ಪೆನ್​ಡ್ರೈವ್ ಕೇಸ್: ಡಿಕೆ ಶಿವಕುಮಾರ್​ ವಿರುದ್ಧ 100 ಕೋಟಿ ರೂ. ಆಫರ್​ ಬಾಂಬ್ ಸಿಡಿಸಿದ ದೇವರಾಜೇಗೌಡ

| Updated By: ರಮೇಶ್ ಬಿ. ಜವಳಗೇರಾ

Updated on: May 17, 2024 | 7:50 PM

ಹಾಸನ ಪೆನ್​​ಡ್ರೈವ್​ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಇನ್ನು ಈ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮೇಲೆ ಗಂಭೀರ ಆರೋಪ ಮಾಡಿ ಭಾರೀ ಸದ್ದು ಮಾಡಿದ್ದ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಅವರೇ ಇದೀಗ ಲಾಕ್ ಆಗಿದ್ದಾರೆ. ಇದರಿಂದ ರೊಚ್ಚಿಗೆದ್ದಿರುವ ದೇವರಾಜೇಗೌಡ ಡಿಕೆ ಶಿವಕುಮಾರ್​ನ ಜೈಲಿಗೆ ಕಳಿಸುವುದೇ ನನ್ನ ಮುಂದಿನ ಕಾನೂನು‌ ಹೋರಾಟ ಎಂದು ಶಪಥ ಮಾಡಿದ್ದಾರೆ. ಅಲ್ಲದೇ ಪೆನ್​ಡ್ರೈವ್​ ಪ್ರಕರಣದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟು 100 ಕೋಟಿ ರೂ, ಆಫರ್​ ಬಾಂಬ್ ಸಿಡಿಸಿದ್ದಾರೆ.

ಪೆನ್​ಡ್ರೈವ್ ಕೇಸ್: ಡಿಕೆ ಶಿವಕುಮಾರ್​ ವಿರುದ್ಧ 100 ಕೋಟಿ ರೂ. ಆಫರ್​ ಬಾಂಬ್ ಸಿಡಿಸಿದ ದೇವರಾಜೇಗೌಡ
ಡಿಕೆ ಶಿವಕುಮಾರ್-ದೇವರಾಜೇಗೌಡ
Follow us on

ಹಾಸನ, (ಮೇ 17): ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಆಶ್ಲೀಲ ವಿಡಿಯೋ ಪೆನ್​ಡ್ರೈವ್​ ಪ್ರಕರಣದಲ್ಲಿ ಇದೀಗ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಸಿಲುಕಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಮಹತ್ವದ ಹೇಳಿಕೆಗಳನ್ನು ನೀಡಿ ಭಾರೀ ಸದ್ದು ಮಾಡಿದ್ದ ದೇವರಾಜೇಗೌಡ ಅವರನ್ನು ಎಸ್​ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಇದೀಗ ಎಸ್​ಐಟಿ ಕೋರ್ಟ್​ನಲ್ಲಿ ವಾದ ಮಾಡಿ ವಿಚಾರಣೆಗಾಗಿ ದೇವರಾಜೇಗೌಡ ಅವರನ್ನು ವಶಕ್ಕೆ ಪಡೆದುಕೊಂಡಿದೆ. ಇದರಿಂದ ಕೆಂಡಾಮಂಡಲರಾಗಿರುವ ಅವರು, ಇದೆರೆಲ್ಲದರ ಹಿಂದೆ ಡಿ.ಕೆ.ಶಿವಕುಮಾರ್ ಕೈವಾಡ ಇದೆ, ನನ್ನ ಮುಂದಿನ ಕಾನೂನು‌ ಹೋರಾಟ ಡಿಕೆ ಶಿವಕುಮಾರ್​ನ ಜೈಲಿಗೆ ಕಳಿಸುವುದು ಎಂದಿದ್ದಾರೆ.

