ಸಿಂ‘ಹಾಸನ’ಕ್ಕೆ ಟಿಕೆಟ್ ಫೈಟ್: ಭವಾನಿ ರೇವಣ್ಣ ಕಿತ್ತಾಟದ ಮಧ್ಯೆ ಹೆಚ್.ಪಿ. ಸ್ವರೂಪ್ ಫುಲ್ ಆ್ಯಕ್ಟಿವ್! ಹೆಚ್‌ಡಿಕೆ ತಥಾಸ್ತು ಅಂದ್ರಾ?
ಜೆಡಿಎಸ್ ಪಕ್ಷದ ಪ್ರಮುಖ ಟಿಕೆಟ್ ಆಕಾಂಕ್ಷಿ ಹೆಚ್.ಪಿ. ಸ್ವರೂಪ್ ಅವರು ಹಗಲು, ರಾತ್ರಿ ಎನ್ನದೆ ಗ್ರಾಮಗಳಿಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ.
ಹಾಸನ: ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ಗಾಗಿ ಕದನ ಜೋರಾಗಿ ನಡೆಯುತ್ತಿದೆ. ಹೆಚ್ಡಿ ಕುಮಾರಸ್ವಾಮಿಗೆ ಒತ್ತಡ ತಂತ್ರ ಫಲ ನೀಡದಿದ್ದಾಗ ಹೆಚ್ಡಿ ದೇವೇಗೌಡರನ್ನ ಮನವೊಲಿಸಲು ರೇವಣ್ಣ ಫ್ಯಾಮಿಲಿ ಪ್ಲಾನ್ ಮಾಡಿಕೊಳ್ಳುತ್ತಿದೆ. ಆದ್ರೆ ಇದರೆಲ್ಲದರ ನಡುವೆ ಹೆಚ್.ಪಿ.ಸ್ವರೂಪ್ ಫುಲ್ ಆ್ಯಕ್ಟಿವ್ ಆಗಿದ್ದಾರೆ. ಸ್ವರೂಪ್‌ಗೆ ಹೈಕಮಾಂಡ್‌ನಿಂದ ಗ್ರಿನ್ ಸಿಗ್ನಲ್ ಸಿಕ್ತಾ? ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.
ಜೆಡಿಎಸ್ ಪಕ್ಷದ ಪ್ರಮುಖ ಟಿಕೆಟ್ ಆಕಾಂಕ್ಷಿ ಹೆಚ್.ಪಿ. ಸ್ವರೂಪ್ ಅವರು ಹಗಲು, ರಾತ್ರಿ ಎನ್ನದೆ ಗ್ರಾಮಗಳಿಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಹಾಸನ ವಿಧಾನಸಭಾ ಕ್ಷೇತ್ರದ ಗ್ಯಾರಳ್ಳಿ, ಮಾವಿನಹಳ್ಳಿ, ದೊಡ್ಡಕೊಂಡಗುಳ ಗ್ರಾಮಗಳಿಗೆ ಕಳೆದ ರಾತ್ರಿ ಭೇಟಿ ನೀಡಿ ಗ್ರಾಮಸ್ಥರ ಜೊತೆ ಚರ್ಚೆ ಮಾಡಿದ್ದಾರೆ. ಈ ವೇಳೆ ಗ್ರಾಮಸ್ಥರು ಪಟಾಕಿ ಸಿಡಿಸಿ ಅದ್ದೂರಿಯಾಗಿ ಸ್ವರೂಪ್ ರನ್ನು ಬರಮಾಡಿಕೊಂಡಿದ್ದಾರೆ.
