ಚೈತ್ರಾ ಕುಂದಾಪುರ ಪ್ರಕರಣದ ತನಿಖೆ‌ ವಿಚಾರ; ಚಕ್ರವರ್ತಿ ಸೂಲಿಬೆಲೆ ಹೇಳಿದ್ದಿಷ್ಟು

ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆದಿದ್ದವನ ಬಂಧನ ವಿಚಾರ ‘ಎಲ್ಲೋ ಒಂದು ಕಡೆ ಒಂದು ವಿಚಾರವನ್ನು ತಿರುಗಿಸಲು‌ ಮತ್ತೊಂದು ಕಡೆ ಈ ವಿಚಾರವನ್ನು ತೆಗೆದುಕೊಂಡು ಹೋಗುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಚೈತ್ರಾ ಕುಂದಾಪುರ ಪ್ರಕರಣದ ತನಿಖೆ‌ ವಿಚಾರ; ಚಕ್ರವರ್ತಿ ಸೂಲಿಬೆಲೆ ಹೇಳಿದ್ದಿಷ್ಟು
ಚಕ್ರವರ್ತಿ ಸೂಲಿಬೆಲೆ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Sep 30, 2023 | 10:36 PM

ಹಾಸನ, ಸೆ.30: ಚೈತ್ರಾ ಕುಂದಾಪುರ ಪ್ರಕರಣದ ತನಿಖೆ‌ ವಿಚಾರಕ್ಕೆ ಸಂಬಂಧಪಟ್ಟಂತೆ ‘ ಚೈತ್ರಾ ಕುಂದಾಪುರ ಕೇಸ್‌ನಲ್ಲಿ ಬಹುಶಃ ಎಲ್ಲಾ ವಿಚಾರಗಳು ಹೊರಗೆ ಬರುತ್ತಿದೆ ಎಂದು ನನಗೆ ಅನ್ನಿಸುತ್ತೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ(Chakravarty Sulibele) ಹೇಳಿದರು. ‘ಸರ್ಕಾರ ಇನ್ವಾಲ್ವ್‌ಮೆಂಟ್ ಬಹಳ ಆಗಲಿಲ್ಲ. ಏನೇ ನಿರ್ಣಯ ಬಂದರು ಸಮಾಜ ಬದ್ಧವಾಗಿದೆ. ನಾವು ಇತರೇ ಸಮಾಜಗಳಂತೆ ಆರೋಪ ಬಂದಾಗ ಅಥವಾ ಸಾಬೀತಾದಾಗ ಅವರನ್ನು ಸಮರ್ಥಿಸಿಕೊಳ್ಳೋದು, ಅವರು ಜೈಲಿನಿಂದ ಬಂದಾಗ ಹಾರ ಹಾಕಿ ಸ್ವಾಗತಿಸುವುದು, ಬಿ ರಿಪೋರ್ಟ್ ಹಾಕಿ ಎಂದು ಸರ್ಕಾರಕ್ಕೆ ಪತ್ರ ಬರೆಯುವಂತಹ ಕೆಲಸಗಳನ್ನು ಮಾಡುವುದಿಲ್ಲ ಎಂದಿದ್ದಾರೆ.

ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು

ಹಾಸನದಲ್ಲಿ ಮಾತನಾಡಿದ ಅವರು ‘ ನ್ಯಾಯಯುತವಾದ ಪ್ರಕ್ರಿಯೆ ಏನು ಆಗಬೇಕೂ ಅದು ಖಂಡಿತವಾಗಿಯೂ ನಡೆಯಬೇಕು. ಅದರಲ್ಲಿ ಯಾರದ್ದೇ ಹಸ್ತಕ್ಷೇಪ ಇಲ್ಲದೆ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ನಾನೂ ಕೂಡ ಆಗ್ರಹಿಸುತ್ತೇನೆ. ಹಿಂದೂ ಧರ್ಮ ಎನ್ನುವುದು ಮಹಾಪ್ರವಾಹ, ಈ ಪ್ರವಾಹ ನಿನ್ನೆ, ಮೊನ್ನೆ ಹುಟ್ಟಿದ್ದಲ್ಲ . ಹತ್ತಾರು ಸಾವಿರ ವರ್ಷಗಳಿಂದ ಇದೆ. ಈ ಪ್ರವಾಹವನ್ನು ನಾಶ ಮಾಡಬೇಕೆಂದು ಬಾಬರ್, ಔರಂಗಜೇಬ್ ಅದಕ್ಕಿಂತ ಪೂರ್ವದಲ್ಲಿ ಮಹಮದ್ ಗಜ್ನಿ, ಮಹಮದ್ ಘೋರಿ, ಕ್ರಿಶ್ಚಿಯನ್ನರು  ಅಂತ ಬಂದರು. ಅವರಿಂದ ಏನು ಆಗಲಿಲ್ಲ. ಅಂತರಂಗದಲ್ಲಿ ಅನೇಕರು ತೊಂದರೆ ಮಾಡಿದ್ರು ಕೂಡ ನಾಶವಾಗುವಂತಹ, ಸರಳವಾಗಿರುವಂತಹ ಧರ್ಮ ಇದಲ್ಲ.