ಇಂದು(ಮೇ 17) ಹಾಸನ ಕೋರ್ಟ್​ ದೇವರಾಜೇಗೌಡ ಅವರನ್ನು ಎಸ್​ಐಟಿ ವಶಕ್ಕೆ ನೀಡಿ ಆದೇಶ ಹೊರಡಿಸಿದ್ದು, ಈ ವೇಳೆ ಎಸ್​​ಐಟಿ ಅಧಿಕಾರಿಗಳು ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರಕ್ರಿಯಿಸಿದ ದೇವರಾಜೇಗೌಡ, ಲೈಂಗಿಕ ಕಿರುಕುಳ ಕೇಸ್ ಹಾಕ್ಸಿದ್ರು ಅದರಲ್ಲಿ ಎವಿಡೆನ್ಸ್ ಸಿಗಲಿಲ್ಲ. ಅದಾದ ಮೇಲೆ ರೇಪ್ ಕೇಸ್ ಹಾಕಿಸಿದರು. ಅದರಲ್ಲೂ ಸಾಕ್ಷ್ಯಸಿಗಲಿಲ್ಲ. ಏನಾದರೂ ಮಾಡಿ ದೇವರಾಜೇಗೌಡರನ್ನ ಮಟ್ಟಹಾಕು ಬೇಕು ಎಂದು ಹೇಳಿ ಈಗ ಪೆನ್‌ಡ್ರೈವ್ ಕೇಸ್‌ನಲ್ಲಿ ಲಾಕ್ ಮಾಡಿಸಿದ್ದಾರೆ. ಇದೆರೆಲ್ಲದರ ಹಿಂದೆ ಡಿ.ಕೆ.ಶಿವಕುಮಾರ್ ಕೈವಾಡ ಇದೆ. ಮುಂದೆ ನನ್ನ ಕಾನೂನು‌ ಹೋರಾಟ ಡಿ.ಕೆ.ಶಿವಕುಮಾರ್ ಜೈಲಿಗೆ ಕಳಿಸುವುದು ಎಂದು ಹೇಳಿದರು.

ಇದನ್ನೂ ಓದಿ: ವಕೀಲ ದೇವರಾಜೇಗೌಡಗೆ ಸಂಕಷ್ಟ; ಒಂದು ದಿನ ಎಸ್​ಐಟಿ ಕಸ್ಟಡಿಗೆ ನೀಡಿದ ಕೋರ್ಟ್​

ನಾಲ್ಕು ಮಂತ್ರಿಗಳ ತಂಡ ರಚನೆ

ಕಾರ್ತಿಕ್ ಕರೆಸಿಕೊಂಡು ಸಂಪೂರ್ಣ ಮಾಹಿತಿ ಪಡೆದು ಪೆನ್‌ಡ್ರೈವ್ ರೆಡಿ ಮಾಡಿದ್ದೇ ಡಿ.ಕೆ.ಶಿವಕುಮಾರ್. ನಾಲ್ಕು ಜನ ಮಂತ್ರಿಗಳ ಕಮಿಟಿ ಮಾಡಿದ್ದರು. ಚೆಲುವರಾಯಸ್ವಾಮಿ, ಕೃಷ್ಣಭೈರೇಗೌಡ, ಪ್ರೀಯಾಂಕ ಖರ್ಗೆ ಮತ್ತು ಇನ್ನೊಬ್ಬ ಸಚಿವರು.  ನಾಲ್ಕು ಮಂತ್ರಿಗಳ ತಂಡ ರಚನೆ ಮಾಡಿ ಇದನ್ನು ಹ್ಯಾಂಡಲ್ ಮಾಡಲು ಬಿಟ್ಟಿದ್ದರು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಡಿಕೆಶಿಯಿಂದ 100 ಕೋಟಿ ರೂ. ಆಫರ್

