AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆ ಇಲ್ಲದೆ ಬರಿದಾದ ಹೇಮಾವತಿ ಒಡಲು: ಡ್ಯಾಂನಲ್ಲಿ ಲಭ್ಯವಿರೋದು ಕೇವಲ 14 ಟಿಎಂಸಿ ನೀರು!

ಮುಂಗಾರು ಮಳೆ ಕೊರತೆಯಿಂದಾಗಿ ಹಾಸನದ ಹೇಮಾವತಿ ಜಲಾಶಯ ಬರಿದಾಗುತ್ತಿದ್ದು, 37 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ ಕೇವಲ 14 ಟಿಎಂಸಿ ನೀರು ಉಳಿದಿದೆ. ಇದರಿಂದ ರೈತರು ಹಾಗೂ ಸಾರ್ವಜನಿಕರಲ್ಲಿ ಕುಡಿಯುವ ನೀರು ಮತ್ತು ಕೃಷಿಗೆ ಆತಂಕ ಎದುರಾಗಿದೆ. ಒಂದೆಡೆ ಮಳೆ ಕೈಕೊಟ್ಟಿದ್ದರೆ ಇತ್ತ ಡ್ಯಾಂ ಕೂಡ ಬರಿದಾಗುತ್ತಿರುವ ಕಾರಣ ರೈತರು ಕಂಗಾಲಾಗಿದ್ದಾರೆ. ಕಳೆದ ವರ್ಷ ಅತಿಯಾದ ಮಳೆ ಸುರಿದು ಬೆಳೆ ನೀರುಪಾಲಾಗಿದ್ದರೆ, ಈ ವರ್ಷ ಮಳೆಯೇ ಇಲ್ಲದಿರೋದು ಸಾಲಶೂಲ ಮಾಡಿ ಬಿತ್ತನೆ ಮಾಡಿದ್ದ ಅನ್ನದಾತರ ನಿದ್ದೆ ಕಸಿದಿದೆ.

ಮಳೆ ಇಲ್ಲದೆ ಬರಿದಾದ ಹೇಮಾವತಿ ಒಡಲು: ಡ್ಯಾಂನಲ್ಲಿ ಲಭ್ಯವಿರೋದು ಕೇವಲ 14 ಟಿಎಂಸಿ ನೀರು!
ಮಳೆ ಇಲ್ಲದೆ ಬರಿದಾದ ಹೇಮಾವತಿ ಒಡಲುImage Credit source: Tv9 Kannada
ಮಂಜುನಾಥ ಕೆಬಿ
| Edited By: |

Updated on: Jun 17, 2026 | 7:48 AM

Share

ಹಾಸನ, ಜೂನ್​​ 17: ಮಲೆನಾಡಿನ ಮಡಿಲು ಹಾಸನ ಜಿಲ್ಲೆಯಲ್ಲಿಯೇ ಈ ಬಾರಿ ಮಳೆಯ ಕೊರತೆ ಆಗಿದ್ದು, ಐದಾರು ಜಿಲ್ಲೆಗಳಿಗೆ ನೀರು ಒದಗಿಸುವ ಹೇಮಾವತಿ ಒಡಲು ಬರಿದಾಗುತ್ತಿದೆ. ಹೀಗಾಗಿ ಇದೇ ನೀರನ್ನು ನಂಬಿ ಬದುಕುತ್ತಿರುವವರಲ್ಲಿ ಆತಂಕ ಹೆಚ್ಚಿದ್ದು, ಮಳೆ ಬಂದರೆ ಸಾಕಪ್ಪ ಎನ್ನುವಂತಾಗಿದೆ. ಜಿಲ್ಲೆಯ ಸಕಲೇಶಫುರ ಬೇಲೂರು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಭಾಗದಲ್ಲಿ ಮಳೆ ಸುರಿದರೆ ತುಂಬಿ ಹರಿಯುತ್ತಿದ್ದ ಹೇಮಾವತಿ ನದಿ, ಜಲಾಶಯಕ್ಕೆ ನೀರು ತುಂಬಿಸುತ್ತಿತ್ತು. ಆದರೆ ಈ ವರ್ಷ ಮುಂಗಾರು ಮಳೆಯ ತೀವ್ರ ಕೊರತೆ ಬರದ ಛಾಯೆ ಮೂಡಿಸಿದೆ.