ದೊಡ್ಡಕೊಂಡಗುಳ ಗ್ರಾಮದ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಸ್ವರೂಪ್ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಸದ್ಯ ಸ್ವರೂಪ್ ಸಂಚಾರ ತೀವ್ರ ಕುತೂಹಲ ಕೆರಳಿಸಿದೆ. ಇನ್ನೊಂದೆಡೆ ಸೋಶಿಯಲ್ ಮೀಡಿಯಾದಲ್ಲಿ ಭವಾನಿ ರೇವಣ್ಣ ಮತ್ತೆ ಆ್ಯಕ್ಟಿವ್ ಆಗಿದ್ದಾರೆ. ಜ.28 ರಂದು ಹಾಸನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುತ್ರರ ಜೊತೆ ಭಾಗವಹಿಸಿದ್ದ ಭವಾನಿ ರೇವಣ್ಣ ಆ ಕಾರ್ಯಕ್ರಮದ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಸನದ ಅರಳೀಕಟ್ಟೆ ಸರ್ಕಲ್‌ನಲ್ಲಿ ಭಾರತೀಯ ಮಜ್ದೂರ್ ಆಟೋ ರಿಕ್ಷಾ ಚಾಲಕರ ಸಂಘದ (ರಿ) ವತಿಯಿಂದ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದೆ ಎಂದು ಪೋಸ್ಟ್ ಮಾಡಿದ್ದಾರೆ. ಟಿಕೆಟ್ ಯಾರಿಗೆ ಎನ್ನೊದು ಖಾತ್ರಿಯಾಗದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಜೆಡಿಎಸ್ ನಾಯಕರ ನಡೆ ಕುತೂಹಲ ಮೂಡಿಸಿದೆ.
ಬಿಜೆಪಿ ಶಾಸಕ ಪ್ರೀತಂ ಗೌಡ ಸೋಲಿಸಲು ಪಣತೊಟ್ಟಿದ್ದ ರೇವಣ್ಣ, ಪ್ರೀತಂ ವಿರುದ್ಧ ಪತ್ನಿ ಭವಾನಿ ಕಣಕ್ಕಿಲಿಸಲು ಪ್ಲ್ಯಾನ್ ಮಾಡಿದ್ರು. ಆದ್ರೆ ಭವಾನಿಗೆ ಕುಮಾರಸ್ವಾಮಿ ಟಿಕೆಟ್ ನೀಡಲು ಒಪ್ಪಲಿಲ್ಲ. ಪತ್ನಿಗೆ ಟಿಕೆಟ್ ಕೊಡಿಸಲು ದೇವೇಗೌಡರ ಮೂಲಕ ಒತ್ತಡ ಹಾಕಿದ್ರು. ಆದ್ರೆ ರೇವಣ್ಣರ ಒತ್ತಡಕ್ಕ ದೇವೇಗೌಡರು ಮಣಿಯಲಿಲ್ಲವಂತೆ. ಹೀಗಾಗಿ ರೇವಣ್ಣ ಪ್ಲ್ಯಾನ್ ಉಲ್ಟಾ ಆಗಿ ಪಕ್ಷಕ್ಕೆ ಸಾಕಷ್ಟು ಡ್ಯಾಮೇಜ್ ಆಗುತ್ತೆ ಅಂತಾ ಅಲರ್ಟ್ ಆದವರೇ, ತಾವೇ ಕಟ್ಟಿದ ಆಟಕ್ಕೆ ಬ್ರೇಕ್ ಹಾಕಿದ್ದಾರೆ ಎನ್ನಲಾಗಿದೆ.
ಇನ್ನೂ ಟಿಕೆಟ್ ವಿಚಾರವಾಗಿ ಹೆಚ್‌ಡಿಕೆ ವಿರುದ್ಧ ಬಹಿರಂಗವಾಗಿಯೇ ಮತಾನಾಡಿದ್ದ ಎಂಎಲ್‌ಸಿ ಸೂರಜ್ ರೇವಣ್ಣ ಸಹ ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿದ್ರು. ಭಾವನಾತ್ಮಕವಾಗಿ ಟ್ವೀಟ್ ಮಾಡಿ, ನನ್ನ ಹೇಳಿಕೆಯನ್ನ ಹೇಳಿಕೆಯನ್ನ ತಪ್ಪಾಗಿ ಅರ್ಥೈಸಲಾಗಿದೆ ಅಂತಾ ಸಮಜಾಯಿಸಿ ಕೊಡೋ ಪ್ರಯತ್ನಕ್ಕೆ ಕೈ ಹಾಕಿದ್ರು. ಭವಾನಿ ರೇವಣ್ಣ ಬಣ, ಸ್ವರೂಪ್ ಬಣ ಅಂತಾ ಎರಡು ಬಣ ಸೃಷ್ಟಿಯಾಗಿದ್ದು, ಚುನಾವಣೆಗೆ ಎಫೆಕ್ಟ್ ಆಗುತ್ತಾ ಅನ್ನೋ ಆತಂಕ ಹಾಸನ ಜೆಡಿಎಸ್‌ನಲ್ಲಿ ಕಾಡ್ತಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:19 am, Wed, 1 February 23