ಕರ್ನಾಟಕದ ಅಮ್ಮ ಭವಾನಿ ರೇವಣ್ಣ​​: ಸೋಶಿಯಲ್​ ಮೀಡಿಯಾದಲ್ಲಿ ಕಾರ್ಯಕರ್ತರ ಫೈಟ್​​

ಜೆಡಿಎಸ್ ಕಾರ್ಯಕರ್ತರು ನಿಂತಿರೋದು ಕುಮಾರಸ್ವಾಮಿ ಹಾಗು ದೇವೇಗೌಡರು ಎನ್ನುವ ಶಕ್ತಿ ಹಿಂದೆ, ನಮ್ಮ ಗುರಿ ಕುಮಾರಸ್ವಾಮಿ ಮುಖ್ಯಮಂತ್ರಿ ಮಾಡೋದು. ಜೆಡಿಎಸ್​ಗೆ ಇವತ್ತು ಜನ ಬೆಂಬಲ ಇರೋದಕ್ಕೆ ಕುಮಾರಸ್ವಾಮಿ ಕಾರಣವೇ ಹೊರತು ರೇವಣ್ಣನ ಮಕ್ಕಳ್ಳಿಂದಲ್ಲ ಕಾರ್ಯಕರ್ತರ ಪೋಸ್ಟ್​​.

ಕರ್ನಾಟಕದ ಅಮ್ಮ ಭವಾನಿ ರೇವಣ್ಣ​​: ಸೋಶಿಯಲ್​ ಮೀಡಿಯಾದಲ್ಲಿ ಕಾರ್ಯಕರ್ತರ ಫೈಟ್​​
ಕರ್ನಾಟಕದ ಅಮ್ಮ ಭವಾನಿ ರೇವಣ್ಣ ಪೋಸ್ಟರ್​​
Follow us
TV9 Web
| Updated By: ವಿವೇಕ ಬಿರಾದಾರ

Updated on: Jan 29, 2023 | 12:25 PM

ಹಾಸನ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮೂರು ಪಕ್ಷಗಳ ರಾಜಕೀಯ ರಂಗಿನಾಟ ತಾರಕಕ್ಕೇರಿದೆ. ಜೆಡಿಎಸ್ (JDS)​ ಈ ಬಾರಿ 120 ಸ್ಥಾನಗಳಲ್ಲಿ ಗೆದ್ದು ಸ್ವಂತ ಬಲದಿಂದ ಅಧಿಕಾರದ ಚುಕ್ಕಾಣಿಯಡಲು ಟೊಂಕ ಕಟ್ಟಿ ನಿಂತಿದೆ. ಈ ಹಿನ್ನೆಲೆ ಪಂಚಯೋಜನೆಗಳನ್ನು ಮುಂದಿಟ್ಟುಕೊಂಡು ಪಂಚರತ್ನ ಯಾತ್ರೆ ನಡೆಸುತ್ತಿದ್ದು, ಜನರತ್ತ ಮತ ಬುಟ್ಟಿಯನ್ನು ಹಿಡಿದಿದೆ. ಇದೊಂದಡೆಯಾದರೆ ಹಾಸನ ಕ್ಷೇತ್ರದಿಂದ ಟಿಕೆಟ್​ ಕೊಡಲೇಬೇಕು ಎಂದು ಭವಾನಿ ರೇವಣ್ಣ (Bhavani Revanna) ಪಟ್ಟು ಹಿಡಿದಿದ್ದಾರೆ. ಆದರೆ ಮಾಜಿ ಮುಖ್ಯಮಂತ್ರಿ ಹೆಚ್​. ಡಿ ಕುಮಾರಸ್ವಾಮಿ (HD Kumaraswamy) ಮಾತ್ರ ಟಿಕೆಟ್​ ನೀಡಲು ಸುತಾರಂ ಒಪ್ಪುತ್ತಿಲ್ಲ. ಹೀಗಾಗಿ ಭವಾನಿ ರೇವಣ್ಣ, ಸಂಸದ ಪ್ರಜ್ವಲ್​ ರೇವಣ್ಣ (prajwal Revanna), ಸೂರಜ್​ ರೇವಣ್ಣ ಪರೋಕ್ಷವಾಗಿ ಕುಮಾರಸ್ವಾಮಿ ಟಾಂಗ್​ ನೀಡಿದ್ದು ಸದ್ಯ ಟಿಕೆಟ್​​ ವಿಚಾರ ಮಾಜಿ ಪ್ರಧಾನಿ ಹೆಚ್​. ಡಿ ದೇವೆಗೌಡರ (HD Devegowda) ಕೈಯಲ್ಲಿದ್ದು, ಯಾರತ್ತ ಕೈ ಹೋಗುತ್ತೋ ಕಾದು ನೋಡಬೇಕಾಗಿದೆ.