37 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಗೊರೂರು ಸಮೀಪದ ಹೇಮಾವತಿ ಜಲಾಶಯದಲ್ಲಿ ಈಗ ಕೇವಲ 14 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಹೀಗಿದ್ದರೂ ಇದರಲ್ಲಿ ಬಳಕೆಗೆ ಯೋಗ್ಯ ನೀರು ಕೇವಲ 10 ಟಿಎಂಸಿ ಮಾತ್ರವಾಗಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ ಬರೊಬ್ಬರಿ 25 ಟಿಎಂಸಿ ನೀರಿತ್ತು 21 ಟಿಎಂಸಿ ನೀರು ಬಳಕೆಗೆ ಸಿಗುವಂತಿತ್ತು. ಹಾಸನ ಜಿಲ್ಲೆಯ ಹಲವು ತಾಲೂಕುಗಳಿಗೆ ಕುಡಿಯುವ ನೀರಿನ ಮೂಲ ಇದೇ ಜಲಾಶಯವಾಗಿದೆ. ಜೊತೆಗೆ ಮೈಸೂರು, ಮಂಡ್ಯ, ತುಮಕೂರು ಜಿಲ್ಲೆಯ ಲಕ್ಷಾಂತರ ರೈತರ ತುತ್ತಿನ ಚೀಲಕ್ಕೆ ಆಸರೆಯಾಗಿರುವ ಹೇಮಾವತಿ ಜಲಾಶಯ ಈ ವರ್ಷ ಖಾಲಿ ಖಾಲಿಯಾಗಿದ್ದು, ಪರಿಸ್ಥಿತಿ ಹೀಗೆಯೇ ಇದ್ದರೆ ಮುಂದೇನೆಂಬ ಪ್ರಶ್ನೆ ಉದ್ಭವಿಸಿದೆ.

ಇದನ್ನೂ ಓದಿ: ಧರ್ಮಸ್ಥಳ ಪ್ರವಾಸ ಮುಗಿಸಿ ಬರುವಾಗ ದುರಂತ; ಹೇಮಾವತಿ ಹಿನ್ನೀರಿನಲ್ಲಿ ಮೂವರು ಯುವಕರು ಜಲಸಮಾಧಿ

