ಹಾಸನ, (ಆಗಸ್ಟ್ 22): ಅರಸೀಕೆರೆ ನಗರಸಭೆಯಲ್ಲಿ ಕೇವಲ ಒಂದು ಸ್ಥಾನ ಹೊಂದಿದ್ದ ಕಾಂಗ್ರೆಸ್. ಆ ಸದಸ್ಯನಿಂದಲೂ ಮತ ಹಾಕಿಸದೇ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಎರಡೂ ಸ್ಥಾನಗಳನ್ನ ತಮ್ಮ ಬೆಂಬಲಿಗರೇ ಗೆಲ್ಲುವಂತೆ ಹೆಣೆದ ಶಿವಲಿಂಗೇಗೌಡr ಪ್ಲಾನ್ ಸಕ್ಸಸ್ ಆಗಿದೆ. ಹೌದು.. ಹಾಸನ ಬಳಿಕ ಅರಸೀಕೆರೆ ನಗರಸಭೆಯಲ್ಲೂ ಅಧ್ಯಕ್ಷ ಉಪಾಧ್ಯಕ್ಷ ಚುಣಾವಣೆಯಲ್ಲಿ ರಾಜಕೀಯ ಮೇಲಾಟ ನಡೆದಿದ್ದು, ದೋಸ್ತಿ ಹೋರಾಟದ ಮಧ್ಯ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಗೆದ್ದು ಬೀಗಿದ್ದಾರೆ. ಬಹುಮತ ಇದ್ದರೂ, ವಿಪ್ ಜಾರಿಮಾಡಿದರೂ ಸಹ ದೋಸ್ತಿಗಳು ಮಣ್ಣು ಮುಕ್ಕಿದ್ದಾರೆ. ಹೌದು.. ಅಚ್ಚರಿ ಎಂಬಂತೆ ಒಂದೇ ಒಂದು ಸ್ಥಾನ ಇಟ್ಟುಕೊಂಡು ಶಿವಲಿಂಗೇಗೌಡ, ತಮ್ಮ ಬೆಂಬಲಿಗರನ್ನ ಅರಸೀಕೆರೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಬಹುಮತ ಇದ್ದರೂ ಸಹ ದೋಸ್ತಿ ಪಕ್ಷಗಳಾದ ಜೆಡಿಎಸ್ ಮತ್ತು ಬಿಜೆಪಿಗೆ ಮರ್ಮಾಘಾತವಾಗಿದೆ.
ನಿನ್ನೆ (ಆಗಸ್ಟ್ 21) ಅಷ್ಟೇ ನಡೆದ ಹಾಸನ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಪಕ್ಷಗಳ ನಡುವೆಯೇ ಗುದ್ದಾಟ ನಡೆದೊದ್ದು, ಜೆಡಿಎಸ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಬಾಚಿಕೊಂಡು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡಗೆ ಮುಖಭಂಗ ಆಗುವಂತೆ ಮಾಡಲಾಗಿತ್ತು. ಇಂದು ಅರಸೀಕೆರೆ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಹೊಂದಾಗಿದ್ದರೂ ಸಹ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಮುಂದೆ ಏನು ಆಟ ನಡೆಯಲಿಲ್ಲ. ಒಬ್ಬೇ ಇಬ್ಬ ಸದಸ್ಯನನ್ನು ಇಟ್ಟುಕೊಂಡು ಅದು ಅವರನ್ನು ಚುನಾವಣೆಯಿಂದ ದೂರ ಇಟ್ಟು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ತಮ್ಮ ಬೆಂಬಲಿಗರನ್ನು ಗೆಲ್ಲಿಸಿಕೊಂಡಿದ್ದಾರೆ. ಈ ಮೂಲಕ ತಮ್ಮ ದಳಪತಿಗಳ ಕೋಟೆಯಲ್ಲಿ ತಮ್ಮ ವರ್ಚಸ್ಸು ತೋರಿಸಿದ್ದಾರೆ.
