Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಜ್ವಲ್​ ರೇವಣ್ಣ ಪಾಸ್​​ಪೋರ್ಟ್​ ರದ್ದತಿಗೆ ಕೇಂದ್ರ ವಿಳಂಬ ಮಾಡುತ್ತಿಲ್ಲ: ಪ್ರಲ್ಹಾದ್​ ಜೋಶಿ

ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಪಾಸ್​​ಪೋರ್ಟ್​ ರದ್ದತಿ ವಿಚಾರದಲ್ಲಿ ಕೇಂದ್ರ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿಲ್ಲ ಎಂದು ಹೇಳಿದ್ದಾರೆ. ಪ್ರಜ್ವಲ್ ವಿಚಾರದಲ್ಲಿ ಕದ್ದುಮುಚ್ಚಿ ಮಾತಾಡಿಲ್ಲ. ಆದರೆ ಸರ್ಕಾರ ತಮ್ಮ ತಪ್ಪು ಮುಚ್ಚಿಕೊಳ್ಳಲು ದುರುದ್ದೇಶದಿಂದ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಪ್ರಜ್ವಲ್​ ರೇವಣ್ಣ ಪಾಸ್​​ಪೋರ್ಟ್​ ರದ್ದತಿಗೆ ಕೇಂದ್ರ ವಿಳಂಬ ಮಾಡುತ್ತಿಲ್ಲ: ಪ್ರಲ್ಹಾದ್​ ಜೋಶಿ
ಪ್ರಜ್ವಲ್​ ರೇವಣ್ಣ ಪಾಸ್​​ಪೋರ್ಟ್​ ರದ್ದತಿಗೆ ಕೇಂದ್ರ ವಿಳಂಬ ಮಾಡುತ್ತಿಲ್ಲ: ಪ್ರಲ್ಹಾದ್​ ಜೋಶಿ
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ಗಂಗಾಧರ​ ಬ. ಸಾಬೋಜಿ

Updated on: May 25, 2024 | 9:24 PM

ಹುಬ್ಬಳ್ಳಿ, ಮೇ 25: ಹಾಸನ ಸಂಸದ ಪ್ರಜ್ವಲ್​ ರೇವಣ್ಣ (Prajwal Revanna) ಪಾಸ್​​ಪೋರ್ಟ್​ ರದ್ದತಿ ವಿಚಾರದಲ್ಲಿ ಕೇಂದ್ರ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ (Pralhad Joshi) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾಮಾನ್ಯವ್ಯಕ್ತಿಯ ಪಾಸ್​​ಪೋರ್ಟ್ ರದ್ದತಿಗೂ ಒಂದು ಪ್ರಕ್ರಿಯೆ ಇರುತ್ತೆ. ಆ ಪ್ರಕ್ರಿಯೆ ಬಿಟ್ಟು ನಾವು ಏನೂ ಮಾಡಲು ಬರುವುದಿಲ್ಲ. ಪ್ರಧಾನಿ, ವಿದೇಶಾಂಗ ಸಚಿವರು ಸೇರಿ ಯಾರಿಗೇ ಪತ್ರ ಬರೆದರೂ ಆಗಲ್ಲ. ಯಾರ ಮೇಲೆ ಏನು ಆರೋಪ ಇದೆ, ಎಫ್​ಐಆರ್​ನಲ್ಲಿ ಏನಿದೆ? ಎಲ್ಲಾ ವಿಚಾರಗಳನ್ನು ಕೇಂದ್ರ ಸರ್ಕಾರಕ್ಕೆ ಪೊಲೀಸ್ ಇಲಾಖೆ ನೀಡಬೇಕು. ಸಿಎಂ ಸಿದ್ದರಾಮಯ್ಯ ಪತ್ರ ಬರೆದು ರಾಜಕೀಯ ಮಾಡಿದರೆ ಆಗಲ್ಲ ಎಂದು ಕಿಡಿಕಾರಿದ್ದಾರೆ.

ಪ್ರಜ್ವಲ್​ ವಿರುದ್ಧ ಆರೋಪ ಬಂದಾಗಿಂದಲೂ ಬಂಧಿಸುವಂತೆ ಒತ್ತಾಯ ಮಾಡಲಾಗುತ್ತಿದೆ. ಪ್ರಜ್ವಲ್ ವಿಚಾರದಲ್ಲಿ ಕದ್ದುಮುಚ್ಚಿ ಮಾತಾಡಿಲ್ಲ. ಆದರೆ ಸರ್ಕಾರ ತಮ್ಮ ತಪ್ಪು ಮುಚ್ಚಿಕೊಳ್ಳಲು ದುರುದ್ದೇಶದಿಂದ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪೆನ್​ಡ್ರೈವ್​ ಹಂಚಿಕೆ ಆರೋಪ ಕೇಸ್​, ತಪ್ಪದ ಬಂಧನ ಭೀತಿ: ಹೈಕೋರ್ಟ್ ಮೊರೆಹೋದ ಆರೋಪಿಗಳು