ರೈತರು ಕಂಗಾಲು

ಒಂದೆಡೆ ಮಳೆ ಕೈಕೊಟ್ಟಿದ್ದರೆ ಇತ್ತ ಡ್ಯಾಂ ಕೂಡ ಬರಿದಾಗುತ್ತಿರುವ ಕಾರಣ ರೈತರು ಕಂಗಾಲಾಗಿದ್ದಾರೆ. ಹದಿನೈದು ದಿನಗಳ ಹಿಂದೆ ಸುರಿದ ಅಲ್ಪ ಮಳೆಯನ್ನೇ ನಂಬಿ ಬಿತ್ತನೆಮಾಡಿದ್ದ ರೈತರು ತಮ್ಮ ಬೆಳೆ ಉಳಿಸಿಕೊಳ್ಳಲು ಬೋರ್​​ವೆಲ್​​ಗಳತ್ತ ಮುಖ ಮಾಡಿದ್ದರೂ, ಬಿರು ಬೇಸಿಗೆಯನ್ನೂ ನಾಚಿಸುವಂತೆ ನೆತ್ತಿ ಸುಡುತ್ತಿರುವ ಸೂರ್ಯನ ತಾಪಕ್ಕೆ ಬೆಳೆ ನೆಲಕಚ್ಚುತ್ತಿದೆ. ಕಳೆದ ವರ್ಷ ಅತಿಯಾದ ಮಳೆ ಸುರಿದು ಬೆಳೆ ನೀರುಪಾಲಾಗಿದ್ದರೆ, ಈ ವರ್ಷ ಮಳೆಯೇ ಇಲ್ಲದಿರೋದು ಸಾಲಶೂಲ ಮಾಡಿ ಬಿತ್ತನೆ ಮಾಡಿದ್ದ ರೈತರ ನಿದ್ದೆ ಕಸಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಸತ್ತವರು ಕನಸಿನಲ್ಲಿ ಯಾವ ರೀತಿ ಬಂದರೆ ಏನರ್ಥ?
ಸತ್ತವರು ಕನಸಿನಲ್ಲಿ ಯಾವ ರೀತಿ ಬಂದರೆ ಏನರ್ಥ?
ಇಂದು ಈ ರಾಶಿಯವರಿಗೆ ಆಕಸ್ಮಿಕ ಪ್ರಯಾಣ ಯೋಗ!
ಇಂದು ಈ ರಾಶಿಯವರಿಗೆ ಆಕಸ್ಮಿಕ ಪ್ರಯಾಣ ಯೋಗ!
ಫ್ರಾನ್ಸ್‌ನ ಶೃಂಗಸಭೆಯ ಗ್ರೂಪ್ ಫೋಟೋ ವೇಳೆಯೂ ಮೌನವಾಗೇ ನಿಂತ ಟ್ರಂಪ್-ಮೋದಿ
ಫ್ರಾನ್ಸ್‌ನ ಶೃಂಗಸಭೆಯ ಗ್ರೂಪ್ ಫೋಟೋ ವೇಳೆಯೂ ಮೌನವಾಗೇ ನಿಂತ ಟ್ರಂಪ್-ಮೋದಿ
ಬಿಗಿ ಅಪ್ಪುಗೆಯಿಲ್ಲದೆ, ಕೈ ಕುಲುಕಿ ಟ್ರಂಪ್​- ಮೋದಿ ಉಭಯಕುಶಲೋಪರಿ
ಬಿಗಿ ಅಪ್ಪುಗೆಯಿಲ್ಲದೆ, ಕೈ ಕುಲುಕಿ ಟ್ರಂಪ್​- ಮೋದಿ ಉಭಯಕುಶಲೋಪರಿ
ಬಿಲ್ ಕಟ್ಟಲೂ ಹಣ ಇಲ್ವೇ: ಕತ್ತಲಲ್ಲಿ ಮುಳುಗಿದ ಬೆಳಗಾವಿ ತಹಶೀಲ್ದಾರ್ ಕಚೇರಿ
ಬಿಲ್ ಕಟ್ಟಲೂ ಹಣ ಇಲ್ವೇ: ಕತ್ತಲಲ್ಲಿ ಮುಳುಗಿದ ಬೆಳಗಾವಿ ತಹಶೀಲ್ದಾರ್ ಕಚೇರಿ
ಧರ್ಮಸ್ಥಳ ಬುರುಡೆ ಪ್ರಕರಣದ SIT ತಂಡ ಪ್ರಯಾಣಿಸುತ್ತಿದ್ದ ಕಾರು ಪಲ್ಟಿ
ಧರ್ಮಸ್ಥಳ ಬುರುಡೆ ಪ್ರಕರಣದ SIT ತಂಡ ಪ್ರಯಾಣಿಸುತ್ತಿದ್ದ ಕಾರು ಪಲ್ಟಿ
ಕರ್ನಾಟಕದಲ್ಲಿ ಮತ್ತೆ ರೆಸಾರ್ಟ್ ರಾಜಕಾರಣ:ಕಾಂಗ್ರೆಸ್ ಶಾಸಕರು ರೆಸಾರ್ಟ್​​ಗೆ
ಕರ್ನಾಟಕದಲ್ಲಿ ಮತ್ತೆ ರೆಸಾರ್ಟ್ ರಾಜಕಾರಣ:ಕಾಂಗ್ರೆಸ್ ಶಾಸಕರು ರೆಸಾರ್ಟ್​​ಗೆ
ಅಜ್ಜಿಯ ಪಾರ್ಥಿವ ಶರೀರ ಕಂಡು ಕಣ್ಣೀರಿಟ್ಟ ವಿಜಯ್ ರಾಘವೇಂದ್ರ ಮಗ ಶೌರ್ಯ
ಅಜ್ಜಿಯ ಪಾರ್ಥಿವ ಶರೀರ ಕಂಡು ಕಣ್ಣೀರಿಟ್ಟ ವಿಜಯ್ ರಾಘವೇಂದ್ರ ಮಗ ಶೌರ್ಯ
ಆರ್‌ಎಸ್‌ಎಸ್​ನವರು ಹಿಂದುಗಳಲ್ಲ, ಕೇವಲ ಹಿಂದುತ್ವವಾದಿಗಳು: ಯತೀಂದ್ರ
ಆರ್‌ಎಸ್‌ಎಸ್​ನವರು ಹಿಂದುಗಳಲ್ಲ, ಕೇವಲ ಹಿಂದುತ್ವವಾದಿಗಳು: ಯತೀಂದ್ರ
66 ರೌಡಿಶೀಟರ್​ಗಳಿಗೆ ಮುಕ್ತಿ ಸದ್ಯಕ್ಕಿಲ್ಲ: ಕ್ರಮ ತಡೆಹಿಡಿದ ಸಚಿವ ಖರ್ಗೆ
66 ರೌಡಿಶೀಟರ್​ಗಳಿಗೆ ಮುಕ್ತಿ ಸದ್ಯಕ್ಕಿಲ್ಲ: ಕ್ರಮ ತಡೆಹಿಡಿದ ಸಚಿವ ಖರ್ಗೆ