ಇದನ್ನೂ ಓದಿ: ಹಾಸನದಲ್ಲಿ ದೋಸ್ತಿ ಪಕ್ಷವನ್ನು ನಂಬಿದ್ದ ಬಿಜೆಪಿಗೆ ಮುಖಭಂಗ, ಪ್ರೀತಂಗೌಡಗೆ ಚುರುಕು ಮುಟ್ಟಿಸಿದ ಜೆಡಿಎಸ್
ಅರಸೀಕೆರೆ ತಾಲ್ಲೂಕಿನ ಜೆಡಿಎಸ್ ಬಿಜೆಪಿ ನಾಯಕರು ನಿನ್ನೆಯೇ ಜಂಟಿ ಸುದ್ದಿಗೋಷ್ಟಿ ನಡೆಸಿ ತಮ್ಮ ಪಕ್ಷದ ಅದ್ಯಕ್ಷ ಅಭ್ಯರ್ಥಿ ಸುಜಾತಾ ರಮೇಶ್, ಉಪಾಧ್ಯಕ್ಷ ಅಭ್ಯರ್ಥಿ ಎಂದು ಘೊಷಣೆ ಮಾಡಿದ್ದರು. ಜೆಡಿಎಸ್ ನ 15 ಹಾಗೂ ಬಿಜೆಪಿಯ 6 ಸದಸ್ಯರು ಮತ ನೀಡಿದ್ರೆ ಗೆಲುವು ನಮ್ಮದೆ ಎನ್ನೋ ಲೆಕ್ಕಾಚಾರದಲ್ಲಿ ವಿಪ್ ಕೂಡ ಜಾರಿಮಾಡಿದ್ದರು. ಆದ್ರೆ ಚುನಾವಣೆ ವೇಳೆಯಲ್ಲಿ ನಡದಿರೋದೆ ಬೇರೆ, ಶಿವಲಿಂಗೇಗೌಡ ಜೆಡಿಎಸ್ ತೊರೆದು ಕಾಂಗ್ರೇಸ್ ಸೇರಿದ ಬಳಿಕ ಶಿವಲಿಂಗೇಗೌಡ ಜೊತೆ ಗುರುತಿಸಿಕೊಂಡಿದ್ದ ಜೆಡಿಎಸ್ ನ 13 ಸದಸ್ಯರು ಜೆಡಿಎಸ್ ನ ವಿಪ್ ಉಲ್ಲಂಘನೆ ಮಾಡಿ ನಮ್ಮದೇ ಮೂಲ ಜೆಡಿಎಸ್ ಎಂದು ತಮ್ಮದೇ ಅಭ್ಯರ್ಥಿಯಾಗಿ ಅಧ್ಯಕ್ಷ ಸ್ಥಾನಕ್ಕೆ ಸಮೀವುಲ್ಲಾ, ಉಪಾಧ್ಯಕ್ಷ ಸ್ಥಾನಕ್ಕೆ ಮನೋಹರ್ ಮೇಸ್ತ್ರಿಯನ್ನ ಕಣಕ್ಕಿಳಿಸಿದ್ದರು. ಚುನಾವಣೆ ವೇಳೆ ಒಗ್ಗಟ್ಟಿನಿಂದ ಇದ್ದ ಶಿವಲಿಂಗೇಗೌಡ ಬೆಂಬಲಿತ ಜೆಡಿಎಸ್ ಸದಸ್ಯರು 13 ಮತ ಹಾಗು ಓರ್ವ ಪಕ್ಷೇತರ ಅಭ್ಯರ್ಥಿ ಮತ ಸೇರಿ 14 ಮತ ಪಡೆದು ಅಧ್ಯಕ್ಷ ಉಪಾಧ್ಯಕ್ಷ ಎರಡೂ ಸ್ಥಾನವನ್ನ ಗೆದ್ದು ಬೀಗಿದ್ದಾರೆ.
ಆದ್ರೆ ಕಾನೂನಾತ್ಮಕವಾಗಿ ತಾವು ಎಲ್ಲಿಯೂ ಕಾಣಿಸಿಕೊಳ್ಳದ ಶಾಸಕ ಶಿವಲಿಂಗೇಗೌಡ, ನಗರಸಭೆ ಬಳಿ ಬಂದರೂ ಸಹ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಇಲ್ಲ ಎಂದು ವಾಪಸ್ ಆಗಿ ತೆರೆಮರೆಯಲ್ಲೇ ತಮ್ಮ ಬೆಂಬಲಿಗರನ್ನ ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಜೆಡಿಎಸ್ ಪಕ್ಷ ನೀಡಿರುವ ವಿಪ್ ಸರಿಯಿಲ್ಲ, ಅವರು ನಮಗೆ ವಿಪ್ ನೀಡೋ ಅಧಿಕಾರವೇ ಇಲ್ಲ, ನಮ್ಮದು ತಟಸ್ಥ ಜೆಡಿಎಸ್. ನಮಗೆ ಸಿಎಂ ಇಬ್ರಾಹಿಂ ರಾಜ್ಯ ಅದ್ಯಕ್ಷರಾಗಿದ್ದಾಗಲೇ ಈ ಬಗ್ಗೆ ಪತ್ರ ಕೊಟ್ಟಿದ್ದಾರೆ ಎನ್ನೋ ಮೂಲಕ ಜೆಡಿಎಸ್ ನಾಯಕರಿಗೆ ಸೆಡ್ಡು ಹೊಡೆದಿದ್ದಾರೆ .