ಇದನ್ನೂ ಓದಿ:ಕೆಪಿಸಿಸಿ ಐಟಿ ಸೆಲ್ ಉಪಾಧ್ಯಕ್ಷೆ ಸೌಗಂಧಿಕಾ ಕುರಿತು ಚಕ್ರವರ್ತಿ ಸೂಲಿಬೆಲೆ ಅವಹೇಳಕಾರಿ ಪೋಸ್ಟ್, ಚಿಂತಕನ ವಿರುದ್ಧ ಎಫ್​​ಐಅರ್!

ಹಾಗಾಗಿ ಈ ತರಹದ ಪ್ರಕರಣಗಳು ನಡೆಯುತ್ತಾ ಇರುತ್ತೆ. ಸಾವಿರ ಚಕ್ರವರ್ತಿಗಳು ಹಿಂದೂ ಪ್ರವಾಹದಲ್ಲಿ ಬರ್ತಾರೆ, ಹೋಗ್ತಾರೆ. ಈ ಪ್ರವಾಹ ನಿರಂತರವಾಗಿರುತ್ತೆ. ಈಗ ಆಗಿರುವ ತಾತ್ಕಾಲಿಕ ತೊಂದರೆಯಿಂದ ಧರ್ಮದ ಪ್ರವಾಹಕ್ಕೆ ತೊಂದೆ ಆಗಿಲ್ಲ. ನಿರಂತರವಾದ ಪ್ರವಾಹ ಹೀಗೆ ಹರಿಯುತ್ತಾ ಇರುತ್ತೆ. ಸಾವಿರಾರು ಜನ ಬರ್ತಾರೆ, ಇದನ್ನು ಗಟ್ಟಿಗೊಳಿಸುತ್ತಾರೆ. ಇನ್ನೂ ವೀಕ್ ಮಾಡಿರುವವರು ಸಹಜವಾಗಿ ಸೈಡ್‌ಗೆ ಹೋಗುತ್ತಾರೆ ಎಂದರು.

ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆದವನ ಬಂಧನ

ಇದೇ ವೇಳೆ ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆದಿದ್ದವನ ಬಂಧನ ವಿಚಾರ ‘ಎಲ್ಲೋ ಒಂದು ಕಡೆ ಒಂದು ವಿಚಾರವನ್ನು ತಿರುಗಿಸಲು‌ ಮತ್ತೊಂದು ಕಡೆ ಈ ವಿಚಾರವನ್ನು ತೆಗೆದುಕೊಂಡು ಹೋಗುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ. ಹೇಗಾದರೂ ಮಾಡಿ ಹಿಂದುತ್ವವಾದಿಗಳು ಇತರೆ ಜನ ಬೇರೆ ಎನ್ನುವ ಪ್ರಯತ್ನ ಎನಿಸುತ್ತದೆ. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದಲೂ ಈ ತರಹದ್ದು ಒಂದೆರಡು ಪ್ರಕರಣ ಅಲ್ಲ, ಅವರು ಸಾಕಷ್ಟು ಎಫ್‌ಐಆರ್ ಹಾಕುತ್ತಿದೆ. ಇದು ಕಾಂಗ್ರೆಸ್ ಸರ್ಕಾರವೋ, ಎಫ್‌ಐಆರ್ ಸರ್ಕಾರವೋ? ಎಂದು ಪ್ರಶ್ನಿಸಿದ್ದಾರೆ.

