ಸೂರಜ್​ ರೇವಣ್ಣ ಅವಾಚ್ಯ ಶಬ್ದ ಬಳಕೆ: ಪಕ್ಷ ವಿರೋಧಿ ಕೆಲಸ ಮಾಡುವವರು ಸೂ…

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಅಗ್ರಹಾರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಎಂಎಲ್ಸಿ ಸೂರಜ್ ರೇವಣ್ಣ ಅವರು ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ. ಪಕ್ಷ ವಿರೋಧಿ ಕೆಲಸ ಮಾಡಿದವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ತಮ್ಮ ಹುಟ್ಟುಹಬ್ಬದ ಸಮಾರಂಭದ ಕಾರ್ಯಕ್ರಮದಲ್ಲಿ ಈ ಮಾತುಗಳನ್ನು ಆಡಿದ್ದಾರೆ.

ಸೂರಜ್​ ರೇವಣ್ಣ ಅವಾಚ್ಯ ಶಬ್ದ ಬಳಕೆ: ಪಕ್ಷ ವಿರೋಧಿ ಕೆಲಸ ಮಾಡುವವರು ಸೂ...
ಸೂರಜ್​ ರೇವಣ್ಣ
Follow us
ಮಂಜುನಾಥ ಕೆಬಿ
| Updated By: ವಿವೇಕ ಬಿರಾದಾರ

Updated on: Jan 12, 2025 | 9:04 AM

ಹಾಸನ, ಜನವರಿ 12: ಹಾಸನ (Hassan) ಜಿಲ್ಲೆಯ ಹೊಳೆನರಸೀಪುರ (Holenarasipura) ತಾಲೂಕಿನ ಅಗ್ರಹಾರ ಗ್ರಾಮದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಎಂಎಲ್​ಸಿ ಸೂರಜ್ ರೇವಣ್ಣ (Suraj Revanna) ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ. ಪಕ್ಷದೊಳಗಿದ್ದು ಮೋಸ ಮಾಡಿದವರು ಸೂ…. ಎಂದು ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ.

ಶನಿವಾರ ರಾತ್ರಿ ಅಗ್ರಹಾರ ಗ್ರಾಮದಲ್ಲಿ ನಡೆದ ತಮ್ಮ ಹುಟ್ಟು ಹಬ್ಬ ಸಂಭ್ರಮಾಚರಣೆಯಲ್ಲಿ ಮಾತನಾಡಿದ ಸೂರಜ್ ರೇವಣ್ಣ, ನಾಯಿ ಕಣ್ಣು, ನರಿ ಕಣ್ಣು ಅಂತ ನನ್ನ ದೃಷ್ಟಿಯನ್ನು ತೆಗೆದರು. ಕೆಟ್ಟ ಸೂ.. ಕಣ್ಣು ಯಾಕೆ ಹೇಳಲಿಲ್ಲ ಅಂತ ಮನಸ್ಸಿನಲ್ಲಿ ಅಂದುಕೊಂಡೆ. ಮಹಿಳೆಯರ ಬಗ್ಗೆ ತಪ್ಪಾಗಿ ಮಾತನಾಡುತ್ತಿಲ್ಲ. ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ವಿರುದ್ಧ ಅಂತ ಬಿಂಬಿಸಿಕೊಳ್ಳದೇ, ಪಕ್ಷದೊಳಗಿದ್ದು ಮೋಸ ಮಾಡಿದವರಿಗೆ ಈ ಮಾತನ್ನು ಹೇಳುತ್ತಿದ್ದೇನೆ. “ಕೆಟ್ಟ ಸೂ…. ಕಣ್ಣು ತೆಗೆದು ಬಿಡವ್ವ” ಅಂತ ಹೇಳಿದೆ ಎಂದು ಚುನಾವಣೆಯಲ್ಲಿ ಪಕ್ಷ ವಿರೋಧಿ ಕೆಲಸ ಮಾಡಿದವರ ವಿರುದ್ಧ ಆಕ್ರೋಶಗೊಂಡರು.

ಹಾಸನ ಜಿಲ್ಲೆಯಲ್ಲಿ ಯಾವುದೇ ಪಕ್ಷ ಇಲ್ಲ, ಇರೋದು ಎರಡೇ ಪಕ್ಷ, ಒಂದು ಹೆಚ್​.ಡಿ.ದೇವೇಗೌಡರ ಪರ, ಇನ್ನೊಂದು ದೇವೇಗೌಡರ ವಿರುದ್ಧ ಪಕ್ಷ. ನಮ್ಮ ತಾತ ಹೇಳಿರುವ ಮಾತು ನನಗೆ ಈಗ ಅನುಭವ ಆಗುತ್ತಿದೆ ಎಂದರು.

ಇದನ್ನೂ ಓದಿ: ನಮ್ಮ ಕುಟುಂಬದ ತೇಜೋವಧೆ ಮಾಡಲು ಷಡ್ಯಂತ್ರ ರಚಿಸಲಾಗಿದೆ: ಡಾ ಸೂರಜ್ ರೇವಣ್ಣ, ಪರಿಷತ್ ಸದಸ್ಯ

ಪೆನ್​ಡ್ರೈವ್​ ಹಂಚಿ ನಾನು ಎಂಎಲ್​ಸಿ ಆಗಿಲ್ಲ

ಪೆನ್​ಡ್ರೈವ್​ ಹಂಚಿ ನಾನು ಎಂಎಲ್​ಸಿ ಆಗಿಲ್ಲ. ಪಕ್ಷದ ಕಾರ್ಯಕರ್ತರಿಗೆ ಯಾವುದೇ ಇಲಾಖೆಯಲ್ಲಿ ತೊಂದರೆಯಾದರೆ ನನ್ನ ಗಮನಕ್ಕೆ ತನ್ನಿ, ಯಾರು ಬರುತ್ತಾರೋ, ಬಿಡ್ತಾರೋ ಆದರೆ ನಾನು ಮಾತ್ರ ಬರುತ್ತೇನೆ. ಯಾವುದೇ ಜಾತಿ ಹಾಗೂ ಜನಾಂಗ ನೋಡದೇ ಕೆಲಸ ಮಾಡುತ್ತೇನೆ. ನಮ್ಮ ತಾತ ದೇವೇಗೌಡರು ಯಾವುದೇ ಜಾತಿ ನೋಡಬೇಡ ಅಂದಿದ್ದಾರೆ. ಒಮ್ಮೆ ಒಂದು ಸಮುದಾಯ ಕೈಬಿಡಬಹುದು, ಆದರೆ, ಅವರಿಗೆ ಅರ್ಥವಾದ ಬಳಿಕ ನಿನ್ನ ಕೈಹಿಡಿಯುತ್ತಾರೆ ಅಂತಾ ಹೇಳಿದ್ದಾರೆ ಎಂದು ಹೇಳಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಜಾತಿಯ ವಿಷ ಬೀಜ ಬಿತ್ತಿದ್ದರು. ಹೆಚ್​.ಡಿ.ರೇವಣ್ಣನವರು ಎಷ್ಟು ದೇವಸ್ಥಾನ ಕಟ್ಟಿದ್ದಾರೆ ಅವರಿಗೆ ಗೊತ್ತಾ? ಆ ನಂಬರ್ ಸಂಸದರಿಗೆ ಗೊತ್ತಾ ಕೇಳಿಕೊಂಡು ಬರಲು ಹೇಳಿ ಎಂದು ವಾಗ್ದಾಳಿ ಮಾಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