ಡಿಕೆ ಶಿವಕುಮಾರ್ ಅವರು ನನ್ನನ್ನು ಕರೆಸಿ ಮಾತನಾಡಿದ್ದರು. ಪೆನ್‌ಡ್ರೈವ್‌ ಅನ್ನು ಕುಮಾರಸ್ವಾಮಿ ಹಂಚಿದ್ರು ಎಂದು ಹೇಳು ನಿನಗೆ ಸಮಸ್ಯೆ ಆಗಲ್ಲ ಸೆಕ್ಯೂರ್ ಮಾಡುತ್ತೇನೆ ಎಂದು ಹೇಳಿದ್ದರು. ಇದಕ್ಕೆ ದೊಡ್ಡಮಟ್ಟದ 100 ಕೋಟಿ ಹಣದ ಆಫರ್ ಕೊಟ್ಟರು. ಐದು ಕೋಟಿ ರೂಪಾಯಿ ಅಡ್ವಾನ್ಸ್ ದುಡ್ಡನ್ನ ಬೌರಿಂಗ್ ಕ್ಲಬ್‌ನ 110 ರೂಂಗೆ ಕಳುಹಿಸಿದ್ದರು. ಚನ್ನರಾಯಪಟ್ಟಣ ಮಾಜಿ ವಿದಾನಪರಿಷತ್ ಸದಸ್ಯ ಗೋಪಾಲಸ್ವಾಮಿ ಅವರನ್ನು ಐದು ಕೋಟಿ ಕ್ಯಾಶ್ ಕೊಟ್ಟು ಸಂಧಾನಕ್ಕೆ ಕಳುಹಿಸಿದ್ದರು. ಆದ್ರೆ, ಇದಕ್ಕೆ ನಾನು ಒಪ್ಪದೇ ಇದ್ದಾಗ ಈಗಾಗಲೇ ದೊಡ್ಡ ಹಗರಣ ಆಗಿರುವುದರಿಂದ ಮೋದಿಗೆ, ಬಿಜೆಪಿಗೆ, ಕುಮಾರಸ್ವಾಮಿಗೆ ಕೆಟ್ಟ ಹೆಸರು ತರಲು ಸಂಚು ಮಾಡಿದ್ರು ಎಂದು ಗಂಭೀರ ಆರೋಪ ಮಾಡಿದರು.

ಪೆನ್​ಡ್ರೈವ್​ ಪ್ರಕರಣದಲ್ಲಿ ಡಿಕೆಶಿಯನ್ನು ಎಳೆದು ತಂದಿದ್ದ ವಕೀಲ

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳ ಬಗ್ಗೆ ಎಸ್​ಐಟಿ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಆದ್ರೆ, ಹಾಸನ ಪೆನ್​ಡ್ರೈವ್​ ಬಿಡುಗಡೆ ಮಾಡಿದ್ಯಾರು ಎನ್ನುವುದೇ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೇ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸೇರಿಕೊಂಡು ಪೆನ್​ಡ್ರೈವ್​ ಬಿಡುಗಡೆ ಮಾಡಿದ್ದವರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದರು. ಇದರ ಮಧ್ಯೆ ದೇವರಾಜೇಗೌಡ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರ ಮೇಲೆ ಗಂಭೀರ ಆರೋಪ ಮಾಡಿದ್ದರು. ಮೊದಲಿಗೆ ಪೆನ್​ಡ್ರೈವ್ ಹೋಗಿದ್ದು ಡಿಕೆ ಶಿವಕುಮಾರ್ ಅವರ ಬಳಿ. ಅವರೇ ಇದರ ಹಿಂದೆ ಇದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೇ ಕೆಲ ಸಾಕ್ಷ್ಯಗಳನ್ನು ಬಿಡುಗಡೆ ಮಾಡಿದ್ದರು. ಇದಾದ ಬಳಿಕ ಎಸ್​ಐಟಿ ಅಧಿಕಾರಿಗಳು ದೇವರಾಜೇಗೌಡ ಅವರನ್ನು ಬಂಧಿಸಿದ್ದರು.

ಏಪ್ರಿಲ್ 23 ರಂದು ಹಾಸನದ ಸೈಬರ್ ಕ್ರೈಂ ಠಾಣೆಯಲ್ಲಿ ಈ ಕೇಸ್​ ದಾಖಲಾಗಿತ್ತು. ಐವರ ವಿರುದ್ದ ದಾಖಲಾಗಿದ್ದ ಕೇಸ್​ಗೆ ಹೊಸದಾಗಿ ಇಬ್ಬರು ಸೇರ್ಪಡೆ ಮಾಡಿ ಬಂದಿಸಿದ್ದರು. ಇದೀಗ ಎಂಟನೇ ಆರೋಪಿಯಾಗಿ ವಿಚಾರಣೆ ನಡೆಸಲು ದೇವರಾಜೇಗೌಡರನ್ನು ಕಸ್ಟಡಿಗೆ ಎಸ್​ಐಟಿ ಪಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