾರೆ. ಭಾರತೀಯ ಕಾಲಮಾನ ಪ್ರಕಾರ ಇಂದು ಸಂಜೆ 4.09 ಕ್ಕೆ ಜರ್ಮನಿಯ ಮ್ಯೂನಿಕ್‌ಮಿಂದ ಹೊರಟಿದ್ದ ವಿಮಾನದಲ್ಲಿ ಪ್ರಜ್ವಲ್ ಹತ್ತಿರೋದು ಕನ್ಫರ್ಮ್‌ ಆಗಿತ್ತು. ಲುಫ್ತಾನ್ಸ್‌ ಏರ್‌ಲೈನ್ಸ್‌ನ LH764 ವಿಮಾನದ ಬ್ಯುಸಿನೆಸ್​​ ಕ್ಲಾಸ್‌ನಲ್ಲಿ ಪ್ರಜ್ವಲ್‌ ಪ್ರಯಾಣಿಸಿದ್ದು ಇಂದು ಮಧ್ಯರಾತ್ರಿ 12.48ರ ಸುಮಾರಿಗೆ ಬೆಂಗಳೂರಿಗೆ ಆಗಮಿಸಿದ್ದಾರೆ.

ಮ್ಯೂನಿಕ್‌ನಿಂದ ಬೆಂಗಳೂರಿಗೆ ಆಗಮಿಸಿದ್ದ ಪ್ರಜ್ವಲ್‌ ರೇವಣ್ಣರನ್ನು ಏರ್‌ಪೋರ್ಟ್‌ನಲ್ಲಿ ಬಂಧಿಸಲು ಎಸ್​​ಐಟಿ ಅಧಿಕಾರಿಗಳು ಸಜ್ಜಾಗಿದ್ದಾರೆ. ಬಂಧಿಸಿದ ಬಳಿಕ ಪ್ರಜ್ವಲ್‌ರನ್ನು ಸಿಐಡಿ ಕಚೇರಿಗೆ ಕರೆತರುವ ಸಾಧ್ಯತೆ ಇದೆ.

ಇದನ್ನೂ ಓದಿ: Prajwal Revanna: ಅಶ್ಲೀಲ ವಿಡಿಯೋ ಪ್ರಕರಣ: ಮ್ಯೂನಿಕ್​​ನಿಂದ ಬೆಂಗಳೂರಿನತ್ತ ಹೊರಟ ಹಾಸನ ಸಂಸದ ಪ್ರಜ್ವಲ್​ ರೇವಣ್ಣ

ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಿಐಡಿ ಕಚೇರಿ ಬಳಿ ಪೊಲೀಸ್ ಬಂದೋಬಸ್ತ್‌ ಒದಗಿಸಲಾಗಿದ್ದು, 2 ಕೆಎಸ್​​ಆರ್​ಪಿ ತುಕಡಿ, 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಸಿಐಡಿ ಕಚೇರಿ ಮುಂದೆ ಬ್ಯಾರಿಕೇಡ್ ಹಾಕಲಾಗಿದೆ.

ಪ್ರಜ್ವಲ್‌ ವಿರುದ್ಧ ಲುಕ್‌ಔಟ್‌ ನೋಟಿಸ್ ಇರೋದ್ರಿಂದ ಇಮಿಗ್ರೇಷನ್‌ ಅಧಿಕಾರಿಗಳೇ ಪ್ರಜ್ವಲ್‌ನನ್ನ ವಶಕ್ಕೆ ಪಡೆಯಲಿದ್ದಾರೆ. ಅರೆಸ್ಟ್‌ ವಾರಂಟ್‌ ಕೂಡ ಇರೋದ್ರಿಂದ ಎಸ್‌ಐಟಿ ಅಧಿಕಾರಿಗಳಿಗೆ ಹಸ್ತಾಂತರಿಸಲಿದ್ದಾರೆ. ಮಧ್ಯರಾತ್ರಿಯೇ ಪ್ರಜ್ವಲ್‌ನನ್ನ ಅರೆಸ್ಟ್‌ ಮಾಡಲಿರೋ ಎಸ್‌ಐಟಿ ನಾಳೆ ಬೆಳಗ್ಗೆ ಆರೋಗ್ಯ ತಪಾಸಣೆ ನಡೆಸಿ ಜಡ್ಜ್‌ ಮುಂದೆ ಹಾಜರು ಪಡಿಸಲಿದೆ. ಬಳಿಕ ತಮ್ಮ ವಶಕ್ಕೆ ಕೇಳಲಿದೆ.

ಇದನ್ನೂ ಓದಿ: ಇಂದು ಮಧ್ಯರಾತ್ರಿ ಪ್ರಜ್ವಲ್ ಬೆಂಗಳೂರಿಗೆ; ಏ.21ರಿಂದ ಈವರೆಗೆ ಏನೇನಾಯ್ತು? ಕೇಸ್​ನ ಸಂಪೂರ್ಣ ಡಿಟೇಲ್ಸ್​ ಇಲ್ಲಿದೆ

ಪ್ರಜ್ವಲ್ ಆಗಮಿಸುತ್ತಿದ್ದಾನೆ ಅನ್ನೊದು ಗೊತ್ತಾಗುತ್ತಿದ್ದಂತೆ ವಿವಿಧ ಸಂಘಟನೆಗಳು ಸಿಡಿದೆದ್ದಿವೆ. ಪ್ರಜ್ವಲ್‌ನನ್ನ ಅರೆಸ್ಟ್‌ ಮಾಡಬೇಕು ಸಂತ್ರಸ್ತೆಯರ ಘನತೆ ಕಾಪಾಡಬೇಕು ಅಂತಾ ಆಗ್ರಹಿಸಿ ಹಾಸನದಲ್ಲಿ ದೊಡ್ಡ ಹೋರಾಟ ನಡೆದಿತ್ತು. ಸಾವಿರಾರು ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು, ಹೇಮಾವತಿ ಪ್ರತಿಮೆಯಿಂದ ಡಿಸಿ ಕಚೇರಿವರೆಗೂ ರ‍್ಯಾಲಿ ನಡೆಸಿದ್ದರು. ಬಳಿಕ ಬಹಿರಂಗ ಸಭೆ ಮಾಡಿದ್ದು ಮನವಿ ಸ್ವೀಕರಿಸಲು ಡಿಸಿ ಬದಲು ಎಡಿಸಿ ಶಾಂತಲ ಆಗಮಿಸಿದ್ದಕ್ಕೆ ಹೋರಾಟಗಾರರು ಆಕ್ರೋಶಗೊಂಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:48 am, Fri, 31 May 24