ಇದೆಲ್ಲದರ ಮಧ್ಯೆ ಭವಾನಿ ರೇವಣ್ಣ, ಪ್ರಜ್ವಲ್​ ರೇವಣ್ಣ, ಸೂರಜ್​ ರೇವಣ್ಣ, ನಿಖಿಲ್​ ಕುಮಾರಸ್ವಾಮಿ ಮತ್ತು ಹೆಚ್​ ಡಿ ಕುಮಾರಸ್ವಾಮಿ ಪರ-ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಾರ್ಯಕರ್ತರು ಗುದ್ದಾಟ ಶುರು ಹಚ್ಚಿಕೊಂಡಿದ್ದಾರೆ.

ಕರ್ನಾಟಕದ ಅಮ್ಮ ಭವಾನಿ ರೇವಣ್ಣ

ಹಾಸನದ ಮುಂದಿನ ಎಂಎಲ್​ಎ, ‘ಕರ್ನಾಟಕ ರಾಜ್ಯದ ಮಹಿಳಾ ಶಕ್ತಿಗೆ ಮತ್ತೊಂದು ಭರವಸೆ ಅಮ್ಮ’ ಎಂದು ಭವಾನಿ ರೇವಣ್ಣ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಪ್ರಾರಂಭಿಸಿದ್ದಾರೆ. ಭವಾನಿ ರೇವಣ್ಣ ಪರ ಟ್ರೆಂಡ್​ ಸೆಟ್​​ ಮಾಡುತ್ತಿದ್ದು ಪೋಸ್ಟರ್​ ಸಾಕಷ್ಟು ವೈರಲ್​ ಆಗುತ್ತಿದೆ.  ಜಯಲಲಿತಾ ಫೋಟೋ ಜೊತೆ ಭವಾನಿ ಫೋಟೋ ಸೇರಿಸಿ ವೈರಲ್ ಮಾಡಲಾಗುತ್ತಿದೆ.

JDS​ಗೆ ಜನ ಬೆಂಬಲ ಇರೋದು ಹೆಚ್​ಡಿಕೆಯಿಂದ ಹೊರತು ರೇವಣ್ಣ ಮಕ್ಕಳಿಂದಲ್ಲ

ಪಕ್ಷ ಅಧಿಕಾರಕ್ಕೆ ತಂದು ಗೌಡರ ಕನಸಿನ ಪಕ್ಷ ಉಳಿಸಲು ಕುಮಾರಸ್ವಾಮಿ ಹೋರಾಡುತ್ತಿದ್ದಾರೆ. ತಮ್ಮ ಅರೋಗ್ಯ ಲೆಕ್ಕಿಸದೆ ಕುಮಾರಸ್ವಾಮಿ ಹೋರಾಡುತ್ತಿದ್ದರೇ, ಇಲ್ಲಿ ಒಂದು ಸ್ಥಾನಕ್ಕಾಗಿ ಅವರ ಮನಸ್ಸಿಗೆ ನೋವು ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಜೆಡಿಎಸ್ ಕಾರ್ಯಕರ್ತರು ನಿಂತಿರೋದು ಕುಮಾರಸ್ವಾಮಿ ಹಾಗು ದೇವೇಗೌಡರು ಎನ್ನುವ ಶಕ್ತಿ ಹಿಂದೆ, ನಮ್ಮ ಗುರಿ ಕುಮಾರಸ್ವಾಮಿ ಮುಖ್ಯಮಂತ್ರಿ ಮಾಡೋದು. ಜೆಡಿಎಸ್​ಗೆ ಇವತ್ತು ಜನ ಬೆಂಬಲ ಇರೋದಕ್ಕೆ ಕುಮಾರಸ್ವಾಮಿ ಕಾರಣವೇ ಹೊರತು ರೇವಣ್ಣನ ಮಕ್ಕಳ್ಳಿಂದಲ್ಲ ಎಂದು ತಿರುಗೇಟು ನೀಡಿದ್ದಾರೆ. ಈ ಎಲ್ಲ ಬೆಳವಣಿಗೆ ನೋಡಿದರೆ ಜೆಡಿಎಸ್ ಸರ್ವನಾಶಕ್ಕೆ ಹಾಸನದವರು ಮುನ್ನುಡಿ ಬರೆಯುತ್ತಿದ್ದಾರೆ. ಕುಮಾರಸ್ವಾಮಿ ಅವರ ಮಾತಿನಂತೆ ಎಲ್ಲವು ನಡೆಯಲಿ ಎಂದು ಕೆಲ ಬೆಂಬಲಿಗರ ಪೋಸ್ಟ್ ಹಾಕಿದ್ದಾರೆ.

ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಮತ್ತು ಸೂರಜ್ ರೇವಣ್ಣ ಅಭಿಮಾನಿಗಳಿಂದಲೂ ಸಾಮಾಜಿಕ ಜಾಲತಾಣದಲ್ಲಿ ಮಾತಿನ ಸಮರ ನಡೆದಿದೆ. ಸೂರಜ್, ಪ್ರಜ್ವಲ್ ಚೈಲ್ಡ್ ರೀತಿ ಮಾತಾಡುತ್ತಾರೆ ಎಂದು ನಿಖಿಲ್ ಅಭಿಮಾನಿಗಳು ಕಿಡಿಕಾರಿದರೇ, ಜೆಡಿಎಸ್​​ಗೆ ಮುಖ್ಯ ಪವರ್ ಅಂದರೇ ನಮ್ಮ ಸೂರಜ್ ಬಾಸ್ ಎಂದು ಸೂರಜ್​ ಅಭಿಮಾನಿಗಳು ಪೋಸ್ಟ್​​ ಹಾಕಿದ್ದಾರೆ.

ಹಾಸನದಲ್ಲಿ ಭವಾನಿ ಅಕ್ಕ ಬಿಟ್ಟು ಬೇರೆ ಯಾರು ಬಂದರೂ ಸೋಲು ಖಚಿತ. ಭವಾನಿ ಅವರು ಹಾಸನ ಬಿಟ್ಟು ಉತ್ತರ ಕರ್ನಾಟಕದಲ್ಲಿ ನಿಲ್ಲಲಿ ಎನ್ನೋರು, ನಿಖಿಲ್​ಗು ರಾಮನಗರ ಬಿಟ್ಟು ಉತ್ತರ ಕರ್ನಾಟಕದಲ್ಲಿ ನಿಲ್ಲೋಕೆ ಹೇಳಿ ಎಂದು ಕಾಮೇಂಟ್​ ಮಾಡಿದ್ದಾರೆ. ತಮ್ಮ ತಮ್ಮ ನಾಯಕರನ್ನ ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಹೀಗೆ ಪೋಸ್ಟ್ ಮಾಡಿ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಹೊಸ ದಾಳ ಉರುಳಿಸುತ್ತಾರಾ ದೌಡಗೌಡ್ರು

ಟಿಕೆಟ್ ಗೊಂದಲ ಬಗೆ ಹರಿಸಲು ದೊಡ್ಡಗೌಡ್ರು ಹೊಸ ರಾಜಕೀಯ ದಾಳ ಉರುಳಿಸಲು ಮುಂದಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಶೀಘ್ರದಲ್ಲೆ ಕುಮಾರಸ್ವಾಮಿ, ರೆವಣ್ಣ ಸಮ್ಮುಖದಲ್ಲಿ ಚರ್ಚೆ ಮಾಡಲು ಗೌಡರು ನಿರ್ಧರಿಸಿದ್ದಾರೆ. ಒಟ್ಟಿಗೆ ಚರ್ಚೆ ಮಾಡಿ ಗೊಂದಲ ಬಗೆಹರಿಸಲು ತೀರ್ಮಾನ ಮಾಡಿದ್ದಾರೆ. ಒಂದು ಕಡೆ ಟಿಕೆಟ್​ಗಾಗಿ ಇಡೀ ರೆವಣ್ಣ ಕುಟುಂಬ ಪಟ್ಟು ಹಿಡಿದರೇ, ಇನ್ನೊಂದು ಕಡೆ ಭವಾನಿಗೆ ಟಿಕೆಟ್ ಕೊಡಲು ಕುಮಾರಸ್ವಾಮಿ ಒಪ್ಪುತ್ತಿಲ್ಲ.

ಹೆಚ್​ಡಿಕೆ ಈಗಾಗಲೇ ಹಾಸನ ವಿಧಾನಸಭಾ ಕ್ಷೇತ್ರದ ಬಗ್ಗೆ ಗೌಡರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ಹಿನ್ನೆಲೆ ಗೌಡರು ಕುಮಾರಸ್ವಾಮಿ ಮನವರಿಕೆಗೆ ಮಣೆ ಹಾಕ್ತಾರ, ರೆವಣ್ಣನ ಒತ್ತಡಕ್ಕೆ ಮಣಿಯುತ್ತಾರಾ ಕಾದು ನೋಡಬೇಕಿದೆ. ರೆವಣ್ಣ ಕುಟುಂಬ ಪಟ್ಟು ಬಿಡದಿದ್ದರೇ ಸ್ವರೂಪ್ ಮತ್ತು ಭವಾನಿಗೆ ಟಿಕೆಟ್ ಕೊಡದೆ, ಹಾಸನ ವಿಧಾನಸಭಾ ಕ್ಷೇತ್ರದಿಂದ ಹೊಸ ಅಭ್ಯರ್ಥಿಗೆ ಗೌಡರು ಮಣೆ ಹಾಕುವ ಸಾಧ್ಯತೆ ಇದೆ. ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ನೀಡಿದರೆ ಗೊಂದಲ ಮತ್ತಷ್ಟು ಹೆಚ್ಚಾಗುತ್ತದೆ. ಅದ್ದರಿಂದ ಹೊಸಬರನ್ನು ಕಣ್ಣಕ್ಕಿಳಿಸುವ ನಿರ್ಧಾರ ಗೌಡರು ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ದೇವೆಗೌಡರ ನಡೆ ಕುತೂಹಲ ಮೂಡಿಸಿದೆ.