ಸಿದ್ರಾಮುಲ್ಲಾಖಾನ್ ಎಂದವರ ಮೇಲೆ ಎಫ್‌ಐಆರ್ ಆಯ್ತು

ಹೌದು, ಯಾರೋ ಒಬ್ಬರು ಸಿದ್ರಾಮುಲ್ಲಾಖಾನ್ ಎಂದವರ ಮೇಲೆ ಎಫ್‌ಐಆರ್ ಆಯ್ತು. ಶಿಕ್ಷಕರೊಬ್ಬರು ಸರ್ಕಾರವನ್ನು ಟೀಕಿಸಿದ್ದಕ್ಕೆ ಅವರ ಮೇಲೆ, ನನ್ನ ಫೇಸ್‌ಬುಕ್ ಕಮೆಂಟ್ ಹೋಗಿದೆ ಎನ್ನುವ ಕಾರಣಕ್ಕೆ ಎಫ್‌ಐಆರ್ ಮಾಡಿದರು. ರಾತ್ರಿ ಹತ್ತು ಗಂಟೆಯಲ್ಲಿ ಸ್ಟೇಷನ್‌ಗೆ ಕರ್ಕಂಡು ಹೋಗಿದ್ದಾರೆ. ಸೈಬರ್ ‌ಕ್ರೈಂ ಅಲ್ಲಿ ಸ್ಟೇಷನ್‌ಗೆ ಕರೆದುಕೊಂಡು ಹೋಗುವ ಪ್ರಕ್ರಿಯೆಯೇ ಇಲ್ಲ. ಸ್ಟೇಷನ್‌ಗೆ ಕರೆದುಕೊಂಡು ಹೋಗಬೇಕು ಎಂದು ಹಠ ಹಿಡಿದ್ರು, ಇವೆಲ್ಲ ನೋಡಿದ್ರೆ ಈ ಸರ್ಕಾರ ಏನ್ ಬೇಕಿದ್ರು ಮಾಡಬಹುದು ಎಂದು ನನಗೆ ಅನ್ಸುತ್ತೆ ಎಂದು ಹೇಳಿದರು.

ಇದನ್ನೂ ಓದಿ:ನಾನು ಫೋನ್ ಮಾಡುವ ಮೊದಲೇ ಚಕ್ರವರ್ತಿ ಸೂಲಿಬೆಲೆಗೆ ಚೈತ್ರಾ ಕುಂದಾಪುರ ವಂಚನೆ ಪ್ರಕರಣ ಗೊತ್ತಾಗಿತ್ತು: ರಾಜಶೇಖರಾನಂದ ಸ್ವಾಮೀಜಿ

ಕಾವೇರಿ ಹೋರಾಟಗಾರರ ಮೇಲೆ ನಾನ್ ಬೇಲ್ ವಾರೆಂಟ್‌

ಸಿದ್ದರಾಮಯ್ಯ ಅವರ ಸರ್ಕಾರ, ಗಣೇಶನನ್ನು ಕೂರಿಸಲು, ವಿಸರ್ಜನೆ ಮಾಡಲು ಅನುಮತಿ ತೆಗೆದುಕೊಳ್ಳಬೇಕು ಎಂದು ಹೇಳುತ್ತದೆ. ಸ್ಟಾಲಿನ್ ಪ್ರತಿಕೃತಿ ದಹಿಸಿದ್ದಕ್ಕೆ , ಕೆಲವು ಕಾವೇರಿ ಹೋರಾಟಗಾರರ ಮೇಲೆ ನಾನ್ ಬೇಲ್ ವಾರೆಂಟ್‌ನ್ನು ಹೊರಡಿಸಿದ್ದಾರೆ. ಇದನ್ನು ಕೇಳಿದಾಗ ನನಗೆ ಗಾಬರಿ ಆಯ್ತು. ಎಲ್ಲೋ ಒಂದು ಕಡೆ ಜನರ ಸ್ವಾತಂತ್ರ್ಯವನ್ನು ಹತ್ತಿಕ್ಕುವಂತಹ, ಡೆಮಾಕ್ರಸಿಯನ್ನು ನಾಶ ಮಾಡುವ ಪ್ರಯತ್ನ ಮಾಡುತ್ತಿದೆ. ಈ‌ ಸರ್ಕಾರ ಹಿಟ್ಲರ್ ಮಾದರಿಯಲ್ಲಿ ವ್ಯವಹಾರ ಮಾಡುತ್ತಿದೆ ಎಂದು ಕಿಡಿಕಾರಿದರು.