ಸಿದ್ದರಾಮಯ್ಯ ಮಗ ಸಾವಿನ ವಿಚಾರದ ಬಗ್ಗೆ ನಾನು ಮಾತಾಡಲ್ಲ. ಸ್ವಲ್ಪ ಮಾನವೀಯತೆ ಆಧಾರದಲ್ಲಿ ರಾಜಕೀಯ ಮಾಡಬೇಕು. ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ನೋವಿನಿಂದ ಮಾತಾಡಿದ್ದಾರೆ ಅದನ್ನ ತಪ್ಪು ಎನ್ನಲ್ಲ. ಪ್ರಜ್ವಲ್ ರೇವಣ್ಣರನ್ನ ದೇಶ ಬಿಡುವಂತೆ ಮಾಡಿದ್ದೇ ರಾಜ್ಯ ಸರ್ಕಾರ. ಈಗ ಕೇಂದ್ರಕ್ಕೆ ಪತ್ರ ಬರೆದು ರಾಜಕೀಯ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ಕರ್ನಾಟಕ ರಾಜ್ಯ ಉಗ್ರರ ಸ್ಲೀಪಿಂಗ್​ ಸೆಲ್​ ಆಗಿ ಬದಲಾಗಿದೆ: ಜೋಶಿ ಆರೋಪ

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಉಗ್ರರ ಚಟುವಟಿಕೆ ಏರಿಕೆ ಆಗಿದೆ. ಕರ್ನಾಟಕ ರಾಜ್ಯ ಉಗ್ರರ ಸ್ಲೀಪಿಂಗ್​ ಸೆಲ್​ ಆಗಿ ಬದಲಾಗಿದೆ ಎಂದು ಆರೋಪಿಸಿದ್ದಾರೆ. ಮತಾಂಧರಿಗೆ ಕರ್ನಾಟಕ ಸುರಕ್ಷಿತ ತಾಣ ಅಂತಾ ಅನ್ನಿಸಿಬಿಟ್ಟಿದೆ. ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟಕ್ಕೆ ಬೇರೆ ಅರ್ಥ ಕಲ್ಪಿಸಲು ಯತ್ನಿಸಿದರು. ಒಬ್ಬರು ಸಿಲಿಂಡರ್ ಸ್ಫೋಟ ಅಂತ ಹೇಳಿಕೆ ನೀಡಿದರು. ಡಿಸಿಎಂ ವೃತ್ತಿ ದ್ವೇಷದ ವಿಚಾರವಾಗಿ ಸ್ಫೋಟ ಆಗಿರಬೇಕು ಎಂದ್ರು. ಇದೆಲ್ಲವೂ ಕಾಂಗ್ರೆಸ್ ತುಷ್ಟೀಕರಣದ ಫಲ. ಉಗ್ರರ ಚಟುವಟಿಯನ್ನು ನಿಯಂತ್ರಿಸಲು ಈ ಸರ್ಕಾರಕ್ಕೆ ಆಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಡ್ರಗ್ಸ್‌ ವಿಚಾರದಲ್ಲಿ ಕರ್ನಾಟಕ ಪಂಜಾಬ್‌ನ್ನು ಮೀರಿಸಲು ಹೊರಟಿದೆ

ಡ್ರಗ್ಸ್‌ ವಿಚಾರದಲ್ಲಿ ಕರ್ನಾಟಕ ಪಂಜಾಬ್‌ನ್ನು ಮೀರಿಸಲು ಹೊರಟಿದೆ ಎಂದು ಆರೋಪಿಸಿದ್ದಾರೆ. ಸರ್ಕಾರದ ಬೇಜವಾಬ್ದಾರಿ ಮುಂದುವರಿದ್ರೆ ಪಂಜಾಬ್‌ನ್ನು ಮುಂದುವರಿಸುತ್ತೆ. ರಾಜ್ಯ ಸರ್ಕಾರ ಡ್ರಗ್ಸ್‌ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್​​ನನ್ನು ವಿದೇಶಕ್ಕೆ ಕಳಿಸಿದ್ದೇ ದೇವೇಗೌಡರು ಎಂದಿದ್ದ ಸಿದ್ದರಾಮಯ್ಯಗೆ ಹೆಚ್​​ಡಿ ಕುಮಾರಸ್ವಾಮಿ ತಿರುಗೇಟು

2 ಗಂಟೆಗೊಮ್ಮೆ ಪೊಲೀಸರು ವ್ಯಾಯಾಮ ಮಾಡಬೇಕೆಂಬ ಆದೇಶ ವಿಚಾರವಾಗಿ ಮಾತನಾಡಿದ್ದು, ಪೊಲೀಸರು ಮೊದಲೇ ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಪೊಲೀಸರು ಕೆಲವೊಮ್ಮೆ ತಪ್ಪುಗಳನ್ನು ಮಾಡುತ್ತಾರೆ. ಆದರೆ ಪೊಲೀಸರ ಮೇಲೆ ಕಲ್ಲು ತೂರಾಟ ಇತ್ಯಾದಿಗಳು ನಡೆಯುತ್ತವೆ.

ಪೊಲೀಸರ ಸಂಖ್ಯೆ ಕಡಿಮೆ ಇರೋದರಿಂದ ಅವರ ಮೇಲೆ ಒತ್ತಡ ಹೆಚ್ಚಾಗಿದೆ. ಇದರ ನಡುವೆ ಔರಾದ್ಕರ್ ವರದಿಯನ್ನು ಸರ್ಕಾರ ಜಾರಿ ಮಾಡಿಯೇ ಇಲ್ಲ. ಒತ್ತಡದಲ್ಲಿರುವಾಗ 2 ಗಂಟೆಗೊಮ್ಮೆ ವ್ಯಾಯಾಮ ಮಾಡಿ ಅನ್ನೋದು ಸರಿ ಅಲ್ಲ. ರಾಜ್ಯ ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.