ಇದನ್ನೂ ಓದಿ: ಹಾಸನದಲ್ಲಿ ಕೈಕೊಟ್ಟ ಜೆಡಿಎಸ್: ಮಿತ್ರ ಪಕ್ಷದ ನಡೆಗೆ ಪ್ರೀತಂಗೌಡ ಕೆಂಡಾಮಂಡಲ
ಅರಸೀಕೆರೆ ನಗರಸಭೆಯಲ್ಲಿ ಒಟ್ಟು 31 ಸ್ಥಾನಗಳಿದ್ದು ನಗರಸಭೆಯ ಮೊದಲ ಅವದಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯೋ ವೇಳೆ ಪಕ್ಷದ ವಿಪ್ ಉಲ್ಲಂಘನೆ ಮಾಡಿದ ಕಾರಣಕ್ಕೆ ಜೆಡಿಎಸ್ ನ 7 ಜನರ ಸದಸ್ಯತ್ವ ಅನರ್ಹವಾಗಿತ್ತು, ಇಂದು ಹೈಕೋರ್ಟ್ ನ ವಿಭಾಗಿಯ ಪೀಠದಲ್ಲೂ ಕೂಡ ಈ ಸದಸ್ಯರ ಸದಸ್ಯತ್ವ ಅಹರ್ನತೆಯನ್ನ ಎತ್ತಿಹಿಡಿಯಲಾಗಿದೆ. ಹಾಗಾಗಿ ನಗರಸಭೆಯಲ್ಲಿ ಉಳಿದ 24 ಸದಸ್ಯರ ಪೈಕಿ ಜೆಡಿಎಸ್ ನ 15 ಹಾಗು ಬಿಜೆಪಿಯ 6 ಹಾಗು ಕಾಂಗ್ರೆಸ್ 1 ಮತ್ತು ಎರಡು ಪಕ್ಷೇತರ ಸದಸ್ಯರು ಉಳಿದಿಕೊಂಡಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಶಿವಲಿಂಗೇಗೌಡ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿ ಶಾಸಕರಾದ ಬಳಿಕ ಜೆಡಿಎಸ್ ನ 13 ಸಸದಸ್ಯರು ಶಿವಲಿಂಗೇಗೌಡ ಬೆನ್ನಿಗೆ ನಿಂತಿದ್ರು, ಹಾಗಾಗಿಯೇ ಇಂದು ನಡೆದ ಚುನಾವಣೆಯಲ್ಲು ಕೂಡ ಅವರು ಜೆಡಿಎಸ್ ನ ಅಧಿಕೃತ ವಿಪ್ ವ್ಯಕ್ತಿಗೆ ಮತ ಚಲಾಯಿಸಲಿಲ್ಲ. ಇನ್ನುಳಿದ ಇಬ್ಬರು ಸದಸ್ಯರ ಪೈಕಿ ಅಚ್ಚರಿಯ ರೀತಿಯಲ್ಲಿ ಅರಸೀಕೆರೆ ನಗರಸಭೆಯ 10ನೇ ವಾರ್ಡ್ ಜೆಡಿಎಸ್ ಸದಸ್ಯ ಈಶ್ವರಪ್ಪ ಹಾಸನದ ಡಿಸಿ ಕಛೇರಿಗೆ ಬಂದು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ರು, ಅಲ್ಲಿಗೆ ಮೈತ್ರಿ ಪಕ್ಷಗಳು ನಂಬಿಕೊಂಡಿದ್ದ ಮತಗಳ ಪೈಕಿ ಒಂದು ಖೋತಾ ಆಯ್ತು.
ಇನ್ನು ಬಿಜೆಪಿಯ ಓರ್ವ ಸದಸ್ಯರು ಚುನಾವಣೆ ಪ್ರಕ್ರಿಯೆಯಿಂದಲೇ ದೂರ ಉಳಿದ್ರು, ಅಲ್ಲಿಗೆ ಬಿಜೆಪಿಯ 5 ಹಾಗು ಜೆಡಿಎಸ್ ನ 1 ಮತ್ತು ಓರ್ವ ಪಕ್ಷೇತರ ಸೇರಿ ಕೇವಲ 7 ಮತಗಳು ಮಾತ್ರ ಮೈತ್ರಿ ಪಕ್ಷದ ಅಧಿಕೃತ ಅದ್ಯಕ್ಷ ಅಭ್ಯರ್ಥ ಸುಜಾತಾ ರಮೇಶ್ ಹಾಗು ಉಪಾದ್ಯಕ್ಷ ಅಭ್ಯರ್ಥಿ ಗೆ ಬಂದವು, ಸಹವಾಗಿಯೇ ಅರಸೀಕರೆಯಲ್ಲಿ ಬಿಜೆಪಿ ಜೆಡಿಎಸ್ ಪಕ್ಷಗಳಿಗೆ ಮುಖಭಂಗವಾಗಿದೆ.
ಅಧ್ಯಕ್ಷ, ಉಪಾಧ್ಯಕ್ಷ ಚುನಾವಣಾ ಬಳಿಕ ಮಾತನಾಡಿದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಸುಜಾತಾ, ನಮ್ಮ ಪಕ್ಷದ ಚಿನ್ಹೆಯಿಂದ ಗೆದ್ದು ಪಕ್ಷದ ವಿಪ್ ಉಲ್ಲಂಘನೆ ಮಾಡಲಾಗಿದೆ. ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿ ನಾನು. ಆದ್ರೆ 14 ಜನರು ನನಗೆ ಮತ ನೀಡಿಲ್ಲ ಇದು ಕಾನೂನು ಉಲ್ಲಂಘನೆಯಾಗಿದ್ದು, ಪಕ್ಷದ ವಿಪ್ ಉಲ್ಲಂಘನೆ ಮಾಡಿದ ಜೆಡಿಎಸ್ ಸದಸ್ಯರ ವಿರುದ್ದ ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.