I.N.D.I.A. ಮೈತ್ರಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಅವರು ಶತಾಯಗತಾಯ ಪ್ರಯತ್ನ

I.N.D.I.A. ಮೈತ್ರಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಅವರು ಶತಾಯಗತಾಯ ಪ್ರಯತ್ನ ಪಡುತ್ತಿದ್ದಾರೆ. ಕನ್ನಡ ಜನರಿಗೆ ಗೊತ್ತೆ ಆಗದಂತೆ ಸುಪ್ರೀಂಕೋರ್ಟ್ ಹೇಳುವ ಮುಂಚೆ, ಎಲ್ಲರಿಗೂ ವಿಚಾರ ಗೊತ್ತಾಗುವ ಮುಂಚೆ ನೀರನ್ನು ಬಿಡುವಂತಹ ಪ್ರಯತ್ನ ಮಾಡಿದ್ದು, ಅಕ್ಷಮ್ಯ ಅಪರಾಧ. ಎಲ್ಲಾ ಪಕ್ಷಗಳನ್ನು ಮೊದಲೇ ವಿಶ್ವಾಸಕ್ಕೆ ತೆಗೆದುಕೊಂಡು ನೀರು ಬಿಡಬೇಕೋ, ಬೇಡವೋ ಎಂದು ಯೋಚನೆ ಮಾಡಬೇಕಿತ್ತು. ಮೈತ್ರಿಯ ದಾವಂತಕ್ಕೆ ಬಿದ್ದು ಕನ್ನಡರಿಗೆ ಈ ಪರಿ ತೊಂದರೆ ಮಾಡಿದ್ದಾರೆ. ಕನ್ನಡಿಗರು ಅವರನ್ನು ಕ್ಷಮಿಸಲಾರರು ಅನ್ನಿಸುತ್ತೆ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಚೈತ್ರಾ ಕುಂದಾಪುರ ವಂಚನೆ ಪ್ರಕರಣದಲ್ಲಿ ತಪ್ಪಿತಸ್ಥರು ಯಾರೇ ಅಗಿದ್ದರೂ ಸತ್ಯ ಹೊರಬರಬೇಕು: ಚಕ್ರವರ್ತಿ ಸೂಲಿಬೆಲೆ, ಚಿಂತಕ

ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ ‘ ಎರಡು ಪಕ್ಷಗಳದ್ದು ಒಂದು ಲೆಕ್ಕಾಚಾರ ಇರಬಹುದು. ಜೆಡಿಎಸ್‌ಗೆ ಪರ್ಸೆಂಟೇಜ್ ಲೆಕ್ಕವಾಗಿ ಅತ್ಯಂತ ಕಡಿಮೆ ಮತಗಳು ಬಂದಿವೆ. ಜೆಡಿಎಸ್‌ನ ಹಾಗೂ ಬಿಜೆಪಿಯ ಮತಗಳ ಕೂಡಿಕೊಂಡರೆ ಅರ್ಧ ಭಾಗದಷ್ಟು ಮತಗಳಾಗುತ್ತವೆ. ಸಹಜವಾಗಿ ಕರ್ನಾಟಕದ ಅಷ್ಟು ಸೀಟ್ ಗಳನ್ನು ಗೆಲ್ಲಬಹುದು ಎಂಬುದು ಅವರ ಲೆಕ್ಕಾಚಾರ. ಈ ಚುನಾವಣೆ ಲೆಕ್ಕಾಚಾರ ಹೇಗಾದರೂ ಇರುತ್ತೆ. ಆದರೆ, ನಮಗೆ ಇರುವುದು ನರೇಂದ್ರ ಮೋದಿಯವರು ಕಳೆದ ಒಂಭತ್ತು ವರ್ಷಗಳಲ್ಲಿ ಮಾಡಿರುವ ಕೆಲಸವನ್ನು ಜನರಿಗೆ ಮುಟ್ಟಿಸಬೇಕು. ಮೇಲೆ ಕುಳಿತಿರುವವರು ನಿರ್ಣಯ ತೆಗೆದುಕೊಳ್ತಾರೆ, ಅವರಿಗೆ ಗೊತ್ತಿರುತ್ತೆ. ನಾನು ಅದರ ಬಗ್ಗೆ ಕಮೆಂಟ್ ಮಾಡುವುದು ಸೂಕ್ತವಲ್ಲ ಅನ್ಸುತ್ತೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:36 pm, Sat, 30 September 23